ಚಂದನವನದ ಸೆಂಚುರಿ ಸ್ಟಾರ್ ಶಿವಣ್ಣ ಅವರ ಆರೋಗ್ಯದ ಬಗ್ಗೆ ಈಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಶಿವಣ್ಣ ಅವರಿಗೆ ಆರೋಗ್ಯ ಸಮಸ್ಯೆ ಇರುವುದೇನೋ ನಿಜ, ಆದರೆ ಶಿವಣ್ಣ ಅವರು ನಾರ್ಮಲ್ ಆಗಿಯೇ ಎಲ್ಲಾ ಕಡೆ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಮುಂದಿನ ತಿಂಗಳು ಶಿವಣ್ಣ ಅವರು ಸರ್ಜರಿಗಾಗಿ ಅಮೆರಿಕಾಗೆ ಹೋಗುತ್ತಾರೆ ಎನ್ನುವ ವಿಷಯ ಈಗ ಹೊರಗಡೆ ಬಂದಿದೆ. ಇದನ್ನು ಖುದ್ದು ಶಿವಣ್ಣ ಅವರೇ ಇಂಟರ್ವ್ಯೂ ಒಂದರಲ್ಲಿ ಹೇಳಿಕೊಂಡಿದ್ದು, ಅಮೆರಿಕಾದಲ್ಲಿನ ವೈದ್ಯರ ಜೊತೆಗೆ ಸಂಪರ್ಕದಲ್ಲಿದ್ದಾರೆ, ಹಾಗಿದ್ದಲ್ಲಿ ಅಮೆರಿಕಾದ ವೈದ್ಯರು ಶಿವಣ್ಣ ಅವರ ಆರೋಗ್ಯದ ಬಗ್ಗೆ ಹೇಳಿರೋದೇನು ಗೊತ್ತಾ? ಶಿವಣ್ಣ ಅವರೇ ಇದರ ಬಗ್ಗೆ ತಿಳಿಸಿದ್ದಾರೆ..

ಶಿವಣ್ಣ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಭೈರತಿ ರಣಗಲ್ ನಾಳೆ ತೆರೆ ಕಾಣಲಿದೆ. ಈ ಸಿನಿಮಾವನ್ನು ಶಿವಣ್ಣ ಅವರ ಪತ್ನಿ ಗೀತಾ ಶಿವ ರಾಜ್ ಕುಮಾರ್ ಅವರೇ ನಿರ್ಮಾಣ ಮಾಡಿದ್ದು, ಮಫ್ತಿ ಸಿನಿಮಾ ನಿರ್ದೇಶನ ಮಾಡಿದ ನರ್ತನ್ ಅವರು ನಿರ್ದೇಶನ ಮಾಡಿದ್ದಾರೆ. ಇನ್ನು ಶಿವಣ್ಣ ಅವರೊಡನೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ನಟಿಸಿದ್ದು, ತಂಗಿಯ ಪಾತ್ರದಲ್ಲಿ ಛಾಯಾ ಸಿಂಗ್ ಅವರು ನಟಿಸಿದ್ದಾರೆ. ಭೈರತಿ ರಣಗಲ್ ಸಿನಿಮಾ ನಾಳೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆ ಕಾಣುತ್ತಿದೆ. ಶಿವಣ್ಣ ಅವರ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.
ಭೈರತಿ ರಣಗಲ್ ಸಿನಿಮಾ ಕುರಿತ ಹಾಗೆ ಶಿವಣ್ಣ ಅವರು ಹಲವು ಇಂಟರ್ವ್ಯೂ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದಾದ ನಂತರ ಒಂದು ಕಾರ್ಯಕ್ರಮಗಳು, ಶೋಗಳು ಎಲ್ಲದರಲ್ಲು ಶಿವಣ್ಣ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಶಿವಣ್ಣ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಇದೆ, ಬ್ಲಾಡರ್ ಕ್ಯಾನ್ಸರ್ ಆಗಿದೆ ಎಂದು ಈಗ ವಿಷಯ ಹೊರಬಂದಿದೆ. ಹಾಗೆಯೇ ಈ ವಿಷಯ ಯಶ್ ಅವರಿಗೆ, ಸುದೀಪ್ ಅವರಿಗೆ ಹಾಗೂ ಚಿತ್ರರಂಗದ ಕೆಲವರಿಗೆ ಶಿವಣ್ಣ ಅವರ ಆರೋಗ್ಯದ ಬಗ್ಗೆ ಈಗಾಗಲೇ ತಿಳಿದಿದ್ದು, ಅವರೆಲ್ಲರೂ ಮೊದಲಿಗೆ ಬೇಸರ ಮಾಡಿಕೊಂಡು ನಂತರ ಸಮಾಧಾನ ಮತ್ತು ಧೈರ್ಯ ಹೇಳಿದರಂತೆ. ಈ ಬಗ್ಗೆ ಕೂಡ ಶಿವಣ್ಣ ಅವರೇ ಮಾತನಾಡಿದ್ದಾರೆ.

ಇನ್ನು ಶಿವಣ್ಣ ಅವರಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗಿದ್ದರು ಸಹ, ಅವರ ದೈನಂದಿನ ಚಟುವಟಿಕೆಗಳನ್ನು ನಿಲ್ಲಿಸಿಲ್ಲ. ಈಗಲೂ ಸಹ ಪ್ರತಿದಿನ 8 ರಿಂದ 10 ಮೈಲಿ ವಾಕಿಂಗ್ ಮಾಡುತ್ತಾರಂತೆ ಶಿವಣ್ಣ. ಒಂದು ವೇಳೆ ಸುಸ್ತಾದರೆ ಆಗ ಸ್ವಲ್ಪ ಹೊತ್ತು ರೆಸ್ಟ್ ಮಾಡುತ್ತಾರಂತೆ. ಹಾಗೆಯೇ ಶೂಟಿಂಗ್ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ಆದರೆ ನಾಳೆ ಸಿನಿಮಾ ಬಿಡುಗಡೆ ಆದ ನಂತರ ಶಿವಣ್ಣ ಮುಂದಿನ ತಿಂಗಳು ಶಿವಣ್ಣ ಅವರು ಅಮೆರಿಕಾಗೆ ಟ್ರೀಟ್ಮೆಂಟ್ ಗಾಗಿ ಹೋಗಲಿದ್ದಾರೆ. ಒಂದು ತಿಂಗಳು ಅಮೆರಿಕಾದಲ್ಲೇ ಇರಲಿದ್ದು, ಸರ್ಜರಿ ಮಾಡಿಸಿಕೊಂಡು, ವಿಶ್ರಾಂತಿ ಪಡೆದು ಬರಲಿದ್ದಾರೆ ಎಂದು ಇಂಟರ್ವ್ಯೂನಲ್ಲಿ ತಿಳಿಸಿದ್ದಾರೆ.
ಇನ್ನು ಅಮೆರಿಕಾದ ವೈದ್ಯರು ಶಿವಣ್ಣ ಅವರ ಆರೋಗ್ಯದ ಬಗ್ಗೆ ತಿಳಿಸಿದ್ದು, ನೀವು ಖಂಡಿತವಾಗಿ ಹುಷಾರಾಗಿ ಬರುತ್ತೀರಾ ಎಂದು ಹೇಳಿದ್ದಾರಂತೆ. ಈ ವಿಚಾರವನ್ನು ಶಿವಣ್ಣ ಅವರು ಸಂದರ್ಶನದಲ್ಲೋ ಹೇಳಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಡಾ. ಶಶಿಧರ್ ಹಾಗೂ ಡಾ. ಬಿ.ಕೆ ಶ್ರೀನಿವಾಸ್ ಇವರಿಬ್ಬರ ಬಳಿ ಟ್ರೀಟ್ಮೆಂಟ್ ಪಡೆಯುತ್ತಿದ್ದಾರಂತೆ. ಶೀಘ್ರದಲ್ಲೇ ಶಿವಣ್ಣ ಅವರು ಗುಣಮುಖರಾಗಿ ಬರಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. ನಾಳೆ ಭೈರತಿ ರಣಗಲ್ ಸಿನಿಮಾ ನೋಡುವುದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.



