ಪ್ರಸ್ತುತ ತೆಲುಗಿನಲ್ಲಿ ಬಹು ಬೇಡಿಕೆ ಇರುವ ಕನ್ನಡದ ನಟಿಯರಲ್ಲಿ ಶ್ರೀಲೀಲಾ ಮುಂಚೂಣಿಯಲ್ಲಿದ್ದಾರೆ ಎಂದರೆ ತಪ್ಪಲ್ಲ. ಕನ್ನಡದ ಕಿಸ್ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆಡಗಿ ಶ್ರೀಲೀಲಾ. ಇವರ ಅಭಿನಯ ಮತ್ತು ಡ್ಯಾನ್ಸ್ ಇವೆರಡಕ್ಕೂ ಕನ್ನಡ ಸಿನಿಮಾಪ್ರಿಯರು ಮನಸೋತಿದ್ದು, ಖಂಡಿತ. ಕನ್ನಡದಲ್ಲಿ ಯಶಸ್ವಿಯಾದ ಶ್ರೀಲೀಲಾ ಅವರು ತೆಲುಗಿಗೆ ಹಾರಿದ್ದಾರೆ. ಅಲ್ಲಿ ಕೂಡ ಶ್ರೀಲೀಲಾ ಅವರಿಗೆ ಭಾರಿ ಬೇಡಿಕೆ ಇದೆ..
ರವಿತೇಜ, ಮಹೇಶ್ ಬಾಬು ಅವರಂಥ ಸ್ಟಾರ್ ಹೀರೋಗಳ ಜೊತೆಗೆ ಸ್ಕ್ರೀನ್ ಶೇರ್ ಮಾಡಿರುವ ಶ್ರೀಲೀಲಾ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಡುವಿಲ್ಲದ ಹಾಗೆ ಬ್ಯುಸಿ ಆಗಿದ್ದಾರೆ. ನಿತಿನ್ ಅವರೊಡನೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಹೀಗೆ ಬ್ಯುಸಿ ಆಗಿರುವ ಶ್ರೀಲೀಲಾ ಅವರು ಶೂಟಿಂಗ್ ಗಾಗಿ ಬೇರೆ ಬೇರೆ ಊರುಗಳಿಗೆ ಹೋಗುವುದುಂಟು. ಆ ವೇಳೆ ತಾಯಿಯ ಜೊತೆಗೆ ಪ್ರಯಾಣ ಮಾಡುವಾಗ ರಸ್ತೆಬದಿಯ ಟೀ ಅಂಗಡಿಯೊಂದರ ಬಳಿ ಇಳಿದಿದ್ದಾರೆ.

ತಮ್ಮ ತಾಯಿ ಜೊತೆಗೆ ಆ ಟೀ ಅಂಗಡಿಯಲ್ಲಿ ಟೀ ಕುಡಿದು, ಹೋಗಿದ್ದಾರೆ ಶ್ರೀಲೀಲಾ. ತೆಲುಗಿನಲ್ಲಿ ಕೂಡ ಇವರಿಗೆ ಭಾರಿ ಜನಪ್ರಿಯತೆ ಮತ್ತು ಫ್ಯಾನ್ಸ್ ಇರುವುದರಿಂದ, ಸ್ಥಳೀಯರು ಇವರನ್ನು ಗುರುತಿಸಿ, ಅಂಗಡಿಯರು ಪ್ರೀತಿಯಿಂದ ಮಾತನಾಡಿಸಿ, ಟೀ ಮಾಡಿಕೊಟ್ಟಿದ್ದಾರೆ. ಹಾಗೆಯೇ ಸ್ಥಳೀಯರು ಶ್ರೀಲೀಲಾ ಅವರೊಡನೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ. ಶ್ರೀಲೀಲಾ ಸಹ ಎಲ್ಲರೊಡನೆ ಅಷ್ಟೇ ಪ್ರೀತಿಯಿಂದ ಬೆರೆತು ಮಾತನಾಡಿಸಿದ್ದಾರೆ..
ಪ್ರಸ್ತುತ ಶ್ರೀಲೀಲಾ ಅವರು ರಸ್ತೆಬದಿ ಅಂಗಡಿಯಲ್ಲಿ ಟೀ ಕುಡಿದಿರುವ ಫೋಟೋಸ್ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಸಹ ಶ್ರೀಲೀಲಾ ಅವರ ಸರಳತೆಗೆ ಫಿದಾ ಆಗಿದ್ದೇವೆ ಎನ್ನುತ್ತಿದ್ದಾರೆ. ಹಾಗೆಯೇ ಕನ್ನಡದ ಮತ್ತೊಬ್ಬ ನಟಿ ರಶ್ಮಿಕಾ ಅವರೊಡನೆ ಶ್ರೀಲೀಲಾ ಅವರನ್ನು ಕಂಪೇರ್ ಮಾಡಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ರಶ್ಮಿಕಾ ಅವರಲ್ಲಿ ಈ ರೀತಿಯ ಸರಳತೆ ಇಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್..
ಒಟ್ಟಿನಲ್ಲಿ ಕನ್ನಡದಲ್ಲಿ ಸೂಪರ್ ಹಿಟ್ ಹೀರೋಯಿನ್ ಎನ್ನಿಸಿಕೊಂಡಿರುವ ಶ್ರೀಲೀಲಾ ಅವರು ಈಗ ತೆಲುಗು ಮತ್ತು ತಮಿಳಿನ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಕನ್ನಡದಲ್ಲಿ ಪ್ರಸ್ತುತ ಇವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ನಟಿಸುತ್ತಾರಾ ಎಂದು ಕಾದು ನೋಡಬೇಕಿದೆ. ಕಿಸ್ ಹಾಗೂ ಧನವೀರ್ ಅವರೊಡನೆ ಬೈ ಟು ಲವ್ ಸಿನಿಮಾದಲ್ಲಿ ನಟಿಸಿದ್ದರು ಶ್ರೀಲೀಲಾ.