ಪ್ರತಿದಿನ ಬೆಳಗ್ಗೆ ಏಳುತ್ತಿದ್ದಂತೆ ದೇವರ ಮಂತ್ರ ಜಪಿಸಿ, ದೇವರ ಫೋಟೋ ನೋಡಿ ಈ ದಿನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ಗ್ರಹಗತಿಗಳು ನಿಮ್ಮ ಪರವಾಗಿದ್ದರೆ ಖಂಡಿತ ದಿನ ಚೆನ್ನಾಗಿರುತ್ತದೆ. ಇಲ್ಲವಾದರೆ ಇಡೀ ದಿನ ಸಮಸ್ಯೆ ಬೆನ್ನೇರುತ್ತದೆ. ಇಂದು 7 ಡಿಸೆಂಬರ್ 2024, ಶನಿವಾರ. ಈ ದಿನ 12 ರಾಶಿಗಳಿಗೆ ದಿನ ಹೇಗಿರಲಿದೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದರೆ ನಿಮ್ಮ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ಹೊಸ ವಾಹನ ಕೊಳ್ಳುವ ಆಸೆ ಇದ್ದರೆ ಇಂದು ಈಡೇರಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಸಂಪೂರ್ಣ ಗಮನ ಹರಿಸುತ್ತಾರೆ, ಇದರಿಂದ ಅವರು ಯಾವುದೇ ಉದ್ಯೋಗ ಸಂಬಂಧಿತ ಪರೀಕ್ಷೆಯನ್ನು ಸಹ ಎದುರಿಸಬಹುದು. ಹೊರಗೆ ಹೋದಾಗ ನಿಮ್ಮ ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗರೂಕರಾಗಿರಿ.
ವೃಷಭ ರಾಶಿ
ಉದ್ಯೋಗದ ನಿರೀಕ್ಷೆಯಲ್ಲಿರುವ ವೃಷಭ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರು ನಿವೃತ್ತಿ ಹೊಂದುತ್ತಾರೆ. ವಿದೇಶದಲ್ಲಿ ವಾಸಿಸುವ ಕುಟುಂಬದ ಸದಸ್ಯರು ನಿಮ್ಮೊಂದಿಗೆ ಮಾತನಾಡಬಹುದು. ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಜಾಗ್ರತೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನವಾಗಿದೆ. ನಿಮ್ಮ ಯಾವುದೇ ವಿಷಯಕ್ಕೆ ನೀವು ಇತರರನ್ನು ಅವಲಂಬಿಸಬೇಕಾಗಿಲ್ಲ. ಹೊಸದನ್ನು ಮಾಡುವ ನಿಮ್ಮ ಪ್ರಯತ್ನ ಯಶಸ್ವಿಯಾಗುತ್ತದೆ. ನಿಮ್ಮ ಕೆಲವು ಕೌಟುಂಬಿಕ ವಿಷಯಗಳ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಪ್ರೀತಿಯಲ್ಲಿರುವವರಿಗೆ ಸಂಗಾತಿ ಜೊತೆಗಿನ ಬಾಂಧವ್ಯ ಇನ್ನಷ್ಟು ಹೆಚ್ಚಾಗುತ್ತದೆ.
ಕಟಕ ರಾಶಿ
ಕಟಕ ರಾಶಿಯವರು ಇಂದು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಆದರೆ ಯಾವುದೇ ಕೆಲಸ ಇರಲಿ ಆತುರ ಪಡದಿರಿ. ಇಲ್ಲದಿದ್ದರೆ ಗೊಂದಲ ಹೆಚ್ಚಾಗಿ ಕೆಲಸ ಹಾಳಾಗಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕೋರ್ಟ್ನಲ್ಲಿ ನಡೆಯುತ್ತಿದ್ದರೆ ನಿಮ್ಮ ಪರವಾಗಿ ನ್ಯಾಯ ದೊರೆಯಬಹುದು. ಒಡಹುಟ್ಟಿದವರೊಂದಿಗೆ ಬಾಂಧವ್ಯ ಚೆನ್ನಾಗಿರುತ್ತದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
.ಸಿಂಹ ರಾಶಿ
ಇಂದು ಸಿಂಹ ರಾಶಿಯ ಜನರ ಗೌರವ ಹೆಚ್ಚಾಗಲಿದೆ. ನಿಮ್ಮ ಖ್ಯಾತಿ ಹೆಚ್ಚಾದಂತೆ ನೀವು ಸಂತೋಷವಾಗಿರುತ್ತೀರಿ. ಆದರೆ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಿ, ಇಲ್ಲದಿದ್ದರೆ ನಿಮ್ಮ ಬಗ್ಗೆ ಅವರಿಗೆ ಅಸಮಾಧಾನ ಉಂಟಾಗಬಹುದು. ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು.
ಕನ್ಯಾ ರಾಶಿ
ನೀವು ಮಾಡುವ ಎಲ್ಲಾ ಕೆಲಸದಲ್ಲೂ ಇಂದು ಯಶಸ್ಸು ಪಡೆಯಲಿದ್ದೀರಿ. ಅದರಲ್ಲಿ ನಿಮಗೆ ಉತ್ತಮ ಲಾಭ ಸಿಗುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುತ್ತದೆ. ಕುಟುಂಬದ ಆಸ್ತಿಯ ಬಗ್ಗೆ ನಿಮ್ಮ ಪೋಷಕರೊಂದಿಗೆ ಚರ್ಚಿಸಬಹುದು. ವ್ಯಾಪಾರ, ವ್ಯವಹಾರದಲ್ಲಿ ನೀವು ಬ್ಯುಸಿ ಆಗುವಿರಿ. ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಸಂಪೂರ್ಣವಾಗಿ ಗೌರವಿಸಬೇಕು.
ತುಲಾ ರಾಶಿ
ತುಲಾ ರಾಶಿಯ ಜನರು ತಮ್ಮ ಖರ್ಚುಗಳ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ನಿಮ್ಮ ಆದಾಯ ಹೆಚ್ಚಾಗುತ್ತದೆ, ಆದರೆ ಖರ್ಚೂ ಕೂಡಾ ಸರಿ ಸಮನಾಗಿರುತ್ತದೆ. ಅನಗತ್ಯ ಖರ್ಚುಗಳನ್ನು ನಿಲ್ಲಿಸದಿದ್ದರೆ ಮುಂದೆ ಸಮಸ್ಯೆ ಆಗಲಿದೆ. ನಿಮಗೆ ಹೊಸ ಎದುರಾಳಿ ಬರಬಹುದು. ನಿಮ್ಮ ಕಾರ್ಯಗಳಿಗಾಗಿ ನೀವು ಬೇರೆಯವರ ಮೇಲೆ ಅವಲಂಬಿತರಾಗಬಾರದು, ಇಲ್ಲದಿದ್ದರೆ ಅವುಗಳನ್ನು ಪೂರ್ಣಗೊಳಿಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಅತ್ಯಂತ ಯಶಸ್ವಿ ದಿನವಾಗಲಿದೆ. ಕುಟುಂಬದ ಸದಸ್ಯರ ಮದುವೆಯಲ್ಲಿ ಇದ್ದ ಅಡೆತಡೆ ದೂರವಾಗುತ್ತದೆ. ನಿಮ್ಮ ಹಿಂದಿನ ಕೆಲವು ತಪ್ಪುಗಳಿಂದ ನೀವು ಪಾಠ ಕಲಿಯುವಿರಿ. ಯಾರಿಗಾದರೂ ಯಾವುದೇ ಸಲಹೆಯನ್ನು ನೀಡಿದರೆ, ಅವರು ಖಂಡಿತವಾಗಿಯೂ ಅದನ್ನು ಕಾರ್ಯಗತಗೊಳಿಸುತ್ತಾರೆ. ನಿಮ್ಮ ಪ್ರಗತಿಯು ನಿಮ್ಮ ಕುಟುಂಬದ ಸದಸ್ಯರಿಗೆ ಖುಷಿ ನೀಡುತ್ತದೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಲು ನೀವು ಸಂತೋಷಪಡುತ್ತೀರಿ.
ಧನು ರಾಶಿ
ಧನು ರಾಶಿಯವರಿಗೆ ಇಂದು ಸಣ್ಣ ಪುಟ್ಟ ಸಮಸ್ಯೆ ಉಂಟಾಗಬಹುದು. ಏಕಾಗ್ರತೆಯಿಂದ ಕೆಲಸದ ಕಡೆ ಗಮನ ಕೊಟ್ಟರೆ ಮಾತ್ರ ನೀವು ಕೆಲಸ ಪೂರ್ಣಗೊಳಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತೆಗೆ ಒಳಗಾಗುತ್ತಾರೆ. ತಮ್ಮ ಶಿಕ್ಷಕರೊಂದಿಗೆ ಮಾತನಾಡಿದರೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ದೀರ್ಘಾವಧಿಯ ಯೋಜನೆಗಳಿಗೆ ನೀವು ಸಂಪೂರ್ಣ ಗಮನ ಹರಿಸಬೇಕು.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಆದಾಯ ಹೆಚ್ಚಿಸುವ ದಿನವಾಗಿರುತ್ತದೆ. ಇದರಿಂದ ನೀವು ಖುಷಿಯಾಗಿರುತ್ತೀರಿ. ನೀವು ಹೊಸ ಆಸ್ತಿಯನ್ನು ಖರೀದಿಸಬಹುದು. ಹಳೆಯ ಸ್ನೇಹಿತರೊಬ್ಬರು ನಿಮಗಾಗಿ ಹೂಡಿಕೆ ಪ್ರಪೋಸಲ್ ತರಬಹುದು. ಯಾವುದೇ ಪ್ರಮುಖ ಯೋಜನೆಗಳನ್ನು ಮಾಡುವ ಮುನ್ನ ತಜ್ಞರ ಸಲಹೆ ಪಡೆದು ಮುಂದುವರೆಯಬೇಕಾಗುತ್ತದೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಮುಕ್ತರಾಗುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಉತ್ತಮ ದಿನ. ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ. ಈ ರಾಶಿಯವರ ಮಕ್ಕಳು ಕೆಲಸ ಮಾಡುತ್ತಿರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಲಿದ್ದಾರೆ. ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಿದ್ದರೆ ಒಟ್ಟಿಗೆ ಕುಳಿತು ಸಮಾಧಾನದಿಂದ ಮಾತನಾಡಿ ಪರಿಹರಿಸಲು ಪ್ರಯತ್ನಿಸಿ. ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಲಾಭ ಪಡೆಯುತ್ತಾರೆ.
ಮೀನ ರಾಶಿ
ಈ ದಿನ ನೀವು ಬಹಳ ಯೋಚಿಸಿ ಪ್ರಮುಖ ನಿರ್ಧಾರಗಳಿಗೆ ಬರಬೇಕಾಗುತ್ತದೆ. ನಿಮ್ಮ ಹಿಂದಿನ ಕೆಲವು ತಪ್ಪುಗಳಿಂದ ನೀವು ಪಾಠ ಕಲಿಯಬೇಕಾಗಿದೆ. ನಿಮ್ಮ ಮನೆಗೆ ಕೆಲವು ಹೊಸ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಬಹುದು. ಐಷಾರಾಮಿ ವಸ್ತುಗಳನ್ನು ಖರೀದಿಸಲು ನೀವು ಸಾಕಷ್ಟು ಹಣ ಖರ್ಚು ಮಾಡುತ್ತೀರಿ. ಯಾರಿಗಾದರೂ ಯಾವುದೇ ಭರವಸೆ ನೀಡುವ ಮೊದಲು, ಅದನ್ನು ಈಡೇರಿಸುವ ಬಗ್ಗೆ ನೀವು ಯೋಚಿಸಿರಬೇಕು. ನಿಮ್ಮ ಆದಾಯ ಹೆಚ್ಚಳವಾಗಲಿದೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.