ನಟ ಅಮಿತಾಭ್ ಬಚ್ಚನ್ ಮದುವೆಗೂ ಮುಂಚೆ ಜಯಾ ಅವರ ಮುಂದೆ ಒಂದು ಷರತ್ತು ಇಟ್ಟಿದ್ದರಂತೆ ಎಂದು ತಿಳಿದುಬಂದಿದೆ. ಮದುವೆಯಾಗೋ ಮುಂಚೆ ಜಯಾ ಮುಂದೆ ಅಮಿತಾಭ್ ಹೇಳಿದ್ದೇನು? ನಾನು ಕಲ್ಕತ್ತಾದಲ್ಲಿ ಚಿತ್ರೀಕರಣದಲ್ಲಿದ್ದೆ ಮತ್ತು ನಾವು ಮಾಡಿದ ಒಂದು ಚಲನಚಿತ್ರವು ಹಿಟ್ ಆದರೆ ನಾವು ಎಲ್ಲಾದರೂ ಹೋಗಿ ಸುತ್ತಾಡಿಕೊಂಡು ಬರೋಣ ಅಂತ ನಿರ್ಧರಿಸಿದ್ದೆವು” ಎಂದು ಜಯಾ ಬಚ್ಚನ್ ಹೇಳಿದರು. ಆಗ ‘ಝಂಜೀರ್’ ಚಿತ್ರ ಹಿಟ್ ಆಗಿತ್ತು, ನಾನು ಕಲ್ಕತ್ತಾದಲ್ಲಿ ಒಂದು ಚಲನಚಿತ್ರದ ಚಿತ್ರೀಕರಣದಲ್ಲಿದ್ದೆ ಮತ್ತು ನಿಮ್ಮ ಅಜ್ಜ ನನಗೆ ಕರೆ ಮಾಡಿ ‘ಒಂದು ಸಮಸ್ಯೆ ಇದೆ’ ಎಂದು ಹೇಳಿದರು. ನಾವು ಅಕ್ಟೋಬರ್ ನಲ್ಲಿ ಮದುವೆಯಾಗಲು ನಿರ್ಧರಿಸಿದ್ದೆವು, ಏಕೆಂದರೆ ಅಷ್ಟೊತ್ತಿಗಾಗಲೇ ನನ್ನ ಕೆಲಸ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿತ್ತು.ಅವರು ನನಗೆ ಕರೆ ಮಾಡಿದಾಗ ಹೇಳಿದ್ದ ಮಾತು ‘ನನಗೆ ಖಂಡಿತವಾಗಿಯೂ 9 ರಿಂದ 5 ಗಂಟೆವರೆಗೆ ಕೆಲಸ ಮಾಡುವ ಹೆಂಡತಿ ಬೇಕಾಗಿಲ್ಲ.

ದಯವಿಟ್ಟು ಕೆಲಸ ಮಾಡು, ಆದರೆ ಪ್ರತಿದಿನ ಅಲ್ಲ. ನೀನು ಏನು ಮಾಡಬೇಕು ಅಂತ ನೀನೇ ಆಯ್ಕೆ ಮಾಡಿಕೊ, ಸರಿಯಾದ ಜನರೊಂದಿಗೆ ಕೆಲಸ ಮಾಡು’ ಎಂದು ಅಮಿತಾಭ್ ಹೇಳಿದ್ದನ್ನು ಜಯಾ ನೆನಪಿಸಿಕೊಂಡರು.ಅಮಿತಾಭ್ ಹೇಳಿದ್ದಕ್ಕೆ ನಾನು ಸರಿ ಎಂದು ಹೇಳಿದೆ. ಅವರು ಮತ್ತೊಮ್ಮೆ ನನಗೆ ಕರೆ ಮಾಡಿ ಜಯಾ ನಿನ್ನೊಂದಿಗೆ ರಜಾದಿನಕ್ಕೆ ಹೋಗಲು ಸಾಧ್ಯವಿಲ್ಲ ಎಂದು ನನ್ನ ಪೋಷಕರು ಹೇಳುತ್ತಿದ್ದಾರೆ. ನೀನು ಅವಳೊಂದಿಗೆ ರಜಾದಿನಕ್ಕೆ ಹೋಗಲು ಬಯಸಿದರೆ, ನೀನು ಅವಳನ್ನು ಮದುವೆಯಾಗು, ನಂತರ ಕರೆದುಕೊಂಡು ಹೋಗು ಅಂತ ಹೇಳುತ್ತಿದ್ದಾರೆ” ಎಂದು ಅಮಿತಾಭ್ ಹೇಳಿದ್ದರಂತೆ ಎಂದು ಜಯಾ ಹೇಳಿದರು.
ಆಗ ನಾನು ಅವರಿಗೆ “ನಿಮ್ಮ ಅಭಿಪ್ರಾಯವೇನು’ ಎಂದು ಕೇಳಿದೆ.. ಸರಿ ಹಾಗಾದರೆ ನಾವು ಅಕ್ಟೋಬರ್ ಬದಲಿಗೆ ಜೂನ್ ನಲ್ಲಿಯೇ ಮದುವೆ ಮಾಡಿಕೊಳ್ಳೋಣ ಎಂದು ಅಮಿತಾಭ್ ಹೇಳಿದ್ರಂತೆ” ಎಂದು ಜಯಾ ಹೇಳಿದರು. ನಂತರ “ನೀವು ನನ್ನ ಹೆತ್ತವರೊಂದಿಗೆ ಮಾತನಾಡಬೇಕು” ಎಂದು ಅಮಿತಾಭ್ ಗೆ ಜಯಾ ಹೇಳಿದ್ರಂತೆ. ಅದಕ್ಕೆ ಒಪ್ಪಿ ನನ್ನ ತಂದೆಯೊಂದಿಗೆ ಮಾತನಾಡಿದರು. ನನ್ನ ತಂದೆ ಈ ವಿವಾಹದಿಂದ ತುಂಬಾ ಸಂತೋಷವಾಗಿರಲಿಲ್ಲ, ನನ್ನ ತಂದೆ ನಾನು ಮದುವೆಯಾಗಬೇಕೆಂದು ಎಂದಿಗೂ ಬಯಸಿದವರಲ್ಲ.
ನಾವು ಒಟ್ಟು ಮೂವರು ಸಹೋದರಿಯರು. ‘ನಾನು ನಿಮಗೆ ಜನ್ಮ ನೀಡಿದ್ದು ಕೇವಲ ಶಿಕ್ಷಣ ಪಡೆದು ನಂತರ ಮದುವೆಯಾಗಲು ಅಲ್ಲ, ಅದಕ್ಕಿಂತಲೂ ಹೊರತಾಗಿ ನೀವೆಲ್ಲರೂ ಜೀವನದಲ್ಲಿ ಏನನ್ನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ’ ಎಂದು ನನ್ನ ತಂದೆ ಹೇಳಿದರು ಎಂದು ಜಯಾ ಹೇಳಿದರು. ಆಗ ಅಮಿತಾಭ್ ಸಹ ತನ್ನ ಪೋಷಕರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಡಿ ಅಂತ ಕೇಳಿದರು ಎಂದು ನಟಿ ಹೇಳಿದರು. ಕೂನೆಗೆ ಮುಂಬೈನ ತನ್ನ ಅಜ್ಜಿಯ ನಿವಾಸದಲ್ಲಿ ಅಮಿತಾಭ್ ಅವರೊಂದಿಗೆ ವಿವಾಹ ನಡೆಯಿತು ಎಂದು ಜಯಾ ಬಚ್ಚನ್ ಹೇಳಿದರು.