ಡಿಕೆ ಶಿವಕುಮಾರ್ ಸಿಎಂ ಕನಸು ಅದ್ಯಾಕೋ ನನಸಾಗುತ್ತಲೇ ಇಲ್ಲ. ಇಲ್ಲಿಯವರೆಗೂ ಪವರ್ ಶೇರಿಂಗ್ ವಿಚಾರ ಚರ್ಚೆ ಮಾಡುತ್ತಿದ್ದ ಡಿಕೆ ಅಂಡ್ ಟೀಂ ಈಗ ಗಪ್ ಚುಪ್ ಆಗಿರೋದಂತೂ ನಿಜ. ಆದರೆ ತೆರೆ ಮರೆಯಲ್ಲಿ ಏನೋ ನಡೀತಿದೆ ಅನ್ನೋದಂತೂ ಸತ್ಯ. ಹೈ ಕಮಾಂಡ್ ಗೆ ವಿಧೇಯನಾದ್ರೆ ಸಿಎಂ ಸ್ಥಾನ ಸಿಗಬಹುದು ಅನ್ನೋ ಲೆಕ್ಕಾಚಾರದಲ್ಲಿ ಡಿಕೆ ಇದ್ರೆ, ಇತ್ತ ಸಿಎಂ ಟೀಂ ಇನ್ನೊಂದು ಲೆಕ್ಕಾಚಾರ ಹಾಕಿದೆ.
ಹೆಚ್ಚುವರಿ ಡಿಸಿಎಂ ಅನ್ನೋ ವಿಚಾರ ಇಂದು ನಿನ್ನೆಯದಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಯಾವಾಗ ಡಿಕೆಶಿ ಡಿಸಿಎಂ ಆದರೋ ಅಂದಿನಿಂದ ತೆರೆ ಮರೆಯಲ್ಲಿ ಹೆಚ್ಚುವರಿ ಹೆಚ್ಚುವರಿ ಡಿಸಿಎಂ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದರು ಅನೇಕ ಸಚಿವರು. ಇದರ ಜೊತೆಗೆ ಪರೋಕ್ಷವಾಗಿ ತಮ್ತಮ್ಮ ಬೆಂಬಲಿಗರನ್ನ ಬಿಟ್ಟು ಹೆಚ್ಚವರಿ ಡಿಸಿಎಂ ಹುದ್ದೆ ಬಗ್ಗೆಯೂ ಮಾತನಾಡಿಸುತ್ತಲೇ ಇದ್ದರು.

ಆದರೆ ಯಾವಾಗ ಈ ವಿಚಾರವಾಗಿ ಹೈ ಕಮಾಂಡ್ ಮಧ್ಯಪ್ರವೇಶ ಮಾಡ್ತೋ ಅಂದೇ ಎಲ್ಲರೂ ಸುಮ್ಮನಾದರು. ಆದರೂ ಡಿಕೆ ಶಿವಕುಮಾರ್ ಅಧಿಕಾರ ಕಸಿಯಬೇಕು ಅಂತ ತೆರೆಮರೆಯಲ್ಲಿ ಆಗಿಂದಗಲೇ ತಂತ್ರಗಳು ನಡೆಯುತ್ತಲೇ ಇದೆ. ಇದೀಗ ಮತ್ತೊಮ್ಮೆ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಕುರಿತು ಚರ್ಚೆ ಮುನ್ನೆಲೆಗೆ ಬಂದಂಗಿದೆ. ಇದನ್ನ ನೋಡಿದರೆ ತೆರೆಮರೆಯಲ್ಲಿ ಕಸರತ್ತಂತೂ ನಡೆಯುತ್ತಲೇ ಇದ್ದಾವೆ ಅನ್ನೋದಂತೂ ಸ್ಪಷ್ಟ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ದಲಿತ ಸಚಿವರು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದು.
ಹೌದು, ಹೆಚ್ಚುವರಿ ಡಿಸಿಎಂ ಬೇಕು ಅನ್ನೋದನ್ನ ಮತ್ತೊಮ್ಮೆ ಪರೋಕ್ಷವಾಗಿ ಪುನರುಚ್ಚಾರ ಮಾಡಿದ್ದಾರೆ ದಲಿತ ಸಚಿವರು. ಇತ್ತೀಚೆಗೆ ಮುನಿಯಪ್ಪ ಅವರ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದ್ದರು. ಈ ಭೇಟಿ ಬೇರೆ ಬೇರೆ ಕಾರ್ಯಕ್ರಮದ್ದೂ ಅಂದರೂ ಕೂಡ ಸಹಜವಾಗಿ ಕುತೂಹಲ ಮೂಡಿಸಿತ್ತು.
ಡಾಲರ್ಸ್ ಕಾಲೋನಿಯಲ್ಲಿ ಇರುವ ಮುನಿಯಪ್ಪ ಅವರ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದ್ದ ಅವರು ಬ್ರೇಕ್ ಫಾಸ್ಟ್ ಕೂಡ ಅಲ್ಲೇ ಮಾಡಿದ್ದರು. ಸುಮಾರು ಹೊತ್ತು ಈ ನಾಯಕರು ಚರ್ಚೆ ಮಾಡಿದರು. ಆದರೆ ಈ ಚರ್ಚೆಯ ಗುಟ್ಟು ಮಾತ್ರ ಏನೂ ಎಂಬುದು ಸ್ಪಷ್ಟವಾಗಲಿಲ್ಲ. ೨೮ಕ್ಕೆ ಸಿಎಂ ಕಾರ್ಯಕ್ರಮ ಇದೆ. ಹೀಗಾಗಿ ನಮ್ಮನಗೆ ಉಪಹಾರಕ್ಕೆ ಕರೆದಿದ್ದೆ. ನಮಗೆ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ. ಅವಾಗವಾಗ ನಾವು ಸೇರ್ತಾ ಇರ್ತೇವೆ. ನಾವು ಅವರ ಮನೆಗೆ ಹೋಗ್ತಾ ಇರ್ತೇವೆ ಎಂಬ ಸಬೂಬು ಹೇಳಿದರು.

ಆದರೆ ಈ ಭೇಟಿ ಹಾಗೂ ಚರ್ಚೆ ಹಿಂದೆ ಹೆಚ್ಚುವರಿ ಡಿಸಿಎಂ ಸೃಷ್ಟಿ ಚರ್ಚೆ ಅನ್ನೋದು ಬಳಿಕ ಗೊತ್ತಾದ ವಿಚಾರ. ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ಮತ್ತೆ ದಾಳ ಉರುಳಿಸಿ
ಡಿಕೆಶಿವಕುಮಾರ ಅಧಿಕಾರಕ್ಕೆ ಕತ್ತರಿ ಹಾಕಲು ಸಿಎಂ ಆಪ್ತರಿಂದ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ ಈ ಭೇಟಿ ಅಂತಲೂ ಚರ್ಚೆ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆಗೆ ಯಾವಾಗ ಸರಿಯಾದ ಸ್ಪಂದನೆ ಸಿಗಲಿಲ್ವೋ ಆ ಬೆನ್ನಲ್ಲೆ ಮತ್ತೊಂದು ಬೇಡಿಕೆಗೆ ಪಟ್ಟು ಹಿಡಿಯಲು ತಯಾರಿ ನಡೆಸಿದ್ದಾರೆ ಎನ್ನಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡದಿದ್ರೆ ಓಕೆ.. ಡಿಸಿಎಂ ಸ್ಥಾನ ಆದ್ರು ಕೊಡಿ ಎಂಬ ಬೇಡಿಕೆ ಇವರದ್ದು.
ಇತ್ತೀಚೆಗೆ ನಡೆದ ಬ್ರೇಕ್ ಪಾಸ್ಟ್ ಮೀಟಿಂಗ್ ನಲ್ಲಿ ಡಿಸಿಎಂ ಹುದ್ದೆ ಕುರಿತು ಹೈ ಕಮಾಂಡ್ ಮೇಲೆ ಒತ್ತಡ ತರುವ ಕುರಿತು ಚರ್ಚೆಯಾಗಿದೆಯಂತೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿಲ್ಲ. ದಲಿತರಿಗೆ ಡಿಸಿಎಂ ಸ್ಥಾನ ಸಿಗಲಿ ಅಂತ ಮುನಿಯಪ್ಪ ಜೊತೆ ಸತೀಶ್ ಜಾರಕಿಹೊಳಿ ಚರ್ಚೆ ಮಾಡಿದ್ದಾರಂತೆ. ಈ ಮೂಲಕ ಡಿಸಿಎಂ ದಾಳ ಉರುಳಿಸಿದ ಸಾಹುಕಾರ್ ಎನ್ನಲಾಗಿದೆ.
ಇತ್ತ ದಲಿತರಿಗೆ ಅಧಿಕಾರ ಸಿಕ್ಕಿಲ್ಲ ಇದಾದರೂ ಸಿಗಲಿ ಅಂತ ದಲಿತ ಸಮುದಾಯದ ಸ್ವಾಮೀಜಿಗಳಿಂದಲೂ ಬೇಡಿಕೆ ಇಡಲಾಗುತ್ತಿದೆಯಂತೆ. ಸಚಿವರಾದ ಡಾ. ಜಿ ಪರಮೇಶ್ವರ್, ಕೆ ಎಚ್ ಮುನಿಯಪ್ಪ ಅಥವಾ ಸಹುಕಾರಗ ಗೆ ಡಿಸಿಎಂ ಸ್ಥಾನ ಸಿಗಲಿ ಅಂತ ಲಾಭಿ ಮಾಡಲಾಗುತ್ತಿದೆಯಂತೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿದ್ದರೇ ಡಿಸಿಎಂ ಸ್ಥಾನ ಸಿಗಬೇಕೆಂದು ಸಚಿವರ ಪಟ್ಟು ಹಿಡಿದಿರೋ ಹಿನ್ನೆಲೆಯಲ್ಲೇ ಈ ಭೇಟಿ ನಡೆದಿದೆ.
ಇತ್ತ ಸತೀಶ ಜಾರಕಿಹೊಳಿ ಭೇಟಿ ಬೆನ್ನಲ್ಲೆ ಸಚಿವ ಮುನಿಯಪ್ಪರಿಂದ ಅಚ್ಚರಿಯ ನಡೆ ಮುಂದುವರೆದಿದೆ. ಬೆಂ ಗ್ರಾಮಾಂತರದಲ್ಲಿ ಮಾತನಾಡಿರೋ ಮುನಿಯಪ್ಪ. ಡಿಸಿಎಂ -ಸಿಎಂ ಸ್ಥಾನ ದೊರೆತಿಲ್ಲ. ಡಿಸಿಎಂ ಸ್ಥಾನಕ್ಕಾಗಿ ಬೇಡಿಕೆಯಿದೆ ಎಂದಿದ್ದಾರೆ. ಒಟ್ನಲ್ಲಿ ಡಿಕೆ ಶಿವಕುಮಾರ್ ಅಧಿಕಾರ ಕುಗ್ಗಿಸಲು ಮತ್ತೊಂದು ಪ್ರಯತ್ನ ನಡೆದಿದೆ ಅಂದರೆ ತಪ್ಪಾಗಲಾರದು.