ನಟಿ ಇಶಾ ಗುಪ್ತಾ ಬಿ-ಟೌನ್ನ ಅತ್ಯಂತ ಸುಂದರ ಮತ್ತು ಫಿಟೆಸ್ಟ್ ನಟಿಯರಲ್ಲಿ ಒಬ್ಬರು. 2012ರಲ್ಲಿ ಜನತ್ 2 ಚಿತ್ರದ ಮೂಲಕ ಬಾಲಿವುಡ್’ಗೆ ಪಾದರ್ಪಣೆ ಮಾಡಿದ ಇಶಾ, ದಕ್ಷಿಣ ಭಾರತದ ಚಿತ್ರಗಳು ಮತ್ತು ವೆಬ್ ಸಿರೀಸ್‘ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ಇಶಾ ಅಭಿಮಾನಿಗಳು ಹೊಸ ವರ್ಷದಂದು ಅವರ ಇನ್ಸ್ಟಾಗ್ರಾಂ ಪೋಸ್ಟ್ ನೋಡಿ ದುಃಖ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಇಶಾ ಬಹಳ ಇಷ್ಟಪಡುವ ಅವರ ನವಾಬ್ ತೀರಿಕೊಂಡಿದೆ. ಹೌದು, ಇಶಾ ಅಭಿಮಾನಿಗಳಿಗೆ ಅವರು ತಮ್ಮ ನಾಯಿ ಮರಿಗಳನ್ನು ಎಷ್ಟು ಇಷ್ಟಪಡುತ್ತಾರೆ ಎಂಬ ವಿಚಾರ ಗೊತ್ತೇ ಇದೆ. ನೀವು ಅವರ ಇನ್ಸ್ಟಾಗ್ರಾಂ ಫಾಲೋ ಮಾಡುತ್ತಿದ್ದರೂ ಈ ಬಗ್ಗೆ ತಿಳಿದುಕೊಂಡಿರುತ್ತೀರಿ.

ಹೊಸ ವರ್ಷದ ಹೊಸ್ತಿಲಿನಲ್ಲಿರುವಾಗಲೇ ಇಶಾ ಗುಪ್ತಾ ತಮ್ಮ ಮುದ್ದಿನ ನಾಯಿ ಮರಿಯನ್ನು ಕಳೆದುಕೊಂಡಿರುವುದರಿಂದ ನಟಿಯ ಹೊಸ ವರ್ಷದ ಸಂಭ್ರಮ ಕಳೆಗುಂದಿದೆ. ಈ ಬಗ್ಗೆ ಇಶಾ ಗುಪ್ತಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಭಾನುವಾರ ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿದ್ದರೆ, ಇಶಾ ಗುಪ್ತಾ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಇಶಾ ಗುಪ್ತಾ ತಮ್ಮ ನಾಯಿಮರಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.
ಶನಿವಾರ ತಡರಾತ್ರಿ, ಇಶಾ ಗುಪ್ತಾ ಅವರ ಮುದ್ದು ನಾಯಿ ಈ ಜಗತ್ತಿಗೆ ವಿದಾಯ ಹೇಳಿದೆ. ಇಶಾ ಗುಪ್ತಾ ತಮ್ಮ ಇನ್ಸ್ಟಾ ಪೋಸ್ಟ್ನಲ್ಲಿ ಶ್ವಾನ ನವಾಬ್ ಜೊತೆಗಿರುವ ಅನೇಕ ಸ್ಮರಣೀಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಅವರು ನವಾಬ್ 31-12-2022 ಎಂದು ಶ್ವಾನವನ್ನು ಕಳೆದುಕೊಂಡ ದಿನಾಂಕವನ್ನು ಬರೆದಿದ್ದಾರೆ. ಇದರೊಂದಿಗೆ, ಬ್ರೋಕನ್ ಹಾರ್ಟ್ ಇಮೋಜಿ ಹಾಕಿ, “ मैं तैनू फ़िर मिलांगी’’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಮೂಲಕ ಇಶಾ ಗುಪ್ತಾ ತಮ್ಮ ಮುದ್ದಿನ ನಾಯಿ ಮರಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಇಶಾ ಗುಪ್ತಾ ಅವರ ಇನ್ಸ್ಟಾಗ್ರಾಂನಲ್ಲಿ ನೀವು ಅವರ ಅನೇಕ ಸಾಕುಪ್ರಾಣಿಗಳ ಚಿತ್ರಗಳನ್ನು ನೋಡುತ್ತೀರಿ. ಇದರಿಂದ ನಿಮಗೆ ಇಶಾ ನಾಯಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ತಿಳಿಯುತ್ತದೆ. ಈ ಮೊದಲೇ ಹೇಳಿದ ಹಾಗೆ ಇಶಾ ಗುಪ್ತಾ ವೆಬ್ ಶೋಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡು ನಮ್ಮನ್ನು ರಂಜಿಸುತ್ತಾ ಸುಮಾರು ಒಂದು ದಶಕವಾಗಿದೆ. ತಮ್ಮ ಆನ್-ಸ್ಕ್ರೀನ್ ಅಭಿನಯದಿಂದ ಹಿಡಿದು ಆಫ್-ಸ್ಕ್ರೀನ್ ಲುಕ್ ಕಾರಣಕ್ಕಾಗಿ ಇಶಾ ಗುಪ್ತಾ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇಶಾ ಎಂದಿಗೂ ಹೊಸ ಹೊಸ ಪ್ರಯೋಗಗಳಿಗೆ ಹೆದರುವುದಿಲ್ಲ ಎನ್ನುವುದಕ್ಕೆ ಅವರ ಬಟ್ಟೆಗಳೇ ಸಾಕ್ಷಿ.
ಇಶಾ ಅವರ ಬಟ್ಟೆಗಳಿಂದ ಸ್ಫೂರ್ತಿ ಪಡೆದ ಹೆಣ್ಣುಮಕ್ಕಳ ಸಂಖ್ಯೆಯೇನೂ ಕಡಿಮೆ ಇಲ್ಲ. ಇಶಾ ಗುಪ್ತಾ ಬಾಲಿವುಡ್’ನಲ್ಲಿ ತನ್ನ ಬೆಲ್ಲಿಯನ್ನು ತುಂಬಾ ಪ್ರೀತಿಸುವ ನಟಿಯರಲ್ಲಿ ಒಬ್ಬರು. ಸದಾ ಫ್ಯಾಶನ್ ಡ್ರೆಸ್ ಗಳನ್ನು ಧರಿಸುತ್ತಾ ಅಭಿಮಾನಿಗಳನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ. ಅವರ ಇನ್ಸ್ಟಾಗ್ರಾಮ್ ಪೇಜ್ ನೀಡಿದರೆ ಯಾವ ಫ್ಯಾಶನ್ ಮ್ಯಾಗಜೀನ್ಗಿಂತ ಕಡಿಮೆಯಿಲ್ಲ. ಅವರ ಫ್ಯಾಷನ್ ಆಯ್ಕೆಗಳು ಎಲ್ಲರ ಹುಬ್ಬೇರುವಂತೆ ಮಾಡುತ್ತವೆ. ಇತ್ತೀಚೆಗೆ ಈಶಾ ಧರಿಸಿದ್ದ ಬ್ಲಾಕ್ ಕಲರ್ ಡ್ರೆಸ್ ಗೆ ಕೂಡ ಅನೇಕ ಕಮೆಂಟ್ಸ್ ಬಂದಿದ್ದವು.