ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇವರು ಇತ್ತೀಚೆಗೆ ವಿಚ್ಛೇದನದ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದ್ದಾರೆ. ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ, ಕಳೆದ ವರ್ಷ ವಿಚ್ಛೇದನ ನೀಡಿದರು. ಇಬ್ಬರು ಒಪ್ಪಿಕೊಂಡು, ಜೊತೆಯಲ್ಲಿ ಇರೋದಕ್ಕೆ ಸಾಧ್ಯ ಆಗೋದಿಲ್ಲ ಎಂದು ನಿರ್ಧಾರ ಮಾಡಿದ ನಂತರವೇ ವಿಚ್ಛೇದನ ಪಡೆದಿದ್ದು. ಆದರೆ ಕೆಲವು ದಿನಗಳಿಂದ ಈ ಜೋಡಿ ಬಗ್ಗೆ ಬೇರೆಯದೇ ಸುದ್ದಿ ಕೇಳಿಬರುತ್ತಿದೆ. ಚಂದನ್ ಹಾಗೂ ನಿವೇದಿತಾ ದೂರ ಆಗಿದ್ದಾಯ್ತು, ಚಂದನ್ ಶೆಟ್ಟಿ ಈಗ ನಟಿ ಸಂಜನಾ ಆನಂದ್ ಅವರೊಡನೆ ಮದುವೆ ಆಗುತ್ತಾರೆ ಎನ್ನುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಯಿತು. ಇದಕ್ಕೆಲ್ಲಾ ಈಗ ಚಂದನ್ ಶೆಟ್ಟಿ ಹಾಗೂ ಸಂಜನಾ ಆನಂದ್ ಇಬ್ಬರು ಸ್ಪಷ್ಟನೆ ನೀಡಿದ್ದಾರೆ..

ಈಗಿನ ಸೋಷಿಯಲ್ ಮೀಡಿಯಾ ಯುಗ ಈ ರೀತಿ ಆಗಿದೆ. ಒಂದು ಸೆಲೆಬ್ರಿಟಿ ಜೋಡಿ ವಿಚ್ಛೇದನ ಪಡೆಯುತ್ತಾರೆ ಅಂದ್ರೆ, ಅವರ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಹಬ್ಬಿಸುವುದು, ಇನ್ಯಾರದ್ದೋ ಜೊತೆಗೆ ಸಂಬಂಧ ಇದೆ ಅವರಿಬ್ಬರು ಮದುವೆ ಆಗುತ್ತಾರೆ ಎಂದು ಹೇಳುವುದು ಇದೆಲ್ಲವೂ ತುಂಬಾ ಕಾಮನ್ ಆಗಿದೆ. ಕೆಲವು ಸೆಲೆಬ್ರಿಟಿಗಳಿಗೆ ಇದರಿಂದ ತೊಂದರೆ ಆಗುತ್ತಿರುವುದು ನಿಜ. ಜನರು ಸುಮ್ಮನೆ ಗಾಸಿಪ್ ಹಬ್ಬಿಸಿ ಬಿಡುತ್ತಾರೆ. ಆದರೆ ಅವರ ಫ್ಯಾಮಿಲಿ ವಲಯದಲ್ಲಿ, ಸ್ನೇಹಿತರ ವಲಯದಲ್ಲಿ ಎಲ್ಲಾ ಕಡೆ ಇದೇ ವಿಚಾರ ಚರ್ಚೆ ಆಗೋ ಮೂಲಕ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಸೂಕ್ಷ್ಮ ವಿಚಾರ ಈ ರೀತಿಯ ಸುದ್ದಿಗಳನ್ನು ಹಬ್ಬಿಸುವವರಿಗೆ ಗೊತ್ತಿರುವುದಿಲ್ಲ.
ಚಂದನ್ ಶೆಟ್ಟಿ ಹಾಗೂ ಸಂಜನಾ ಆನಂದ್ ಅವರ ವಿಚಾರದಲ್ಲಿ ಸಹ ಹೀಗೆ ಆಗಿದೆ. ಇವರಿಬ್ಬರು ಕಾಣಿಸಿಕೊಂಡಿದ್ದು ಒಂದು ಹಾಡಿನಲ್ಲಿ, ಆದರೆ ಇಬ್ಬರು ಮದುವೆ ಆಗ್ತಾರೆ, ಇಬ್ಬರು ಪ್ರೀತಿ ಮಾಡ್ತಿದ್ದಾರೆ ಎನ್ನುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಯಿತು. ಇದರಿಂದ ಇಬ್ಬರ ಮನೆಯಲ್ಲಿ ಸಹ ತೊಂದರೆ ಆಗಿದೆ. ಫ್ಯಾಮಿಲಿಗಳಲ್ಲಿ ಮದುವೆ ಬಗ್ಗೆ ಸಹ ಪ್ರೆಶರ್ ಬಂದಿದೆಯಂತೆ. ಈ ವಿಚಾರವನ್ನು ಇಬ್ಬರು ಕೂಡ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ಸಂಜನಾ ಆನಂದ್ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವುದು ಒಂದು ಹಾಡಿನಲ್ಲಿ, ಇದು ಚಂದನ್ ಶೆಟ್ಟಿ ಅವರು ಹೀರೋ ಆಗಿ ನಟಿಸಿರುವ ಸೂತ್ರಧಾರ ಸಿನಿಮಾದ ಹಾಡು. ಈ ಸಿನಿಮಾ ಮೇ 9ರಂದು ತೆರೆ ಕಾಣಲಿದೆ. ಸಿನಿಮಾಗೆ ಸಂಬಂಧ ಪಟ್ಟ ಹಾಗೆ ಒಂದು ಪ್ರೆಸ್ ಮೀಟ್ ನಡೆಸಿದ್ದು, ಅದರಲ್ಲಿ ಇಬ್ಬರು ಕೂಡ ಈ ವಿಚಾರದ ಬಗ್ಗೆ ಮಾತನಾಡಿ, ಸ್ಪಷ್ಟನೆ ನೀಡಿದ್ದಾರೆ..

ಸೂತ್ರಧಾರ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವ ಹಾಡು ಡ್ಯಾಶ್. ಈ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಜನರಿಗೆ ಇಷ್ಟವಾಗಿದೆ. ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಇದರಿಂದಲೇ ಎಲ್ಲರೂ ಕೂಡ ಚಂದನ್ ಶೆಟ್ಟಿ ಸಂಜನಾ ಆನಂದ್ ಮದುವೆ ಆಗ್ತಾರೆ ಎನ್ನುವ ಸುದ್ದಿ ವೈರಲ್ ಆಯಿತು. ಇದಕ್ಕೆ ಸ್ಪಷ್ಟನೆ ಇಷ್ಟು ದಿವಸ ಸಿಕ್ಕಿರಲಿಲ್ಲ. ಚಂದನ್ ಶೆಟ್ಟಿ ಅವರು ಪ್ರೆಸ್ ಮೀಟ್ ನಲ್ಲಿ ಮಾತನಾಡಿ, “ನನ್ನ ಸಿನಿಮಾ ಸೂತ್ರಧಾರ ಮೇ 9ರಂದು ರಿಲೀಸ್ ಆಗಲಿದೆ, ಸಂಜನಾ ಆನಂದ್ ಜೊತೆಗೆ ಮಾಡಿರೋ ಡ್ಯಾಶ್ ಹಾಡು ಬಿಡುಗಡೆಯಾಗಿ, ಜನರಿಗೆ ಬಹಳ ಇಷ್ಟವಾಗಿದೆ. ಹಾಡಲ್ಲಿ ಸಂಜನಾ ಅವರು ಬಹಳ ಮುದ್ದಾಗಿ ಕಾಣಿಸ್ತಾರೆ. ಸಂಜನಾ ಆನಂದ್ ಜೊತೆಗೆ ಒಂದು ಹಾಡು ಮಾಡಿದ್ದಕ್ಕೆ ಏನೇನೋ ಆಗೋಯ್ತು.

ಇದುವರೆಗೂ ನಾವು ಎಲ್ಲಿಯೂ ಸ್ಟೇಜ್ ಮೇಲೆ ಕಾಣಿಸಿಕೊಂಡಿಲ್ಲ. ಸಂಜನಾ ಜೊತೆ ನನ್ನ ಮದುವೆ ಅನ್ನೋ ಸುದ್ದಿ ಮಾಡಿ, ವೈರಲ್ ಮಾಡಿಬಿಟ್ಟರು. ನನ್ಗೆ ಗೊತ್ತಿರೋರು ಒಬ್ಬರು ಸಂಜನಾ ಆನಂದ್ ಜೊತೆಗೆ ನಿನ್ನ ಮದುವೆ ಅಂತೆ ಎಂದಿದ್ದರು. ನನಗೆ ಗೊತ್ತಿಲ್ಲದ ವಿಷಯ ಬೇರೆ ಎಲ್ಲರಿಗೂ ಕೂಡ ಗೊತ್ತಾಗಿತ್ತು..” ಎಂದು ಹೇಳಿದ್ದಾರೆ ಚಂದನ್ ಶೆಟ್ಟಿ ಅವರು. ಈ ಮೂಲಕ ಚಂದನ್ ಅವರಿಂದ ಈ ವಿಚಾರಕ್ಕೆ ಸ್ಪಷ್ಟನೆ ಸಿಕ್ಕಿತು. ಇನ್ನು ಸಂಜನಾ ಆನಂದ್ ಅವರು ಸಹ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. “ಚಂದನ್ ಶೆಟ್ಟಿ ಅವರ ಜೊತೆಗೆ ಹಾಡು ಮಾಡಿದ್ದಕ್ಕೆ ಇದೆಲ್ಲವನ್ನು ಹೇಳಿಬಿಟ್ಟರು. ಇದರಿಂದ ಮನೆಯಲ್ಲಿ ಕೂಡ ಮದುವೆ ವಿಚಾರಕ್ಕೆ ಪ್ರೆಶರ್ ಆಗಿತ್ತು. ಚಂದನ್ ಶೆಟ್ಟಿ ನನಗೆ ತುಂಬಾ ಒಳ್ಳೆ ಫ್ರೆಂಡ್ ಅದಕ್ಕಿಂತ ಹೆಚ್ಚಾಗಿ ಅಣ್ಣನ ಹಾಗೆ..” ಎಂದು ಹೇಳೋ ಮೂಲಕ ಸಂಜನಾ ಆನಂದ್ ಅವರು ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ವಿಚಾರಗಳನ್ನು ಹಬ್ಬಿಸಿ, ಇಬ್ಬರು ಕಲಾವಿದರಿಗೆ ತೊಂದರೆ ಆಗುವ ಹಾಗೆ ಮಾಡುವುದು ಸರಿಯಲ್ಲ. ಚಂದನ್ ಶೆಟ್ಟಿ ಹಾಗೂ ಸಂಜನಾ ಆನಂದ್ ಇಬ್ಬರು ಕೂಡ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಜನರಿಗೆ ಈಗ ಸುಮ್ಮನಾಗುವ ಸಮಯ ಬಂದಿದೆ. ಇನ್ನು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾದರು. ಇಬ್ಬರು ಬಿಗ್ ಬಾಸ್ ನಲ್ಲಿ ಭೇಟಿಯಾಗಿ, ಅಲ್ಲಿಂದಲೇ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅಲ್ಲಿಂದ ಹೊರಗಡೆ ಬಂದ ನಂತರ ಇಬ್ಬರು ಭೇಟಿ ಮಾಡುವುದಕ್ಕೆ ಶುರು ಮಾಡಿ, ಇಬ್ಬರ ನಡುವೆ ಪ್ರೀತಿ ಶುರು ಮಾಡಿ, ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿ ಬಹಳ ಚೆನ್ನಾಗಿಯು ಇದ್ದರು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು.
ಎಲ್ಲಾ ಚೆನ್ನಾಗಿದೆ, ಇಬ್ಬರು ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುವ ವೇಳೆಗೆ ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಯಿತು. ಕೊನೆಗೆ ಇಬ್ಬರು ಕೂಡ ಜೊತೆಯಾಗಿಯೇ ಬಂದು ವಿಚ್ಛೇದನ ಪಡೆದರು. ಇತ್ತೀಚೆಗೆ ಶೂಟಿಂಗ್ ನಲ್ಲಿ ಸಹ ಜೊತಯಾಗಿ ಭಾಗಿಯಾದರು. ಶೂಟಿಂಗ್ ವಿಡಿಯೋಗಳು ವೈರಲ್ ಆಗಿ, ಇಬ್ಬರು ಮತ್ತೆ ಜೊತೆಯಾಗಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಯಿತು. ಆದರೆ ಇಬ್ಬರು ಒಂದಾಗುವ ಸೂಚನೆ ಇಲ್ಲ, ಇದು ಶೂಟಿಂಗ್ ಅಷ್ಟೇ. ಇಬ್ಬರು ಶೂಟಿಂಗ್ ನಲ್ಲಿ ಮಾತ್ರ ಇದ್ದಿದ್ದು, ಮತ್ತೆ ಒಂದಾಗುವುದಿಲ್ಲ ಎಂದು ಶೂಟಿಂಗ್ ನಂತರ ನಡೆದ ಪ್ರೆಸ್ ಮೀಟ್ ನಲ್ಲಿ ನಿವೇದಿತಾ ಸ್ಪಷ್ಟನೆ ಕೊಟ್ಟರು.