ಇನ್ನು ಸಿನಿಮಾ ರಂಗದಲ್ಲಿ ನಟ ನಟಿಯರು ಒಂದು ಒಳ್ಳೆಯ ಹೆಸರು ಪಡೆದುಕೊಂಡು ಬರುವುದೂ ಅಷ್ಟು ಸುಲಭವಲ್ಲ.ಇನ್ನು ಪ್ರಖ್ಯಾತಿ ಪಡೆದ ನಟ ನಟಿಯರ ಸಿನಿಮಾ ಮೇಲೆ ಪ್ರೇಕ್ಷಕರು ಬಹಳ ನಂಬಿಕೆ ಇಟ್ಟಿರುತ್ತಾರೆ. ಇನ್ನು ಅವರ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿದ್ದಲ್ಲಿ ಆ ನಟರ ನಟಿಯರ ಅಲ್ಲಗಳಿಯುವ ಮಾತುಗಳು ಆರಂಭಿಸುತ್ತಾರೆ.ಹಾಗೆಯೇ ತಾವು ಒಪ್ಪಿಕೊಳ್ಳುವ ಸಿನಿಮಾಗಳಾಗಲಿ ಅಥವಾ ಆ ಸಿನಿಮಾದಲ್ಲಿ ಅವರು ವಹಿಸಿಕೊಂಡಿರುವ ಕೆಲಸದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಆ ಎಡವಟ್ಟುಗಳಿಗೆ ಕಾರಣ ಯಾರಾಗಿದ್ದರು ಏನಾಗಿದ್ದರು ದೂಷಿಸುವುದು ಮಾತ್ರ ನಟ ನಟಿಯರನ್ನೇ ಎಂದರೆ ತಪ್ಪಾಗಲಾರದು. ಹಾಗಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಆ ಸ್ಥಾನವನ್ನು ಹಾಗೆ ಕಾಪಾಡಿಕೊಂಡು ಹೋಗುವುದು.

ಈಗ ಇದರದ್ದೇ ಸಂಬಂಧ ಪಟ್ಟ ವಿಚಾರವೊಂದನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ “ಚಾಲೆಂಜಿಂಗ್ ಸ್ಟಾರ್ ದರ್ಶನ್” ಅವರು ತಿಳಿಸಿದ್ದಾರೆ.ಇನ್ನು ಮಾಧ್ಯಮಗಳಿಂದ ಕೆಲ ಕಾರಣಗಳಿಂದ ಬ್ಯಾನ್ ಆಗಿದ್ದ ದರ್ಶನ ಅವರನ್ನು ಇದೀಗ ಮಾದ್ಯಮದವರೆ ಮರಳಿ ಕರೆತಂದಿದ್ದಾರೆ.ದರ್ಶನ್ ಅವರು ಮಾತಿನಲ್ಲಿ ಕರವಾದರು ಮನಸಿನಲ್ಲಿ ಸಣ್ಣ ಮಗು ಎಂದು ಹೇಳಬಹುದು.ಇವರದ್ದು ನೇರ ನುಡಿ.ಅನಿಸಿದ್ದನ್ನು ಯಾವ ಫಿಲ್ಟರ್ ಇಲ್ಲದೆ ಯಾರ ಮುಖವು ನೋಡದೆ ಹಾಗೆಯೇ ಹೇಳುವಂತಹ ಮನುಷ್ಯ. ಈಗಾಗಲೇ ಸ್ಯಾಂಡಲ್ವುಡ್ ನಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಐವತ್ತರಲ್ಲಿ ಸಾಕಷ್ಟು ಸಿನಿಮಾ ಗಳು ದಾಖಲೆಗಳನ್ನು ಬರೆದಿದೆ.
ಇನ್ನು ಸಿನಿಮಾ ವಿಚಾರದಲ್ಲಿ ದರ್ಶನ್ ಅವರು ಬಹಳ ನಾಜೂಕು.ಅವರು ಸಿಕ್ಕ ಸಿಕ್ಕ ಕತೆಗಳನ್ನು ದುಡ್ಡಿಗಾಗಿ ಒಪ್ಪುವುದಿಲ್ಲ. ಅವರಿಗೆ ಅದೆಷ್ಟೋ ಕಥೆಗಳು ಬಂದರು ಮನಸ್ಸಿಗೆ ಇಷ್ಟವಾದದ್ದನ್ನು ಮಾತ್ರ ಮಾಡುತ್ತಾರೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ. ಬಹಳ ಕಂಪ್ಲಿಕೇಷನ್ ಮಾಡಿಕೊಂಡಿದ್ದ ಇವರ “ಕ್ರಾಂತಿ” ಸಿನಿಮಾ ಶೋಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ. ಇದರ ಪ್ರಚಾರದಲ್ಲಿ ಬ್ಯಸಿ ಇದ್ದ ದರ್ಶನ್ ಅವರು ಸಂದರ್ಶನದಲ್ಲಿ ಕೆಲ ವಿಚಾರ ಹಂಚಿಕೊಂಡಿದ್ದಾರೆ.ಇನ್ನು ಈವರಿಗೆ ಆದ ಅನುಭವವನ್ನು ತಿಳಿಸಿದ್ದಾರೆ.ಇವರನ್ನು ಹುಡುಕಿಕೊಂಡು ಸಾಕಷ್ಟು ನಿರ್ದೇಶಕರು ಬರುತ್ತಾರೆ.
ನಾನು ಎಲ್ಲಾ ಸಿನಿಮಾಗಳನ್ನು ಒಪ್ಪುವುದಿಲ್ಲ.ನಂಗೆ ಒಪ್ಪಿಸುವುದು ಅಷ್ಟು ಸುಲಭವಲ್ಲ. ಹೀಗೆ ಒಬ್ಬ ನಿರ್ದೇಶಕ ಬಂದಿದ್ದ ನಾನು ಅವರ ಹೆಸರು ಹೇಳಲು ಇಷ್ಟ ಪಡುವುದಿಲ್ಲ. ಆತನ ಕತೆ ನನಗೆ ಇಷ್ಟ ಆಗಿರಲಿಲ್ಲ.ಹಾಗಾಗಿ ನಾನು ಅವರ ಸಿನಿಮಾ ತಿರಸ್ಕರಿಸಿದ್ದೆ.ಹೀಗೆ ಬಿಡುವಿನ ವೇಳೆಯಲ್ಲಿ ಒಂದು ಪ್ರೋಮೂ ವೀಕ್ಷಿಸಿದೆ ಇದೆಲ್ಲೋ ನೋಡಿದ ಹಾಗೆಯಿದೆಯಲ್ಲಾ ಎಂದು ಆ ಸಿನಿಮಾ ನೀಡಿದಾಗ ಆ ನಿರ್ದೇಶಕ ಹೇಳಿದ ಕತೆಯಾಗುತ್ತು.ಈಗಿನ ನಿರ್ದೇಶಕರು ಕೊರಿಯಾ ಹಾಗೂ ಇತರೆ ಭಾಷೆಯ ಕತೆಯನ್ನು ಕದ್ದು ನಮ್ಮ ನಾಡಿನಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂಷಿಸಿದ್ದಾರೆ.
ಇನ್ನು ಈ ಕ್ರಾಂತಿ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು “ವಿ ಹರಿಕೃಷ್ಣ” ಅವರು ವಹಿಸಿಕೊಂಡಿದ್ದರು.ಅದರೊಟ್ಟಿಗೆ ನಿರ್ಮಾಣಕ್ಕೆ “ಶೈಲಜಾ ನಾಗ್ ಹಾಗೂ ಬಿ. ಸುರೇಶ” ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. “ರಚಿತಾ ರಾಮ್, ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು” ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ಸ್ವತಃ ವಿ. ಹರಿಕೃಷ್ಣ ಚಿತ್ರಕ್ಕೆ ಟ್ಯೂನ್ ಹಾಕಿದ್ದಾರೆ. ಸಾಕಷ್ಟು ದಿನಗಳಿಂದ ಅಭಿಮಾನಿಗಳು ‘ಕ್ರಾಂತಿ’ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಚಿತ್ರತಂಡ ಅದನ್ನು ಮತ್ತಷ್ಟು ಹೆಚ್ಚಿಸಿದೆ.



