ಕಾನೂನು ಬಾಹಿರ ಸಂದೇಶಗಳನ್ನು ಶೇರ್ ಮಾಡುವುದನ್ನು ತಡೆಗಟ್ಟುವ ಸಲುವಾಗಿ, ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಈ ರೀತಿಯ ಖಾತೆಗಳನ್ನು ನಿರ್ಬಂಧಿಸುತ್ತಿದೆ
“ಮಾಸಿಕ ಬಳಕೆದಾರರ ವರದಿಯನ್ನು” ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಯಾವ ರೀತಿಯ ಖಾತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಅವುಗಳಲ್ಲಿ ಎಷ್ಟು ಬ್ಯಾನ್ ಮಾಡಲಾಗಿದೆ ಎಂಬುದರ ಕುರಿತು ವಿವರಗಳನ್ನು ನೀಡುತ್ತದೆ. ಆಗಸ್ಟ್ 2022 ರಲ್ಲಿ, ಇದು 23 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ.
ವಾಟ್ಸಾಪ್ ಪ್ರತಿ ತಿಂಗಳು ಸರಾಸರಿ 20 ಲಕ್ಷ ಖಾತೆಗಳನ್ನು ಕೆಲವು ಸಮಯದಿಂದ ನಿಷೇಧಿಸುತ್ತಿದೆ. ಈ ರೀತಿ ಮಾಡಿದ್ದರಿಂದ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದಂತೆ ಆಗುತ್ತದೆ ಹಾಗೂ ಅನಗತ್ಯ ಸಂದೇಶಗಳನ್ನು ಕಳಿಸುವುದನ್ನು ನಿಲ್ಲಿಸಬಹುದೆಂದು ಇದರ ಮುಖ್ಯ ಉದ್ದೇಶ.
WhatsApp ಖಾತೆ ಬ್ಯಾನ್ ಆಗಲು ಮುಖ್ಯ ಕಾರಣವೆಂದರೆ ಇದರ ನಿಯಮಗಳನ್ನು ಪಾಲಿಸಾದಿರುವುದು. ಅಂದರೆ ವಾಟ್ಸಪ್ನಲ್ಲಿ ಕಾನೂನು ಬಾಹಿರ, ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದು, ಬೆದರಿಕೆಯಾ ಸಂದೇಶ, ಕಿರುಕುಳದ ಸಂದೇಶ ಈ ರೀತಿಯ ಸಂದೇಶಗಳನ್ನು ಫಾರ್ವರ್ಡ್ ಮಾಡುವುದರಿಂದ ನಿಮ್ಮ ಖಾತೆಯನ್ನು ನಿಷೇಧಿಸುತ್ತಾರೆ.
ಒಂದು ಖಾತೆ ಬ್ಯಾನ್ ಆಗಬೇಕಾದರೆ ಅದಕ್ಕೆ ಮುಖ್ಯವಾಗಿ ಬಳಕೆದಾರರೆ ಕಾರಣ. ಇಲ್ಲಿ ಇವರ ಕೆಲವೊಂದು ನಡವಳಿಕೆಯಿಂದ ಈ ರೀತಿಯ ನಿರ್ಧಾರಗಳನ್ನು ಕೈಗೊಳಲಾಗುತ್ತದೆ. ಅತಿಯಾದ ಬಳಕೆಯಿಂದ ಕೂಡ ಇದರಿಂದ ಕೆಲವೊಂದು ಬಳಕೆದಾರರು ನಿಮ್ಮ ಖಾತೆಯನ್ನು ರಿಪೋರ್ಟ್ ಮಾಡುವ ಸಾಧ್ಯತೆಗಳಿರುತ್ತವೆ. ಹೀಗೆ ನಿಮ್ಮ ಖಾತೆ ಬ್ಯಾನ್ ಆಗಬಹುದು



