ಕಳೆದ ಒಂದೆರಡು ದಿನಗಳಿಂದ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿರುವ ಸುದ್ದಿ ಎಂದರೆ ಅದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರ ಕೇಸ್ ವಿಚಾರ. ಇವರು ಬಹಳ ಟ್ಯಾಲೆಂಟ್ ಇರುವ ಕಲಾವಿದ, ಈಗಾಗಲೇ ಸಾಕಷ್ಟು ಅವಕಾಶಗಳನ್ನು ಸಹ ಗಳಿಸಿಕೊಂಡು, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಡೆನೂರು ಮನು ಅವರ ಬಗ್ಗೆ ಅವರೊಡನೆ ಶೋನಲ್ಲಿ ಕೆಲಸ ಮಾಡಿದ್ದ ನಟಿಯೇ ದೂರು ಕೊಟ್ಟಿರುವುದು. ಪ್ರಸ್ತುತ ಮಡೆನೂರು ಮನು ಅವರು ಪೊಲೀಸ್ ಠಾಣೆಯಲ್ಲಿದ್ದಾರೆ. 4 ದಿನಗಳು ವಿಚಾರಣೆಗಾಗಿ ಪೊಲೀಸರು ಇವರನ್ನು ವಶಪಡಿಸಿಕೊಂಡಿದ್ದು, ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗಿದೆ. ಮಡೆನೂರು ಮನು ಅವರ ಬಗ್ಗೆ ಪ್ರತಿದಿನ ಒಂದಲ್ಲ ಒಂದು ವಿಚಾರ ಕೇಳಿಬರುತ್ತಲೇ ಇದೆ. ಆದರೆ ಇದೀಗ ಒಂದು ಆಡಿಯೋ ವೈರಲ್ ಆಗಿದ್ದು, ತೀವ್ರವಾದ ಚರ್ಚೆಗೆ ಒಳಗಾಗಿದೆ.

ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್ 2ರ ವಿನ್ನರ್ ಆಗಿ ಹೊರಹೊಮ್ಮಿದವರು ಮಡೆನೂರು ಮನು. ಇವರೊಡನೆ ಅದೇ ಶೋನಲ್ಲಿ ಕೆಲಸ ಮಾಡಿದ್ದ ನಟಿ ಇದೀಗ ಮಡೆನೂರು ಮನು ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅತ್ಯಾಚಾರ, ಗರ್ಭಪಾತ, ಬ್ಲ್ಯಾಕ್ ಮೇಲ್ ಈ ಎಲ್ಲಾ ಆರೋಪಗಳನ್ನು ಮಡೆನೂರು ಮನು ವಿರುದ್ಧ ಮಾಡಿ, ಪೊಲೀಸರ ಬಳಿ ದೂರು ಕೊಟ್ಟಿದ್ದಾರೆ. ಮೊದಲಿಗೆ ದೂರು ಕೊಟ್ಟು ನಂತರ ಈಕೆ, ಅದು ತಮ್ಮಿಬ್ಬರ ನಡುವಿನ ಪರ್ಸನಲ್ ವಿಷಯ, ಹಾಗೆ ಇದ್ದಿದ್ದರೆ ಸರಿ ಇರುತ್ತಿತ್ತು ಎಂದು ಹೇಳಿದ್ದು ಕೂಡ ಇದೆ. ಆದರೆ ಈಗ ಪೊಲೀಸರ ವರೆಗು ತಲುಪಿ, ಎಲ್ಲವೂ ದೊಡ್ಡದಾದಮೇಲೆ, ಇನ್ನೇನು ಉಳಿದಿಲ್ಲ. ಎಲ್ಲರಿಗೂ ಎಲ್ಲಾ ವಿಷಯಗಳು ಬಹಿರಂಗವಾಗಿ ತಿಳಿದಿದೆ. ಜೊತೆಗೆ ಎಲ್ಲರೂ ಸಹ ಈ ವಿಚಾರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದ್ದಾರೆ..
ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ಚರ್ಚೆ ಆಗುತ್ತಿರುವ ವಿಚಾರ ಇದೇ ಎಂದು ಹೇಳಿದರೂ ಸಹ ತಪ್ಪಲ್ಲ. ಹೀಗಿದ್ದಾಗ ಮತ್ತೊಂದು ವಿಷಯ ಕೂಡ ಬಹಳ ವೈರಲ್ ಆಗಿದೆ. ಮಡೆನೂರು ಮನು ವಿರುದ್ಧ ಪೊಲೀಸರ ಬಳಿ ದೂರು ನೀಡಿರುವ ನಟಿ ಈಗ ಮಡೆನೂರು ಮನು ಮಾತನಾಡಿರುವ ಆಡಿಯೋ ಎಂದು ಒಂದು ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ಈತ ಕನ್ನಡದ ದಿಗ್ಗಜ ಕಲಾವಿದರ ಬಗ್ಗೆ ಮಾತನಾಡಿದ್ದು, ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡದ ಹಿರಿಯ ನಟರ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡಿದ್ದಾರೆ ಮಡೆನೂರು ಮನು ಎಂದು ನೆಟ್ಟಿಗರು ಈತನ ಕಿಡಿ ಕಾರುತ್ತಿದ್ದಾರೆ. ಆದರೆ ಇದು ನಿಜಕ್ಕೂ ಆತನೇ ಮಾತನಾಡಿರುವ ವಿಡಿಯೋನ ಎನ್ನುವ ಬಗ್ಗೆ ಕ್ಲಾರಿಟಿ ಕೂಡ ಇಲ್ಲ. ಇನ್ನು ಆ ವಿಡಿಯೋ ದಲ್ಲಿ ಮನು ಹೇಳಿರುವ ಮಾತುಗಳೇನು ಎಂದು ತಿಳಿಸುತ್ತೇವೆ ಲೇಖನವನ್ನು ಮುಂದೆ ಓದಿ..

ನಟಿ ಶೇರ್ ಮಾಡಿರುವ ಆಡಿಯೋದಲ್ಲಿ ಶಿವಣ್ಣ, ಡಿಬಾಸ್ ಮತ್ತು ಧ್ರುವ ಸರ್ಜಾ ಅವರು, ಈ ಮೂವರ ಬಗ್ಗೆ ಸಹ ಮಡೆನೂರು ಮನು ಕೆಟ್ಟದಾಗಿ ಮಾತನಾಡಿದ್ದಾರೆ, “ಶಿವಣ್ಣ ಇನ್ನು 6 ವರ್ಷ ಮಾತ್ರ ಇರ್ತಾರೆ, ಆಮೇಲೆ ಸ*ತ್ತು ಹೋಗ್ತಾರೆ. ಧ್ರುವ ಸರ್ಜಾ ಅಬ್ಬಬ್ಬಾ ಅಂದ್ರೆ ಇನ್ನೊಂದು 8 ವರ್ಷ, ದರ್ಶನ್ ಸರ್ ಕ್ರೇಜ್ ಇನ್ನೊಂದು 6 ವರ್ಷ ಇರುತ್ತೇನೋ ಅಶ್ಟೇಜ್ ಆಮೇಲೆ ಎಲ್ಲಾನೂ ಕಡಿಮೆ ಆಗಿಬಿಡುತ್ತೆ. ಅವರ ಸಿನಿಮಾಗಳು ಓಡೋದಿಲ್ಲ. ಕನ್ನಡದ ಈ ಮೂರು ಸ್ಟಾರ್ ಹೀರೋಗಳಿಗೆ ಕಾಂಪಿಟೇಶನ್ ಕೊಡೋದಕ್ಕೆ ನಾನೇ ಇರೋದು. ನಾನು ಗಂಡುಗಲಿ..” ಎಂದು ಆಡಿಯೋದಲ್ಲಿ ಹೇಳಲಾಗಿದೆ. ಈ ಆಡಿಯೋ ಶೇರ್ ಮಾಡಿರುವ ನಟಿ, ಮಡೆನೂರು ಮನು ಫೋರ್ವ್ ಹಾಕಿ, ದುರಹಂಕಾರ ಎಂದು ಕ್ಯಾಪ್ಶನ್ ಸಹ ಬರೆದಿದ್ದು, ಸಧ್ಯಕ್ಕೆ ಈ ಆಡಿಯೋ ಸೋಷಿಯಲ್ ಮೀಡಿಯಾದ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಈ ಆಡಿಯೋ ವೈರಲ್ ಆಗುತ್ತಿದ್ದ ಹಾಗೆಯೇ ನೆಟ್ಟಿಗರು ವಿಭಿನ್ನ ರೀತಿಗಳಲ್ಲಿ ಪ್ರತಿಕ್ರಿಯೆ ಕೊಡುವುದಕ್ಕೆ ಶುರು ಮಾಡಿದ್ದಾರೆ. ಕೆಲವರು ಇನ್ನು ಬೆಳೆಯಬೇಕಿದ್ದ ಹುಡುಗ, ಕನ್ನಡದ ಲೆಜೆಂಡ್ ಗಳ ಬಗ್ಗೆ ಹೀಗೆಲ್ಲಾ ಮಾತನಾಡೋದಾ ಎಂದು ಕೆಲವರು ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲಾ ಬೇಕೆಂದೇ ಮಾಡುತ್ತಿರುವ ಕೆಲಸ, ಮಡೆನೂರು ಮನು ಹೆಸರು ಹಾಳು ಮಾಡುವುದಕ್ಕಾಗಿ ಮಾಡುತ್ತಿರುವ ಕೆಲಸ ಇದು. ಅವನು ಹೀಗೆಲ್ಲಾ ಮಾತನಾಡಿರೋದಿಲ್ಲ. ಬೇಕೆಂದೇ ಯಾರೋ ಮಡೆನೂರು ಮನು ಧ್ವನಿಯಲ್ಲಿ ಮಿಮಿಕ್ರಿ ಮಾಡಿದ್ದಾರೆ, ಹೆಸರು ಹಾಳು ಮಾಡೋದಕ್ಕೆ ಮಾಡುತ್ತಿರುವ ಪ್ಲಾನ್ ಇದು. ಇದನ್ನೆಲ್ಲ ನೆಟ್ಟಿಗರು ನಂಬಬಾರದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇನೇ ಇದ್ದರೂ, ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆಗಿ, ಒಳ್ಳೆಯ ಹೆಸರು ಪಡೆದಿದ್ದ ಹುಡುಗ ಈ ಸ್ಥಿತಿಗೆ ತಲುಪಿದ್ದಾನೆ.

ಶೋನಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ನಟಿ ಈ ರೀತಿ ಆರೋಪ ಮಾಡಿದ್ದಾರೆ. ಇನ್ನೊಂದು ಕಡೆ, ಮಡೆನೂರು ಮನು ಅವರ ಪತ್ನಿ ಬೇರೆ ರೀತಿಯಲ್ಲೇ ಮಾತನಾಡಿದ್ದಾರೆ. ತಮ್ಮ ಗಂಡ ತುಂಬಾ ಒಳ್ಳೆಯವರು, ಬೇಕೆಂದೇ ಈ ರೀತಿ ಮಾಡಿ, ತಮ್ಮ ಗಂಡನನ್ನು ಸಿಕ್ಕಿಸಲಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಒಂದು ಘಟನೆ ಇಂದ ಒಂದು ಸಂಸಾರ ಕಷ್ಟಕ್ಕೆ ಸಿಲುಕಿಕೊಂಡಿರುವುದಂತು ನಿಜ. ಮಡೆನೂರು ಮನು ಪೊಲೀಸರ ಬಳಿ ಹೋಗುವುದಕ್ಕಿಂತ ಮೊದಲು, ಇದೆಲ್ಲ ಸುಳ್ಳು ಆರೋಪ, ಇದೆಲ್ಲವನ್ನು ಸುಳ್ಳು ಮಾಡಿ ಹೊರಗಡೆ ಬರ್ತೀನಿ, ನನ್ನ ಬಗ್ಗೆ ಬೇಕು ಎಂದೇ ಕೆಟ್ಟ ಉದ್ದೇಶದಿಂದ ಹೀಗೆಲ್ಲಾ ಮಾಡಿದ್ದಾರೆ ಎಂದು ಹೇಳಿ ಹೋದರು. ಅದೇ ರೀತಿ ಇವರು ಇದೆಲ್ಲವನ್ನು ಸುಳ್ಳು ಮಾಡಿ, ಹೊರಗಡೆ ಬರುತ್ತಾರಾ ಎಂದು ಕಾದು ನೋಡಬೇಕಿದೆ. ಇತ್ತ ಕಂಪ್ಲೇಂಟ್ ಕೊಟ್ಟಿರುವ ನಟಿ, ತನ್ನ ಮಾತು ನಿಜ ಎಂದಿದ್ದಾರೆ.
ಪೊಲೀಸರ ಬಳಿ ಎಲ್ಲಾ ದಾಖಲೆಗಳನ್ನು ಕೊಟ್ಟಿರುವುದಾಗಿ ಈಕೆ ಈಗಾಗಲೇ ಹೇಳಿದ್ದು, ಯಾವೆಲ್ಲಾ ದಾಖಲೆಗಳನ್ನು ಕೊಟ್ಟಿರುವುದಾಗಿ ಇನ್ನು ಸ್ಪಷ್ಟನೆ ಕೊಟ್ಟಿಲ್ಲ. ಇತ್ತ ಈ ನಟಿಯ ಬಗ್ಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಆ ರೀತಿ ನಡೆದಾಗ ಏನನ್ನು ಮಾತನಾಡಲಿಲ್ಲ, ಈಗ ಇಷ್ಟು ವರ್ಷ ಆದಮೇಲೆ ಇದೆಲ್ಲ ಬೇಕಿತ್ತಾ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ಸೋಷಿಯಲ್ ಮೀಡಿಯಾ ಯುಗದಲ್ಲಿ, ಎಲ್ಲಾ ವಿಷಯಗಳು ಬಹಳ ಬೇಗ ರಾಜ್ಯವನ್ನೇ ತಲುಪುಬಿಡುತ್ತದೆ. ಹೀಗಿರುವಾಗ ಬಣ್ಣದ ಬದುಕಿನಲ್ಲಿ ಇರುವವರು ಬಹಳ ಹುಷಾರಾಗಿ ಇರಬೇಕು ಅನ್ನುವುದಂತೂ ನಿಜ..



