ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡ ಕಿರುತೆರೆಯ ಆಲ್ ಟೈಮ್ ಬ್ಲಾಕ್ ಬಸ್ಟರ್ ಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಲ್ಲ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅವರ ನಟನೆ ಅದ್ಭುತ. ಇನ್ನು ಅವರ ಮಕ್ಕಳ ಪಾತ್ರದಲ್ಲಿ ನಟಿಸುತ್ತಿರುವ ಕಿರಿಯ ನಟಿಯರು ಕೂಡ ಅಷ್ಟೇ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿದ್ದ ಖಡಕ್ ವಿಲ್ಲನ್ ಪಾತ್ರ ರಾಜಿ. ಈ ಪಾತ್ರದಲ್ಲಿ ನಟಿ ಹಂಸ ಅಭಿನಯಿಸುತ್ತಿದ್ದರು ಎಂದು ಗೊತ್ತೇ ಇದೆ. ಬಿಗ್ ಬಾಸ್ ಕಾರಣದಿಂದ ಹಂಸ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇಂದ ಹೊರಬಂದಿದ್ದರು.
ಆದರೆ ಅವರು ಧಾರಾವಾಹಿ ಇಂದ ಹೊರಬರುತ್ತಿರುವ ಬಗ್ಗೆ ನಿರ್ದೇಶಕರಿಗೆ ಅಥವಾ ತಂಡಕ್ಕೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ ಎಂದು ಹೇಳಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಅವರು ನಟಿ ಹಂಸ ಅವರ ಮೇಲೆ ಆಪಾದನೆ ಮಾಡಿದರು. ಕಲಾವಿದರಿಗೆ ಎಥಿಕ್ಸ್ ಇರಬೇಕು, ಏನನ್ನು ಹೇಳದೇ ಶೂಟಿಂಗ್ ಗೆ ಬರೋದನ್ನೇ ನಿಲ್ಲಿಸಿದ್ದರು, ಬಿಗ್ ಬಾಸ್ ಪ್ರೊಮೋ ಬಂದಾಗ ನಮಗೆ ಗೊತ್ತಾಗಿದ್ದು, ದಿಢೀರ್ ಎಂದು ಹಾಗೆ ಮಾಡಿದರೆ ತಂಡಕ್ಕೆ ಎಷ್ಟು ಕಷ್ಟ ಆಗುತ್ತದೆ ಎನ್ನುವುದನ್ನ ಕೂಡ ಅವರು ಯೋಚನೆ ಮಾಡಲಿಲ್ಲ. ಹಂಸ ಅವರಿಂದ ನಮಗೆ ಮೋಸ ಆಗಿದೆ ಎಂದೆಲ್ಲಾ ಹೇಳಿದ್ದರು. ಈ ಎಲ್ಲಾ ಮಾತಿಗೂ ನಟಿ ಹಂಸ ಅವರು ಪ್ರತ್ಯುತ್ತರ ನೀಡಿದ್ದಾರೆ..

ಇನ್ನೊಂದು ಯೂಟ್ಯೂಬ್ ಚಾನೆಲ್ ಗೆ ನಟಿ ಹಂಸ ಅವರು ಸಂದರ್ಶನ ನೀಡಿದ್ದು, ಅದರಲ್ಲಿ ಆರೂರು ಜಗದೀಶ್ ಅವರು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. 3 ವರ್ಷದಿಂದ ಕೆಲಸ ಮಾಡುತ್ತಿದ್ದರೂ ಸರಿಯಾಗಿ ಪೆಮೆಂಟ್ ಕೊಡುತ್ತಿರಲಿಲ್ಲ, ಪೇಮೆಂಟ್ ಜಾಸ್ತಿ ಮಾಡಲು ಇಲ್ಲ. ವಾರದಲ್ಲಿ 6 ದಿನ ಶೂಟಿಂಗ್ ಅಂತ ಹೇಳಿ, 2 ಅಥವಾ 3 ದಿನಕ್ಕೆ ಸೀಮಿತಗೊಳಿಸಿದ್ರು. ಅಲ್ಲಿ ಅಲ್ಲಿ ಅಷ್ಟು ಅವಕಾಶವೂ ಇರಲಿಲ್ಲ. ನನಗೆ ನೈತಿಕತೆ ಇದ್ದಿದ್ದಕ್ಕೆ 3 ವರ್ಷಗಳ ಕಾಲ ಆ ತಂಡದ ಜೊತೆಯಲ್ಲೇ ಇದ್ದೆ. ಕಲಾವಿದರನ್ನ ಹೇಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಅವರಿಗೆ ಗೊತ್ತಿಲ್ಲ. ನಾನು 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದೀನಿ..

ನನ್ನಿಂದ ಅವರು ಕಾಸು ಮಾಡಿಕೊಂಡಿದ್ದಾರೆ ಹೊರತು ಅವರು ಕೊಟ್ಟ ಪಾತ್ರದಿಂದ ನನಗೆ ಹೆಸರು ಬಂದಿಲ್ಲ. ಎಂದು ನಟಿ ಹಂಸ ಅವರು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಆರೂರು ಜಗದೀಶ್ ಅವರ ಒಂದೊಂದು ಮಾತಿಗೂ ತಿರುಗೇಟು ನೀಡಿದ್ದಾರೆ. ಆರೂರು ಜಗದೀಶ್ ಅವರು ಮತ್ತೊಂದು ಮಾತನ್ನು ಕೂಡ ಹೇಳಿದ್ದು, ಬಿಗ್ ಬಾಸ್ ಇಂದ ಹೊರಬಂದಮೇಲು ಬನ್ನಿ ಅಂತ ಅವರನ್ನ ಕರೆದ್ವಿ ಅವರು ಬರಲಿಲ್ಲ ಎಂದು ಹೇಳಿದ್ದರು. ಅದಕ್ಕೂ ನಟಿ ಹಂಸ ಅವರು ಉತ್ತರ ಕೊಟ್ಟಿದ್ದು, ಅವರು ಚೆನ್ನಾಗಿ ನಡೆಸಿಕೊಂಡಿದ್ದರೆ ನಾನು ಹೋಗ್ತಿದ್ದೆ, ಅವರು ಹಾಗೆಲ್ಲಾ ಮಾತಾಡಿದ್ದಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ಮಾತನಾಡಿರುವ ನಟಿ ಹಂಸ ಅವರು, ಇವರು 3 ವರ್ಷದಿಂದ ಪೇಮೆಂಟ್ ಜಾಸ್ತಿ ಮಾಡಲು ಇಲ್ಲ, ನಮಗೂ ಜೀವನ ಇದೆ, ಕಮಿಟ್ಮೆಂಟ್ ಇರುತ್ತದೆ, ಇವರು ಏನನ್ನು ಸರಿಯಾಗಿ ನೋಡಿಕೊಳ್ಳದೇ ಇರುವಾಗ ಅವಕಾಶಗಳು ಬಂದರು ನಾವು ಸುಮ್ಮನೆ ಇರೋದಕ್ಕೆ ಆಗುತ್ತಾ, ನಮ್ಮ ಜೀವನವನ್ನು ನಾವು ನೋಡಿಕೊಳ್ಳಬೇಕಲ್ವಾ ಎಂದು ಹೇಳಿದ್ದಾರೆ ನಟಿ ಹಂಸ. ಒಟ್ಟಿನಲ್ಲಿ ಡೈರೆಕ್ಟರ್ ಹಾಗೂ ನಟಿ ಹಂಸ ಅವರ ಈ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಇಬ್ಬರ ವಾಗ್ವಾದ ಬಹಳ ಜೋರಾಗೆ ನಡೆಯುತ್ತಿದೆ. ಹಂಸ ಅವರ ಮಾತುಗಳನ್ನು ಕೇಳಿದರೆ,. ಮುಂದಿನ ದಿನಗಳಲ್ಲಿ ಕೂಡ ರಾಜಿಯಾಗಿ ಅವರು ಬರುವುದಿಲ್ಲ ಎನ್ನುವುದಂತೂ ಖಚಿತವಾಗಿದೆ.