ಬಿಜೆಪಿ ಹಾಗೂ ಕುಮಾರಸ್ವಾಮಿ ನಡುವೆ ಎಲ್ಲವೂ ಸರಿ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಹೋಗಿದ್ದ ಉಭಯ ನಾಯಕರಿಗೆ ಈಗೇನಾಯ್ತು ಅನ್ನೋ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಪ್ರಾರಂಭವಾಗಿದೆ. ಬಿಜೆಪಿಗೆ ಲಾಭ ಮಾಡಿಕೊಡಲು ನಾನ್ಯಾಕೆ ಶ್ರಮ ಹಾಕಲಿ ಅನ್ನೋ ಮನಸ್ಥಿತಿಗೇನಾದ್ರೂ ಕುಮಾರಸ್ವಾಮಿ ಬಂದಿದ್ದಾರೆ ಅನ್ನೋದು ಕೂಡ ಚರ್ಚೆ ಹಂತದಲ್ಲಿ ಇರೋ ವಿಚಾರ. ಬಿಜೆಪಿಯಲ್ಲಿ ನಡೆಯುತ್ತಿರೋ ಕಿತ್ತಾಟಕ್ಕೂ ಇತ್ತ ಕುಮಾರಸ್ವಾಮಿ ಅಂತರ ಕಾಯ್ದುಕೊಳ್ಳೋದಕ್ಕೂ ಸಂಬಂಧ ಇದ್ಯಾ ಅನ್ನೋ ಪ್ರಶ್ನೆ ಕೂಡ ಮೂಡಿದೆ.
ಮೊದ ಮೊದಲು ಅಕ್ಕ ಬುಕ್ಕರಂತಿದ್ದ ವಿಜಯೇಂದ್ರ ಕುಮಾರಸ್ವಾಮಿ ಈಗ ನಾನೊಂದು ತೀರ ನೀನೊಂದು ತೀರ ಎನ್ನುವಂತಾಗಿದ್ದಾರೆ. ಸರಿ ಇದ್ದಂತಹ ಸಂಬಂಧ ದೂರ ದೂರ ಆಗಲು ಕಾರಣ ಏನು ಅನ್ನೋದೆ ನಿಗೂಢ. ಮೊದ ಮೊದಲು ಬಿಜೆಪಿ ಆತಂರಿಕ ಕಿತ್ತಾಟದ ಕುರಿತು ಹೈ ಕಮಾಂಡ್ ನಾಯಕರು ಕುಮಾರಸ್ವಾಮಿ ಬಳಿ ಮಾಹಿತಿ ಕೇಳಿದ್ದರಂತೆ. ಅಷ್ಟೆರ ಮಟ್ಟಿಗೆ ಕುಮಾರಸ್ವಾಮಿ ಹೈ ಕಮಾಂಡ್ ನಾಯಕರ ಜೊತೆ ಚೆನ್ನಾಗಿದ್ದರು. ಇದೇ ಬಿಜೆಪಿ ನಾಯಕರು ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಳ್ಳೋದಕ್ಕೆ ಕಾರಣ ಎಂದೇಳುತ್ತಿದ್ದಾರೆ. ಓವರ್ ಟೇಕ್ ಮಾಡಿ ಬಿಟ್ತಾರೆನೋ ಅನ್ನೋ ಭಯ ಕೂಡ ಬಿಜೆಪಿ ನಾಯಕರಲ್ಲಿ ಇತ್ತು. ಈ ಚರ್ಚೆ ಅಥವಾ ಅನುಮಾನ ಬೆಂಗಳೂರಿನಲ್ಲಿ ಮಾತ್ರ ಇಲ್ಲ. ದೆಹಲಿ ಅಂಗಳಕ್ಕೂ ಇದು ತಲುಪಿದೆ. ಇದೇ ಇಷ್ಟೊಂದು ಚರ್ಚೆಗೆ ಕಾರಣ ಆಗಿರೋದು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ವರ್ಕ್ ಆಗಿತ್ತು. ಆಡಳಿತ ಪಕ್ಷ ಕಾಂಗ್ರೆಸ್ ಇದ್ದರೂ ಕೂಡ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲೋಕೆ ಕಾಂಗ್ರೆಸ್ ಗೆ ಆಗಿರಲಿಲ್ಲ. ಆದರೆ ಈ ರೀತಿ ಒಗ್ಗೊಟ್ಟಾಗಿ ಇದ್ದ ನಾಯಕರು ಯಾಕೆ ದೂರ ಆದ್ರೂ ಅನ್ನೋದೆ ಸದ್ಯದ ಪ್ರಶ್ನೆ. ಅಂದರೆ ಮೊದಲೆಲ್ಲಾ ಜೊತೆಯಾಗಿಯೇ ಸಾಗುತ್ತಿದ್ದ ನಾಯಕರು ಈಗ ಅವರವರ ಪಕ್ಷದ ಜೊತೆ ಮಾತ್ರ ಸಭೆ ಮಾಡಿಕೊಳ್ತಾ ಇದ್ದಾರೆ. ಕುಮಾರಸ್ವಾಮಿ ಕೂಡ ತಮ್ಮ ಪಾಡಿಗೆ ದೆಹಲಿಯಿಂದ ಬರ್ತಾರೆ, ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ, ಕಾರ್ಯಕ್ರಮ ಇದ್ದರೆ ಅಟೆಂಡ್ ಮಾಡ್ತಾರೆ ಮತ್ತೆ ದೆಹಲಿಗೆ ಹೋಗ್ತಾರೆ ಇಷ್ಟೆ ನಡೆಯುತ್ತಿದೆ.
ಆದರೆ ಇದು ಕಾಂಗ್ರೆಸ್ ನಾಯಕರ ಕಣ್ಣಿಗೆ ಬೀಳ್ತಿದೆ ಅಂತ ಗಮನಿಸಿದ ಬಿಜೆಪಿ ಹೈ ಕಮಾಂಡ್ ರಾಜ್ಯದ ನಾಯಕರಿಗೆ ಒಂದು ಸಂದೇಶ ರವಾನೆ ಮಾಡ್ತು ಎನ್ನಲಾಗಿದೆ. ಎರಡೂ ಪಕ್ಷ ಒಂದಾಗಿ ಸದನದಲ್ಲಿ ಸರ್ಕಾರವನ್ನ ಕಟ್ಟಿ ಹಾಕಿ ಅಂತ. ಈ ನಾಯಕರು ಆಗಲೇ ಮತ್ತೆ ಒಂದಾಗಿ ಮಾತನಾಡಲು ಶುರು ಮಾಡಿದರು ಮೈತ್ರಿ ನಾಯಕರು. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಇತ್ತೀಚೆಗೆ ಸರ್ಕಾರದ ವಿರುದ್ಧ ನಡೆದ ಜಂಟಿ ಪ್ರತಿಭಟನೆಗಳು. ಇತ್ತ ಇದೆಲ್ಲದರ ಮಧ್ಯೆ ಮತ್ತೊಂದು ವಿಚಾರ ಎನ್ನುವಂತೆ, ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಸಂಪರ್ಕದಲ್ಲಿ ಇದ್ದಾರಂತೆ ಕುಮಾರಸ್ವಾಮಿ. ಮುಂದೆ ಎಲ್ಲಾ ಸರಿ ಹೋಗುತ್ತೆ ಸುಮ್ಮನಿರಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ ಎನ್ನಲಾಗಿದೆ.

ಇನ್ನು ಈ ವಿಚಾರ ಹೈ ಕಮಾಂಡ್ ಗೂ ತಲುಪಿದೆ. ಹಾಗಾಗಿಯೇ ಹೈ ಕಮಾಂಡ್ ಗರಂ ಆಗಿದೆ ಎನ್ನಲಾಗಿದೆ. ಇದೆಲ್ಲರ ಮಧ್ಯೆ ಹೊಸ ವಿಚಾರ ಎಂಬಂತೆ ಡಿಕೆ ಶಿವಕುಮಾರ್ ಬಿಜೆಪಿಗೆ ಹತ್ತಿರ ಆಗ್ತಾ ಇದ್ದಾರೆ ಎಂದಾಕ್ಷಣ ಕುಮಾರಸ್ವಾಮಿಯವರನ್ನ ಬಿಜೆಪಿ ದೂರ ತಳ್ಳಿದೆ ಅನ್ನೋ ವ್ಯಾಖ್ಯಾನ ಕೂಡ ಕೇಳಿ ಬಂದಿದೆ. ಯಾವಾಗ ಕುಮಾರಸ್ವಾಮಿಯವರನ್ನ ಬಿಜೆಪಿ ದೂರ ತಳ್ಳುತ್ತಿದೆ ಅನ್ನೋದು ದೇವೇಗೌಡರು ಗೊತ್ತಾಯ್ತೋ ಆಗಲೇ ಹೊಸ ತಂತ್ರವೊಂದನ್ನ ಮಾಡಿದ್ರು ದೇವೇಗೌಡರು.
ಅನಾರೋಗ್ಯದ ನಡುವೆಯೇ ರಾಜ್ಯಸಭೆಯಲ್ಲಿ ಭಾಗಿಯಾಗಿ ಮೋದಿಯನ್ನ ಹೊಗಳಿದ್ದಾರೆ. ಇದೆಲ್ಲವೂ ಕೂಡ ಒಂದಕ್ಕೊಂದು ಸಂಬಂಧ ಇದೆ ಎನ್ನಲಾಗುತ್ತಿದೆ. ಇದರ ಮಧ್ಯೆ ಕುಮಾರಸ್ವಾಮಿ ವಿರುದ್ಧವೂ ಹೈ ಕಮಾಮಡ್ ಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಡುವೆ ಏನೂ ಸರಿ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಇದು ಹೀಗೆ ಮುಂದುವರೆದರೆ ಮುಂಬರುವ ಸ್ಥಳೀಯ ಚುನಾವಣೆಗೆ ಇದರ ಎಫೆಕ್ಟ್ ತಟ್ಟೋದು ಗ್ಯಾರಂಟಿ.