ವಿಷ್ಣುವರ್ಧನ್ ಅವರು ನಮ್ಮ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಡಾ. ರಾಜ್ ಕುಮಾರ್ ಅವರ ನಂತರ ಜನರಲ್ಲಿ ಅಷ್ಟು ಪ್ರೀತಿ, ಅಭಿಮಾನ ಗಳಿಸಿಕೊಂಡವರು ವಿಷ್ಣುವರ್ಧನ್. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ವಿಷ್ಣುದಾದ ಎಂದೇ ಕರೆಯುತ್ತಾರೆ. ಒಬ್ಬ ನಟನಾಗಿ ಮಾತ್ರವಲ್ಲ, ಒಬ್ಬ ವ್ಯಕ್ತಿಯಾಗಿ ವಿಷ್ಣುವರ್ಧನ್ ಅವರು ಎಲ್ಲರ ಮೆಚ್ಚುಗೆ ಗಳಿಸಿದವರು. ಭಾರತ ಚಿತ್ರರಂಗಕ್ಕೆ ಇವರು ದೊಡ್ಡ ಕೊಡುಗೆ. ಇವರನ್ನು ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದೇ ಕರೆಯುತ್ತಾರೆ. ವಿಷ್ಣುವರ್ಧನ್ ಅವರ ಮೊದಲ ಸಿನಿಮಾ ನಾಗರಹಾವು ಹಾಗೂ ಕೊನೆಯ ಸಿನಿಮಾ ಆಪ್ತರಕ್ಷಕ, ಈ ಎರಡು ಸಿನಿಮಾಗಳಲ್ಲಿ ಒಂದು ಮುಖ್ಯವಾದ ಅಂಶವಿದೆ. ಇದನ್ನು ಹೆಚ್ಚು ಜನರು ಗಮನಿಸಿರುವುದಿಲ್ಲ. ಇದು ಹಾವಿನ ಕುರಿತಂತೆ ಒಂದು ಸುದ್ದಿ. ಇದರ ಬಗ್ಗೆ ಸಂಗೀತ ನಿರ್ದೇಶಕ ಗುರುಕಿರಣ್ ಅವರು ತಿಳಿಸಿದ್ದಾರೆ..

ಗುರುಕಿರಣ್ ಅವರು ವಿಷ್ಣುವರ್ಧನ್ ಅವರ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು ಆಪ್ತಮಿತ್ರ ಮತ್ತು ಆಪ್ತರಕ್ಷಕ. ಈ ಎರಡು ಸಿನಿಮಾಗಳು ಕೂಡ ವಿಷ್ಣುವರ್ಧನ್ ಅವರ ಕೆರಿಯರ್ ನಲ್ಲಿ ಬಹಳ ಮುಖ್ಯವಾದ ಸಿನಿಮಾ. ಆಪ್ತಮಿತ್ರ ಆಲ್ ಟೈಮ್ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡ ಸಿನಿಮಾ, ಇನ್ನು ಆಪ್ತರಕ್ಷಕ ವಿಷ್ಣುವರ್ಧನ್ ಅವರ ಕೊನೆಯ ಸಿನಿಮಾ. ಈ ಎರಡು ಸಿನಿಮಾಗಳು ಹಿಟ್ ಆಗಿದ್ದು ನಿಜ, ಆದರೆ ಎರಡು ಸಿನಿಮಾ ಬಿಡುಗಡೆಗಿಂತ ಮೊದಲು ನಡೆದ ದುರ್ಘಟನೆಗಳಿಂದ ನಾವ್ಯಾರು ಆ ನೋವಿನ ಸಂಗತಿಗಳನ್ನು ಮರೆಯದ ಹಾಗೆ ಮಾಡಿಬಿಟ್ಟಿದೆ. ಆಪ್ತಮಿತ್ರ ಬಿಡುಗಡೆಗಿಂತ ಮೊದಲು ಸೌಂದರ್ಯ ಅವರು ತೀರಿಹೋದರು. ಈ ನೋವನ್ನು ಕರ್ನಾಟಕದ ಜನತೆ ಇನ್ನು ಕೂಡ ಮರೆತಿಲ್ಲ..

ಸೌಂದರ್ಯ ಅವರು ಆ ಘಟನೆಯಲ್ಲಿ ಹೋದದ್ದು, 21 ವರ್ಷಗಳ ಹಿಂದೆ. ಆದರೆ ಇವತ್ತಿಗೂ ಕೂಡ ಆ ಘಟನೆ ನೆನೆದರೆ ದುಃಖ ಆಗುತ್ತದೆ. ಇನ್ನು ಆಪ್ತರಕ್ಷಕ ಸಿನಿಮಾ ಬಿಡುಗಡೆಗಿಂತ ಮೊದಲು ವಿಷ್ಣುದಾದ ತೀರಿಹೋದರು. ಇದು ಎಲ್ಲಾ ವಿಷ್ಣುದಾದ ಅಭಿಮಾನಿಗಳಿಗೆ ಬಹಳ ನೋವು ನೀಡಿದ ವಿಷಯ. ವಿಷ್ಣುದಾದ ಅವರು ಅಷ್ಟು ಬೇಗ ವಿಧಿವಶರಾಗುತ್ತಾರೆ ಎಂದು ಯಾರು ಕೂಡ ನೆನೆಸಿರಲಿಲ್ಲ. ಸಿನಿಮಾ ಬಿಡುಗಡೆ ಆದಮೇಲೆ ದಾದಾ ಅವರ ನೆನಪಲ್ಲೇ, ಕಣ್ಣೀರು ಹಾಕುತ್ತಲೇ ಎಲ್ಲರೂ ಸಿನಿಮಾ ನೋಡಬೇಕಾಯಿತು. ಆಪ್ತಮಿತ್ರ ಹಾಗೂ ಆಪ್ತರಕ್ಷಕ ಎರಡು ಸಿನಿಮಾಗೆ ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರು ಇಬ್ಬರು ಕೂಡ ಒಬ್ಬರೇ, ಅದು ಗುರುಕಿರಣ್ ಅವರು. ಎರಡು ಸಿನಿಮಾಗಳಿಗೆ ಅದ್ಭುತವಾದ ಸಂಗೀತ ನೀಡಿದ್ದಾರೆ. ಇವತ್ತಿಗೂ ಹಾಡುಗಳನ್ನು ಮರೆಯುವ ಹಾಗಿಲ್ಲ.

ಗುರುಕಿರಣ್ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಮೊದಲ ಸಿನಿಮಾ ಹಾಗೂ ಕೊನೆಯ ಸಿನಿಮಾದಲ್ಲಿ ಹಾವಿನ ದೃಶ್ಯದಲ್ಲಿ ಇರುವ ಕಾಕತಾಳೀಯ ವಿಚಾರದ ಬಗ್ಗೆ ಗುರುಕಿರಣ್ ಅವರು ತಿಳಿಸಿದ್ದಾರೆ. ಗುರುಕಿರಣ್ ಅವರು ಹೇಳಿರುವ ಮಾತಿನ ಅನುಸಾರ, ಆಪ್ತಮಿತ್ರ ಸಮಯದ ವೇಳೆ ಅವರಿಗೂ ವಿಷ್ಣು ಸರ್ ಗು ಅಷ್ಟೇನು ಒಡನಾಟ ಇರಲಿಲ್ಲ. ಆದರೆ ಆಪ್ತರಕ್ಷಕ ಸಿನಿಮಾ ವೇಳೆ ಇಬ್ಬರಿಗೂ ಒಳ್ಳೆಯ ಬಾಂಧವ್ಯ ಇತ್ತಂತೆ. ಸಿನಿಮಾ ಬಗ್ಗೆ ಹಲವು ವಿಚಾರಗಳನ್ನ ಇಬ್ಬರು ಮಾತನಾಡುತ್ತಾ ಇದ್ದರಂತೆ. ಆಪ್ತರಕ್ಷಕ ಸಿನಿಮಾ ವೇಳೆ, ಒಂದು ಮೂರು ದೃಶ್ಯಗಳು ವಿಷ್ಣುದಾದ ಅವರಿಗೆ ಇಷ್ಟವಾಗದೆ, ಇದೆಲ್ಲಾ ಬೇಕಿತ್ತಾ ಅನ್ನಿಸುತ್ತಿದೆ, ಆದರೆ ಅವರು ಡೈರೆಕ್ಟರ್ ಅವರಿಗೆ ಏನು ಬೇಕು ಅಂತ ಗೊತ್ತಿರುತ್ತದೆ ಎಂದು ಹೇಳಿದ್ದರಂತೆ.

ಹಾಗೆಯೇ ಆಪ್ತರಕ್ಷಕ ಸಿನಿಮಾಗೆ 3 ಸ್ಟೋರಿ ಲೈನ್ ಗಳು ಇದ್ದವಂತೆ, ವಿಷ್ಣುವರ್ಧನ್ ಅವರಿಗೆ 2 ಸ್ಟೋರಿ ಲೈನ್ ಗಳು ಓಕೆ ಆಗಲಿಲ್ಲ, ಮೂರನೆಯದು ಓಕೆ ಆಯಿತು. ಗುರುಕಿರಣ್ ಅವರಿಗೆ ಕೂಡ ಅದೇ ಅಭಿಪ್ರಾಯ ಇತ್ತಂತೆ. ಮೊದಲ ಎರಡು ಸ್ಟೋರಿ ಲೈನ್ ಗಳು ಅಷ್ಟೇನು ಇಂಪ್ರೆಸಿವ್ ಆಗಿಲ್ಲ, ಮೂರನೆಯ ಸ್ಟೋರಿ ಲೈನ್ ಚೆನ್ನಾಗಿದೆ ಎಂದು ಅನ್ನಿಸಿತ್ತಂತೆ. ಇದೆಲ್ಲವೂ ಒಂದು ಕಡೆಯಾದರೆ, ವಿಷ್ಣುವರ್ಧನ್ ಅವರ ಮೊದಲ ಸಿನಿಮಾ ಮತ್ತು ಕೊನೆಯ ಸಿನಿಮಾ ಎರಡರಲ್ಲೂ ಒಂದು ಘಟನೆ ಕಾಮನ್ ಆಗಿ ನಡೆದಿದೆ. ಆ ಘಟನೆ ಬಗ್ಗೆ ಸಹ ಗುರುಕಿರಣ್ ಅವರು ಹೇಳಿದ್ದು, ಅದನ್ನು ಕೇಳಿದರೆ ನಮಗೆ ಆಶ್ಚರ್ಯ ಅನ್ನಿಸುವುದು ಖಂಡಿತ. ಈ ಎರಡು ಸಿನಿಮಾಗಳಲ್ಲ ಹಾವಿನ ಜೊತೆಗೆ ಒಂದು ಸಂಬಂಧ ಇರುವುದು ಗೊತ್ತಾಗುತ್ತದೆ. ನೀವು ಎರಡು ಸಿನಿಮಾಗಳನ್ನು ನೋಡಿದ್ದರೆ, ನಿಮಗೆ ಅರ್ಥವಾಗುತ್ತದೆ.
ವಿಷ್ಣು ಸರ್ ಅವರ ನಾಗರಹಾವು ಸಿನಿಮಾದಲ್ಲಿ ಮೊದಲ ದೃಶ್ಯ ಒಂದು ಹಾವು ಹುಟ್ಟದಿಂದ ಹೊರಗೆ ಬರುವುದು, ವಿಷ್ಣುದಾದ ಅವರನ್ನು ನಂತರ ತೋರಿಸಲಾಗುತ್ತದೆ. ಇನ್ನು ಕೊನೆಯ ಸಿನಿಮಾ ಆಪ್ತರಕ್ಷಕದ ಕೊನೆಯ ದೃಶ್ಯದಲ್ಲಿ ಹಾವು ಮಣ್ಣಿನ ಒಳಗೆ ಹೋಗುವಂಥ ಒಂದು ಶಾಟ್ ಇದೆ. ಇದು ಎಂಥಾ ವಿಪರ್ಯಾಸ ಅಥವಾ ಕಾಕತಾಳೀಯ ನೋಡಿ, ಇದನ್ನ ಏನಂಥ ಕರೆಯಬೇಕು ಎಂದು ಕೂಡ ಗೊತ್ತಾಗುವುದಿಲ್ಲ. ಎಲ್ಲವೂ ವಿಧಿ ಲಿಖಿತ ಇರಬಹುದಾ ಅನ್ನಿಸುತ್ತದೆ ಎಂದು ಗುರುಕಿರಣ್ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ, ಜೀವನದಲ್ಲಿ ನಡೆಯುವ ಪ್ರತಿ ಘಟನೆಗೂ ಒಂದು ಅರ್ಥ ಇರಬಹುದು ಎಂದು ಅನ್ನಿಸುತ್ತದೆ. ಆದರೂ ನಮ್ಮ ವಿಷ್ಣು ಸರ್ ಇನ್ನಷ್ಟು ದಿವಸ ನಮ್ಮ ಜೊತೆಯಲ್ಲಿ ಇರಬೇಕಿತ್ತು.

ಇನ್ನು ಆಪ್ತಮಿತ್ರ ಹಾಗೂ ಆಪ್ತರಕ್ಷಕ ಎರಡು ಸಿನಿಮಾಗಳು ಬಿಡುಗಡೆ ಅಗುವುದಕ್ಕಿಂತ ಮೊದಲು ಈ ರೀತಿ ಆಗಿದ್ದಕ್ಕೆ, ಇದರ ಹಿಂದೆ ಬೇರೆ ಏನೋ ಇರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ನಾಗವಲ್ಲಿ ಇದಕ್ಕೆಲ್ಲಾ ಕಾರಣ ಇರಬಹುದಾ ಎನ್ನುವ ಅನುಮಾನ ಕೂಡ ಶುರುವಾಗಿತ್ತು. ಇದರ ಬಗ್ಗೆ ಭಾರಿ ಚರ್ಚೆಗಳು ಸಹ ನಡೆದಿದ್ದಿದೆ. ಇನ್ನು ತಮಿಳು ರಿಮೇಕ್ ನಲ್ಲಿ ರಜನಿಕಾಂತ್ ಅವರು ನಟಿಸಿದಾಗ ವಿಶೇಷವಾಗಿ ಒಂದು ಹೋಮ ಮಾಡಿಸಿದ್ದರು ಎಂದು ಹೇಳಲಾಗುತ್ತಿತ್ತು. ಎಷ್ಟೇ ಹುಷಾರಾಗಿ ಇದ್ದರು ಸಹ, ವಿಷ್ಣುವರ್ಧನ್ ಅವರು ಮತ್ತು ಸೌಂದರ್ಯ ಅವರನ್ನು ಕಳೆದುಕೊಳ್ಳುವ ಹಾಗೆ ಆಯಿತು. ಈ ವಿಚಾರ ನಮಗೆಲ್ಲ ಇನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟ ಆಗುವಂಥದ್ದು. ಆದರೆ ಅವರ ನೆನಪುಗಳು ಸದಾ ನಮ್ಮ ಜೊತೆಗೆ ಇರುತ್ತದೆ.