ನಮ್ಮ ಚಿತ್ರರಂಗದಲ್ಲಿ ಖುಷಿ ವಿಚಾರಗಳ ಸರಣಿ ನಡೆಯುತ್ತಿದೆ ಎಂದರೆ ತಪ್ಪಾಗಲಾರದು.ಸಿನಿಮಾ ಇಂಡೀಸ್ಟ್ ಯಲ್ಲಿ ಮದುವೆಗಳ ಉತ್ಸವದಲ್ಲಿ ಮುಳುಗಿದೆ ಎಂದೇ ಹೇಳಬಹುದು.ಏಕೆಂದರೆ.ಈ ವರ್ಷದಲ್ಲಿ ಸಾಕಷ್ಟು ಸೆಲಬ್ರೆಟಿ ಗಳು ದಾಂಪತ್ಯ ಜೀವನಕ್ಕೆ ಕಲಿಡುತ್ತಿದ್ದರೆ.ಆ ಸುದ್ದಿಗಳು ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ.ಇದೀಗ ಅವರೆಲ್ಲರ ಪಟ್ಟಿಗೆ ಮತ್ತೊಂದು ಸೆಲಬ್ರೆಟಿ ಸೇರ್ಪಡೆ ಆಗಿದ್ದಾರೆ.ಇನ್ನು ಹೆಳುವುದಾದರೆ ನಮ್ಮ ಚಿತ್ರರಂಗದಲ್ಲಿ ಯವುದು ಶಾಶ್ವತ ಎಂದು ಹೇಳಲು ಸಾಧ್ಯವಾಗುತ್ತಿಲ್ಲ.

ಇಂದು ಮದುವೆಯಾದ ಜೋಡಿಗಳು ಮದುವೆಯಾದ ಕೆಲ ವರ್ಷಗಳಿಗೆ ಮಾದರಿಯಾಗಿ ಬದುಕಬೇಕಿದ್ದ ಜೋಡಿಗಳೆಲ್ಲಾ ವಿಚ್ಛೇದನದಲ್ಲಿ ಅಂತ್ಯ ಗೊಳಿಸುತ್ತಿದ್ದಾರೆ. ಹೀಗೆ ನಟ ನಟಿಯರು ತಮ್ಮ ಅಭಿಮಾನಿಗಳು ತಮ್ಮ ಜೀವನ ಶೈಲಿಯ ಅನುಕರಣೆ ಮಾಡುತ್ತಾರೆ ಎಂದು ತಿಳಿದಿದ್ದರೂ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ.ಆದ್ರೆ ಇದೀಗ ಇವ್ರಿಲ್ಲರ ನಂಬಿಕೆ ತಪ್ಪು ಹಾಗೂ ನಟ ನಟಿಯರು ಕೂಡ ಹೀಗೂ ಬದುಕಲು ಸಾಧ್ಯ ಎಂದು ತಿಳಿಸಿಕೊಳಲು ಮತ್ತೊಂದು ಜೋಡಿ ಈ ವರ್ಷದಲ್ಲಿ ಮದುವೆಯಾದವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಆ ಜೋಡಿ ಯಾರೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಟಾಲಿವುಡ್ನ ಯುವ ನಟ ನಾಗ ಶೌರ್ಯ ಉದಯೋನ್ಮುಖ ನಟ. ಇನ್ನೂ ಈ ನಟ ನಟಿಸಿದ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗದೇ ಹೋದರೂ, ‘ಚಲೋ’ ಹಾಗೂ ‘ಊಹಲು ಗುಸಗುಸಲಾಡೆ’ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ‘ಕ್ರಿಕೆಟ್ ಗರ್ಲ್ಸ್ & ಬಿಯರ್’ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ನಾಗಶೌರ್ಯ ಬಿಗ್ ಹಿಟ್ಗಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಕೈಯಲ್ಲಿ ಎರಡು ಸಿನಿಮಾಗಳಿವೆ. ಇವುಗಳ ಶೂಟಿಂಗ್ ನಡೆಯುತ್ತಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗಬಹುದು ಎಂಬ ಸೂಚನೆ ನೀಡಿದ್ದಾರೆ.
ಈಗ ಅದರ ಬೆನ್ನಲ್ಲೇ ಈ ನಟ “ಶೌರ್ಯ” ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಆದರೆ ಕೆಲ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿದ್ದಾರೆ ಎಂದು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಈ ನಟ ತಮ್ಮ ದೀರ್ಘಕಾಲದ ಸ್ನೇಹಿತೆಯಾಗಿದ್ದ ಅನುಷಾ ಶೆಟ್ಟಿಯವರ ಜೊತೆಗೆ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ನಟ ಮೂಲತಃ ಟಾಲಿವುಡ್ ನವರಾದರು ಕುಂದಾಪುರದ ಹುಡಿಗಿಯೊಟ್ಟಿಗೆ ಸಂಬಂಧ ಬೆಸೆದಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಉಂಟಾಗಿರುವ ಜೊತೆಗೆ ಖುಷಿಯು ತಂದಿದೆ.
ಇನ್ನು ಅನುಷಾ ಅವ್ರು ಕೊಡ ಯಾವ ನಟಿಯರಿಗಿಂತಲು ಕಡಿಮೆಯಿಲ್ಲ. ನಟಿಯರಂತೆ ಸೌಂದರ್ಯವತಿಯಾಗಿದ್ದು ಓದಿನಲ್ಲೂ ಹಾಗೂ ವ್ಯವಹಾರದಲ್ಲಿ ಕೊಡ ಎತ್ತಿದ ಕೈ ಆಗಿದ್ದಾರೆ. ಇನ್ನು ಈಕೆ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಬೆಂಗಳೂರಿನ ಉದ್ಯಮಿಯ ಪುತ್ರಿ. ಅನುಷಾ ನ್ಯೂಯಾರ್ಕ್ ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇವರದ್ದೇ ಅನುಷಾ ಶೆಟ್ಟಿ ಡಿಸೈನ್ಸ್ ಓಪಿಸಿ ಪ್ರೈವೆಟ್ ಲಿಮಿಟೆಡ್ ಅನ್ನೋ ಖಾಸಗಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅನುಷಾ ಶೆಟ್ಟಿಗೆ 2019ರಲ್ಲಿ ಡಿಸೈನರ್ ಆಫ್ ದಿ ಇಯರ್ ಪ್ರಶಸ್ತಿ ಕೂಡ ಲಭಿಸಿದೆ. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಬಿ. ಕಾಂ ಪದವಿಯನ್ನು ಮುಗಿಸಿದ್ದಾರೆ. ಅಲ್ಲದೆ ಪಾಂಡಿಚೇರಿ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಭಾರತದ ಯುವ ಮಹಿಳಾ ಉದ್ಯಮಿಗಳಲ್ಲಿ ಅನುಷಾ ಕೂಡ ಒಬ್ಬರು.