ಅದ್ಯಾಕೋ ಗೊತ್ತಿಲ್ಲ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವಂತಹ ಕೆಲಸಗಳನ್ನೇ ಸರ್ಕಾರ ಮಾಡ್ತಾ ಇದೆ. ಮುಸ್ಲಿಂ ಮೀಸಲಾತಿ ಬಿಲ್, ಹಾಲಿನ ದರ ಏರಿಕೆ ಹೀಗೆ ಅನೇಕ ನಿರ್ಧಾರಗಳು ಕೇವಲ ವಿಪಕ್ಷ ಅಷ್ಟೆ ಅಲ್ಲ ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿತ್ತು. ಈಗ ಮತ್ತೊಂದು ನಿರ್ಧಾರವನ್ನ ಸರ್ಕಾರ ತೆಗೆದುಕೊಂಡಿದೆ. ಇದಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋದೆ ಸದ್ಯದ ಕುತೂಹಲ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಕ್ತಿಸೌಧದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಲೈಟಿಂಗ್ಸ್, ಪುಸ್ತಕ ಮೇಳ ಹೀಗೆ ಅನೇಕ ಹೊಸ ಹೊಸ ಬದಲಾವಣೆಯ ಗಾಳಿ ಬೀಸುತ್ತಲೇ ಇದೆ. ಅಷ್ಟೆ ಅಲ್ಲ ಹಿಂದೆಂದೂ ಆಗದ ರೀತಿಯಲ್ಲಿ ಸದನಗಳಿಗೆ ಸಾರ್ವಜನಿಕರ ಪ್ರವೇಶ ಕೂಡ ಆಗಿತ್ತು. ಇದಕ್ಕೆ ಕಾರಣ ಸಭಾಧ್ಯಕ್ಷರಾದ ಯುಟಿ ಖಾದರ್. ಇದರಲ್ಲಿ ಕೆಲವು ವಿರೋಧಕ್ಕೆ ಕಾರಣವಾಗಿದ್ರೆ, ಮತ್ತೊಂದಿಷ್ಟು ಯಶಸ್ವಿ ಕೂಡ ಆಗಿದೆ. ಉದಾಹರಣೆ ಪುಸ್ತಕ ಮೇಳ. ಈಗ ಮತ್ತೊಂದು ಮಹತ್ವದ ಕಾರ್ಯಕ್ಕೆ ರಾಜ್ಯ ಸರ್ಕಾರ ನಾಂದಿಯಾಡಿದೆ. ವಿಧಾನ ಸೌಧಕ್ಕೆ ಸಾರ್ವಜನಿಕರನ್ನ ಬಿಡಲು ಮುಂದಾಗಿರೋ ಸರ್ಕಾರ ಹಣ ಕ್ರೂಢೀಕರಣ ಮಾಡಲು ಮಹತ್ವದ ಅದೇಶ ಹೊರಡಿಸಿದೆ.

ಹೌದು, ಇನ್ಮುಂದೆ ವಿದಾನಸೌಧಕ್ಕೆ ಜನ ಹೋಗ್ಬೇಕು ಅಂದರೆ ದುಡ್ಡು ಕೊಡಬೇಕಂತೆ. ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಿರೋ ಸರ್ಕಾರ ಫೀಸ್ ಸಹ ಫಿಕ್ಸ್ ಮಾಡ್ತಿದೆ. ಈ ಸಾರ್ವಜನಿಕರು ವಿಧಾನಸೌಧ ನೋಡಲು ಫೀಸ್ ಜೊತೆಗೆ ಒಂದಷ್ಟು ಷರತ್ತು ಕೂಡ ಫಾಲೋ ಮಾಡಬೇಕು. ವಿಧಾನಸೌಧ ವೀಕ್ಷಣೆಗೆ ಗೈಡೆಡ್ ಟೂರ್ ವ್ಯವಸ್ಥೆ ಜಾರಿ ಮಾಡಿರೋ ರಾಜ್ಯ ಸರ್ಕಾರ ಇದೀಗ ಮಹತ್ವದ ಆದೇಶ ಹೊರಡಿಸಿದೆ.
ವಿಧಾನಸೌಧವನ್ನ ಪ್ರವಾಸಿ ತಾಣವಾಗಿ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಗೈಡ್ ಟೂರ್ ಮಾಡಲು ಅವಕಾಶ ಕೋರಿಕೆ ಸಲ್ಲಿಸಲಾಗಿತ್ತು. ಪ್ರವಾಸೋದ್ಯಮ ಇಲಾಖೆಯ ಈ ಕೋರಿಕೆಯನ್ನ ಪುರಸ್ಕರಿಸಿರೋ ಸರ್ಕಾರ ಷರತ್ತು ಬದ್ಧವಾಗಿ ಅನುಮತಿ ನೀಡಿದೆ ರಾಜ್ಯ ಸರ್ಕಾರ. 30ಜನರ ತಂಡದೊಂದಿಗೆ ವೀಕ್ಷಣೆಗೆ ಅವಕಾಶ ಕೊಡಲಾಗುತ್ತದೆ. ಆನ್ ಲೈನ್ ಮುಖಾಂತರ ಟಿಕೆಟ್ ಬುಕ್ ಮಾಡಿಕೊಳ್ಳಬೇಕು. ಒಳಗೆ ಪ್ರವೇಶ ದರವನ್ನ ನೀಡಿ ಬರಬೇಕು. ಪೊಲೀಸ್ ನೀಡೋ ಭದ್ರತಾ ಸೂಚನೆ ಪಾಲಿಸಬೇಕು. ಅಧಿಕೃತ ದಾಖಲೆಯನ್ನು ನೀಡಿ ಪ್ರವೇಶ ಮಾಡಬೇಕು. ವಿಧಾನಸೌಧದ ಕಟ್ಟಡ, ಆವರಣಕ್ಕೆ ಯಾವುದೇ ಹಾನಿಯಾಗದಂತೆ ಸಹಕರಿಸಬೇಕು. ಹೀಗೆ ಕೆಲ ಷರತ್ತುಗಳನ್ನ ಹಾಕಿ ಇದೀಗ ಸರ್ಕಾರ ಆದೇಶ ಮಾಡಿದೆ.
📄 Vidhansaudha Guide Tour (PDF)
ಸಾರ್ವಜನಿಕರ ದೃಷ್ಟಿಯಿಂದ ಅಥವಾ ಗೈಡೆಡ್ ಟೂರ್ ಅನ್ನೋ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಆದರೆ ಭದ್ರತೆ ದೃಷ್ಟಿಯಿಂದ ಒಂದಷ್ಟು ಆತಂಕ ಕೂಡ ಇದೆ. ಇದರ ಜೊತೆಗೆ ಸರ್ಕಾರದ ಈ
ಆದೇಶವನ್ನ ಈಗಾಗಲೇ ವಿಪಕ್ಷ ಲೇವಡಿ ಮಾಡಲು ಮುಂದಾಗಿದೆ. ಗ್ಯಾರಂಟಿ ಹಣವನ್ನ ಕಲೆಕ್ಟ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಟೀಕೆ ಮಾಡುತ್ತಿದೆ.
ಒಟ್ಟಿನ್ನಲ್ಲಿ ಇಷ್ಟು ದಿನ ವಿಧಾನಸೌಧ ಮುಂದೆ ನಿಂತ್ಕೊಂಡು ಸೆಲ್ಪಿ ಹೊಡೆದುಕೊಳ್ತಿದ್ದ ಜನ , ಇದೀಗ ರಜೆ ದಿನ ಒಳಗಡೆ ಹೋಗಿ ನೇರವಾಗಿ ಸೆಲ್ಪಿ ಎತ್ಕೊಂಡು ಖುಷಿಪಡಬಹುದು. ಸದ್ಯ ಈ ಆದೇಶ ಇದೀಗ ಕೆಲ ನಾಯಕರು ವಿರೋಧಕ್ಕೂ ಕಾರಣವಾಗೋದ್ರಿಂದ ಸರ್ಕಾರ ಇದನ್ನ ಹೇಗೆ ನಿಭಾಯಿಸುತ್ತೋ ಕಾದು ನೋಡಬೇಕು.