ಈಗಿನ ಕಾಲದಲ್ಲಿ ಸೆಲೆಬ್ರಿಟಿಗಳು ತಮ್ಮ ನಟನೆಯ ಕೆರಿಯರ್ ಜೊತೆಗೆ, ಇನ್ನಷ್ಟು ಬ್ಯುಸಿನೆಸ್ ಗಳನ್ನು ನಡೆಸುತ್ತಾರೆ. ಕೆಲವರು ಫ್ಯಾಶನ್ ಬ್ರ್ಯಾಂಡ್ ನಡೆಸುತ್ತಾರೆ. ಇನ್ನು ಕೆಲವರು ಫುಡ್ ಬ್ಯುಸಿನೆಸ್ ಶುರು ಮಾಡುತ್ತಾರೆ, ಹಾಗೆಯೇ ಇನ್ನು ಅನೇಕ ರೀತಿಯ ಬ್ಯುಸಿನೆಸ್ ಗಳನ್ನು ಮಾಡುತ್ತಲಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು, ನಮ್ಮ ಕನ್ನಡದ ಕಲಾವಿದರು ಸಹ ಈ ರೀತಿಯ ಬ್ಯುಸಿನೆಸ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಟಾರ್ ಹೀರೋಗಳು, ಹೀರೋಯಿನ್ ಗಳು ಸಹ ಹೀಗೆ ಬ್ಯುಸಿನೆಸ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಸಹ ಅದೇ ರೀತಿ, ದೊಡ್ಡ ದೊಡ್ಡ ಸ್ಟಾರ್ ಗಳು ಈ ರೀತಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ವಿರಾಟ್ ಕೊಹ್ಲಿ, ಬಾಬಿ ಡಿಯೋಲ್, ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್, ಇವರೆಲ್ಲರದ್ದು ರೆಸ್ಟೋರೆಂಟ್ ಇದೆ.

ನಮಗೆಲ್ಲ ಗೊತ್ತಿರುವ ಹಾಗೆ, ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಈ Influencer ಗಳು ವಿಶೇಷ ರೀತಿಯ ಕಾಂಟೆಂಟ್ ಗಳನ್ನು ಜನರಿಗೆ ನೀಡುತ್ತಿದ್ದಾರೆ. ಅವುಗಳ ಪೈಕಿ ಈ ರೀತಿ ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳಿಗೆ ಹೋಗಿ, ಅಲ್ಲಿ ಬಳಸುವ ಪನೀರ್ ಗಳು ಆರೋಗ್ಯಕರವಾಗಿದೆಯಾ ಅಥವಾ ಫೇಕ್ ಆಗಿದೆಯಾ ಎಂದು ಚೆಕ್ ಮಾಡುವುದು. ಬಾಲಿವುಡ್ ನಲ್ಲಿ ಇದೆಲ್ಲವೂ ಜಾಸ್ತಿ ನಡೆಯುತ್ತಿದ್ದು, ಹೊಸ ಟ್ರೆಂಡ್ ಆಗಿದೆ. ಹಿಂದಿಯಲ್ಲಿ ಫೇಮಸ್ ಆಗಿರುವ ವ್ಯಕ್ತಿಯೊಬ್ಬ ಇದೇ ರೀತಿ ಮಾಡಿದ್ದಾನೆ, ಈತನ ಹೆಸರು ಸಾರ್ಥಕ್ ಸಚ್ದೇವ. ಈ ವ್ಯಕ್ತಿಗೆ ಇನ್ಸ್ಟಾಗ್ರಾಮ್ ನಲ್ಲಿ 522k ಫಾಲೋವರ್ಸ್ ಇದ್ದಾರೆ. ಒಳ್ಳೆಯ ಕಾಂಟೆಂಟ್ ಗಳ ಮೂಲಕ ಈ ವ್ಯಕ್ತಿಗೆ ಫ್ಯಾನ್ ಬೇಸ್ ಕೂಡ ಜಾಸ್ತಿ ಇದೆ.
ಈ ವ್ಯಕ್ತಿ ಮುಂಬೈನಲ್ಲಿ ಫೇಮಸ್ ಆಗಿರುವ ಸೆಲೆಬ್ರಿಟಿಗಳ ಒಡೆತನದ ಫ್ಯಾನ್ಸಿ ರೆಸ್ಟೋರೆಂಟ್ ಗೆ ಭೇಟಿ ನೀಡಿ ಪನೀರ್ ಟೆಸ್ಟ್ ಮಾಡಿದ್ದಾನೆ. ಮೊದಲು ವಿರಾಟ್ ಕೊಹ್ಲಿ ಒಡೆತನದ One8Commune ರೆಸ್ಟೋರೆಂಟ್ ಗೆ ಹೋಗಿ, ಅಲ್ಲಿನ ಪನೀರ್ ಡಿಶ್ ಒಂದನ್ನು ಆರ್ಡರ್ ಮಾಡಿ, ಪನೀರ್ ಪೀಸ್ ತೆಗೆದುಕೊಂಡು ಅಲ್ಲೇ ಅದನ್ನು ಬೌಲ್ ನಲ್ಲಿ ವಾಶ್ ಮಾಡಿ, ಅಯೋಡಿನ್ ಟಿಂಚರ್ ಹಾಕಿದ್ದಾನೆ, ಆಗ ಪನೀರ್ ನ ಬಣ್ಣ ಬಿಳಿ ಬಣ್ಣ ಆಗಿಯೇ ಉಳಿದಿದೆ. ಇದು ಪನೀರ್ ಆರೋಗ್ಯಕರ, ಫೇಕ್ ಪನೀರ್ ಅಲ್ಲ ಎನ್ನುವುದನ್ನು ತಿಳಿಸುತ್ತದೆ..ಪನೀರ್ ಮೇಲೆ ಅಯೋಡಿನ್ ಟಿಂಚರ್ ಹಾಕಿದಾಗ, ಅದರ ಬಣ್ಣ ಪರ್ಪಲ್ ಬಣ್ಣಕ್ಕೆ ತಿರುಗಿದರೆ, ಫೇಕ್ ಪನೀರ್ ಎಂದು ಅರ್ಥ. ಆದರೆ ಪನೀರ್ ಬಣ್ಣ ಬಿಳಿ ಆಗಿಯೇ ಉಳಿದುಕೊಂಡರೆ, ಪನೀರ್ ಪ್ಯೂರ್ ಆಗಿದೆ ಎಂದು ಅರ್ಥ. ಇದನ್ನೇ ಈ ವ್ಯಕ್ತಿ ಟೆಸ್ಟ್ ಮಾಡಿದ್ದಾನೆ.

ವಿರಾಟ್ ಕೊಹ್ಲಿ ಅವರ ರೆಸ್ಟೋರೆಂಟ್ ನಂತರ ಶಿಲ್ಪಾ ಶೆಟ್ಟಿ ಅವರು ಶುರು ಮಾಡಿರುವ ಬ್ಯಾಸ್ಟಿನ್ ರೆಸ್ಟೋರೆಂಟ್ ಗೆ ಭೇಟಿ ನೀಡಿ, ಅಲ್ಲಿ ಕೂಡ ಇದೇ ರೀತಿ ಟೆಸ್ಟ್ ಮಾಡಿದ್ದಾರೆ. ಅಲ್ಲಿ ಕೂಡ ಪನೀರ್ ಪ್ಯೂರ್ ಆಗಿದ್ದು, ಪರ್ಪಲ್ ಬಣ್ಣಕ್ಕೆ ತಿರುಗಲಿಲ್ಲ. ನಂತರ ಇವರು ಬಾಬಿ ಡಿಯೋಲ್ ಅವರ ರೆಸ್ಟೋರೆಂಟ್ ಗೆ ಭೇಟಿ ನೀಡಿ, ಅಲ್ಲಿ ಪನೀರ್ ಚಿಲ್ಲಿ ಆರ್ಡರ್ ಮಾಡಿ, ಟೆಸ್ಟ್ ಮಾಡಿದ್ದಾರೆ. ಅಲ್ಲಿ ಕೂಡ ಇದೇ ರೀತಿ, ಪನೀರ್ ಬಿಳಿ ಬಣ್ಣದಾಗಿಯೇ ಇತ್ತು. ಹಾಗಾಗಿ ಪನೀರ್ ಪ್ಯೂರ್ ಆಗಿದೆ ಎಂದು ತಿಳಿದುಬಂದಿದೆ. ಇದರ ನಂತರ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಕಳೆದ ವರ್ಷ ಶುರುಮಾಡಿದ ಫ್ಯಾನ್ಸಿ ರೆಸ್ಟೋರೆಂಟ್ ಟೋರಗೆ ಭೇಟಿ ನೀಡಿ, ಪನೀರ್ ಟೆಸ್ಟ್ ಮಾಡಿದ್ದು, ಅದರಲ್ಲಿ ಬಂದ ರಿಸಲ್ಟ್ ಬೇರೆಯೇ ಆಗಿದೆ.
ಗೌರಿ ಖಾನ್ ನಡೆಸುತ್ತಿರುವ ಟೋರಿ ರೆಸ್ಟೋರೆಂಟ್ ಇರುವುದು ಮುಂಬೈ ಮಹಾನಗರದ ಖಾರ್ ವೆಸ್ಟ್ ನ ಪಾಲಿ ಹಿಲ್ ರೋಡ್ ನಲ್ಲಿ ಈ ರೆಸ್ಟೋರೆಂಟ್ ಇದೆ. ಬಹಳ ಫ್ಯಾನ್ಸಿ ಆಗಿರುವ ಈ ರೆಸ್ಟೋರೆಂಟ್ ನ ಇಂಟೀರಿಯರ್ ಮಾಡಿರುವುದು ಸಹ ಗೌರಿ ಅವರೇ. ಈ ರೆಸ್ಟೋರೆಂಟ್ ನಲ್ಲಿ ತಿನ್ನಲು ಸಿಗುವ ಖಾದ್ಯಗಳು ಕೂಡ ಸಿಕ್ಕಾಪಟ್ಟೆ ಕಾಸ್ಲಿ, 500 ರೂಪಾಯಿ ಇಂದ 5000 ರೂಪಾಯಿಗಳವರೆಗು ಐಟಂ ಗಳು ಇವೆ. ಇನ್ನು ಇಲ್ಲಿ 30ml ಟೀಕಿಲಾ ಬೆಲೆ ₹7500 ರೂಪಾಯಿ ಆಗಿದೆ. ಇಷ್ಟು ದುಬಾರಿ ರೆಸ್ಟೋರೆಂಟ್ ಗೌರಿ ಖಾನ್ ಅವರ ಟೋರಿ ಆಗಿದ್ದು, ಪ್ರತಿದಿನ ಇಲ್ಲಿಗೆ ಹಲವು ಜನರು ಬಂದು, ದುಡ್ಡನ್ನು ಯರ್ರಾಬಿರ್ರಿ ಖರ್ಚು ಮಾಡಿ, ತಿಂದು ಹೋಗುತ್ತಾರೆ. ಇದೇ ಹೋಟೆಲ್ ಗೆ ಸಾರ್ಥಕ್ ಸಛ್ದೇವ್ ಹೋಗಿದ್ದಾರೆ.
ಪನೀರ್ ಡಿಶ್ ಒಂದನ್ನು ಆರ್ಡರ್ ಮಾಡಿ, ಅಯೋಡಿನ್ ಟಿಂಚರ್ ಬಳಸಿ ಪನೀರ್ ಟೆಸ್ಟ್ ಮಾಡಿದಾಗ, ಪನೀರ್ ಬಣ್ಣ ಪರ್ಪಲ್ ಆಗಿ ತಿರುಗಿದಾಗ, ಇದು ಫೇಕ್ ಪನೀರ್ ಇರಬಹುದು ಎಂದು ಹೇಳಿದ್ದಾರೆ ಸಾರ್ಥಕ್. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು. ಗೌರಿ ಖಾನ್ ಜನರ ಪ್ರಾಣದ ಜೊತೆಗೆ ಆಟ ಅಡುತ್ತಿದ್ದಾರಾ ಎನ್ನುವ ಪ್ರಶ್ನೆ ಶುರುವಾಯಿತು. ಜನರು ಸಹ ಆನ್ಲೈನ್ ನಲ್ಲಿ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದರು, ಗೌರಿ ಖಾನ್ ವಿರುದ್ಧ ಮಾತನಾಡುವುದಕ್ಕೆ ಶುರು ಮಾಡಿದರು, ಇನ್ನು ಕೆಲವರು ಗೌರಿ ಖಾನ್ ಅವರನ್ನು ಡಿಫೆಂಡ್ ಸಹ ಮಾಡಿಕೊಂಡರು. ಆದರೆ ಈ ಒಂದು ಪೋಸ್ಟ್ ಇಂದ ಗೌರಿ ಖಾನ್ ಅವರ ಇಮೇಜ್ ಡ್ಯಾಮೇಜ್ ಆಗಿದ್ದಂತೂ ನಿಜ.
ಈ ರೀತಿ ಆಗಿದ್ದಕ್ಕೆ, ಟೋರಿ ರೆಸ್ಟೋರೆಂಟ್ ಕಡೆಯಿಂದ ಸಹ ರಿಪ್ಲೈ ಬಂದಿದ್ದು, ತಮ್ಮ ರೆಸ್ಟೋರೆಂಟ್ ನಲ್ಲಿ ಬಳಸುವ ಪನೀರ್ ಪ್ಯೂರ್ ಆಗಿದೆ. ಅಯೋಡಿನ್ ಟೆಸ್ಟ್ ನಲ್ಲಿ ಪನೀರ್ ನಲ್ಲಿ ಸ್ಟಾರ್ಚ್ ಇದೆಯೋ ಇಲ್ಲವೋ ಎಂದು ಗೊತ್ತಾಗುತ್ತದೆಯೇ ಹೊರತು ಬೇರೆ ಯಾವುದೇ ವಿಚಾರಗಳು ಗೊತ್ತಾಗುವುದಿಲ್ಲ, ನಾವು ಒಳ್ಳೆಯ ಪನೀರ್ ಅನ್ನೇ ಬಳಸುತ್ತಿದ್ದೇವೆ ಎಂದು ಗೌರಿ ಖಾನ್ ತಂಡ ತಿಳಿಸಿದೆ. ಆದರೆ ಮುಂಬೈನ ಫುಡ್ ಡಿಪಾರ್ಟ್ಮೆಂಟ್ ನ ಅಧಿಕಾರಿಗಳು ಸಹ ಇದನ್ನೇ ತಿಳಿಸಿ, ಗೌರಿ ಖಾನ್ ಅವರಿಗೆ ಸಪೋರ್ಟ್ ಮಾಡಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವುದಂತೂ ನಿಜ. ದೊಡ್ಡ ದೊಡ್ಡ ವ್ಯಕ್ತಿಗಳ ರೆಸ್ಟೋರೆಂಟ್ ಗಳಲ್ಲೇ ಈ ರೀತಿ ಆದರೆ ಚರ್ಚೆ ಆಗದೇ ಇರುತ್ತಾ?