ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಾಯಕರಲ್ಲಿ ಶಿವಣ್ಣ ಸಹ ಒಬ್ಬರು, ಇವರ ಬಗ್ಗೆ ನಮಗೆಲ್ಲ ಗೊತ್ತಿದೆ, ಹಾಗೆಯೇ ಬಹಳ ಪ್ರೀತಿ ಕೂಡ ಇದೆ. ಶಿವಣ್ಣ ಸದಾ ಸಂತೋಷವಾಗಿರಲಿ ಅನ್ನೋದೇ ಎಲ್ಲರ ಆಸೆ ಆಗಿದೆ. ಇತ್ತೀಚೆಗೆ ಶಿವಣ್ಣ ಗೀತಕ್ಕ ಜೋಡಿ 39ನೇ ವರ್ಷದ ವಿವಾವ ವಾರ್ಷಿಕೋತ್ಸವವನ್ನ ಆಚರಿಸಿಕೊಂಡರು. ಆ ವೇಳೆ ಶಿವಣ್ಣ ವಿಶೇಷವಾದ ಪೋಸ್ಟ್ ಮಾಡಿ, ಗೀತಕ್ಕನಿಗೆ ವಿಶ್ ಮಾಡಿದ್ದರು. ಶಿವಣ್ಣ ಹಾಗೂ ಗೀತಕ್ಕ ಜೋಡಿ ದಂಪತಿಗಳು ಹೇಗಿರಬೇಕು ಅನ್ನೋದನ್ನ ತಿಳಿಸಿಕೊಡೋ ಜೋಡಿ ಎಂದು ಹೇಳಿದರೂ ತಪ್ಪಲ್ಲ. ಈಗ ದಾಂಪತ್ಯ ಜೀವನಗಳು ಒಂದೆರಡು ದಿವಸ ಇರುವುದು ಕೂಡ ಹೆಚ್ಚು. ಆದರೆ ಈ ಜೋಡಿ ಅದಕ್ಕೆ ವಿರುದ್ಧವಾಗಿ, 39 ವರ್ಷಗಳ ಕಾಲ ಜೊತೆಯಾಗಿದ್ದು, ಅನ್ಯೋನ್ಯವಾಗಿದ್ದಾರೆ. ಇದನ್ನು ನೋಡಿದರೆ ಬಹಳ ಸಂತೋಷ ಆಗುತ್ತದೆ. ಇವರ ಬಗ್ಗೆ ಇನ್ನಷ್ಟು ವಿಚಾರಗಳು ಇಲ್ಲಿದೆ..
ಸ್ಯಾಂಡಲ್ ವುಡ್ ಕಿಂಗ್ ಎಂದೇ ಖ್ಯಾತಿ ಹೊಂದಿರುವವರು ನಟ ಶಿವ ರಾಜ್ ಕುಮಾರ್. ಇವರು ಸ್ಕ್ರೀನ್ ಮೇಲೆ ಮಾತ್ರ ಹೀರೋ ಅಥವಾ ಕಿಂಗ್ ಅಲ್ಲ, ರಿಯಲ್ ಲೈಫ್ ನಲ್ಲಿ ಕೂಡ ಕಿಂಗ್. ತಮ್ಮ ಕುಟುಂಬವನ್ನು ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಅಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಪತ್ನಿ ಗೀತಾ ಅವರನ್ನು ಮತ್ತು ಇಬ್ಬರು ಮಕ್ಕಳನ್ನು ಬಹಳ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಶಿವಣ್ಣ. ಅದರಲ್ಲೂ ಶಿವಣ್ಣ ಹಾಗೂ ಗೀತಕ್ಕ ಅಷ್ಟು ಚೆನ್ನಾಗಿ ಇರುವುದನ್ನು ನೋಡಿದರೆ ಸಂತೋಷ ಆಗುತ್ತದೆ. ಈ ಜೋಡಿಯಲ್ಲಿ ಇಷ್ಟೊಂದು ಅನ್ಯೋನ್ಯತೆ ಹೇಗೆ ಬಂತು ಅಂತ ಎಲ್ಲರಲ್ಲೂ ಆಶ್ಚರ್ಯ ಆಗೋದಂತೂ ಖಂಡಿತ. ಶಿವಣ್ಣ ಹಾಗೂ ಗೀತಕ್ಕ ಅಂಥಾ ಆದರ್ಶ ಜೋಡಿಗಳಾಗಿ ಬದುಕುತ್ತಿದ್ದಾರೆ. ಕಿರಿಯರಿಗೆ ಇವರು ಸ್ಪೂರ್ತಿ.

ಈಗಿನ ಕಾಲದಲ್ಲಿ ಮದುವೆಯಾದ ಕೆಲವೇ ದಿನಕ್ಕೆ ಅಥವಾ ಕೆಲವೇ ತಿಂಗಳುಗಳಿಗೆ ಜನರು ವಿಚ್ಛೇದನ ಪಡೆಯುವುದನ್ನು ನೋಡಿದ್ದೇವೆ, ದಂಪತಿಗಳಲ್ಲಿ ಆ ಸಾಮರಸ್ಯ ಹೊಂದಾಣಿಕೆ ಇರುವುದೇ ಬಹಳ ಕಡಿಮೆ. ಆದರೆ ಶಿವಣ್ಣ ಮತ್ತು ಗೀತಕ್ಕ ಇಬ್ಬರೂ ಸಹ 39 ವರ್ಷಗಳಿಂದ ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸಿಕೊಂಡು ಹೋಗುತ್ತಿರುವ ಜೋಡಿ. ಈಗಿನ ಕಾಲದಲ್ಲಿ ಇಂಥ ಪ್ರೀತಿಯನ್ನ ನೋಡೋಕಾಗುತ್ತಾ..? ಬಹಳ ಅಪರೂಪ. ಇತ್ತೀಚೆಗೆ ಶಿವಣ್ಣ ಅವರು 39ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು, ಆಗ ಶಿವಣ್ಣ ಅವರ ಮದುವೆ ಆಮಂತ್ರಣ ಪತ್ರಿಕೆ ಕೂಡ ಸಿಕ್ಕಾಪಟ್ಟೆ ವೈರಲ್ ಆಯಿತು. ಶಿವಣ್ಣ ಅವರದ್ದು ಅಪ್ಪಟ ಅರೇಂಜ್ಡ್ ಮ್ಯಾರೇಜ್. 1985 ರಲ್ಲಿ ಶಿವಣ್ಣ ಚೆನ್ನೈನಲ್ಲಿ ಆಕ್ಟಿಂಗ್ ಕ್ಲಾಸ್ ಗೆ ಸೇರಿದ್ದರು. ಆ ವೇಳೆಯಲ್ಲೇ ಮದುವೆಗೆ ಹುಡುಗಿಯನ್ನು ಹುಡುಕಬೇಕು ಎಂದು ಮನೆಯವರು ಹುಡುಗಿಯನ್ನು ನೋಡಿದ್ದರು..
ಶಿವಣ್ಣ ಅವರಿಗೆ ಹುಡುಗಿಯನ್ನು ನೋಡಿಕೊಂಡು ಬರೋದಕ್ಕೆ ಹೇಳಿದ್ದರಂತೆ, ಅವರೇ ಗೀತಕ್ಕ. ಖ್ಯಾತ ರಾಜಕಾರಣಿ ಬಂಗಾರಪ್ಪ ಅವರ ಮಗಳು. ಹುಡುಗಿಯನ್ನು ನೋಡಿದ ಕೂಡಲೇ ಇಷ್ಟವಾಗಿತ್ತಂತೆ. ಮನೆಗೆ ಬಂದು ಅಮ್ಮನ ಜೊತೆಗೆ ಹುಡುಗಿ ಇಷ್ಟ ಆದ್ಲು ಎಂದು ಹೇಳಿದರಂತೆ ಶಿವಣ್ಣ. ಆ ರೀತಿಯಲ್ಲಿ ಈ ಜೋಡಿಯ ಮದುವೆ ಫಿಕ್ಸ್ ಆಯಿತು. ಶಿವಣ್ಣ ಹಾಗೂ ಗೀತಕ್ಕ ಜೋಡಿಯ ಮದುವೆ ಮೇ 19ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಅಂದು 12:10 ರಿಂದ 1:05 ರ ಸಮಯಕ್ಕೆ ಶಿವಣ್ಣ ಹಾಗೂ ಗೀತಾ ಅವರ ಮದುವೆ ನಡೆದಿತ್ತು. ಸಂಜೆ 6:30 ರಿಂದ ಅದ್ಧೂರಿಯಾಗಿ ರಿಸೆಪ್ಶನ್ ನಡೆದಿತ್ತು. ಶಿವಣ್ಣ ಅವರ ಮದುವೆಗೆ ಗಣ್ಯಾತಿಗಣ್ಯರು ಬಂದು ಹರಸಿ ಹಾರೈಸಿದ್ದರು. ಅವರ ಮದುವೆ ವಿಡಿಯೋ ಇತ್ತೀಚೆಗೆ ಸಹ ವೈರಲ್ ಆಗಿತ್ತು.

ಮದುವೆಯಾದ ಒಂದೇ ತಿಂಗಳಿಗೆ ಶಿವಣ್ಣ ಅಭಿನಯದ ಆನಂದ್ ಸಿನಿಮಾ ತೆರೆಕಂಡಿತು. ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕಿಂತ ಮೊದಲೇ ಶಿವಣ್ಣ ಮದುವೆಯಾಗಿದ್ದರು. ಅಂದು ಶುರುವಾದ ಇವರಿಬ್ಬರ ಬಾಂಧವ್ಯ ಇವತ್ತಿಗು ಕೂಡ ಅದೇ ರೀತಿ ಮುಂದುವರೆದಿದೆ. ಎಲ್ಲೇ ಹೋದರೂ ಇಬ್ಬರೂ ಜೊತೆಯಾಗಿ ಕೈಕೈ ಹಿಡಿದು ಹೋಗುತ್ತಾರೆ. ಬಹಳ ಪ್ರೀತಿಯಿಂದ ಅನ್ಯೋನ್ಯವಾಗಿ ಇರುತ್ತಾರೆ. ಈ ಜೋಡಿಯನ್ನು ನೋಡಿದ ನೆಟ್ಟಿಗರು ಇಂಥ ಸಂಗಾತಿ ನಮಗೂ ಸಿಗಬೇಕು ಅಂದುಕೊಂಡಿದ್ದಾರೆ. ಶಿವಣ್ಣ ಅವರ ಬದುಕಿನ ಪ್ರತಿ ಹೆಜ್ಜೆಯಲ್ಲಿ ಜೊತೆಯಾಗಿ ನಿಂತವರು ಗೀತಕ್ಕ. ಕೆರಿಯರ್ ವಿಚಾರದಲ್ಲೇ ಆಗಲಿ, ವೈಯಕ್ತಿಕ ಜೀವನದ ಬಗ್ಗೆಯೇ ಆಗಲಿ ಶಿವಣ್ಣನ ಜೊತೆಗೆ ಸದಾ ಇರುವುದು ಗೀತಕ್ಕ. ಒಂದು ಮಗುವನ್ನು ನೋಡಿಕೊಳ್ಳುವ ಹಾಗೆ ಶಿವಣ್ಣ ಅವರ ಆರೈಕೆ ಮಾಡುತ್ತಾರೆ. ಇನ್ನು ಶಿವಣ್ಣ ಅವರು ಸಹ ಅಷ್ಟೇ ಪ್ರೀತಿಯಿಂದ ಗೀತಕ್ಕ ಅವರ ಕಾಳಜಿ ಮಾಡುತ್ತಾರೆ.
ಶಿವಣ್ಣ ಅವರ ಆರೋಗ್ಯದಲ್ಲಿ ಏರು ಪೇರಾಗಿದೆ ಎಂದು ಗೊತ್ತಾದ ನಂತರ, ಗೀತಕ್ಕ ಹೆಚ್ಚು ಕಾಳಜಿ ವಹಿಸಿ ನೋಡಿಕೊಂಡರು, ಶಿವಣ್ಣ ಅವರನ್ನು ಹೊರದೇಶಕ್ಕೆ ಕರೆದುಕೊಂಡು ಹೋಗಿ ಬಂದರು, ಅಲ್ಲಿನ ಚಿಕಿತ್ಸೆ ವೇಳೆ ಶಿವಣ್ಣನ ಜೊತೆಗಿದ್ದು, ಕಾಳಜಿಯಿಂದ ನೋಡಿಕೊಂಡರು ಗೀತಕ್ಕ. ಪತ್ನಿ ಅಷ್ಟು ಚೆನ್ನಾಗಿ ನೋಡಿಕೊಂಡಿರುವುದರಿಂದಲೇ ಶಿವಣ್ಣ ಇಂದು ನಮ್ಮೆಲ್ಲರ ಜೊತೆಗೆ ಚೆನ್ನಾಗಿದ್ದಾರೆ. ಚಿತ್ರರಂಗದಲ್ಲಿ ಬಹಳ ಆಕ್ಟಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಶಿವಣ್ಣ ಹಾಗೂ ಗೀತಕ್ಕ ಸೇರಿ ತಮ್ಮದೇ ಆದ ಹೊಸ ಪ್ರೊಡಕ್ಷನ್ ಕಂಪನಿಯನ್ನು ಸಹ ಶುರು ಮಾಡಿದ್ದಾರೆ. ಗೀತಾ ಪಿಕ್ಚರ್ಸ್ ಹೆಸರಿನ ಬ್ಯಾನರ್ ಇವರದ್ದಾಗಿದ್ದು, ಈಗಾಗಲೇ ಎರಡು ಸಿನಿಮಾ ಪ್ರೊಡ್ಯೂಸ್ ಮಾಡಿದ್ದಾರೆ. ಮೂರನೇ ಸಿನಿಮಾ ಕೂಡ ನಿರ್ಮಾಣ ಹಂತದಲ್ಲಿದೆ.

ಈ ಜೋಡಿಯ ನಡುವೆ ಇರುವ ಪ್ರೀತಿ ಬಾಂಧವ್ಯ ಈಗಿನ ಕಾಲದ ಯುವಕ ಯುವತಿಯರಿಗೆ ಸ್ಪೂರ್ತಿ ಆಗಬೇಕು. ಇವರಿಬ್ಬರ ಸಂಸಾರ ಸೂತ್ರವನ್ನ ಎಲ್ಲರೂ ಅನುಸರಿಸಿದರೆ, ಬಹುಶಃ ವಿಚ್ಛೇದನಗಳ ಸಂಖ್ಯೆ ಕಡಿಮೆ ಆಗಬಹುದು. ಆ ಸಂಸಾರ ಸೂತ್ರ ಏನು ಎಂದರೆ, ಇಬ್ಬರು ಕೂಡ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ, ತಪ್ಪು ತಿಳುವಳಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲಾ ಕಡೆ ಜೊತೆಯಾಗಿ ಹೋಗುತ್ತಾರೆ, ಆ ಪ್ರೀತಿ ಮತ್ತು ನಂಬಿಕೆಯನ್ನು ಯಾವತ್ತಿಗೂ ಬಿಟ್ಟುಕೊಟ್ಟಿಲ್ಲ. ಒಬ್ಬರನ್ನೊಬ್ಬರು ಗೌರವಿಸುತ್ತಾರೆ, ಒಬ್ಬರ ಬೆಲೆ ಮತ್ತೊಬ್ಬರಿಗೆ ಗೊತ್ತಿದೆ, ಇಬ್ಬರೂ ಮಾಡಿರುವ ತ್ಯಾಗಗಳ ಅರಿವು ಇದೆ. ಈ ಕಾರಣಕ್ಕೆ ಈ ಜೋಡಿ 39 ವರ್ಷ ಜೊತೆಯಾಗಿದ್ದು, 40ನೇ ವರ್ಷಕ್ಕೆ ಕಾಲಿಡುವಾಗ ಕೂಡ ಅಷ್ಟೇ ಸಂತೋಷದಿಂದ ಇದ್ದಾರೆ, ಅದೇ ಪ್ರೀತಿ ಅವರಿಬ್ಬರ ನಡುವೆ ಇದೆ. ಈ ಕಾರಣಕ್ಕೆ ಶಿವಣ್ಣ ಮತ್ತು ಗೀತಕ್ಕ ಎಲ್ಲರಿಗೂ ಸ್ಪೂರ್ತಿ ಆಗಿದ್ದಾರೆ.



