ಏನೇ ಹರಸಾಹಸ ಪಟ್ರೂ ಪಾಲಿಕೆ ಕೈಲಿ ಪಾಲಿಕೆ ವ್ಯಾಪ್ತಿಯ ಶಾಲೆಗಳ ಶೈಕ್ಷಣಿಕ ಫಲಿತಾಂಶ ಏರಿಕೆ ಮಾಡಲು ಸಾಧ್ಯವೇ ಆಗ್ತಿಲ್ಲ.. ವರ್ಷದಿಂದ ವರ್ಷಕ್ಕೆ ಆ ಸೌಕರ್ಯ ಕೊಟ್ವಿ.. ಈ ಸೌಕರ್ಯ ಕೊಟ್ವಿ ಅಂತ ನಾಮ್ ಕೇ ವಾಸ್ತೆಗೆ ಬಡಾಯಿ ಕೊಚ್ಚಿ ಕೊಳ್ಳುತ್ತಾರೆ… ಕೊನೆಗೂ ಈಗ ಪಾಲಿಕೆಯ ಶಾಲಾ ಕಾಲೇಜಿನ ಜವಾಬ್ದಾರಿ ಶಿಕ್ಷಣ ಇಲಾಖೆಯ ಹೆಗಲಿಗೆ ಹೊರಿಸಲು ಭರ್ಜರಿ ತಯಾರಿ ನಡೆಯುತ್ತಿದೆ.. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರ್ತಿದಂಗೆ ಬಿಬಿಎಂಪಿ ಶಾಲೆ, ಕಾಲೇಜುಗಳನ್ನ ತನ್ನ ವಶಕ್ಕೆ ಪಡೆಯೋದಕ್ಕೆ ಮುಂದಾಗಿದೆ.

ಇಷ್ಟು ದಿನ ಬಿಬಿಎಂಪಿಗೆ ಸೇರಿದ ಶಾಲಾ, ಕಾಲೇಜುಗಳನ್ನೂ ಪಾಲಿಕೆ ಅಯುಕ್ತರ ಅದೇಶದಂತೆ ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಅಯುಕ್ತರು ನಡೆಸುತ್ತಿದ್ರು. ಇದಕ್ಕೆ ಅಂತ ಪಾಲಿಕೆ ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ ಕೂಡ ಮೀಸಲಿಟ್ಟಿದ್ರು.. ಆದ್ರೆ, ಪಾಲಿಕೆ ಅಂದು ಕೊಂಡಂತೆ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ರಿಸಲ್ಟ್ ಅಷ್ಟರ ಮಾಟ್ಟಿಗೆ ಫಲ ನೀಡಿಲ್ಲ. ಇನ್ನೂ, ಕಳೆದ ನಾಲ್ಕೈದು ವರ್ಷಗಳಿಂದ ಪಾಲಿಕೆಯ ಪಿಯು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಿಬಿಎಂಪಿ ಸಾಕಷ್ಟು ಶಾಲಾ, ಕಾಲೇಜುಗಳು ಶೂನ್ಯ ಫಲಿತಾಂಶ ಬಂದಿತ್ತು.
ಈ ಹಿನ್ನಲೆಯಲ್ಲಿ ಬಿಬಿಎಂಪಿಗೆ ಸೇರಿದ 166 ಶಾಲೆ, , ಶಿಶುವಿಹಾರಗಳನ್ನೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂಡಳಿ ಸೇರಿಸಲು ಸದ್ದಿಲ್ಲದೆ ತಯಾರಿ ನಡೆಯುತ್ತಿದೆ.. ಈ ವಿಷಯವಾಗಿ ಪಾಲಿಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂಡಳಿ ಒಂದು ಸುತ್ತಿನ ಮಾತು ಕತೆ ನಡೆಸಿದೆ… ಬ್ರಾಂಡ್ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಮೊದಲ ಬಾರಿಗೆ ಬಿಬಿಎಂಪಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಮುಂದಾಗುತ್ತಿದೆ.
ಈಗಾಗ್ಲೇ ಪ್ಲಾನ್ ಮಾಡಿರೋ ಸರ್ಕಾರಿ ಶಾಲೆಯ ಹಿರಿಯ ಅಧಿಕಾರಿಗಳು ಪಾಲಿಕೆ ವ್ಯಾಪ್ತಿಗೆ ಸೇರಿರೋ 166 ಶಾಲಾ ಕಾಲೇಜು ಸೇರಿದಂತೆ ಶಿಶುವಿಹಾರಗಳ ಮಾಹಿತಿ ಕಲೆಹಾಕಿದೆ. ಇನ್ನೂ ಪಾಲಿಕೆ ಶಾಲಾ, ಕಾಲೇಜುಗಳ ಜೊತೆ ಶಾಲೆಯ ಸ್ತಿರಸ್ತಿ, ಚರಸ್ತಿ ಶಾಲೆಯ ಶಿಕ್ಷಕರು ಸೇರಿದಂತೆ ಪಾಲಿಕೆ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರೋ 22499 ವಿದ್ಯಾರ್ಥಿಗಳನ್ನೂ ಕೂಡ ಸರ್ಕಾರಿ ಶಾಲಾ ವ್ಯಾಪ್ತಿಗೆ ಸೇರಿಸಿ ಕೊಳ್ಳಲು ಬ್ಲೂ ಪ್ರೀಂಟ್ ರೆಡಿ ಮಾಡಿದೆ ಅಂತ ಬಿಬಿಎಂಪಿಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇನ್ನೂ ಈ ವಿಚಾರ ಸಂಬಂಧ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಮಾತನಾಡಿದ್ದು ಆ ಬಗ್ಗೆ ಇನ್ನೂ ಚರ್ಚೆ ಆಗ್ತಿದೆ… ಒಂದು ಸುತ್ತಿನ ಮಾತು ಕತೆ ಆಗಿದೆ.. ಮುಂದೆ ನೋಡೋಣ ಅಂತ ಮಾಹಿತಿ ನೀಡಿದ್ದಾರೆ. ಏನೇ ಹೇಳಿ ಬ್ರಾಂಡ್ ಬೆಂಗಳೂರು ಹೆಸರಲ್ಲಿ ಪಾಲಿಕೆ ಶಾಲೆಗಳನ್ನೂ ಸರ್ಕಾರಿ ಶಾಲೆಗಳು ವಶಕ್ಕೆ ಪಡೆಯುತ್ತಿರೋದು ಒಂದು ರೀತಿಯಲ್ಲಿ ಖುಷಿಯ ವಿಚಾರವೇ. ಆದ್ರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಫಲಿತಾಂಶ ವಿಚಾರವಾಗಿ ಶಿಕ್ಷಣ ಇಲಾಖೆ ತೆಕ್ಕೆಗೆ ಶಾಲೆಗಳು ಹೋದ ಮೇಲಾದರೂ ಉತ್ತಮವಾಗುತ್ತದೆಯಾ ಅಂತ ಕಾದು ನೋಡಬೇಕು..