ವಾಸ್ತು ಶಾಸ್ತ್ರದಲ್ಲಿಯೂ ತುಳಸಿ ಗಿಡವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಮನೆಯಲ್ಲಿ ತುಳಸಿ ಗಿಡವನ್ನು ಇಡುವಾಗ ನೀವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ, ಲಕ್ಷ್ಮಿ ದೇವಿಯ ಆಶೀರ್ವಾದವು ನಮ್ಮ ಮೇಲೆ ಸದಾ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯ ಅಂದ ಚೆಂದ ಹೆಚ್ಚಿಸಲು, ಹವ್ಯಾಸಕ್ಕಾಗಿ ಅಥವಾ ಆರೋಗ್ಯದ ದೃಷ್ಟಿಯಿಂದ ಅಲಂಕಾರಿಕ ಗಿಡಗಳನ್ನು ತಂದು ಬೆಳೆಸುವ ಪ್ರವೃತ್ತಿ ಹೆಚ್ಚಾಗಿದೆ. ಈ ಅಭ್ಯಾಸ ಒಳ್ಳೆಯದೇ ಆದರೂ ಕೆಲವು ಗಿಡಗಳ ಜೊತೆ ತುಳಸಿ ಗಿಡ ಇಡಬಾರದು ಅಥವಾ ನೆಡಬಾರದು ಎಂದು ಹೇಳಲಾಗಿದೆ.ಹಾಗಾದರೆ ಯಾವ ಸಸ್ಯಗಳನ್ನು ತುಳಸಿ ಜೊತೆ ಇಡಬಾರದು ಎಂದು ಇಂದಿಲ್ಲಿ ನೋಡೋಣ.. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಫಲಿತಾಂಶಗಳನ್ನು ನೋಡಿದರೂ ಅಚ್ಚರಿಯೇನಿಲ್ಲ ಬಿಡಿ…
ಶಮಿ ಗಿಡ (Shami Plant)
ವಾಸ್ತು ಶಾಸ್ತ್ರದಲ್ಲಿ ಶಮಿ ಗಿಡವನ್ನು ತುಳಸಿ ಬಳಿ ನೆಡಬಾರದು ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಒಂದು ವೇಳೆ ಈ ಎರಡು ಸಸ್ಯಗಳನ್ನು ನಿಮ್ಮ ಮನೆಯಲ್ಲಿ ನೆಟ್ಟರೆ, ಅವುಗಳ ನಡುವೆ ಕನಿಷ್ಠ 4 ರಿಂದ 5 ಅಡಿ ಅಂತರವಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಆಗ ನೀವು ಅದರ ಋಣಾತ್ಮಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಬಹುದು.

ಕಳ್ಳಿ ಗಿಡ (Cactus Plant)
ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಕಳ್ಳಿ ಗಿಡವನ್ನು ಇಡುವ ದೊಡ್ಡ ಟ್ರೆಂಡು ಇದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ತುಳಸಿಯ ಬಳಿ ಮುಳ್ಳಿನ ಗಿಡವನ್ನು ಅಂದರೆ ಕಳ್ಳಿ ಗಿಡವನ್ನು ಎಂದಿಗೂ ಇಡಬಾರದು, ಏಕೆಂದರೆ ಅದು ಕೇತು ಗ್ರಹದೊಂದಿಗೆ ಸಂಬಂಧ ಹೊಂದಿದೆ. ಹೀಗೆ ಮಾಡುವುದರಿಂದ ವ್ಯಕ್ತಿಗೆ ತೊಂದರೆಗಳು ಹೆಚ್ಚಾಗತೊಡಗುತ್ತವೆ. ಆದ್ದರಿಂದ, ಕಳ್ಳಿ ಗಿಡವನ್ನು ಮನೆಯೊಳಗೆ ಅಥವಾ ತುಳಸಿ ಬಳಿ ಇಡಬಾರದು.
ಇಂತಹ ಸಸ್ಯಗಳು ಬೇಡ್ವೆ ಬೇಡ
ತುಳಸಿಯ ಬಳಿ ಹಾಲಿನಂತಹ ದ್ರವ ಹೊರಬರುವ ಸಸ್ಯವನ್ನು ಎಂದಿಗೂ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಏಕೆಂದರೆ ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಕುಟುಂಬದಲ್ಲಿ ಜಗಳಗಳಿಗೆ ಕಾರಣವಾಗುತ್ತದೆ.
ತುಳಸಿಯನ್ನು ಎಲ್ಲಿ ನೆಡಬೇಕು?
ವಾಸ್ತು ಶಾಸ್ತ್ರದಲ್ಲಿ, ತುಳಸಿಯನ್ನು ನೆಡಲು ಈಶಾನ್ಯ ದಿಕ್ಕು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೆ, ತುಳಸಿ ಗಿಡವನ್ನು ನೆಡಲು ಯಾವಾಗಲೂ ಸೂರ್ಯನ ಬೆಳಕು ಇರುವ ಸ್ಥಳವನ್ನು ಆರಿಸಿ. ತುಳಸಿಯನ್ನು ಎಂದಿಗೂ ಕತ್ತಲೆಯ ಸ್ಥಳದಲ್ಲಿ ಇಡಬೇಡಿ. ಒಂದು ವೇಳೆ ಈ ರೀತಿ ಮಾಡುವುದರಿಂದ ವ್ಯಕ್ತಿಯು ಶುಭ ಫಲಗಳ ಬದಲಿಗೆ ಅಶುಭ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ.