ಇಂದು ಕ್ರಿಕೆಟ್ ಕಿಂಗ್, ಆರ್ಸಿಬಿಯ ಭಗವಂತ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬ. ವಿರಾಟ್ ಅವರೆಂದರೆ ಭಾರತದವರಿಗೆ ಮಾತ್ರವಲ್ಲ, ವಿಶ್ವದಲ್ಲಿ ಅತಿದೊಡ್ಡ ಅಭಿಮಾನಿಬಳಗ, ಹಾಗೂ ಅತಹೆಚ್ಚು ಕ್ರೇಜ್ ಹೊಂದಿರುವ ಕ್ರಿಕೆಟರ್ ಇವರು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ವಿರಾಟ್ ಅವರಿಗೆ ಈಗ ಅನುಷ್ಕಾ ಶರ್ಮಾ ಅವರೊಡನೆ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಆದರೆ ಮದುವೆಗಿಂತ ಮೊದಲು ವಿರಾಟ್ ಡೇಟಿಂಗ್ ಮಾಡಿದ್ದ 6 ಹುಡುಗಿಯರು ಯಾರ್ಯಾರು ಗೊತ್ತಾ?
ಮೊದಲಿಗೆ ವಿರಾಟ್ ಅವರ ಹೆಸರು ಬ್ರೆಜಿಲ್ ಮಾಡೆಲ್ ಇಸಾಬೆಲಿ ಲೇಟಿ ಎನ್ನುವವರ ಜೊತೆಗೆ ಕೇಳಿಬಂದಿತ್ತು. ಇವರಿಬ್ಬರು ಸುಮಾರು 2 ವರ್ಷಗಳ ಡೇಟ್ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಇಸಬೇಲಿ ಅವರು ಒಪ್ಪಿಕೊಂಡಿದ್ದರು. ಬಳಿಕ ವಿರಾಟ್ ಅವರ ಹೆಸರು ಮಿಸ್ ಇಂಡಿಯಾ ಆಗಿದ್ದ ಸಾರಾ ಜೇನ್ ಡೈಸ್ ಅವರೊಡನೆ ಸಹ ಕೇಳಿಬಂದಿತ್ತು. ಇಬ್ಬರ ರಿಲೇಶನ್ಷಿಪ್ ಹೊರಬಂದಿರಲಿಲ್ಲ. ಆದರೆ ಕೆಲ ಸಮಯದ ನಂತರ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿತು.

ಮೂರನೆಯವರು ನಟಿ ತಮನ್ನಾ ಭಾಟಿಯಾ. ದಕ್ಷಿಣ ಭಾರತದ ಖ್ಯಾತ ನಟಿ, ಬಾಲಿವುಡ್ ನಲ್ಲಿ ಕೂಡ ಮೋಡಿ ಮಾಡುತ್ತಿರುವ ತಮನ್ನಾ ಭಾಟಿಯಾ ಅವರ ಹೆಸರು ಕೂಡ ವಿರಾಟ್ ಕೊಹ್ಲಿ ಅವರೊಡನೆ ತಳುಕು ಹಾಕಿ ಕೊಂಡಿತ್ತು. ಇವರಿಬ್ಬರು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ. ಮತ್ತೊಬ್ಬರು ನಟಿ ಸಾಕ್ಷಿ ಅಗರ್ವಾಲ್, ಇವರು ತಮಿಳು ನಟಿ. ಇವರೊಡನೆ ಕೂಡ ವಿರಾಟ್ ಕೊಹ್ಲಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ರೂಮರ್ ಗಳು ಕೇಳಿಬರುತ್ತಿದ್ದವು.
ಐದನೆಯವರು ಕನ್ನಡದ ನಟಿ ಸಂಜನಾ ಗಲ್ರಾನಿ. ಇವರು ಆರ್ಸಿಬಿ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು, ಆ ವೇಳೆ ವಿರಾಟ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸಂಜನಾ ಮಾತನಾಡಿ, ತಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದು ಹೇಳಿದ್ದರು. ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾ ಅವರೊಡನೆ ಸಹ ವಿರಾಟ್ ಡೇಟ್ ಮಾಡುತ್ತಿದ್ದಾತೆ ಎನ್ನುವ ಮಾತು ಕೇಳಿಬಂದಿತ್ತು. ಇವರಿಬ್ಬರು ಮೂವಿ ಡೇಟ್ ಗೆ ಕೂಡ ಹೋಗಿದ್ದರು. ಬಳಿಕ ರೋಹಿತ್ ಶರ್ಮಾ ಅವರೊಡನೆ ರಿತಿಕಾ ಮದುವೆಯಾಯಿತು.
ಇಷ್ಟು ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಅವರು ಕೊನೆಗೆ ಮದುವೆಯಾಗಿದ್ದು, ಅನುಷ್ಕಾ ಶರ್ಮಾ ಅವರ ಜೊತೆಗೆ. ಈ ಜೋಡಿಗೆ ಇಂದು ವಮಿಕಾ ಮತ್ತು ಅಕಾಯ್ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಾದರಿ ದಂಪತಿಗಳಾಗಿ ಇವರಿಬ್ಬರ ಬದುಕು ಸಾಗುತ್ತಿದೆ ಎಂದು ಹೇಳಿದರೆ ಖಂಡಿತಾ ತಪ್ಪಲ್ಲ. ವಿರಾಟ್ ಕೊಹ್ಲಿ ಅವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯಶಸ್ಸು ಸಾಧಿಸಲಿ.