ಸಿನಿಮಾ ತಾರೆಯರು ಹಾಗೂ ವಿವಾದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನೊಂದು ಬಿಟ್ಟಿರಲಾರವು. ದಿನಕ್ಕೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸಾಕಷ್ಟು ಸೆಲೆಬ್ರಿಟಿಗಳಿದ್ದಾರೆ. ಇದೀಗ ತಮಿಳು ನಟಿ ರೇಖಾ ನಾಯರ್ ಇದೇ ಸಾಲಿಗೆ ಸೇರಿದ್ದಾರೆ. ತಮಿಳಿನ ಕೆಲವು ಸಿನಿಮಾಗಳಲ್ಲಿ ಹಾಗೂ ಬಿಗ್ ಬಾಸ್ ನಲ್ಲಿ ಭಾಗವಹಿಸಿರುವ ಈಕೆ ಇದೀಗ ವಿವಾದಾತ್ಮಕ ಹೇಳಿಕೆ ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಈ ನಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂದರ್ಶಕನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆಕೆ, ‘ಹಾಟ್ ಆಗಿ ಕಾಣುವಂತ ಡ್ರೆಸ್ ಹಾಕಿದ ಸಂಧರ್ಭದಲ್ಲಿ ಹುಡಗರು ಸೊಂಟಕ್ಕೆ ಕೈ ಹಾಕಿದರೆ ಅದರ ಬಗ್ಗೆ ರಿಯಾಕ್ಟ್ ಮಾಡುವ ಬದಲು ಅದನ್ನು ಅನುಭವಿಸಿ’ ಎಂದು ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ನಟಿ ರೇಖಾ ನೀಡಿದ ಈ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಇದನ್ನು ಗಮನಿಸಿದ ನೆಟ್ಟಿಗರು ನಟಿಗೆ ಕಮೆಂಟ್ ಮೂಲಕ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಜೊತೆಗೆ ‘ನೀವೊಬ್ಬ ನಟಿಯಾಗಿದ್ದು ಇಂತಹ ಹೇಳಿಕೆ ನೀಡುವುದು ನಾಚಿಕಗೇಡಿನ ವಿಷಯ. ನಿಮ್ಮನ್ನು ಫಾಲೋ ಮಾಡುವವರು ನಿಮ್ಮ ಇಂತಹ ಹೇಳಿಕೆಗಳಿಂದ ದಾರಿ ತಪ್ಪುತ್ತಾರೆ’ ಎಂದು ನೆಟ್ಟಿಗರು ಬುದ್ದಿ ಮಾತು ಹೇಳಿದ್ದಾರೆ.
ನಟಿ ರೇಖಾ ನಾಯರ್ ಯೂಟ್ಯೂಬರ್ ಆಗಿ ವೃತ್ತಿ ಜೀವನ ಆರಂಭಿಸಿದರು ನಂತರ ಧಾರಾವಾಹಿ, ಟೆಲಿವಿಷನ್ ಶೋ ಗಳಲ್ಲಿ ಕಾಣಿಸಿಕೊಂಡು ಸಿನಿಮಾ ರಂಗಕ್ಕೂ ಕಾಲಿಟ್ಟರು. ತಮಿಳಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿರುವ ಈಕೆ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಸ್ಪರ್ಧಿಯಾಗಿದ್ದರು. ಈ ಹಿಂದೆ ‘ಇರವಿನ್ ನಿರಲ್’ ಎಂಬ ಚಿತ್ರದಲ್ಲಿ ಬೆತ್ತಲೆ ದೃಶ್ಯದಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಮತ್ತೆ ಈಕೆ ವಿವಾದದ ಸುಳಿಗೆ ಸಿಲುಕಿದ್ದಾರೆ.



