
ಬಿಗ್ ಬಾಸ್ 11ನೇ ಸೀಸನ್ ನಲ್ಲಿ ಕರ್ನಾಟಕದ ಕ್ರಶ್ ಎಂದೇ ಖ್ಯಾತಿ ಪಡೆದು ಬಳಿಕ ಶೋನಿಂದ ಹೊರಗಡೆ ಬಂದ ಲಾಯರ್ ಜಗದೀಶ್ ಬಿಗ್ ಬಾಸ್ ನಿಂದ ಅವರು ಹೊರಬಂದಿದೆ ತಡ, ಇತ್ತ ಸಾಮಾಜಿಕ ಜಾಲತಾಣದಲ್ಲಿ ಅವರ ಪರ ಹಾಗೂ ವಿರುದ್ಧ ಅನೇಕ ಚರ್ಚೆಗಳು ಪ್ರಾರಂಭವಾಗಿದೆ. ಜಗದೀಶ್ ಲಾಯರ್ ಅಲ್ಲ ಅವರ ಲೈಸೆನ್ಸ್ ರದ್ದಾಗಿದೆ ಎಂಬ ಮಾತುಗಳಿವೆ. ಅದಕ್ಕೆ ಕಾರಣವೇನು ಗೊತ್ತೆ ?
2022ರಲ್ಲಿ ನಾನು ಒಬ್ಬ ಐಪಿಎಸ್ ಅಧಿಕಾರಿಯ ಅಕ್ರಮವನ್ನು ಬಯಲಿಗೆಳೆದಿದ್ದೆ. ಸಿಟಿ ಸಿವಿಲ್ ಕೋರ್ಟ್ನಲ್ಲಿ ಕೇಸ್ ಆಗುತ್ತೆ. ವಿಚಾರಣೆಗೆಂದು ಹೋದಾಗ ನನ್ನ ಹಾಗೂ ನನ್ನ ಮಗನ ಮೇಲೆ ಅಟ್ಯಾಕ್ ಆಗುತ್ತೆ. ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸ್ತಾರೆ. ಈ ವೇಳೆ ಜಗದೀಶ್ ಅವ್ರು ತಮ್ಮ ವೃತ್ತಿಯನ್ನೇ ಇಟ್ಟುಕೊಂಡು ಟಾರ್ಗೆಟ್ ಮಾಡ್ತಿದ್ದಾರೆ ಅಂತ ಕೆಲವರು ಬಾರ್ ಕೌನ್ಸಿಲ್ ಗೆ ಪತ್ರ ಬರೆದಿದ್ರು ಎಂದು ಜಗದೀಶ್ ಹೇಳಿದ್ರು.
ಯಾರೋ ಬರೆದ ಪತ್ರದ ಮೇಲೆ ಕೇಸ್ ನಡೆದು ಕರ್ನಾಟಕ ಬಾರ್ ಕೌನ್ಸಿಲ್ ನೀವು ಪ್ರಾಕ್ಟೀಸ್ ಮಾಡುವಂತಿಲ್ಲ ಎಂದು ಆದೇಶ ಮಾಡುತ್ತೆ. ನನ್ನ ಬ್ಯಾನ್ ಮಾಡ್ತಾರೆ. ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಕೆಂಪು ಬಿಲ್ಡಿಂಗ್ ನಲ್ಲಿ ಕೆಲಸ ಇಲ್ಲ ಅಂದ್ರೆ ಏನು. ಎದುರಿಗೆ ಇರೋ ವಿಧಾನಸೌಧದ ಮೆಟ್ಟಿಲು ಹತ್ತಿ ಎಂಪಿ, ಎಂಎಲ್ಎ ಆಗ್ತೀನಿ ಎಂದು ಜಗದೀಶ್ ಹೇಳಿದ್ರು.

ಅಷ್ಟೇ ಅಲ್ಲದೇ ಕೊಲೆ ಯತ್ನದ ಕೇಸ್ ನಲ್ಲಿ ನನ್ನನ್ನು ಜೈಲಿಗೆ ಹಾಕ್ತಾರೆ. ಫೇಕ್ ಕೇಸ್ ಅದು, 23 ದಿನಗಳ ಕಾಲ ಮರ್ಡರ್ ಯತ್ನ ಕೇಸ್ನಲ್ಲಿ ಜೈಲುವಾಸ ಅನುಭವಿಸಿದ್ದೇನೆ. ಇದ್ರಿಂದ ನನಗೆ ನೋಟಿಸ್ ಕಳಿಸಿದ್ರು. ನನ್ನ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡ್ರು. 2 ಅಸಲಿ ಆಗಿತ್ತು. ಸೆಕೆಂಡ್ ಪಿಯುಸಿ ಮಾರ್ಕ್ ಕಾರ್ಡ್ ಹಿಡಿದು ಮತ್ತೆ ವಿವಾದ ಮಾಡಿದ್ರು.ನಾನು ಈಗಲೂ ಲಾಯರ್.. ಅದನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಜಗದೀಶ್ ಗುಡುಗಿದ್ರು. ಸುಪ್ರೀಂ ಕೋರ್ಟ್ ಬೇಕಾದ್ರು ಹೋಗ್ತಿನಿ ಎಂದು ಹೇಳಿದ್ರು.