ಕಿರುತೆರೆಯಲ್ಲಿ ಈಗ ಸಂಭ್ರಮವೋ ಸಂಭ್ರಮ. ಕಲಾವಿದರು ಒಬ್ಬರ ನಂತರ ಒಬ್ಬರು ಗುಡ್ ನ್ಯೂಸ್ ಕೊಡುತ್ತಲಿದ್ದಾರೆ. ಕಿರುತೆರೆ ವೀಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ. ಇದೀಗ ಕಿರುತೆರೆಯ ಮತ್ತೊಬ್ಬ ಜನಪ್ರಿಯ ನಟ ಅಜಯ್ ರಾಜ್ ಅವರು ತಾವು ಗಂಡು ಮಗುವಿನ ತಂದೆ ಆಗಿರುವ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು, ಅಜಯ್ ರಾಜ್ ಅವರು ಕೆಲವು ವರ್ಷಗಳ ಹಿಂದೆ ಪದ್ಮಿನಿ ದೇವನಹಳ್ಳಿ ಅವರೊಡನೆ ಮದುವೆಯಾಗಿದ್ದರು, ಈ ಜೋಡಿ ಬಹಳ ಚೆನ್ನಾಗಿ, ಸಂತೋಷವಾಗಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿದ್ದಾ ಜೋಡಿ ಈಗ ತಂದೆ ತಾಯಿ ಆಗಿರುವ ಸಂತೋಷದ ಸುದ್ದಿಯನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ.

ಅಜಯ್ ರಾಜ್ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇವರು ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿದವರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಿರ್ದೇಶನ ಮಾಡಿದ ಸೂಪರ್ ಹಿಟ್ ಸಿನಿಮಾ ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಅವರಿಗೆ ಆಕಸ್ಮಿಕವಾಗಿ ಸಿಕ್ಕ ಅವಕಾಶ ಆಗಿತ್ತು. ಹಳ್ಳಿಮೇಷ್ಟ್ರು ಸಿನಿಮಾ ಇಂದ ಅವರಿಗೆ ನಟನೆಯ ಬಗ್ಗೆ ಆಸಕ್ತಿ ಶುರುವಾಗಿತ್ತು. ಅದಾದ ಬಳಿಕ ಹೆಚ್ಚಿನ ಸಿನಿಮಾಗಳಲ್ಲಿ ಇವರು ಬಾಲನಟನಾಗಿ ನಟಿಸಲಿಲ್ಲ. ಬಳಿಕ ಅವರು ದೊಡ್ಡವರಾದ ನಂತರ, ಕಿರುತೆರೆಗೆ ಎಂಟ್ರಿ ಕೊಟ್ಟರು, ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಬಾಲನಟನಾಗಿ ಕೆರಿಯರ್ ಶುರು ಮಾಡಿ, ಒಳ್ಳೆಯ ನಟ ಸಹ ಅನ್ನಿಸಿಕೊಂಡಿದ್ದಾರೆ.
2 ದಶಕದಿಂದ ಇವರು ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ, ಹಲವು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ರೋಲ್ ಗಳಲ್ಲಿ ಅಭಿನಯಿಸಿದ್ದು, ಒಳ್ಳೆಯ ಕಲಾವಿದ ಗುರುತಿಸಿಕೊಂಡಿದ್ದಾರೆ. ಇವರು ಪ್ರಸ್ತುತ ಜೀಕನ್ನಡ ವಾಹಿನಿಯ ಲಕ್ಷ್ಮಿನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಪಾತ್ರ ಸಹ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಈ ಪಾತ್ರ ಎಲ್ಲಾ ತಂಗಿಯರಿಗೆ ಹತ್ತಿರ ಅನ್ನಿಸುವ ಪಾತ್ರ, ಹಾಗೆಯೇ ಹೆಂಡತಿಯನ್ನು ತುಂಬಾ ಪ್ರೀತಿಸುವ ಪಾತ್ರ ಆಗಿದೆ. ಹಾಗೆಯೇ ಕೆಲಸ ಮಾಡಬೇಕು, ಜೀವನದಲ್ಲಿ ಸಾಧಿಸಬೇಕು ಅನ್ನೋ ಹಂಬಲವಿದ್ದರು ಕಷ್ಟಪಡುತ್ತಿರುವ ಹುಡುಗನ ಕಥೆ ಇವರ ಲೈಫ್. ಎಲ್ಲಾ ಮಧ್ಯಮವರ್ಗದ ಹುಡುಗರಿಗೂ ಕನೆಕ್ಟ್ ಆಗುವ ಪಾತ್ರ ಇವರದ್ದು. ಲಕ್ಷ್ಮಿನಿವಾಸ ಧಾರಾವಾಹಿ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಡುತ್ತಿದೆ..

ಧಾರಾವಾಹಿಯ ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಹಾಗೆಯೇ ಇವರನ್ನು ಮದುವೆ ಆಗಿರುವುದು ಪದ್ಮಿನಿ ದೇವನಹಳ್ಳಿ ಅವರು. ಇವರು ಸಹ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಆಗಿದ್ದಾರೆ. ಪದ್ಮಿನಿ ಅವರು ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಇವರು ಆ ಧಾರಾವಾಹಿಯ ಮೂಲಕ ಒಳ್ಳೆಯ ಹೆಸರು ಪಡೆದರು. ಪದ್ಮಿನಿ ಅವರು ಮತ್ತು ಅಜಯ್ ರಾಜ್ ಅವರು ಪ್ರೀತಿಸಿ ಮದುವೆಯಾದ ಜೋಡಿ. ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಕೆಲವು ದಿನಗಳ ಹಿಂದೆಯಷ್ಟೇ ಬೇಬಿ ಬಂಪ್ ಫೋಟೋ ಶೇರ್ ಮಾಡಿ, ತಾವಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂತೋಷದ ವಿಚಾರವನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಈ ಜೋಡಿ ಮಗು ಜನಿಸಿರುವ ಖುಷಿ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ..
ಪದ್ಮಿನಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ವಿಚಾರವನ್ನು ಅಜಯ್ ರಾಜ್ ಅವರು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಏಪ್ರಿಲ್ 15ರಂದು ಪದ್ಮಿನಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಇಬ್ಬರು ಕೂಡ ಆರೋಗ್ಯವಾಗಿದ್ದಾರೆ, ಮಗು ಆರೋಗ್ಯ ಸಹ ಚೆನ್ನಾಗಿದೆ ಎಂದು ಅಜಯ್ ರಾಜ್ ಅವರು ತಿಳಿಸಿದ್ದಾರೆ.. ಇನ್ನು ತಾಯಿ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಅಜಯ್ ರಾಜ್ ಹಾಗೂ ಪದ್ಮಿನಿ ದಂಪತಿ ಮೊದಲ ಮಗುವನ್ನು ಬರಮಾಡಿಕೊಂಡ ಈ ಸಂತೋಷಕ್ಕೆ, ಅಭಿಮಾನಿಗಳು ಮತ್ತು ಕಿರುತೆರೆ ಕಲಾವಿದರು ಎಲ್ಲರೂ ಇವರಿಗೆ ವಿಶ್ ಮಾಡಿ, ಒಳ್ಳೆಯದಾಗಲಿ ಎಂದು ಹರಸಿ ಹಾರೈಸುತ್ತಿದ್ದಾರೆ. ಅಜಯ್ ರಾಜ್ ಹಾಗೂ ಪದ್ಮಿನಿ ಜೋಡಿಯ ಜೀವನದ ಹೊಸ ಅಧ್ಯಾಯ ಈಗ ಆರಂಭವಾಗಿದೆ.

ಇನ್ನು ಕಿರುತೆರೆಯಲ್ಲಿ ಈಗ ಕಲಾವಿದರು ಈ ರೀತಿಯ ಸಂತೋಷದ ಸುದ್ದಿಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಲಕ್ಷ್ಮಿನಿವಾಸ ಧಾರಾವಾಹಿಯ ನಟಿ ಚಂದನಾ ಅನಂತಕೃಷ್ಣ ಅವರ ಮದುವೆ ಸಹ ಆಯಿತು. ಇನ್ನು ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ ವೈಷ್ಣವಿ ಅವರು ಸಹ ಮೊನ್ನೆಯಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈಗ ಅಜಯ್ ರಾಜ್ ಅವರ ಜೀವನಕ್ಕೆ ಮಗುವಿನ ಆಗಮನ ಆಗಿದೆ. ಎಲ್ಲೆಲ್ಲೂ ಈ ರೀತಿಯ ಸಂತೋಷದ ಸುದ್ದಿಗಳನ್ನು ಕೇಳಿ ಅಭಿಮಾನಿಗಳು ಬಹಳ ಸಂತೋಷ ಪಟ್ಟಿದ್ದಾರೆ. ತಮ್ಮ ಮೆಚ್ಚಿನ ಕಲಾವಿದರಿಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡುತ್ತಿದ್ದಾರೆ. ಅಜಯ್ ರಾಜ್ ಹಾಗು ಪದ್ಮಿನಿ ಅವರ ಮಗು ಆರೋಗ್ಯವಾಗಿ ಚೆನ್ನಾಗಿರಲಿ ಎಂದು ಹಾರೈಸೋಣ..