ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ನಟಿಯರ ಪೈಕಿ ಪೂಜಾ ಹೆಗ್ಡೆ ಸಹ ಪ್ರಮುಖರು. ಇವರು ಮೂಲತಃ ಕರ್ನಾಟಕದ ಮಂಗಳೂರಿಗೆ ಸೇರಿದ ವ್ಯಕ್ತಿಯೇ ಆಗಿದ್ದರು ಸಹ, ಇವರು ಓದಿದ್ದು ಬೆಳೆದಿದ್ದು ಎಲ್ಲವೂ ಉತ್ತರ ಭಾರತದಲ್ಲಿ. ಪೂಜಾ ಹೆಗ್ಡೆ ಮೊದಲಿಗೆ ನಟಿಸಿದ್ದು ಹಿಂದಿ ಸಿನಿಮಾದಲ್ಲೇ ಆದರೂ ಅಲ್ಲಿ ಎಲ್ಲಿಯೂ ಸಹ ಇವರಿಗೆ ಯಶಸ್ಸು ಸಿಗಲಿಲ್ಲ. ಹಿಂದಿಯಲ್ಲಿ ನಟಿಸಿದ ಸಿನಿಮಾ ಮಕಾಡೆ ಮಲಗಿದ ಬಳಿಕ ಇವರು ಸೌತ್ ಸಿನಿಮಾ ಲೋಕದ ಕಡೆಗೆ ಎಂಟ್ರಿ ಕೊಟ್ಟರು. ಪೂಜಾ ಹೆಗ್ಡೆ ಅವರು ತೆಲುಗು ಸಿನಿಮಾ ಮೂಲಕ ಸಕ್ಸಸ್ ಕಂಡಿದ್ದು, ಬಳಿಕ ತಮಿಳು ಸಿನಿಮಾದಲ್ಲಿ ಕೂಡ ನಟಿಸಿದರು. ಅಲ್ಲಿ ಕೂಡ ಸಕ್ಸಸ್ ಪಡೆದರು.ಪ್ಯಾನ್ ಇಂಡಿಯಾ ಹೀರೋಯಿನ್ಆಗಿ ಗುರುತಿಸಿಕೊಂಡಿದ್ದಾರೆ.

ನಮಗೆಲ್ಲ ಗೊತ್ತಿರುವ ಹಾಗೆ ಪೂಜಾ ಹೆಗ್ಡೆ ಅವರ ಕುಟುಂಬದ ಮೂಲ ಕರ್ನಾಟಕದ ಮಂಗಳೂರು. ತುಳು ಮಾತನಾಡುವ ಭಂಟರ ಕುಟುಂಬದಲ್ಲಿ ಹುಟ್ಟಿ ಬೆಳೆದವರು ಪೂಜಾ ಹೆಗ್ಡೆ. ಆದರೆ ಇವರು ಬೆಳೆದಿದ್ದು ಎಲ್ಲವೂ ಮುಂಬೈನಲ್ಲಿ. ಅಲ್ಲೇ ಓದಿದ ಪೂಜಾ ಹೆಗ್ಡೆ ಅವರಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಮಾಡೆಲಿಂಗ್ ಇಂದಲೇ ಮೊದಲು ಕೆರಿಯರ್ ಶುರು ಮಾಡಿದ ಪೂಜಾ ಹೆಗ್ಡೆ ಅವರು ನಂತರ ನಾಯಕಿ ಆದರು. ಪೂಜಾ ಹೆಗ್ಡೆ ಅವರು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸಿದ್ದಾರೆ. ಅವುಗಳ ಪೈಕಿ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ, ಇನ್ನು ಕೆಲವು ಸಿನಿಮಾಗಳು ಸೋಲನ್ನು ಕಂಡಿದೆ. ಇವರ ಸಿನಿಮಾಗಳು ಗೆದ್ದಿದ್ದು ಬೆರಳೆಣಿಕೆ ಅಷ್ಟು ಎಂದು ಹೇಳಿದರೂ ತಪ್ಪಲ್ಲ.
ಈಗ ಪೂಜಾ ಹೆಗ್ಡೆ ಒಂದು ಬಿಗ್ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಪೂಜಾ ಹೆಗ್ಡೆ ಅವರ ಕೈಯಲ್ಲಿ ಈಗ ಒಂದಷ್ಟು ಪ್ರಾಜೆಕ್ಟ್ ಗಳಿವೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಕೂಲಿ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಜನ ನಾಯಕನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಪೂಜಾ ಹೆಗ್ಡೆ ನಟಿಸಿರುವ ರೆಟ್ರೋ ಸಿನಿಮಾ ಬಿಡುಗಡೆ ಆಗುವುದಕ್ಕೆ ಸಿದ್ಧವಾಗಿದೆ. ಸೂರ್ಯ ಅವರು ನಾಯಕ ಆಗಿರುವ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ ಆಗಿದ್ದು, ಮುಂದಿನ ತಿಂಗಳು ಸಿನಿಮಾ ತೆರೆ ಕಾಣಲಿದೆ. Retro ಸಿನಿಮಾದ ಕನಿಮಾ ಹಾಡು ಈಗಾಗಲೇ ಬಿಡುಗಡೆಯಾಗಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಡಿನಲ್ಲಿ ಪೂಜಾ ಹೆಗ್ಡೆ ಅವರು ಹಾಕಿರುವ ಸ್ಟೆಪ್ಸ್ ಸಹ ಸಖತ್ ವೈರಲ್ ಆಗಿತ್ತು. ಈಗ ಪೂಜಾ ಹೆಗ್ಡೆ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ.

ಪೂಜಾ ಹೆಗ್ಡೆ ಅವರು ಮೂಲತಃ ತುಳು ಕುಟುಂಬದವರು, ಇವರು ಈಗಾಗಲೇ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದು, ಇದುವರೆಗೂ ಒಂದೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಮಾತ್ರವಲ್ಲ ಖುದ್ದು ಪೂಜಾ ಹೆಗ್ಡೆ ಅವರ ಕುಟುಂಬಕ್ಕೆ ಸಹ ಪ್ರಶ್ನೆ ಇದೆ. ಕನ್ನಡ ಸಿನಿಮಾ ಮಾಡು ಎಂದು ಪೂಜಾ ಹೆಗ್ಡೆ ಅವರ ತಂದೆ ತಾಯಿ ಪ್ರೆಶರ್ ಹಾಕುತ್ತಾರಂತೆ. ಕುಟುಂಬದವರು ಮತ್ತು ಫ್ರೆಂಡ್ಸ್ ಕೂಡ ಕನ್ನಡ ಸಿನಿಮಾ ಮಾಡು ಎಂದು ಕೇಳುತ್ತಾರಂತೆ. ಆದರೆ ಪೂಜಾ ಹೆಗ್ಡೆ ಅವರು ಇನ್ನು ಯಾಕೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಎನ್ನುವ ಪ್ರಶ್ನೆಗೆ ಇತ್ತೀಚಿನ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ. ಕನ್ನಡ ಫ್ಯಾನ್ಸ್ ಗೆ ಈ ಮಾತಿನಿಂದ ಕ್ಲಾರಿಟಿ ಸಿಕ್ಕಿದೆ.
ಪೂಜಾ ಹೆಗ್ಡೆ ಅವರು ಹೇಳಿರುವ ಮಾತಿನ ಅನುಸಾರ, ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಅವರಿಗೆ ಸಹ ಇದೆ. ಬೇರೆ ಭಾಷೆಗಳಲ್ಲಿ ನಟಿಸಿ ಕನ್ನಡದಲ್ಲಿ ಇನ್ನು ನಟಿಸಿಲ್ಲ ಎನ್ನುವ ಆಲೋಚನೆ ಪೂಜಾ ಹೆಗ್ಡೆ ಅವರ ಮನಸ್ಸಿನಲ್ಲಿ ಇದೆ. ಕನ್ನಡ ಚಿತ್ರರಂಗದಿಂದ ಈಗಾಗಲೇ ಪೂಜಾ ಹೆಗ್ಡೆ ಅವರು ಹಲವು ಕಥೆಗಳನ್ನು ಕೇಳಿದ್ದು, ಆ ಕಥೆಗಳು ಅವರಿಗೆ ಇಷ್ಟ ಆಗಿಲ್ಲವಂತೆ. ಒಳ್ಳೆಯ ಕಥೆ ಸಿಕ್ಕರೆ, ಪಾತ್ರ ತಮಗೆ ಇಷ್ಟವಾದರೆ ಖಂಡಿತವಾಗಿಯೂ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ ಎನ್ನುತ್ತಾರೆ ಪೂಜಾ ಹೆಗ್ಡೆ. ಫ್ಯಾಮಿಲಿ ಮತ್ತು ಫ್ರೆಂಡ್ಸ್ ಎಲ್ಲರೂ ಅದನ್ನೇ ಕೇಳುತ್ತಾರೆ ಎಂದು ಕೂಡ ಇಂಟರ್ವ್ಯೂ ನಲ್ಲಿ ಹೇಳಿದ್ದಾರೆ. ಅವರ ಫ್ಯಾನ್ಸ್ ಗೆ ಈ ವಿಷಯ ಸಂತೋಷ ತಂದಿದೆ.

ಬೆಳೆದಿದ್ದು ಮುಂಬೈನಲ್ಲೇ ಆದರೂ ಪೂಜಾ ಹೆಗ್ಡೆ ಅವರಿಗೆ ಕರ್ನಾಟಕದ ಬಗ್ಗೆ ಬಹಳ ಗೌರವ ಇದೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಂಬಳ ಉತ್ಸವಕ್ಕೆ ಬಂದಿದ್ದ ಪೂಜಾ ಹೆಗ್ಡೆ, ಕನ್ನಡದಲ್ಲಿ ಒಂದೆರಡು ಸಾಲುಗಳನ್ನು ಮಾತನಾಡಿದ್ದರು. ಹಾಗೆಯೇ ಬೆಂಗಳೂರಿಗೆ ಬರುವುದು ಮನೆಗೆ ಬಂದ ಹಾಗೆ ಅನ್ನಿಸುತ್ತದೆ. ತುಂಬಾ ಖುಷಿಯಾಗುತ್ತದೆ. ನಾನು ಕರ್ಣಾಟಕದವಳು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದರು. ಹಲವು ವೇದಿಕೆಗಳಲ್ಲಿ ಪೂಜಾ ಹೆಗ್ಡೆ ಈ ರೀತಿ ಹೇಳಿರುವುದು ಇದೆ. ಇವರಿಗೆ ಒಳ್ಳೆಯ ಕಥೆಯನ್ನು ಅಪ್ರೋಚ್ ಮಾಡಿದರೆ, ಕನ್ನಡದಲ್ಲಿ ಸಹ ಈಕೆ ಒಳ್ಳೆಯ ಪಾತ್ರದಲ್ಲಿ ನಟಿಸಿ, ಅಭಿನಯಿಸುವುದು ಪಕ್ಕಾ ಆಗಿದೆ. ಪೂಜಾ ಹೆಗ್ಡೆ ಯಾವಾಗ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಕಾದು ನೋಡಬೇಕಿದೆ.