ಮೊನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಭಾರತ ಸೋತ ಮೇಲೆ ಸರಣಿಯನ್ನು ಕೂಡ ಸೋತಿದೆ. ಈ ಸರಣಿಯನ್ನು ವೆಸ್ಟ್ ಇಂಡೀಸ್ ಮೂರು ಎರಡರ ಅಂತರದಿಂದ ಭಾರತವನ್ನು ಸೋಲಿಸಿದೆ. ಭಾರತ ಸೋತ ಮೇಲೆ ಅದಕ್ಕೆ ಕಾರಣ ಕೂಡ ಇರಬಹುದು. ಈ ಸೋಲಿಗೆ ಯಾವ ಆಟಗಾರರು ಕಾರಣ ಎಂದು ಈ ಮಾಹಿತಿಯಲ್ಲಿ ತಿಳಿಸುತ್ತೇವೆ. ಮೊದಲನೆಯದಾಗಿ ಭಾರತದ ನಾಯಕ ಹಾರ್ದಿಕ್ ಪಾಂಡ್ಯ, ಕೆಟ್ಟ ರೀತಿಯ ನಾಯಕತ್ವ ಹಾಗೂ ಕೆಟ್ಟ ರೀತಿಯ ಬ್ಯಾಟಿಂಗ್. ಹಾರ್ದಿಕ್ ಪಾಂಡ್ಯರವರು ಐದು ಮ್ಯಾಚ್ ಗಳಲ್ಲಿ ಬರೀ 77ರನ್ ಗಳನ್ನು ಮಾತ್ರ ಗಳಿಸಿದ್ದಾರೆ. ಅವರು 110 ರ ಸ್ಟೈಕ್ ರೇಟ್ ನಲ್ಲಿ ರನ್ ಗಳಿಸಿದ್ದಾರೆ.

ಇವರು ನಾಯಕನಾಗಿ ಹಾಗೂ ಬ್ಯಾಟ್ಸ್ ಮ್ಯಾನ್ ಆಗಿ ಎರಡು ರೀತಿಯಲ್ಲೂ ಈ ಸರಣಿಯಲ್ಲಿ ಫೇಲ್ ಆಗಿದ್ದಾರೆ.ಎರಡನೇಯ ಆಟಗಾರ ಸಂಜು ಸ್ಯಾಮ್ ಸನ್ ಐದು ಪಂದ್ಯಗಳಲ್ಲಿ 32 ರನ್ ಮಾತ್ರ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 114. ಇವರೀಗೆ ಅವಕಾಶ ಸಿಗುತ್ತಿಲ್ಲ ಎಂದು ಜಸ್ಟಿಸ್ ಫಾರ್ ಸ್ಯಾಮ್ ಸನ್ ಎಂದು ಟ್ರೆಂಡ್ ಮಾಡಲಾಗುತ್ತದೆ. ಆದರೆ ಅವಕಾಶ ಸಿಕ್ಕಾಗ ಅಲ್ಲಿ ರನ್ ಗಳಿಸದೆ ಸಂಜು ಸ್ಯಾಮ್ ಸನ್ ಪ್ಲಾಪ್ ಆಗಿದ್ದಾರೆ.ಮೂರನೇಯ ಆಟಗಾರ ಇಶಾನ್ ಕಿಶನ್, ಅವರು ಈ ಸರಣಿಯಲ್ಲಿ ಎರಡು ಪಂದ್ಯ ಮಾತ್ರ ಆಡಿದ್ದಾರೆ.

ಆದರೆ ಆ ಎರಡು ಪಂದ್ಯಗಳಲ್ಲೂ ಕೂಡ ಪ್ಲಾಪ್ ಆಗಿದ್ದರು. 103 ರ ಸ್ಟೈಕ್ ರೇಟ್ ನಲ್ಲಿ ಬರೀ 33ರನ್ ಮಾತ್ರ ಗಳಿಸಿದರು. ಅವರು ಕೂಡ ಒಳ್ಳೆ ಪ್ರದರ್ಶನ ನೀಡಿದ್ದರೆ, ಭಾರತ ತಂಡ ಮೊದಲ ಎರಡು ಟಿ 20 ಪಂದ್ಯಗಳಲ್ಲಿ ಸೋಲುತ್ತಿರಲಿಲ್ಲ. ಮುಂದಿನ ಆಟಗಾರ ವಿಜಯೇಂದ್ರ ಚಹಲ್. ಇವರು ಐದು ಪಂದ್ಯಗಳಲ್ಲಿ 9.05 ಎಕನಾಮಿ ರೇಟ್ ನಲ್ಲಿ ಐದು ವಿಕೆಟ್ ಗಳನ್ನು ಮಾತ್ರ ಪಡೆದಿದ್ದಾರೆ. ತುಂಬಾ ರನ್ಸ್ ಕೂಡ ಕೊಡುತ್ತಾರೆ.ಫೀಲ್ಡಿಂಗ್ ಕೂಡ ಅಷ್ಟು ಚೆನ್ನಾಗಿ ಮಾಡುವುದಿಲ್ಲ.
ತ್ರೋ ಕೂಡ ಚೆನ್ನಾಗಿ ಎಸೆಯುವುದಿಲ್ಲ. ಕ್ಯಾಚ್ ಗಳನ್ನು ಪಡೆಯಲು ಹೆಣಗಾಣುತ್ತಾರೆ. ಇವರು ಐದು ಪಂದ್ಯಗಳನ್ನು ಕೂಡ ಆಡಿ ಬರೀ ಐದು ವಿಕೆಟ್ ಗಳನ್ನು ಮಾತ್ರ ಗಳಿಸಿದ್ದಾರೆ. ಇವರನ್ನು ವರ್ಲ್ಡ್ ಕಪ್ ಗೆ ಕೂಡ ಸೆಲೆಕ್ಟ್ ಮಾಡಲು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ಇವರೇ ಟೀಂ ನಲ್ಲಿ ವೀಕೆಸ್ಟ್ ಲಿಂಕ್ ಆಗಿದ್ದಾರೆ. ಮುಂದಿನ ಆಟಗಾರ ಮುಖೇಶ್ ಕುಮಾರ್ ಟೆಸ್ಟ್ ನಲ್ಲೂ ಕೂಡ ಡೆಬ್ಯೂ ಮಾಡಿಸಿದರು. ನಂತರ ಏಕದಿನ ಸರಣಿ ಹಾಗೂ ಟಿ 20 ಸರಣಿಗಳಲ್ಲೂ ಕೂಡ ಮುಖೇಶ್ ಕುಮಾರ್ ನನ್ನು ಆಡಿಸಲಾಯಿತ್ತು.
ಅವರು ಆಡಿರುವ ಐದು ಪಂದ್ಯಗಳಲ್ಲಿ 8.80ರ ಹಾಗೇ ರನ್ ಹೂಡೆಸಿಕೊಂಡಿದ್ದಾರೆ. ಆದರೆ ಬರೀ ಮೂರು ವಿಕೆಟ್ ಗಳನ್ನು ಮಾತ್ರ ಗಳಿಸಿದ್ದಾರೆ. ಇವರು ಕೂಡ ಪೂರ್ತಿಯಾಗಿ ಈ ಸರಣಿಯಲ್ಲಿ ಪ್ಲಾಪ್ ಆಗಿದ್ದಾರೆ. ಇವರ ಜೊತೆಗೆ ಹಲವು ಪ್ಲೇಯರ್ ಗಳು ಅಂತಹ ಅತ್ಯುತ್ತಮ ಪ್ರದರ್ಶನವನ್ನೇನು ನೀಡಿಲ್ಲ. ಆದರೆ ಈ ಐದು ಆಟಗಾರರು ಪ್ರಮುಖವಾಗಿ ಕೆಟ್ಟ ಪ್ರದರ್ಶನ ನೀಡಿದ್ದಾರೆ. ಇದರಿಂದಲೇ ಭಾರತ ಹದಿನೇಳು ವರ್ಷಗಳ ನಂತರ ಒಂದು ಬೈಲೇಟರ್ ಸರಣಿಯನ್ನು ವೆಸ್ಟ್ ಇಂಡೀಸ್ ನಲ್ಲಿ ಸೋತಿದೆ.



