ಚಂದನವನಕ್ಕೆ ಯಾರದ್ದ ದೃಷ್ಟಿ ತಗುಲಿರುವ ಹಾಗೆ ಭಾಸವಾಗುತ್ತಿದೆ. ಇತ್ತೀಚೆಗೆ ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ಚಿ. ದತ್ತರಾಜ್ ಅವರು ವಯೋಸಹಜ ಆರೋಗ್ಯ ಸಮಸ್ಯೆ ಇಂದ ವಿಧಿವಶರಾದರು. ಇಂದು ಕನ್ನಡದ ಮತ್ತೊಬ್ಬ ಖ್ಯಾತ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಅವರು ವಿಧಿವಶರಾಗಿದ್ದಾರೆ. ಈ ವಿಚಾರ ಚಂದನವನಕ್ಕೆ ದೊಡ್ಡ ಶಾಕ್ ನೀಡಿದೆ ಎಂದು ಹೇಳಿದರೆ ತಪ್ಪಲ್ಲ. ಕಲಾವಿದರು ಹಾಗೂ ತಂತ್ರಜ್ಞರು ಎಲ್ಲರೂ ಶಾಕ್ ಆಗಿದ್ದಾರೆ.
ಗುರುಪ್ರಸಾದ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಅಥವಾ ಖಾಯಿಲೆಗಳು ಬರುವಂಥ ವಯಸ್ಸು ಅಲ್ಲ. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ತಾವು ವಾಸವಾಗಿದ್ದ ಅಪಾರ್ಟ್ಮೆಂಟ್ ನ ರೂಮ್ ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಆದರೆ ಇವರಿಗೆ ಪ್ರಾಣ ಕಳೆದುಕೊಳ್ಳುವ ಹಾಗೆ ಏನಾಗಿತ್ತು ಎಂದು ಹಲವು ಪ್ರಶ್ನೆಗಳು ಜನರಲ್ಲಿ ಶುರುವಾಗಿದ್ದು, ಅವುಗಳಿಗೆ ಉತ್ತರ ಸಿಗಬೇಕಿದೆ..

ನಿರ್ದೇಶಕ ಗುರುಪ್ರಸಾದ್ ಅವರು ಮಠ, ಎದ್ದೇಳು ಮಂಜುನಾಥ ಅಂಥ ವಿಭಿನ್ನವಾದ ಸಿನಿಮಾಗಳನ್ನು ಕನ್ನಡ ಚಿತ್ರಪ್ರೇಮಿಗಳಿಗೆ ನೀಡಿದವರು ಈ ನಿರ್ದೇಶಕರು. ಜಗ್ಗೇಶ್ ಅವರೊಡನೆ ಒಳ್ಳೆಯ ಸಂಬಂಧ ಹೊಂದಿದ್ದರು. ಗುರುಪ್ರಸಾದ್ ಅವರಿಗೆ ಸಾಲಗಾರರ ಕಾಟ ಇದ್ದಿರಬಹುದು ಎಂದು ಊಹಿಸಲಾಗುತ್ತಿದೆ. ಗುರುಪ್ರಸಾದ್ ಅವರು ಮೊದಲ ಪತ್ನಿಗೆ ವಿಚ್ಛೇಧನ ನೀಡಿ ಇತ್ತೀಚೆಗೆ ಎರಡನೇ ಮದುವೆ ಆಗಿದ್ದರು ಎಂದು ಮಾಹಿತಿ ಸಿಕ್ಕಿದೆ.
ಹಾಗೆಯೇ ಗುರುಪ್ರಸಾದ್ ಅವರು ಇತ್ತೀಚೆಗೆ 8 ತಿಂಗಳ ಹಿಂದೆಯಷ್ಟೆ ಈಗಿದ್ದ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆಗಿದ್ದರು ಎನ್ನಲಾಗಿದ್ದು, ಅವರು ಡಿಪ್ರೆಷನ್ ನಲ್ಲಿದ್ದರು ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಹಾಗೆಯೇ ಗುರುಪ್ರಸಾದ್ ಅವರಿಗೆ ಹೆಚ್ಚಾಗಿ ಕುಡಿಯುತ್ತಿದ್ದರು ಎನ್ನಲಾಗಿದ್ದು ಅವರು ಈ ರೀತಿ ಮಾಡುತ್ತಿರುವುದಕ್ಕೆ ಕಾರಣ ಏನಿರಬಹುದು ಎಂದು ಇನ್ನು ತಿಳಿದುಬಂದಿಲ್ಲ.



