ಬಹಳ ಕಡಿಮೆ ಸಿನಿಮಾದಲ್ಲಿ ನಟಿಸಿದ್ರೂ ಸದಾ ಒಂದಲ್ಲ ಮತ್ತೊಂದು ವಿಚಾರಕ್ಕೆ ತೆಲುಗು ಸ್ಟಾರ್ ನಟಿ ಮಂಚು ಲಕ್ಷ್ಮಿ ಸುದ್ದಿಯಲ್ಲೇ ಇರುತ್ತಾರೆ. ಹೀಗಾಗಿ ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ. ಸದ್ಯ ಮಂಚು ಲಕ್ಷ್ಮಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಖಾಸಗಿ ವಾಹಿನಿಗೆ ಬೈಟ್ ನೀಡುವಾಗ ಕ್ಯಾಮೆರಾ ಎದುರೇ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಪಕ್ಕಾ ತೆಲಂಗಾಣ ಸ್ಲ್ಯಾಂಗ್ನಲ್ಲಿ ಕೆಟ್ಟದಾಗಿ ಮಾತಾಡಿದ್ದಾರೆ. ಈಗ ಮಂಚು ಲಕ್ಷ್ಮಿ ನಡೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಆಗಾಗ ಮಂಚು ಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ಗಳನ್ನು ಹಾಕುತ್ತಲೇ ಇರುತ್ತಾರೆ. ಆಕೆಯ ಪೋಸ್ಟ್ಗಳನ್ನು ಹೊಗಳೋದು ಮಾತ್ರವಲ್ಲ ಟೀಕಿಸುವವರೂ ಇದ್ದಾರೆ. ಇದೀಗ ಸೈಮಾ ಅವಾರ್ಡ್ ಕಾರ್ಯಕ್ರಮದ ವೇಳೆ ಕ್ಯಾಮರ ಮುಂದೆ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಅಡ್ಡ ಬಂದ ಕಾರಣಕ್ಕೆ ಆತನ ತಲೆಗೆ ಹೊಡೆದು ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ದಶಕಗಳ ಹಿಂದಿನ ಟಾಲಿವುಡ್ ಹೀರೋ ಮಂಚು ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದರು. ಮಂಚು ಲಕ್ಷ್ಮಿ ಅವರು 2012 ರಲ್ಲಿ ಓ ಧೀರುಡು ಚಿತ್ರದ ಪಾತ್ರಕ್ಕಾಗಿ ನಂದಿ ಪ್ರಶಸ್ತಿಯನ್ನು ಪಡೆದರು. ಇದೀಗ ಹಲ್ಲೆಯ ವಿಚಾರಕ್ಕೆ ಮಂಚು ಲಕ್ಷ್ಮಿ ಸುದ್ದಿಯಲ್ಲಿದ್ದು, ಹಲ್ಲೆಯ ವಿಡಿಯೋ ವೈರಲ್ ಆಗಿದೆ.