ಇಂದು 01 ಮೇ 2025 ಗುರುವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ದಶಿ. ಮಧ್ಯಾಹ್ನ 01:55 ರಿಂದ 03:29 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯವರ ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ. ಮೀನ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಪ್ರಶಂಸೆ ದೊರೆಯಲಿದೆ.
ಮೇಷ ರಾಶಿ
ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಆದರೂ ಹಣಕಾಸಿನ ಸಮಸ್ಯೆಗೆ ಸಿಲುಕುವಿರಿ. ಅದರಿಂದ ಹೊರ ಬರಲು ಕಷ್ಟ ಪಡುವಿರಿ, ಜಾಗ್ರತೆಯಿಂದ ಇರಿ. ಆರೋಗ್ಯದಲ್ಲಿ ಸಮಸ್ಯೆ ಇದ್ದವರಿಗೆ ಇಂದು ಚೇತರಿಕೆ ಕಾಣಲಿದೆ, ಒಂದಷ್ಟು ವಿಚಾರದಲ್ಲಿ ಮನಸ್ಸಿಗೆ ನೆಮ್ಮದಿ ಇರಲಿದೆ.
ವೃಷಭ ರಾಶಿ
ಅಧಿಕವಾದ ಖರ್ಚಿರುತ್ತದೆ, ಆದಾಯಕ್ಕಿಂತ ಖರ್ಚೇ ಹೆಚ್ಚಾಗಿರುತ್ತದೆ. ಆದ್ದರಿಂದ ಬಹಳ ಜಾಗರೂಕರಾಗಿ ವ್ಯಯಿಸಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾಗಬಹುದು. ಉದ್ಯೋಗದಲ್ಲಿ ಲಾಭ ಕಡಿಮೆ ಇರುತ್ತದೆ. ಜನರ ವಿರೋಧ ಹೆಚ್ಚಾಗಿರುತ್ತದೆ. ಮನಸ್ಸಿಗೆ ಗೊಂದಲ ಇರುತ್ತದೆ.
ಮಿಥುನ ರಾಶಿ
ಕೆಲಸದಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ, ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಇಂದು ಸಂತೋಷದಿಂದ ಕೆಲಸ ಮಾಡುವಿರಿ, ಹೆಚ್ಚು ಹಣ ಸಂಪಾದನೆ ಮಾಡಲು, ಕೀರ್ತಿ ಗಳಿಸಲು ಮನಸ್ಸು ಹಂಬಲಿಸುತ್ತಿರುತ್ತದೆ. ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಅಡೆತಡೆ ಉಂಟಾಗಿ ವಿಳಂಬ ಉಂಟಾಗುತ್ತದೆ. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ. ಇಷ್ಟಮಿತ್ರರ ಸಹಾಯದಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಟ್ರಾವೆಲ್ ಬಿಸ್ನೆಸ್ ಮಾಡುತ್ತಿರುವ ಮಿಥುನ ರಾಶಿಯವರಿಗೆ ಉತ್ತಮ ಲಾಭ ದೊರೆಯುತ್ತದೆ.
ಕಟಕ ರಾಶಿ:
ಅನಾವಶ್ಯಕ ಖರ್ಚು ಮಾಡಲಿದ್ದೀರಿ, ಇದರಿಂದ ಮುಂದಿನ ದಿನಗಳಿಗೆ ನಿಮಗೆ ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು, ಹೊಸ ಕೆಲಸ ಆರಂಭಿಸಬೇಕು ಎಂದುಕೊಂಡಿರುವವರು ಇಂದು ಹೆಜ್ಜೆ ಇಡಬಹುದು. ದಿನಸಿ ವ್ಯಾಪಾರಿಗಳಿಗೆ ಒಳ್ಳೆ ಲಾಭದಾಯಕ ದಿನವಾಗಿದೆ. ದೂರದ ಪ್ರಯಾಣ ಮಾಡುವಾಗ ಬಹಳ ಜಾಗ್ರತೆಯಿಂದ ಇರಿ.
ಸಿಂಹ ರಾಶಿ
ಮನಸ್ಸಿನ ಇಷ್ಟಾರ್ಥಗಳು ಇಂದು ನೆರವೇರುತ್ತದೆ. ಬಹಳ ದಿನಗಳಿಂದ ನೀವು ಅಂದುಕೊಂಡಿದ್ದ ಆಸೆ ಇಂದು ಈಡೇರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಭೂ ವ್ಯಾಜ್ಯದಲ್ಲಿ ಸಿಲುಕಿಕೊಂಡವರಿಗೆ ಇಂದು ಪರಿಹಾರ ದೊರೆಯುತ್ತದೆ. ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರಿ.
ಕನ್ಯಾ ರಾಶಿ
ಕೆಲಸದಲ್ಲಿ ಅಭಿವೃದ್ಧಿ ಹೊಂದಲಿದ್ದೀರಿ, ದೂರದ ಪ್ರಯಾಣ ಮಾಡುವಿರಿ, ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ಅವರೊಂದಿಗೆ ಸಮಯ ಕಳೆಯುವಿರಿ, ಇದರಿಂದ ಮನಸ್ಸಿಗೆ ಖುಷಿ ಆಗಲಿದೆ, ಹಿತಶತ್ರುಗಳ ಕಾಟ ಹೆಚ್ಚಾಗಲಿದೆ, ನೀವು ಮೈಯೆಲ್ಲಾ ಕಣ್ಣಾಗಿರಬೇಕು, ನಿಮಗೆ ಅಪಕೀರ್ತಿ ಉಂಟಾಗುವ ಸಾಧ್ಯತೆ ಇದೆ.
ತುಲಾ ರಾಶಿ
ಯಾವುದೇ ಹೊಸ ಕೆಲಸ, ವ್ಯಾಪಾರ ಆರಂಭಿಸಬೇಕು ಎಂದುಕೊಂಡಿರುವವರಿಗೆ ಅಡೆತಡೆಗಳು ಉಂಟಾಗಲಿದೆ, ಆದ್ದರಿಂದ ಎಚ್ಚರಿಕೆಯಿಂದ ಕೆಲಸ ಮಾಡಿ. ಕೆಲಸವನ್ನು ಸ್ವಲ್ಪ ದಿನ ಮುಂದೂಡಿದರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ, ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು, ಚಾಲಕರಿಗೆ, ಕಬ್ಬಿಣದ ವ್ಯಾಪಾರ ಮಾಡುವವರಿಗೆ ಯಥೇಚ್ಛ ಲಾಭವಾಗಲಿದೆ.
ವೃಶ್ಚಿಕ ರಾಶಿ
ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತದೆ, ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸದಿರಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಕಾಡಬಹುದು, ಗುರು ಹಿರಿಯರ ಸಹಕಾರದಿಂದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ, ಮನಸ್ಸಿನ ಗೊಂದಲಗಳು ದೂರಾಗಿ ಸಮಾಧಾನ ಇರುತ್ತದೆ. ಹೋಟೆಲ್ ಬಿಸ್ನೆಸ್ ಮಾಡುವವರಿಗೆ ಇಂದು ಲಾಭದಾಯಕ ದಿನವಾಗಿದೆ.
ಧನು ರಾಶಿ
ಕೆಲಸಗಳಲ್ಲಿ ಇಂದು ಅಭಿವೃದ್ಧಿ ಕಾಣಲಿದೆ, ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ಕೀರ್ತಿ ದೊರೆಯಲಿದೆ. ವ್ಯಾಪಾರ ಮಾಡುವ ಸ್ಥಳದಲ್ಲಿ ಅಕ್ಕ ಪಕ್ಕದವರಿಂದ ಕಿರಿಕಿರಿ ಉಂಟಾಗಬಹುದು, ಇದರಿಂದ ಮನಸ್ಸಿಗೆ ಬೇಸರವಾಗುತ್ತದೆ. ಆದಷ್ಟು ಜಾಗ್ರತೆಯಿಂದ, ತಾಳ್ಮೆಯಿಂದ ಇರಿ. ಮಾತಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನ. ಉತ್ತಮ ಗುರುಗಳ ಮಾರ್ಗದರ್ಶನ ನಿಮಗೆ ದೊರೆಯಲಿದೆ. ಸರಸ್ವತಿ ಅನುಗ್ರಹ ಇರಲಿದೆ.
ಮಕರ ರಾಶಿ
ಮನಸ್ಸಿಗೆ ಸಂತೋಷವಾಗುವ ವಾತಾವರಣ ಇರಲಿದೆ, ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ವ್ಯಾಪಾರದಲ್ಲಿ ದ್ವಿಗುಣ ಲಾಭ ದೊರೆಯಲಿದೆ. ಏಳೂವರೆ ವರ್ಷಗಳು ನೀವು ಅನುಭವಿಸಿದ್ದ ಕಷ್ಟದ ದಿನಗಳು ಶೀಘ್ರದಲ್ಲೇ ಕಳೆಯಲಿವೆ. ಇಷ್ಟಮಿತ್ರರನ್ನು ಭೇಟಿ ಆಗುವಿರಿ, ಮನಸ್ಸಿಗೆ ಒಂದು ರೀತಿಯ ಖುಷಿ ಇರಲಿದೆ. ಆತ್ಮಸ್ಥೈರ್ಯ ಹೆಚ್ಚಾಗಲಿದೆ.
ಕುಂಭ ರಾಶಿ
ನೀವು ಅಂದುಕೊಂಡ ಕೆಲಸ ಇಂದು ನೆರವೇರುತ್ತದೆ. ಕೆಲಸಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಆಟೋ ರಿಕ್ಷಾ, ಕ್ಯಾಬ್ ಚಾಲಕರಿಗೆ ಒಳ್ಳೆ ಲಾಭ ದೊರೆಯುತ್ತದೆ. ಕಬ್ಬಿಣ ದಾನ ಮಾಡಿದರೆ ಶುಭವಾಗುತ್ತದೆ. ಹೊಸ ಬಿಸ್ನೆಸ್ ಶುರು ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬೇಕೆನ್ನುವ ನಿಮ್ಮ ಕನಸು ನೆರವೇರುತ್ತದೆ. ನೀವು ಮಾಡುವ ವ್ಯಾಪಾರದಲ್ಲಿ ಇಂದು ಉತ್ತಮ ಲಾಭವಾಗಲಿದೆ. ಶತ್ರುಗಳ ವಿರುದ್ಧ ಗೆಲುವು ಸಾಧಿಸುವಿರಿ.
ಮೀನ ರಾಶಿ
ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜಾಗ್ರತೆಯಿಂದ ಇರಿ, ಆರ್ಥಿಕ ಸಮಸ್ಯೆಯಿಂದ ಸಾಲ ಮಾಡುವ ಪರಿಸ್ಥಿತಿ ಉಂಟಾಗಬಹುದು, ಹಿತಶತ್ರುಗಳ ಕಾಟ ಹೆಚ್ಚಾಗಬಹುದು. ಆದರೆ ಕೆಲಸದ ಸ್ಥಳದಲ್ಲಿ ನಿಮಗೆ ಕೀರ್ತಿ, ಪ್ರಶಂಸೆ ದೊರೆಯುತ್ತದೆ.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



