ಧೋನಿ ಹಾಗೂ ಸಾಕ್ಷಿ ಸಿಂಗ್ ಪ್ರೀತಿಸಿ ಮದುವೆಯಾದ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಜೋಡಿ 2010 ರಲ್ಲಿ ವಿವಾಹಗೊಂಡಿದ್ದು, ಆದರೆ ಮಹೇಂದ್ರ ಸಿಂಗ್ ಧೋನಿ ಮಾತ್ರ ಮದುವೆಗೂ ಮುನ್ನ ಬಾಲಿವುಡ್ ನಟಿಯರೊಂದಿಗೆ ಡೇಟಿಂಗ್ ಮಾಡುತ್ತಿದ್ದರಂತೆ, ಹೌದು ಹಾಗಾದ್ರೆ ಧೋನಿ ಮದುವೆಗೂ ಯಾವ ನಟಿಯರೊಂದಿಗೂ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಬಾಲಿವುಡ್ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ರು, ಅಷ್ಟೇ ಅಲ್ಲದೆ ಒಂದಿಷ್ಟು ವರ್ಷಗಳ ಕಾಲ ಮಹೇಂದ್ರ ಸಿಂಗ್ ಧೋನಿ ಹಾಗೂ ದೀಪಿಕಾ ಡೇಟಿಂಗ್ ಮಾಡಿದ್ದಾರೆ. ಯುವರಾಜ್ ಸಿಂಗ್ ಜೊತೆ ದೀಪಿಕಾ ಸ್ನೇಹ ಬೆಳೆಸಲು ಆರಂಭಿಸಿದ ಮೇಲೆ ಧೋನಿ ದೀಪಿಕಾ ಪಡುಕೋಣೆಯಿಂದ ದೂರ ಉಳಿದಿದ್ದರು.

ತದನಂತರ ಕಪಿಲ್ ಶೋ ಕಾರ್ಯಕ್ರಮದ ಕ್ರಿಯೆಟಿವ್ ಡೈರೆಕ್ಟರ್ ಪ್ರೀತಿ ಸಿಮೋಸ್ ಜೊತೆ ಕೂಡ ಮಹೇಂದ್ರ ಸಿಂಗ್ ಧೋನಿ ರಹಸ್ಯವಾಗಿ ಡೇಟಿಂಗ್ ಮಾಡಿರುವುದು ಕೂಡ ಸುದ್ದಿ ಮಧ್ಯಮಗಳಲ್ಲಿ ಸದ್ದು ಮಾಡಿತ್ತು. ಧೋನಿ ಹಾಗೂ ನಟಿ ಲಕ್ಷ್ಮಿರಾಯ್ ಜೊತೆ ಕೂಡ ಸಂಬಂಧ ಹೊಂದಿದ್ದರು ಎನ್ನುವ ವಿಚಾರ ಕೂಡ ಭಾರೀ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಲಕ್ಷ್ಮಿರಾಯ್ ಬ್ರಾಂಡ್ ಅಂಬಾಸಿಡರ್ ಆಗಲು ಕೂಡ ಧೋನಿಯೇ ಪ್ರಮುಖ ಕಾರಣ ಎನ್ನಲಾಗಿತ್ತು.
ತದನಂತರ ಬಾಲಿವುಡ್ ಕ್ಯೂಟ್ ಬೆಡಗಿ ಆಸಿನ್ ಜೊತೆ ಧೋನಿ ಡೇಟಿಂಗ್ ಮಾಡಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ನಂತರ ಆಸಿನ್ ಉದ್ಯಮಿ ಒಬ್ಬರನ್ನು ಮದುವೆಯಾಗುವ ಮೂಲಕ ಈ ವಿವಾದ ತೆರೆ ಎಳೆದರು. ನಂತರ ಮಹೇಂದ್ರ ಸಿಂಗ್ ಧೋನಿ ವದಂತಿಗಳು ಹರಿದಾಡಿದ ಬಳಿಕ ತಮ್ಮ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರವನ್ನ ಪ್ರೀತಿಸಿ ಮದುವೆಯಾದರು. ಮಹೇಂದ್ರ ಸಿಂಗ್ ಧೋನಿ ಭಾರತದ ಕ್ರಿಕೆಟ್ ತಂಡ ಸಾಕಷ್ಟು ಕೊಡುಗೆ ನೀಡಿದ್ದು, ಹಲವಾರು ಟ್ರೋಫಿಗಳನ್ನ ಭಾರತದ ಪರವಾಗಿ ಗೆಲ್ಲುವ ಮುಖಾಂತರ ಭಾರತ ಕ್ರಿಕೆಟ್ ರಂಗದಲ್ಲಿ ಉನ್ನತ ಸ್ಥಾನವನ್ನ ಪಡೆದುಕೊಂಡಿದ್ದು, ಚನ್ನೈ ಸೂಪರ್ ಕಿಂಗ್ಸ್ ತಂಡವನ್ನ 5 ಬಾರಿ ಚಾಂಪಿಯನ್ ಆಗಿಸಿ ದೇಶಿ ಕ್ರಿಕೆಟ್ ನಲ್ಲೂ ಮಹೇಂದ್ರ ಸಿಂಗ್ ಧೋನಿ ಸಾಕಷ್ಟು ಹೆಸರು ಮಾಡಿದ್ದರು.
ಭಾರತದ ದಿಗ್ಗಜ ಆಟಗಾರರ ಪೈಕಿ ಮಹೇಂದ್ರ ಸಿಂಗ್ ಧೋನಿ ಸಾಧನೆ ನಿಜಕ್ಕೂ ಗಣನಿಯ ವಾದದ್ದು. ಕೂಲ್ ಕ್ಯಾಪ್ಟನ್ ಎಂದೇ ಹೆಸರುವಾಸಿಯಾಗಿದ್ದ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕಿಪಿಂಗ್ ನಲ್ಲೂ ಅಗ್ರಜರಾಗಿದ್ದು, ವಿಶ್ವ ಕ್ರಿಕೆಟ್ ದುನಿಯಾದಲ್ಲಿ ವಿಕೆಟ್ ಕಿಪಿಂಗ್ ಮೂಲಕವು ಖ್ಯಾತಿ ಪಡೆದಿದ್ದರು. ಅಷ್ಟೇ ಅಲ್ಲದೆ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಚಿತ್ರ ಕೂಡ ಬಾಲಿವುಡ್ ನಲ್ಲಿ ಮೂಡಿಬಂದಿದ್ದು, ಈ ಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರಕ್ಕೆ ಸುಶಾಂತ್ ಸಿಂಗ್ ರಜಪೂತ್ ಜೀವ ತುಂಬಿದ್ದರು.
ಜೀವನದಲ್ಲಿ ಅನೇಕ ಏಳು ಬೀಳುಗಳನ್ನ ಅನುಭವಿಸಿದ ಮಹೇಂದ್ರ ಸಿಂಗ್ ಧೋನಿ, ಅನೇಕ ವಿವಾದಕ್ಕೆ ಕಾರಣವಾಗಿದ್ರು, ವಿರೇಂದ್ರ ಸೇಹವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಹೀಗೆ ಹಲವಾರು ಆಟಗಾರರನ್ನ ಕ್ರಿಕೆಟ್ ನಿಂದ ನಿವೃತ್ತಿ ಕೊಡಿಸುವ ಹಾಗೇ ಮಾಡಿದ್ದಾರೆ ಎನ್ನುವ ಅಪವಾದ ಕೂಡ ಮಹೇಂದ್ರ ಸಿಂಗ್ ಧೋನಿ ಮೇಲಿತ್ತು. ಒಟ್ಟಾರೆ ಮಹೇಂದ್ರ ಸಿಂಗ್ ಧೋನಿ ಮದುವೆಗೂ ಮುಂಚೆ ಡೇಟಿಂಗ್ ಮೂಲಕವು ವಿವಾದಕ್ಕೆ ಕಾರಣವಾಗಿದ್ರು ಎನ್ನುವುದು ಮಾತ್ರ ಸತ್ಯ.