ಸಧ್ಯಕ್ಕೆ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಅವರು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಯಶಸ್ಸಿನ ಕಡೆ ಸಾಗುತ್ತಿದ್ದಾರೆ ಸ್ಟಾರ್ ಹೀರೋ ಮೋಹನ್ ಲಾಲ್. ಒಂದೆರಡು ತಿಂಗಳುಗಳ ಹಿಂದೆಯಷ್ಟೇ ಇವರು ಪೃಥ್ವಿರಾಜ್ ಸುಕುಮಾರನ್ ಅವರ ನಿರ್ದೇಶನದ ಲೂಸಿಫರ್ 2 ಸಿನಿಮಾ ಬಿಡುಗಡೆಯಾಗಿ 100 ಕೋಟಿಗಿಂತ ಹೆಚ್ಚು ಹಣಗಳಿಕೆ ಕಂಡಿತು. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತೆರೆಕಂಡು, ಸೂಪರ್ ಹಿಟ್ ಆಗಿತ್ತು. ಲೂಸಫರ್2 ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರಗಳು ಸಹ ನಡೆದಿದ್ದು ಗೊತ್ತೇ ಇದೆ. ಆದರೆ ಯಾವುದೇ ನಿರೀಕ್ಷೆ, ಪ್ರಚಾರ ಇಲ್ಲದೇ ತೆರೆಗೆ ಬಂದಿರುವ ತುಡರುಂ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ.
ತುಡರುಂ ಬಹಳ ಚೊಕ್ಕವಾದ ಸಿಂಪಲ್ ಆದ ಸಿನಿಮಾ. ಕಡಿಮೆ ಬಜೆಟ್ ನ ಸಿನಿಮಾ, ಈ ಸಿನಿಮಾ ಬಗ್ಗೆ ಮಲಯಾಳಂ ಚಿತ್ರರಂಗದಲ್ಲಿ ನಿರೀಕ್ಷೆ ಇತ್ತಾದರು, ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿ ಆಗುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಈ ಮಟ್ಟಿಗೆ ಸಿನಿಮಾ ಹಿಟ್ ಆಗುವುದಕ್ಕೆ ಮುಖ್ಯ ಕಾರಣ ಆ ಸಿನಿಮಾದ ಕಾಂಟೆಂಟ್. ಹೌದು, ತರುಣ್ ಮೂರ್ತಿ ಅವರು ನಿರ್ದೇಶನ ಮಾಡಿರುವ ಸಿನಿಮಾ ಇದು. 80 ಮತ್ತು 90ರ ದಶಕದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಜೋಡಿ ಮೋಹನ್ ಲಾಲ್ ಹಾಗೂ ಶೋಭನಾ ಇಬ್ಬರು ದಶಕಗಳ ಬಳಿಕ ಮತ್ತೊಮ್ಮೆ ಜೊತೆಯಾಗಿ ನಟಿಸಿದ್ದಾರೆ. ಈ ಜೋಡಿಯ ಕೆಲವು ಸುಂದರವಾದ ದೃಶ್ಯಗಳು ಸಿನಿಮಾಪ್ರಿಯರಿಗೆ ಬಹಳ ಇಷ್ಟವಾಗಿದೆ..

ಇನ್ನು ತುಡರುಂ ಬಗ್ಗೆ ಹೇಳುವುದಾದರೆ, ಏಪ್ರಿಲ್ 25ರಂದು ತೆರೆಕಂಡ ಈ ಸಿನಿಮಾ ಈಗಾಗಲೇ 100 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಕೂಡ ಡಬ್ ಆಗಿ ತೆರೆಕಾಣಲಿದೆ. ಈ ಸಿನಿಮಾದ ಕಥೆ ಬಹಳ ಸಿಂಪಲ್, ಒಬ್ಬ ಸಾಮಾನ್ಯ ಕುಟುಂಬದ ವ್ಯಕ್ತಿ, ಮಧ್ಯಮವರ್ಗದ ಕುಟುಂಬದಲ್ಲಿ ನಡೆಯುವ ಕಥೆ ಏನೆಲ್ಲಾ ಟ್ವಿಸ್ಟ್ ಹಾಗೂ ಟರ್ನ್ ಗಳನ್ನು ತೆಗೆದುಕೊಳ್ಳುತ್ತದೆ, ತನ್ನ ಕುಟುಂಬಕ್ಕೆ ನಡೆದ ಮೋಸದ ವಿರುದ್ಧ ನಾಯಕ ಹೇಗೆ ನಿಲ್ಲುತ್ತಾನೆ ಎನ್ನುವುದು ಕಥೆ. ಸಿಂಪಲ್ ಕಥೆಯನ್ನು ಅದ್ಭುತವಾಗಿ ತೋರಿಸಲಾಗಿದ್ದು, ಮೋಹನ್ ಲಾಲ್ ಅವರ ಅಭಿನಯಕ್ಕೆ ಮತ್ತು ಅವರ ಎನರ್ಜಿಗೆ ಸಿನಿಮಾ ಪ್ರಿಯರು ಫಿದಾ ಆಗಿದ್ದಾರೆ.. ಮೋಹನ್ ಲಾಲ್ ಅವರು ಫ್ಯಾಮಿಲಿ ಹಿಟ್ ಸಿನಿಮಾಗಳಿಗೆ ಸೂಕ್ತರು ಎನ್ನುತ್ತಾರೆ ಫ್ಯಾನ್ಸ್..
ತುಡರುಂ ಸಿನಿಮಾ ಕೇರಳ ರಾಜ್ಯದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಕರ್ನಾಟಕದಲ್ಲಿ ಸಹ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಇದೆ. ಈ ಸಿನಿಮಾ ವಿತರಣೆ ಮಾಡಿರುವವರು ಸಿನಿಮಾದ ಪ್ರಾಫಿಟ್ ಬಗ್ಗೆ ಬಹಳ ಸಂತೋಷವಾಗಿ ಮಾತನಾಡಿದ್ದು, ತುಡರುಂ ಸಿನಿಮಾ ಕರ್ನಾಟಕದಲ್ಲಿ 3.5 ಕೋಟಿ ಗಳಿಸಿದೆ ಎಂದು ತಿಳಿಸಿದ್ದಾರೆ,. ನಮ್ಮ ರಾಜ್ಯದಲ್ಲಿ ಕನ್ನಡ ಸಿನಿಮಾಗಳು ಸಹ ಇಷ್ಟು ದುಡ್ಡು ಗಳಿಸುವುದು ಕಷ್ಟವಾಗಿದೆ ಅಂಥದ್ರಲ್ಲಿ ಮಲಯಾಳಂ ಸಿನಿಮಾ ಒಂದು ಇಷ್ಟು ದೊಡ್ಡ ರೀತಿಯಲ್ಲಿ ಹಣ ಮಾಡುತ್ತಿರುವುದು ಸಂತೋಷದ ವಿಷಯ. ಕೆಲವು ಕಡೆಗಳಲ್ಲಿ ಈ ಸಿನಿಮಾ ದೃಶ್ಯಮ್ ಸಿನಿಮಾ ನೆನಪು ಮಾಡುತ್ತದೆ, ಇಂಥ ಫ್ಯಾಮಿಲಿ ಕ್ರೈಮ್ ಥ್ರಿಲ್ಲರ್ ಗಳು ಜನರಿಗೆ ಸಹ ಬಹಳ ಇಷ್ಟವಾಗುತ್ತದೆ. ತುಡರುಂ ಸಿನಿಮಾ ಸಕ್ಸಸ್ ಕೂಡ ಅದೇ ರೀತಿ ಇದೆ.

ಇನ್ನು ಈ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡುವ ಪ್ಲಾನ್ ಸಹ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಹೌದು, ತುಡರುಂ ಸಿನಿಮಾ ಮಲಯಾಳಂನಲ್ಲಿ ಯಶಸ್ವಿ ಆಗಿದ್ದು, ಕನ್ನಡದಲ್ಲಿ ರಿಮೇಕ್ ಮಾಡಬೇಕು ಎಂದು ವಿತರಕರು ಯೋಚನೆ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕನಾಗಿ ನಟಿಸಬಹುದು ಎಂದು ಹೇಳಲಾಗುತ್ತಿದೆ. ಹೌದು, ಮೋಹನ್ ಲಾಲ್ ಅವರ ಸಿನಿಮಾಗಳು ರವಿಚಂದ್ರನ್ ಅವರಿಗೆ ಬಹಳ ಸೂಕ್ತವಾಗಿದೆ.. ಈ ಹಿಂದೆ ಮೋಹನ್ ಲಾಲ್ ಅವರ ಸೂಪರ್ ಹಿಟ್ ಸಿನಿಮಾ ದೃಶ್ಯಮ್ ಅನ್ನು ಕನ್ನಡದಲ್ಲಿ ರಿಮೇಕ್ ಮಾಡಿದಾಗ, ರವಿಚಂದ್ರನ್ ಅವರೇ ಹೀರೋ ಆಗಿ ನಟಿಸಿದರು. ಕನ್ನಡದಲ್ಲಿ ಸಹ ದೃಶ್ಯಮ್ ಹಾಗೂ ದೃಶ್ಯಮ್2 ಎರಡು ಕೂಡ ಸೂಪರ್ ಹಿಟ್ ಆಯಿತು.

ರವಿಚಂದ್ರನ್ ಅವರಿಗೆ ಒಳ್ಳೆಯ ಹೆಸರನ್ನು, ಕೀರ್ತಿಯನ್ನು ತಂದುಕೊಟ್ಟಿತು. ಅದೇ ಕಾರಣಕ್ಕೆ ತುಡರುಂ ಸಿನಿಮಾದ ರಿಮೇಕ್ ನಲ್ಲಿ ಸಹ ಇವರೇ ನಟಿಸಿದರೆ ಒಳ್ಳೆಯದು ಎನ್ನುವುದು ಎಲ್ಲರ ಅಭಿಪ್ರಾಯ. ರವಿಚಂದ್ರನ್ ಅವರು ಸಹ ಈಗಾಗಲೇ ತುಡರುಂ ಸಿನಿಮಾ ನೋಡಿದ್ದು, ಅವರಿಗೆ ಸಿನಿಮಾ ಕೂಡ ಬಹಳ ಇಷ್ಟವಾಗಿದೆ ಎಂದು ಮಾಹಿತಿ ಸಿಕ್ಕಿದೆ. ಸಿನಿಮಾ ರಿಮೇಕ್ ಮಾಡುವ ಬಗ್ಗೆ ರವಿಚಂದ್ರನ್ ಅವರ ಜೊತೆಗೆ ಕೂಡ ಮಾತುಕತೆ ನಡೆಯುತ್ತಿದ್ದು, ಎಲ್ಲವೂ ಸರಿ ಹೋದರೆ ಶೀಘ್ರದಲ್ಲೇ ಕನ್ನಡದಲ್ಲಿ ಸಿನಿಮಾ ಅನೌನ್ಸ್ ಆಗಬಹುದು ಎಂದು ಹೇಳಲಾಗುತ್ತಿದೆ. ರವಿಚಂದ್ರನ್ ಅವರು ಮತ್ತೊಂದು ರಿಮೇಕ್ ಸಿನಿಮಾದಲ್ಲಿ ನಟಿಸುತ್ತಾರಾ, ತುಡರುಂ ರಿಮೇಕ್ ಗೆ ಓಕೆ ಹೇಳ್ತಾರಾ ಎಂದು ಕಾದು ನೋಡಬೇಕಿದೆ..
ರವಿಚಂದ್ರನ್ ಅವರು ದೃಶ್ಯಮ್ ಸಿನಿಮಾದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದರು. ಫ್ಯಾಮಿಲಿ ಮ್ಯಾನ್ ಆಗಿ ಇವರ ಅಭಿನಯ, ನವ್ಯ ನಾಯರ್ ಮತ್ತು ರವಿಚಂದ್ರನ್ ಅವರ ಜೋಡಿ ಸಹ ಜನರಿಗೆ ಇಷ್ಟವಾಗಿತ್ತು. ತಮ್ಮ ಕುಟುಂಬವನ್ನು ಕಾಪಾಡಿಕೊಳ್ಳುವ ರಾಜೇಂದ್ರ ಪೊನ್ನಪ್ಪ ಪಾತ್ರ ಕನ್ನಡ ಸಿನಿಮಾ ಪ್ರಿಯರಿಗೆ ಬಹಳ ಇಷ್ಟವಾಗಿತ್ತು, ಅದೇ ರೀತಿ ತುಡರುಂ ಸಿನಿಮಾ ರಿಮೇಕ್ ಆದರೆ ರವಿಚಂದ್ರನ್ ಅವರ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ. ಒಟ್ಟಿನಲ್ಲಿ ಈ ರಿಮೇಕ್ ಕಥೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.



