ಮುಂಬರುವ ಏಷ್ಯಾ ಕಪ್ ಹಾಗೂ ಏಕದಿನ ವಿಶ್ವಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಯಾವಾಗಲೇ ಇವರಿಬ್ಬರ ನಡುವೆ ಮ್ಯಾಚ್ ನಡೆದರು ಭಾರತದ ಬ್ಯಾಟ್ಸ್ ಮ್ಯಾನ್ ವರ್ಸಸ್ ಪಾಕಿಸ್ತಾನದ ಬೌಲರ್ಸ್ ಅಂತಲೇ ಹೇಳಲಾಗುತ್ತದೆ. ಇಡೀ ಕ್ರಿಕೆಟ್ ಜಗತ್ತಿನಲ್ಲಿ ಇಂಡಿಯಾ ವರ್ಸಸ್ ಪಾಕಿಸ್ತಾನ ಎಂದರೆ ಅದು ದೊಡ್ಡ ರೈವಲರಿ ಪಂದ್ಯಗಳಾಗಿದೆ. ಆದರೆ ಈ ಸಲ ಪಾಕಿಸ್ತಾನ ತಂಡದಿಂದ ಟೀಂ ಇಂಡಿಯಾಗೆ ಧಮ್ಕಿ ಹಾಕಲಾಗಿದೆ. ‘ಈ ಸಲ ನಾವು ಇಂಡಿಯಾವನ್ನು ನಮ್ಮ ಬೌಲಿಂಗ್ ಅಟ್ಯಾಕ್ ನಿಂದ ಸೋಲಿಸುವುದರ , ಜೊತೆಗೆ ನಮ್ಮ ಬ್ಯಾಟಿಂಗ್ ಬಲದಿಂದಲೂ ಸೋಲಿಸುತ್ತೇವೆ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಆ ಹೇಳಿಕೆ ಕೊಟ್ಟಿದ್ದು ಯಾರು? ಎಂದು ಈ ಮಾಹಿತಿಯಲ್ಲಿ ತಿಳಿಯೋಣ.

ಕ್ರಿಕೆಟ್ ವೀಕ್ಷಕರೆಲ್ಲರೂ ಭಾರತ ಹಾಗೂ ಪಾಕಿಸ್ತಾನದ ಪಂದ್ಯಗಳನ್ನು ನೋಡಲು ಕಾಯುತ್ತಾ ಇದ್ದಾರೆ. ಇದೇ ಸಮಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್ ಮ್ಯಾನ್ ಅಬ್ದುಲ್ ಶಫೀಕ್ ಅವರು, ‘ನಾವು ಈ ಸಲ ಟೀಂ ಇಂಡಿಯಾವನ್ನು ನಮ್ಮ ಬೌಲಿಂಗ್ ಅಟ್ಯಾಕ್ ನಿಂದ ಮಾತ್ರ ಅಲ್ಲ , ಬ್ಯಾಟಿಂಗ್ ನ ಬಲದಿಂದಲೇ ಸೋಲಿಸಿ ತೋರಿಸುತ್ತೇವೆ’ ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆ ಹೀಗಿದೆ.

‘ನಾವು ಭಾರತದ ವಿರುದ್ಧ ಕ್ರಿಕೆಟ್ ಆಡಲು ಉತ್ಸಾಹಕರಾಗಿದ್ದೇವೆ. ಆದರೆ ನಾವು ಬೇರೆ ದೇಶದ ವಿರುದ್ಧ ಯಾವ ರೀತಿ ಆಡುತ್ತೀವೋ ಈ ಪಂದ್ಯ ಕೂಡ ಅದೇ ರೀತಿ ಇರಲಿದೆ. ನಮ್ಮ ಬೌಲಿಂಗ್ ಅಟ್ಯಾಕ್ ಪ್ರಪಂಚದಲ್ಲೇ ಸರ್ವಶ್ರೇಷ್ಠವಾಗಿದೆ. ಹಾಗಂತ ನಮ್ಮ ಬ್ಯಾಟ್ಸ್ ಮ್ಯಾನ್ ಗಳನ್ನು ಕೇವಲವಾಗಿ ನೋಡುವಂತಿಲ್ಲ. ನಮ್ಮ ಎಲ್ಲಾ ಬ್ಯಾಟ್ಸ್ ಮ್ಯಾನ್ ಗಳು ಫಾರ್ಮ್ ನಲ್ಲಿ ಇದ್ದಾರೆ. ನಾವು 300ರ ರನ್ ಕೂಡ ಚೇಸ್ ಮಾಡಲಿದ್ದೇವೆ’. ಇದರ ಜೊತೆಗೆ ಅಬ್ದುಲ್ ಶಫೀಕ್ ತನ್ನ ನಾಯಕ ಬಾಬರ ಆಜಮ್ ನನ್ನು ಕೂಡ ಹೊಗಳಿದ್ದಾರೆ.
‘ಏಕದಿನ ಫಾರ್ಮ್ಯಾಟ್ ನ ನಂಬರ್ ವನ್ ಬ್ಯಾಟ್ಸ್ ಮ್ಯಾನ್ ಆಗಿರುವ ಬಾಬರ ಆಜಮ್ ಭಾರತದ ತಂಡಕ್ಕೆ ಡೇಂಜರ್ ಆಗಲಿದ್ದಾರೆ’ ಎಂದಿದ್ದಾರೆ. ನಿಮಗೆ ಗೊತ್ತಿರುವ ಹಾಗೆ ಅಕ್ಟೋಬರ್ 14ರಂದು ವರ್ಲ್ಡ್ ಕಪ್ ನಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಲಿದೆ. ಇದಕ್ಕೂ ಮುನ್ನ ಏಷ್ಯಾ ಕಪ್ ನಲ್ಲಿ ಸೆಪ್ಟೆಂಬರ್ 2 ರಂದು ಪಾಕಿಸ್ತಾನವನ್ನು ಭಾರತ ಎದುರಿಸಲಿದೆ. ಇದರ ಜೊತೆಗೆ ಏಷ್ಯಾ ಕಪ್ ನಲ್ಲಿ ಇನ್ನೂ ಎರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಭಾರತ ಹಾಗೂ ಪಾಕಿಸ್ತಾನದ ಏಕದಿನ ಅಂಕಿಅಂಶಗಳನ್ನು ನೋಡುವುದಾದರೆ ಪಾಕಿಸ್ತಾನ ಮುಂಚೂಣಿಯಲ್ಲಿದೆ.
ಏಕೆಂದರೆ ಇವರಿಬ್ಬರ ಮಧ್ಯೆ 132 ಪಂದ್ಯಗಳು ನಡೆದಿದೆ. ಅದರಲ್ಲಿ ಭಾರತ ಬರೀ 55 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಆದರೆ ಪಾಕಿಸ್ತಾನ 73 ಪಂದ್ಯಗಳನ್ನು ಗೆದ್ದಿದೆ. ನಾಲ್ಕು ಪಂದ್ಯಗಳಲ್ಲಿ ರಿಸಲ್ಟ್ ಬಂದಿಲ್ಲ. ಆದರೆ ವಿಶ್ವಕಪ್ ನ ಅಂಕಿಅಂಶಗಳನ್ನು ನೋಡುವುದಾದರೆ, ಏಕದಿನ ವಿಶ್ವಕಪ್ ನ ಏಳು ಪಂದ್ಯಗಳಲ್ಲಿ ಭಾರತ ಏಳು ಬಾರಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಒಮ್ಮೆಯೂ ಸಹ ಗೆಲುವು ಸಾದಿಸೊಕ್ಕೆ ಆಗಿಲ್ಲ. ಕಳೆದ ಬಾರಿ 2019ರ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಿತ್ತು . ಆ ಪಂದ್ಯದಲ್ಲಿ ಭಾರತ ಗೆದ್ದಿತ್ತು.