ಬೆಂಗಳೂರಿನ ಕೆಫೆಗಳು ಮತ್ತು ರೆಸ್ಟೋರೆಂಟ್ಗಳು ಕಾಫಿ ಬೆಲೆಯನ್ನು ಹೆಚ್ಚಿಸಲು ಮುಂದಾಗಿವೆ. ಜಾಗತಿಕ ಮಟ್ಟದಲ್ಲಿ ಕಾಫಿ ಬೀಜದ ಬೆಲೆ ಏರಿಕೆ ಹಾಗೂ ಭಾರತದಿಂದ ರಫ್ತು ಹೆಚ್ಚಾಗಿರುವುದು ಇದಕ್ಕೆ ಮುಖ್ಯ ಕಾರಣ. ಕಾಫಿ ಬೀಜದ ಬೆಲೆ ಕಳೆದ ಮೂರು ತಿಂಗಳಲ್ಲಿ ಶೇಕಡಾ 60ರಷ್ಟು ಏರಿಕೆಯಾಗಿದೆ.

ಹೊಸ ವರ್ಷದಿಂದ ಬೆಲೆಯನ್ನು ಹೆಚ್ಚಿಸುವುದಾಗಿ ಬೆಂಗಳೂರಿನ ಕೆಫೆಗಳು ಘೋಷಿಸಿವೆ. ಫಿಲ್ಟರ್ ಕಾಫಿಯ ಬೆಲೆ ಈಗಾಗಲೇ ಏರಿಕೆಯಾಗಿದೆ. ಬೆಲೆ ವಿವರ ಇಲ್ಲಿದೆ. ಬೆಂಗಳೂರಿನ ದರ್ಶಿನಿಗಳು ತಮ್ಮ ಫಿಲ್ಟರ್ ಕಾಫಿ ಬೆಲೆಯನ್ನು 2 ರಿಂದ 5 ರೂ.ಗಳಷ್ಟು ಹೆಚ್ಚಿಸಿವೆ. ಒಂದು ಕಾಫಿಗೆ ಈಗ 12 ರಿಂದ 35 ರೂ. ವರೆಗೆ ಇದೆ ಎಂದು ವರದಿ ತಿಳಿಸಿದೆ. ಪ್ರಸ್ತುತ ಬಿಸಿ ಕಾಫಿ ದರ 180 ರಿಂದ 290 ರೂ, ಮತ್ತು ಕೋಲ್ಡ್ ಕಾಫಿ ದರ 250 ರಿಂದ 340 ರೂ. ನಡುವೆ ಇದೆ ಎಂದು ವರದಿ ಉಲ್ಲೇಖಿಸಿದೆ.
ಕೆಫೆಯು ಅರೇಬಿಕಾ ಕಾಫಿ ಬೀಜವನ್ನು ಬಳಸುತ್ತದೆ. ಬೆಲೆಗಳು ಶೇಕಡಾ 40 ರಷ್ಟು ಹೆಚ್ಚಾಗುವುದರೊಂದಿಗೆ, ನಾವು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಹವಾಮಾನ ಬದಲಾವಣೆ, ವೈಪರೀತ್ಯದಂಥ ಘಟನೆಗಳು ವಿಯೆಟ್ನಾಂ ಮತ್ತು ಬ್ರೆಜಿಲ್ನಂತಹ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಇದು ಕಾಫಿ ಬೀಜಗಳ ಬೆಲೆಗಳು ಗಗನಕ್ಕೇರುವಂತೆ ಮಾಡಿವೆ.