ಕೆಲ ದಿನಗಳ ಹಿಂದೆ ಬಿಗ್ ಬಾಸ್ ಖ್ಯಾತಿಯ ರಜತ್ ಹಾಗೂ ವಿನಯ್ ಇಬ್ಬರೂ ಕೂಡ ಜೈಲು ಸೇರಿದ್ದರು. ಲಾಂಗ್ ಹಿಡಿದು ರೀಲ್ಸ್ ಮಾಡಿದ ಕಾರಣಕ್ಕೆ ಇವರಿಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದರು. ಕೆಲ ದಿನಗಳ ನಂತರ ಇಬ್ಬರಿಗೂ ಜಾಮೀನು ಸಿಕ್ಕ ಕಾರಣ ಹೊರಗಡೆ ಬಂದಿದ್ದರು, ಆದರೆ ಇದೀಗ ಮತ್ತೆ ಸಂಕಷ್ಟ ಬಂದಿದೆ ಎನ್ನುವಂತೆ ರಜತ್ ಅವರು ಮತ್ತೆ ಜೈಲು ಸೇರಿದ್ದಾರೆ. ನಿನ್ನೆ ಪೊಲೀಸರು ಮತ್ತೆ ರಜತ್ ಅವರನ್ನು ಬಂಧಿಸಿದ್ದಾರೆ. ಆದರೆ ವಿನಯ್ ಅವರಿಗೆ ಮಾತ್ರ ಕೇವಲ ₹500 ರೂಪಾಯಿಗಳ ದಂಡ ವಿಧಿಸಲಾಗಿದೆ. ಇದ್ದಕ್ಕಿದ್ದಂತೆ ಎರಡನೇ ಸಾರಿ ರಜತ್ ಅವರನ್ನು ಕರೆದುಕೊಂಡು ಹೋಗಿದ್ದೇಕೆ? ವಿನಯ್ ಗೆ ಕೇವಲ ದಂಡ ಹಾಕಿ ಬಿಟ್ಟಿದ್ದೇಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದ್ದು, ಅದಕ್ಕೆ ಖುದ್ದು ವಿನಯ್ ಅವರೇ ಉತ್ತರ ಕೊಟ್ಟಿದ್ದಾರೆ. ಆಗಿರುವುದೇನು ಎಂದು ಪೂರ್ತಿ ವಿಷಯ ತಿಳಿದುಕೊಳ್ಳೋಣ..
ರಜತ್ ಹಾಗೂ ವಿನಯ್ ಇಬ್ಬರು ಕೂಡ ಬಹಳ ಒಳ್ಳೆಯ ಫ್ರೆಂಡ್ಸ್. ಬಹಳ ವರ್ಷಗಳಿಂದ ಇಬ್ಬರಿಗೂ ಪರಿಚಯವಿದೆ. ವಿನಯ್ ಅವರು ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ. ಮಹಾದೇವನ ಪಾತ್ರವನ್ನ ಎಷ್ಟು ಚೆನ್ನಾಗಿ ನಿಭಾಯಿಸಿದ್ದರು ಎಂದು ನಮಗೆಲ್ಲಾ ಗೊತ್ತೇ ಇದೆ. ಅದಾದ ಬಳಿಕ ಬೇರೆ ಒಂದೆರಡು ಧಾರಾವಾಹಿಗಳಲ್ಲಿ ಕೂಡ ವಿನಯ್ ಅಭಿನಯಿಸಿ ಹೆಸರು ಪಡೆದವರು. ಇನ್ನು ರಜತ್ ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿಲ್ಲ, ಆದರೆ ಎಲ್ಲರಿಗೂ ಇವರ ಬಗ್ಗೆ ಗೊತ್ತಿದೆ. ಇವರ ಪತ್ನಿ ಅಕ್ಷತಾ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.. ಇನ್ನು ರಜತ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ಬಿಗ್ ಬಾಸ್ ಶೋ ಇಂದ. ವಿನಯ್ ಅವರಿಗು ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾಸ್ ಶೋ ಆಗಿತ್ತು. ಬಿಬಿಕೆ 10 ರಲ್ಲಿ ಸ್ಪರ್ಧಿಯಾಗಿದ್ದ ವಿನಯ್, ಸಿಕ್ಕಾಪಟ್ಟೆ ಸದ್ದು ಮಾಡಿದ್ದರು.

ಫಿನಾಲೆ ವರೆಗು ತಲುಪಿ, 4ನೇ ಸ್ಥಾನಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದರು. ಇನ್ನು ಬಿಬಿಕೆ11 ಸ್ಪರ್ಧಿಯಾಗಿದ್ದ ರಜತ್, ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ 50 ದಿನಗಳ ವಾಸ ಮುಗಿದ ನಂತರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರೂ ಸಹ, ಜನರಿಗೆ ಸಿಕ್ಕಾಪಟ್ಟೆ ಹತ್ತಿರ ಆದರು, ರಜತ್ ಕೊಡುತ್ತಿದ್ದ ಎಂಟರ್ಟೈನ್ಮೆಂಟ್ ಎಲ್ಲರಿಗೂ ಸಖತ್ ಇಷ್ಟವಾಗಿತ್ತು. ಜಗಳ ಆಡುತ್ತಿದ್ದರು ಹೆಚ್ಚಾಗಿ, ಚೈತ್ರಾ ಕುಂದಾಪುರ ಮತ್ತು ರಜತ್ ಜಗಳ ಎಲ್ಲರಿಗು ಫುಲ್ ಮನರಂಜನೆ ನೀಡುತ್ತಿತ್ತು ಎಂದರೂ ತಪ್ಪಲ್ಲ. ಕಳೆದ ಸೀಸನ್ ಇಂದ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದ್ದ ರಜತ್, ಫಿನಾಲೆ ವರೆಗು ತಲುಪಿದರು, ಮೂರನೇ ಸ್ಥಾನ ಪಡೆದುಕೊಂಡರು. ಒಬ್ಬ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಂದ ಸ್ಪರ್ಧಿ ಅಷ್ಟರ ಮಟ್ಟಿಗೆ ಗೆದ್ದು, ಫಿನಾಲೆ ತಲುಪಿದ್ದು ಅದೇ ಮೊದಲು. ಕಳೆದ ಬಿಗ್ ಬಾಸ್ ಸೀಸನ್ ಗೆದ್ದಿದ್ದು ಹನುಮಂತ.
ಹನುಮಂತ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯೇ ಆಗಿದ್ದ. ಬಿಬಿಕೆ11 ಒಂದು ರೀತಿ ಇತಿಹಾಸ ಬರೆಯಿತು ಎಂದೇ ಹೇಳಬಹುದು. ಬಿಗ್ ಬಾಸ್ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾದ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದ ವಿನಯ್ ಹಾಗೂ ರಜತ್ ಇಬ್ಬರೂ ಭಾಗವಹಿಸುತ್ತಿದ್ದಾರೆ. ವಿನಯ್ ಕ್ಯಾಪ್ಟನ್ ಆಗಿರುವ ಹುಡುಗರ ತಂಡದಲ್ಲಿ ರಜತ್ ಸಹ ಇದ್ದಾರೆ. ಈ ಶೋನಲ್ಲಿ ಇಬ್ಬರ ಫ್ರೆಂಡ್ಶಿಪ್ ಜಾಸ್ತಿ ಆಗಿತ್ತು. ಹುಡುಗಿಯರ ತಂಡಕ್ಕ ಠಕ್ಕರ್ ಕೊಡುತ್ತಿದ್ದರು. ಹುಡುಗರ ತಂಡ ಶೈನ್ ಆಗುತ್ತಿತ್ತು. ಈ ಶೋನಲ್ಲಿ ಕೂಡ ಚೈತ್ರಾ ಹಾಗೂ ರಜತ್ ಜಗಳ ಮುಂದುವರೆದಿತ್ತು, ಹೀಗೆ ಜನರಿಗೆ ಸಖತ್ ಮನರಂಜನೆ ಕೊಡುತ್ತಿದೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ. ಈ ಶೋ ಶೂಟಿಂಗ್ ಸಮಯದಲ್ಲಿ ಮಾಡಿದ ಒಂದು ರೀಲ್ಸ್ ಇಂದಲೇ ಇವರಿಬ್ಬರು ಕಷ್ಟಕ್ಕೆ ಸಿಲುಕಿಕೊಂಡರು.

ಒಂದು ಎಪಿಸೋಡ್ ಗಾಗಿ ರಜತ್ ಅವರು ಡಿಬಾಸ್ ದರ್ಶನ್ ಅವರ ಕರಿಯ ಸಿನಿಮಾ ಲುಕ್ ರೀಕ್ರಿಯೇಟ್ ಮಾಡಿದರೆ, ವಿನಯ್ ಪುಷ್ಪ ಸಿನಿಮಾದ ಲುಕ್ ರೀಕ್ರಿಯೇಟ್ ಮಾಡಿದರು. ಈ ರೀಲ್ಸ್ ನಲ್ಲಿ ಇಬ್ಬರೂ ಸಹ, ಲಾಂಗ್ ಹಿಡಿದು ವಾಕ್ ಮಾಡಿದ್ದರು. ಆದರೆ ಸಾರ್ವಜನಿಕವಾಗಿ ಒರಿಜಿನಲ್ ಲಾಂಗ್ ಆಗಲಿ, ನಕಲಿ ಲಾಂಗ್ ಆಗಲಿ ಬಳಸುವ ಹಾಗಿಲ್ಲ ಎಂದು ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದರು. ಕೆಲ ದಿನಗಳ ನಂತರ ಕೋರ್ಟ್ ನಲ್ಲಿ ಇಬ್ಬರಿಗೂ ಜಾಮೀನು ಸಿಕ್ಕಿತು. ಆದರೆ ಇದೀಗ ರಜತ್ ಮಾತ್ರ ಮತ್ತೆ ಎರಡನೇ ಸಾರಿ ಅರೆ*ಸ್ಟ್ ಆಗಿದ್ದಾರೆ. ವಿನಯ್ ಅವರಿಗೆ ಕೋರ್ಟ್ ₹500 ರೂಪಾಯಿ ದಂಡ ವಿಧಿಸಿದೆ. ಒಬ್ಬರನ್ನು ಮಾತ್ರ ಬಂಧಿಸಿದ್ದು ಯಾಕೆ ಎನ್ನುವ ಪ್ರಶ್ನೆ ಜನರಲ್ಲಿ ಶುರುವಾಗಿದ್ದು, ಅದಕ್ಕೆ ಖುದ್ದು ವಿನಯ್ ಅವರೇ ಉತ್ತರ ಕೊಟ್ಟಿದ್ದಾರೆ.
ನಿನ್ನೆ ರಜತ್ ಅವರ ಮನೆಗೆ ಬಂದ ಪೊಲೀಸರು ಅವರನ್ನು ಬಂ*ಧಿಸಿ ಕರೆದುಕೊಂಡು ಹೋಗಿದ್ದಾರೆ. ಕೋರ್ಟ್ ಗೆ ಬಂದಿದ್ದ ವಿನಯ್ ಗೌಡ ಈ ವಿಷಯದ ಬಗ್ಗೆ ಮಾತನಾಡಿದ್ದು, ಆಗಿರುವುದು ಏನು ಎಂದರೆ.. ಕೋರ್ಟ್ ಇವರಿಬ್ಬರು ಷರತ್ತು ಬದ್ಧ ಜಾಮೀನು ನೀಡಿತ್ತು, ವಿಚಾರಣೆ ಇದ್ದಾಗಲೆಲ್ಲಾ ಇಬ್ಬರೂ ಹಾಜರಾಗಬೇಕಿತ್ತು. ಆದರೆ ವಿನಯ್ ಅವರು ಆರೋಗ್ಯದ ಸಮಸ್ಯೆ ಮತ್ತು ಶೂಟಿಂಗ್ ಎರಡು ಇದ್ದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ, ನಿಧಾನವಾಗಿ ಬರುತ್ತೇನೆ ಎಂದು ಕೋರ್ಟ್ ಗೆ ಅಪ್ಲಿಕೇಶನ್ ಹಾಕಿ ಪರ್ಮಿಶನ್ ತೆಗೆದುಕೊಂಡಿದ್ದರಂತೆ. ಹಾಗಾಗಿ ಕೋರ್ಟ್ ಅವರಿಗೆ ದಂಡ ಮಾತ್ರ ವಿಧಿಸಿದೆ. 500 ರೂಪಾಯಿ ದಂಡ ಕಟ್ಟಿ ನಂತರ ವಿಚಾರಣೆಗೆ ಬಂದಿದ್ದಾರೆ. ಆದರೆ ರಜತ್ ವಿಚಾರ ಆ ರೀತಿ ಆಗಿಲ್ಲ. ರಜತ್ ಕೋರ್ಟ್ ಗೆ ಹಾಜರಾಗಿಲ್ಲ.

ವಿಚಾರಣೆಗೆ ತಪ್ಪಿಸಿಕೊಂಡಿದ್ದಾರೆ, ಯಾವುದೇ ಕಾರಣ ಕೂಡ ನೀಡಿಲ್ಲ ಎಂದು ಅವರನ್ನು ಬಂಧಿ*ಸಲಾಗಿದೆ. ಇನ್ನು ವಿನಯ್ ಅವರಿಗೆ ಕಣ್ಣಿನ ಸಮಸ್ಯೆ ಆಗಿತ್ತಂತೆ, ಆ ಕಾರಣಕ್ಕೆ ಅವರು ವಿಚಾರಣೆಗೆ ಬರುವುದಕ್ಕೆ ಆಗಿಲ್ಲ ಎಂದಿದ್ದು, ರಜತ್ ನನ್ನ ತಮ್ಮ, ನನ್ನ ತಮ್ಮನನ್ನ ನಾನು ಬಿಟ್ಟುಕೊಡೋದಿಲ್ಲ ಎಂದಿದ್ದಾರೆ. ಹಾಗೆಯೇ ಕೇಸ್ ಕೋರ್ಟ್ ನಲ್ಲಿ ಇರುವ ಕಾರಣ ಈ ವಿಚಾರಗಳ ಹೆಚ್ಚು ಮಾತನಾಡೋಕೆ ಆಗೋದಿಲ್ಲ ಎಂದು ಸಹ ಹೇಳಿದ್ದಾರೆ.. ರಜತ್ ಜೊತೆ ರೀಲ್ಸ್ ಮಾಡೋದಿಲ್ಲ ಅಂತ ಯಾರೋ ಕೇಳಿದಾಗ ತಮಾಷೆಗೆ ಹೇಳಿದ್ದು ಅಷ್ಟೇ ಎಂದಿದ್ದು, ತಮ್ಮ ನಡುವೆ ಫ್ರೆಂಡ್ಶಿಪ್ ತುಂಬಾ ಚೆನ್ನಾಗಿದೆ ಎಂದು ಸಹ ಹೇಳಿದ್ದಾರೆ.