ಸಾಮಾನ್ಯವಾಗಿ ಎರಡು ಜಡೆಗಳು ಸೇರಿದ್ರೆ ಜಗಳ ಅಂತಾರೆ, ಹೆಣ್ಣುಮಕ್ಕಳ ನಡುವೆ ಹೊಟ್ಟೆಕಿಚ್ಚು ಜಾಸ್ತಿ, ಅವರುಗಳು ಜೊತೆಯಾಗಿ ಇರೋದಕ್ಕೆ ಆಗೋದಿಲ್ಲ. ಹೆಣ್ಣುಮಕ್ಕಳ ಮನಸ್ಥಿತಿ ಬೇರೆ ರೀತಿ ಇರುತ್ತದೆ, ಗಂಡು ಮಕ್ಕಳದ್ದು ಆ ರೀತಿ ಅಲ್ಲ, ಎಲ್ಲರೂ ಫ್ರೆಂಡ್ಸ್ ಆಗಿರುತ್ತಾರೆ ಅನ್ನೋ ಮಾತನ್ನ ಹಲವು ಬಾರಿ ಕೇಳಿರುತ್ತೇವೆ. ಆದರೆ ನಮ್ಮ ಚಂದನವನದ ಹಿರಿಯ ಹಾಗೂ ಕಿರಿಯ ನಟಿಯರು ಈ ಮಾತನ್ನ ಸುಳ್ಳು ಮಾಡುತ್ತಿದ್ದಾರೆ. ಇತ್ತೀಚಿನ ಹಲವು ಕಾರ್ಯಕ್ರಮಗಳಲ್ಲಿ ಚಂದನವನದ ನಟಿಮಣಿಯರನ್ನು ಜೊತೆಯಾಗಿ ಕಂಡಿದ್ದೇವೆ. ಹಿರಿಯ ನಟಿಯರು, ಕಿರಿಯ ನಟಿಯರು ಎಲ್ಲರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಸ್ಯಾಂಡಲ್ ವುಡ್ ಹೀರೋಗಳ ವಿಚಾರ ಹಾಗಲ್ಲ. ಸ್ಯಾಂಡಲ್ ವುಡ್ ಸ್ಟಾರ್ ನಟರು ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳೋದಿಲ್ಲ. ಯಾಕೆ ಹೀಗೆ? ನಟರ ನಡುವೆ ಈ ರೀತಿ ಆಗಿರೋದಾದರು ಯಾಕೆ?

ಸಿನಿಮಾ ಇಂಡಸ್ಟ್ರಿ ಅಂದರೆ ಅಲ್ಲಿ ಮೇಲ್ ಡಾಮಿನೇಷನ್ ಇರುತ್ತದೆ ಅನ್ನೋದು ಗೊತ್ತಿರುವ ವಿಷಯ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತದ ಎಲ್ಲಾ ಭಾಷೆಯ ಚಿಗ್ರರಂಗದಲ್ಲೂ ಇದೇ ರೀತಿ. ನಟರದ್ದೇ ಮೇಲುಗೈ ಇರುತ್ತದೆ. ನಟಿಯರನ್ನು ಟ್ರೀಟ್ ಮಾಡುವ ರೀತಿಯೇ ಬೇರೆ ಇರುತ್ತದೆ. ಹೀಗೆಲ್ಲಾ ಇದ್ದರೂ ಕೂಡ ಕೆಲವು ನಟಿಯರು ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ. ತಾವು ಹೀರೊಗೆ ಕಮ್ಮಿ ಇಲ್ಲ ಅನ್ನೋದನ್ನು ನಿರೂಪಿಸಿದ್ದಾರೆ. ಹೀರೋಗಳಿಗಿಂತ ಹೆಚ್ಚಿನ ಅವಾರ್ಡ್ ಗಳನ್ನು ಪಡೆದವರು, ಹೀರೋಗಿಂತ ಹೆಚ್ಚು ಕ್ರೇಜ್ ಹೊಂದಿದ್ ನಟಿಯರು ಕೂಡ ಇದ್ದಾರೆ. ನಮ್ಮ ಚಿತ್ರರಂಗ ಅದಕ್ಕೆ ಹೊರತಾಗಿಲ್ಲ. ನಮ್ಮಲ್ಲೂ ಹಿರಿಯ ನಟಿಯರಿಂದ ಹಿಡಿದು ಈಗಿನ ಪೀಳಿಗೆಯ ನಟಿಯರ ವರೆಗು ಸಾಕಷ್ಟು ಅದ್ಭುತ ಕಲಾವಿದೆಯರು ಇದ್ದಾರೆ.
ಸಾಮಾನ್ಯವಾಗಿ ಹೀರೋಯಿನ್ ಗಳು ಜೊತೆಯಾಗಿ ಸೇರೋದಿಲ್ಲ, ಹೆಂಗಸರಿಗೆ ಹೊಟ್ಟೆ ಉರಿ ಜಾಸ್ತಿ, ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ ಎಂದೆಲ್ಲ ಹೇಳುತ್ತಾರೆ. ಇವರನ್ನು ಕಂಡರೆ ಅವರಿಗೆ ಆಗೋದಿಲ್ಲ ಎಂದು ಗಾಸಿಪ್ ಗಳನ್ನು ಕೂಡ ಹಲವು ಸಾರಿ ಬರೆದಿದ್ದಾರೆ. ಆದರೆ ನಮ್ಮ ಸ್ಯಾಂಡಲ್ ವುಡ್ ಸುಂದರಿಯರು ಅದೆಲ್ಲವೂ ಕಟ್ಟು ಕಥೆ, ಹೆಣ್ಣುಮಕ್ಕಳು ನೀವಂದು ಕೊಂಡಿರುವ ಹಾಗಲ್ಲ ಎಂದು ನಿರೂಪಿಸುತ್ತಿದ್ದಾರೆ, ನಿರೂಪಿಸುತ್ತಲೇ ಬಂದಿದ್ದಾರೆ. ಇವರಲ್ಲಿ ಇರುವ ಒಗ್ಗಟ್ಟು ಚಿತ್ರರಂಗ ಸ್ಟಾರ್ ಹೀರೋಗಳಲ್ಲಿ ಯಾಕಿಲ್ಲ? ಎನ್ನುವ ಪ್ರಶ್ನೆ ಕೂಡ ಶುರುವಾಗುತ್ತದೆ. ಇತ್ತೀಚಿನ ಹಲವು ಕಾರ್ಯಕ್ರಮಗಳಲ್ಲಿ ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ನಟಿಯರು ಜೊತೆಯಾಗಿ ಸೇರಿ ಎಂಜಾಯ್ ಮಾಡಿದ್ದಾರೆ..

ಕನ್ನಡದ ಹಿರಿಯ ನಟಿಯರಲ್ಲಿ ಒಬ್ಬರಾದ ತಾರಾ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ಬಂದಿತು., ಅದೇ ವೇಳೆ ಸಂಕ್ರಾಂತಿ ಹಬ್ಬ ಕೂಡ ಇತ್ತು. ಈ ಸಮಯದಲ್ಲಿ ಅವರು ತಮ್ಮ ಮನೆಗೆ ಎಲ್ಲಾ ಕಲಾವಿದೆಯರನ್ನು ಕರೆಸಿ ಹಬ್ಬದ ಆಚರಣೆ ಮಾಡಿದರು, ಎಲ್ಲರಿಗೂ ಬಳೆ ತೊಡಿಸಿ, ಆಯಾ ನಟಿಯರ ಹಾಡುಗಳನ್ನು ಪ್ಲೇ ಮಾಡಿ, ಎಲ್ಲರೂ ತಾರಾ ಅವರ ಜೊತೆಗೆ ಡ್ಯಾನ್ಸ್ ಮಾಡಿದರು. ಈ ಸೆಲೆಬ್ರೇಷನ್ ನಲ್ಲಿ ಹಿರಿಯ ನಟಿಯರಾದ ಭಾರತಿ ಅವರು, ಹೇಮಾ ಚೌಧರಿ ಅವರು, ಜಯಮಾಲಾ ಅವರು, ನಂತರದ ನಟಿಯರಾದ ಸುಧಾರಾಣಿ ಅವರು, ಮಾಲಾಶ್ರೀ ಅವರು, ಶ್ರುತಿ ಅವರು, ಮಾಳವಿಕಾ ಅವರು, ಈಗಿನ ನಟಿಯರಾದ ಪ್ರಿಯಾಂಕ ಉಪೇಂದ್ರ, ಕಾರುಣ್ಯ ರಾಮ್ ಸೇರಿದಂತೆ ಚಂದನವನದ ಸ್ಟಾರ್ ಹೀರೋಯಿನ್ ಗಳೆಲ್ಲರು ಭಾಗಿಯಾಗಿ ಎಂಜಾಯ್ ಮಾಡಿದರು.
ಈ ಪಾರ್ಟಿಯ ವಿಡಿಯೋ ಗಳೆಲ್ಲವು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಷ್ಟೇ ಅಲ್ಲದೇ, ಹಿರಿಯನಟಿ ಜಯಮಾಲಾ ಅವರ ಮಗಳ ಮದುವೆಯ ಅರಿಶಿನ ಶಾಸ್ತ್ರಕ್ಕೆ ಕೂಡ ಸ್ಯಾಂಡಲ್ ವುಡ್ ನ ಎಲ್ಲಾ ನಟಿಯರು ಸೇರಿ, ಎಂಜಾಯ್ ಮಾಡಿ, ಜಯಮಾಲಾ ಅವರ ಜೊತೆಗೆ ನಾವಿದ್ದೇವೆ ಎಂದು ಹೇಳಿದ್ದರು. ಆಗ ಎಲ್ಲರೂ ಡ್ಯಾನ್ಸ್ ಮಾಡುತ್ತಿರುವ ಫೋಟೋಸ್ ಗಳೆಲ್ಲವು ವೈರಲ್ ಆಗಿತ್ತು. ಇದಾದ ನಂತರ ರಕ್ಷಿತಾ ಅವರ ತಮ್ಮನ ಮದುವೆಯಲ್ಲಿ, ಜಯಮಾಲಾ ಅವರ ಮಗಳ ಮದುವೆಯಲ್ಲಿ ಕೂಡ ಇದೇ ರೀತಿ ಎಲ್ಲರೂ ಸೇರಿದ್ದರು. ಈ ಕಾರ್ಯಕ್ರಮಗಳ ಜೊತೆಗೆ ಈಗ ಮತ್ತೊಂದು ಕಾರ್ಯಕ್ರಮದಲ್ಲಿ ಎಲ್ಲರೂ ಜೊತೆಯಾಗಿ ಸೇರಿದ್ದಾರೆ. ಈ ಬಾರಿ ಎಲ್ಲರೂ ಸೇರಿ ಪಾರ್ಟಿ ಮಾಡಿರುವುದು ಮೇಘನಾ ರಾಜ್ ಅವರ ಮನೆಯಲ್ಲಿ.
ಮೇಘನಾ ರಾಜ್ ಅವರ ತಾಯಿ ಕನ್ನಡದ ಹಿರಿಯನಟಿ ಪ್ರಮೀಳಾ ಜೋಷಾಯ್ ಅವರ ಹುಟ್ಟುಹಬ್ಬವಿತ್ತು. ಈ ವರ್ಷ ಅಮ್ಮನ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿದ್ದಾರೆ. ಸ್ಯಾಂಡಲ್ ವುಡ್ ನ ಎಲ್ಲಾ ನಟಿಯರನ್ನು ಮನೆಗೆ ಕರೆಸಿ, ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಕೂಡ ಭಾರತಿ ವಿಷ್ಣುವರ್ಧನ್ ಅವರು, ಹೇಮಾ ಚೌಧರಿ ಅವರು, ನಟಿ ರಕ್ಷಿತಾ ಅವರ ತಾಯಿ ಮಮತಾ ರಾವ್ ಅವರು, ನಟಿ ರಕ್ಷಿತಾ ಅವರು, ಸುಧಾರಾಣಿ ಅವರು, ಶ್ರುತಿ ಅವರು ಎಲ್ಲರೂ ಸೇರಿದ್ದರು. ಇನ್ನು ಒಂದು ಕಾಲ ಕಾಂಪಿಟೇಟರ್ ಗಳಾಗಿದ್ದ ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ಮೋಹಕತಾರೆ ರಮ್ಯಾ ಇವರಿಬ್ಬರು ರಕ್ಷಿತಾ ಅವರ ತಮ್ಮನ ಮದುವೆಯಲ್ಲಿ ಜೊತೆಯಾಗಿ ಸೇರಿದ್ದರು. ಇದೆಲ್ಲವನ್ನು ನೋಡಿದರೆ ಚಂದನವನದಲ್ಲಿ ನಟಿಯರ ಪೈಕಿ ಎಷ್ಟು ಒಗ್ಗಟ್ಟು ಇದೆ ಎನ್ನುವುದು ಗೊತ್ತಾಗುತ್ತದೆ. ಹಾಗೆಯೇ ಸಂತೋಷ ಕೂಡ ಆಗುತ್ತದೆ.

ಆದರೆ ಸ್ಯಾಂಡಲ್ ವುಡ್ ನಟರ ಪೈಕಿ ಈ ಒಗ್ಗಟ್ಟು ಇಲ್ಲ. ಒಬ್ಬರು ಬರುವ ಜಾಗಕ್ಕೆ ಇನ್ನೊಬ್ಬರು ಬರೋದಿಲ್ಲ. ಒಬ್ಬರು ಬಂದು ಹೋದ ನಂತರ ಇನ್ನೊಬ್ಬರು ಬರುತ್ತಾರೆ. ಹಿಂದೆಲ್ಲಾ ಈ ರೀತಿ ಇರಲಿಲ್ಲ. ಡಾ. ರಾಜ್ ಕುಮಾರ್ ಅವರು, ವಿಷ್ಣುವರ್ಧನ್ ಅವರು, ಅನಂತ್ ನಾಗ್ ಅವರು, ಅಂಬರೀಶ್ ಅವರು ಎಲ್ಲರೂ ಜೊತೆಯಾಗಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರೆಲ್ಲರ ನಡುವೆ ಒಗ್ಗಟ್ಟು ಇತ್ತು, ಆದರೆ ಈಗ ಆ ರೀತಿ ಇಲ್ಲ. ಆಗ ಅವರೆಲ್ಲರ ನಡುವೆ ಒಗ್ಗಟ್ಟು ಇದ್ದಿದ್ದಕ್ಕೆ ಕನ್ನಡ ಚಿತ್ರರಂಗದ ಬೆಳವಣಿಗೆ, ಆಗ ಮೂಡಿಬರುತ್ತಿದ್ದ ಸಿನಿಮಾಗಳು ಅಷ್ಟರ ಮಟ್ಟಿಗೆ ಎಲ್ಲರಿಗು ಇಷ್ಟ ಆಗುತ್ತಿತ್ತು, ಆದರೆ ಈಗ ಆ ರೀತಿ ಇಲ್ಲ. ಸ್ಯಾಂಡಲ್ ವುಡ್ ಸುಂದರಿಯರಲ್ಲಿ ಇರುವ ಒಗ್ಗಟ್ಟು, ಸ್ಯಾಂಡಲ್ ವುಡ್ ಹೀರೋಗಳಲ್ಲಿ ಕೂಡ ಶುರುವಾದರೆ, ಸುವರ್ಣ ಯುಗ ಮತ್ತೊಮ್ಮೆ ಶುರುವಾಗಬಹುದು.