ಇವತ್ತು ಇಡೀ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ.. ಬಾಳಿ ಬದುಬೇಕಾದ ಯುವ ಕಲಾವಿದೆ ದೊಡ್ಮನೆಯ ಕುಟುಂಬದ ಸದಸ್ಯೆ ಸ್ಪಂದನ ಸಾವನ್ನಪ್ಪಿದ್ದಾರೆ… ಪತ್ನಿಯನ್ನು ಜೀವಕ್ಕಿಂತ ಜಾಸ್ತಿ ಇಷ್ಟ ಪಡ್ತಿದ್ದ ವಿಜಯ್ ರಾಘವೇಂದ್ರ ನೋವಿನಲ್ಲಿ ನರಳಾಟ ಅನುಭವಿಸಿದ್ದಾರೆ.. ಸದ್ಯ ಪತ್ನಿಯ ಮೃತ ದೇಹ ತರೋದಕ್ಕೆ ಬ್ಯಾಂಕಾಕ್ ಪ್ರಯಾಣ ಮಾಡಿದ್ದಾರೆ. ಇನ್ನೂ ವಿಜಯ್ ರಾಘವೇಂದ್ರ ಜೊತೆಗೆ ಇಂದು ಅವರ ಫ್ಯಾಮಿಲಿ ಕೂಡ ಬ್ಯಾಂಕಾಕ್ ಪ್ರಯಾಣ ಮಾಡಿದ್ದಾರೆ..

ಇನ್ನೂ ಸ್ಪಂದನ ಸಾವಿನ ಬಗ್ಗೆ ವಿಜಯ್ ರಾಘವೇಂದ್ರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರತಿಕ್ರಿಯೆ ಕೊಡುವಂತಹ ಪರಿಸ್ಥಿತಿಯಲ್ಲಿ ಅವರಿಲ್ಲ.. ಹೀಗಾಗಿ ಅವರ ತಮ್ಮ ಶ್ರೀ ಮುರುಳಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದಾರೆ.. ಸ್ಪಂದನಾ ಅಗಲಿಕೆಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಮಾಧ್ಯಮಗಳ ಉದ್ದೇಶಿಸಿ ಮಾತನಾಡಿದ ಶ್ರೀ ಮುರುಳಿ, ಸ್ಪಂದನಾ ರಾಘವೇಂದ್ರ ಅವರು ನಿಧನರಾಗಿರುವುದು ಹೌದು.
ಈ ಬಗ್ಗೆ ಗೊತ್ತಾದ ತಕ್ಷಣ ಅಣ್ಣ ಕರೆ ಮಾಡಿ ಹೇಳಿದರು.. ನಮಗೂ ನೋವು ಉಂಟಾಗಿದೆ. ಅತ್ತಿಗೆ ಅವರ ಕುಟುಂಬಸ್ಥರ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ನಮಗೆ ಅಣ್ಣ ಹೇಳಿರೋ ಪ್ರಕಾರ ಅತ್ತಿಗೆ ಮಲಗಿದ್ದ ಸಂದರ್ಭದಲ್ಲಿ ಮತ್ತೆ ಏಳಲೇ ಇಲ್ಲ. ಸದ್ಯಕ್ಕೆ ನಾವು ಲೋ ಬಿ.ಪಿ ಎಂದುಕೊಂಡಿದ್ದೇವೆ.. ಹೆಚ್ಚಿನ ಮಾಹಿತಿ ನಾಳೆ ಗೊತ್ತಾಗುತ್ತೆ.. ನಾಳೆ ಮೃತದೇಹ ಬೆಂಗಳೂರಿಗೆ ಬರಲಿದೆ ಬಂದ ಮೇಲೆ ಉಳಿದ ವಿಚಾರ ತಿಳಿಯುತ್ತದೆ ಅಂತ ನೋವು ತೋಡಿ ಕೊಂಡಿದ್ದಾರೆ.. ಹೆಚ್ಚಿಮಾಹಿತಿ ನಾಳೆ ಹೇಳ್ತೀವಿ ಅಂತ ಭಾವುಕರಾದರು.
ನಿಜಕ್ಕೂ ಇದು ವಿಜಯ್ ರಾಘವೇಂದ್ರ ಕುಟುಂಬಕ್ಕೆ ಇದು ಒಂದು ದೊಡ್ಡ ಶಾಕಿಂಗ್ ವಿಚಾರವೇ ಆಗಿತ್ತು.. ಆರಾಮಾಗಿ ಓಡಾಡಿ ಕೊಂಡಿದ್ದ ಸ್ಪಂದನ ಪ್ರವಾಸಕ್ಕೆ ಹೋಗ್ತೀನಿ ಅಂತ ಹೇಳಿ ಹೋದವರು ವಾಪಾಸ್ ಬರ್ತಿಲ್ಲ ಅಂತ ಗೊತ್ತಾದ್ರೆ ಯಾರಿಗೆ ಆಗಲಿ ದುಃಖ ಆಗುತ್ತೆ ಅದೇ ನೋವನ್ನ ಈಗ ವಿಜಯ್ ರಾಘವೇಂದ್ರ ಕುಟುಂಬ ಅನುಭವಿಸುತ್ತಿದೆ.. ಇನ್ನೂ ಮಲ್ಲೇಶ್ವರ ದಲ್ಲಿ ಇರುವ ಸ್ಪಂದನ ತಂದೆ ಮನೆಯಲ್ಲಿ ಸಾಕಷ್ಟು ಜನ ಬೀಡು ಬಿಟ್ಟಿದ್ದಾರೆ…