ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್, ನಮ್ಮೆಲ್ಲರ ಪ್ರೀತಿಯ ಶಿವಣ್ಣ ಅವರು ಈಗ ಚೇತರಿಸಿಕೊಂಡು ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುವುದು ಬಹಳ ಸಂತೋಷ ಪಡುವಂಥ ವಿಷಯ. ಕಳೆದ ವರ್ಷ ಶಿವಣ್ಣ ಅವರು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು, ಅಮೆರಿಕಾಗೆ ಹೋಗಿ ಕ್ಯಾನ್ಸರ್ ಗೆ ಸರ್ಜರಿ ಮಾಡಿಸಿಕೊಂಡು, ಕ್ಯಾನ್ಸರ್ ಮುಕ್ತವಾಗಿ ಶಿವಣ್ಣ ಬೆಂಗಳೂರಿಗೆ ವಾಪಸ್ ಬಂದರು. ಶಿವಣ್ಣ ಇಲ್ಲಿಗೆ ಬಂದು, ಕೆಲ ದಿನಗಳ ಕಾಲ ರೆಸ್ಟ್ ಮಾಡಿ, ಈಗ ಶೂಟಿಂಗ್ ಗೆ ವಾಪಸ್ ಬಂದಿದ್ದಾರೆ. ಹಾಗೆಯೇ ಕೆಲವು ಇಂಟರ್ವ್ಯೂ ಗಳಲ್ಲಿ ಕೂಡ ಶಿವಣ್ಣ ಅವರು ಭಾಗಿಯಾಗುತ್ತಿದ್ದು, ಎಲ್ಲಿಯೂ ಹೇಳಿಕೊಳ್ಳದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಮತ್ತು ಶಿವಣ್ಣ ಅವರ ತಂಗಿ ಪೂರ್ಣಿಮಾ ಅವರಿಗೆ ಕೂಡ ಕ್ಯಾನ್ಸರ್ ಇತ್ತಂತೆ. ಈ ಶಾಕಿಂಗ್ ಸುದ್ದಿಯನ್ನು ಶಿವಣ್ಣ ಶೇರ್ ಮಾಡಿಕೊಂಡಿದ್ದಾರೆ..
ನಮ್ಮೆಲ್ಲರ ಮೆಚ್ಚಿನ ಶಿವಣ್ಣ ಕಳೆದ ವರ್ಷ ಡಿಸೆಂಬರ್ ನಲ್ಲಿ ಅಮೆರಿಕಾಗೆ ಕ್ಯಾನ್ಸರ್ ಸರ್ಜರಿಗಾಗಿ ಹೋದರು. ಶಿವಣ್ಣ ಅವರಿಗೆ ಬ್ಲಾಡರ್ ಕ್ಯಾನ್ಸರ್ ಆಗಿತ್ತು, ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಶಿವಣ್ಣ ಅವರಿಗೆ ಕ್ಯಾನ್ಸರ್ ಸರ್ಜರಿ ನಡೆಯಿತು. ಐದೂವರೆ ಗಂಟೆಗಳ ಕಾಲ ಶಿವಣ್ಣ ಅವರಿಗೆ ಶಸ್ತ್ರ ಚಿಕಿತ್ಸೆ ನಡೆದಿದೆ. ಶಿವಣ್ಣ ಅವರ ಬ್ಲಾಡರ್ ರಿಮೂವ್ ಮಾಡಿ, ಶಿವಣ್ಣ ಅವರ ಸಣ್ಣ ಕರುಳುಗಳನ್ನು ತೆಗೆದುಕೊಂಡು ಅದರಿಂದ ಕೃತಕ ಬ್ಲಾಡರ್ ಅನ್ನು ಅಳವಡಿಸಲಾಗಿದೆ. ಈಗ ಶಿವಣ್ಣ ಅವರು ಹುಷಾರಾಗಿದ್ದು, ಸಣ್ಣ ಕರುಳಿನಿಂದ ಕೃತಕ ಬ್ಲಾಡರ್ ಮಾಡಿರುವ ಕಾರಣ, ಅದು ಬೆಳೆಯುವುದಕ್ಕೆ ಇನ್ನು 6 ತಿಂಗಳ ಕಾಲ ಸಮಯ ಬೇಕಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಶಿವಣ್ಣ ಅವರು ಬೇಗ ಹುಷಾರಾಗಿ ಬರಲಿ ಎನ್ನುವುದೇ ಎಲ್ಲ ಅಭಿಮಾನಿಗಳ ಆಶಯ ಆಗಿದೆ.

ಇನ್ನು ಶಿವಣ್ಣ ಅವರು ಅಮೆರಿಕಾ ಇಂದ ಬಂದ ಬಳಿಕ ಕೆಲ ದಿನಗಳ ಕಾಲ ಹೊರಗಡೆ ಸಮಯ ಕಳೆದರು, ಗೀತಕ್ಕಾ ಅವರ ಜೊತೆಗೆ ಹೊರಗಡೆ ಹೋಗಿ ಬಂದರು. ನಂತರ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೆ ಶುರು ಮಾಡಿದರು. ಧನಂಜಯ್ ಅವರ ಮದುವೆಗೆ ಮೈಸೂರಿಗೆ ಬಂದಾಗ, ಮಾಧ್ಯಮಗಳ ಜೊತೆಗೆ ಕೂಡ ಪ್ರೀತಿಯಿಂದ ಮಾತನಾಡಿದರು. ಶಿವಣ್ಣ ಅವರ ಹೊಸ ಲುಕ್ ಅಭಿಮಾನಿಗಳಿಗೆ ಕೂಡ ಬಹಳ ಸಂತೋಷವಾಗಿದೆ. ಈಗಷ್ಟೇ ಶಿವಣ್ಣ ಅವರು ಸಿನಿಮಾ ಚಿತ್ರೀಕರಣಕ್ಕೆ ಬರುವುದಕ್ಕೆ ಶುರು ಮಾಡಿದ್ದಾರೆ, ಶಿವಣ್ಣ 131 ಸಿನಿಮಾ ಚಿತ್ರೀಕರಣದಲ್ಲಿ ವಿಗ್ ಧರಿಸಿ ಭಾಗಿಯಾಗಿದ್ದಾರೆ ಶಿವಣ್ಣ. ಈ ಫೋಟೋಸ್ ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನು ಆರ್.ಸಿ 16 ಸಿನಿಮಾಗೆ ಶಿವಣ್ಣ ಅವರ ಲುಕ್ ಟೆಸ್ಟ್ ಕೂಡ ನಡೆದಿದೆ.
ಶಿವಣ್ಣ ಅವರ ಶ್ರೀಮುತ್ತು ಮನೆಯಲ್ಲೇ ಲುಕ್ ಟೆಸ್ಟ್ ನಡೆದಿದ್ದು, ನಿರ್ದೇಶಕ ಬುಚ್ಚಿ ಬಾಬು ಅವರು ಶಿವಣ್ಣ ಅವರ ಮನೆಗೆ ಬಂದು ಲುಕ್ ಟೆಸ್ಟ್ ನಡೆಸಿದ್ದಾರೆ. ಶೀಘ್ರದಲ್ಲೇ ಶಿವಣ್ಣ ಈ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗಿದೆ. ಇನ್ನು ಸಿನಿಮಾ ಹಾಗೂ ಈ ಎಲ್ಲಾ ವಿಚಾರಗಳ ಜೊತೆಗೆ ಶಿವಣ್ಣ ಅವರು ಹಲವು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದು, ಇತ್ತೀಚಿನ ಒಂದು ಇಂಟರ್ವ್ಯೂನಲ್ಲಿ ಇದುವರೆಗೂ ಎಲ್ಲಿಯೂ ಹೇಳಿರದ ವಿಷಯ ಒಂದನ್ನು ಶಿವಣ್ಣ ಹಂಚಿಕೊಂಡಿದ್ದಾರೆ. ಅದು ಅವರ ಕುಟುಂಬದ ವಿಷಯ ಆಗಿದ್ದು, ಶಿವಣ್ಣ ಅವರ ತಾಯಿ ಪಾರ್ವತಮ್ಮ ಅವರಿಗೆ, ತಂಗಿ ಪೂರ್ಣಿಮಾ ಅವರಿಗು ಕ್ಯಾನ್ಸರ್ ಇತ್ತಂತೆ. ಈ ವಿಷಯವನ್ನು ಖುದ್ದು ಶಿವಣ್ಣ ತಿಳಿಸಿದ್ದಾರೆ.

ಶಿವಣ್ಣ ಅವರ ತಾಯಿ ಪಾರ್ವತಮ್ಮ ಅವರೂ ಕ್ಯಾನ್ಸರ್ ಇಂದ ಬಳಲಿದ್ದರು, ಹಾಗೆಯೇ ಶಿವಣ್ಣ ಅವರ ತಂಗಿ ಪೂರ್ಣಿಮಾ ಅವರಿಗೆ ಮತ್ತು ಶಿವಣ್ಣ ಅವರ ಕೆಲವು ಕಸಿನ್ಸ್ ಗಳಿಗೆ ಕೂಡ ಕ್ಯಾನ್ಸರ್ ಇತ್ತಂತೆ. ಅವರೆಲ್ಲರೂ ಸಹ ಕ್ಯಾನ್ಸರ್ ಜೊತೆಗೆ ಹೋರಾಟ ಮಾಡಿದ್ದಾರೆ, ಇದು ಯಾರಿಗೂ ಗೊತ್ತಿರದ ವಿಷಯ ಆಗಿದೆ. ಈಗ ಶಿವಣ್ಣ ಅವರು ಕೂಡ ಕ್ಯಾನ್ಸರ್ ಜೊತೆಗೆ ಹೋರಾಟ ಮಾಡಿ, ಈಗ ಕ್ಯಾನ್ಸರ್ ಫ್ರೀ ಆಗಿ ವಾಪಸ್ ಬಂದಿದ್ದಾರೆ. ಶಿವಣ್ಣ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾದ ನಂತರ, ಇಲ್ಲಿಯೇ ಟ್ರೀಟ್ಮೆಂಟ್ ಕೊಡಲಾಗುತ್ತಿತ್ತು. ಕೀಮೋಥೆರಪಿ ಸಹ ನಡೆದಿತ್ತು. ಕೀಮೋ ನಡೆದಾಗ, ಶಿವಣ್ಣ ಅವರಿಗೆ ಹೇರ್ ಫಾಲ್ ಆಗಿರಲಿಲ್ಲವಂತೆ. ಇದನ್ನು ನೋಡಿ ಡಾಕ್ಟರ್ ಸಹ ಶಾಕ್ ಆಗಿದ್ದರಂತೆ. ಒಟ್ಟಿನಲ್ಲಿ ಶಿವಣ್ಣನ ಪರವಾಗಿ ದೇವರು ಯಾವಾಗಲೂ ಇದ್ದಾರೆ ಎಂದರೆ ತಪ್ಪಲ್ಲ.
ಇನ್ನು ದೇವರ ಆಶೀರ್ವಾದದಿಂದ ಶಿವಣ್ಣ ಅವರಿಗೆ ಬ್ಲಾಡರ್ ನಲ್ಲಿ ಇದ್ದ ಕ್ಯಾನ್ಸರ್, ಬೇರೆ ದೇಹದ ಭಾಗಗಳಿಗೆ ಹರಡಲಿಲ್ಲ. ಅದಕ್ಕೆ ಕಾರಣ ಇಲ್ಲಿನ ವೈದ್ಯರು ಅಷ್ಟು ಚೆನ್ನಾಗಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಹಾಗಾಗಿ ಶಿವಣ್ಣ ಅವರ ಆರೋಗ್ಯ ಒಂದೇ ಸ್ಥಿತಿಯಲ್ಲಿತ್ತು. ಇಲ್ಲಿನ ವೈದ್ಯರ ಸಪೋರ್ಟ್ ಇಂದಲೇ, ಅಮೆರಿಕಾದಲ್ಲಿ ನಡೆದ ಸರ್ಜರಿ ಯಶಸ್ವಿಯಾಯಿತು. ಶಿವಣ್ಣ ಅವರು ಅಮೆರಿಕಾದಲ್ಲಿ ಸುಮಾರು ಒಂದು ತಿಂಗಳ ಕಾಲ ಇದ್ದರು, ಸರ್ಜರಿ ಅಗುವುದಕ್ಕಿಂತ ಮೊದಲು, ಸರ್ಜರಿ ಆದ ನಂತರ ಅಲ್ಲಿನ ಅಭಿಮಾನಿಗಳ ಜೊತೆಗೆ ಕೂಡ ಸಮಯ ಕಳೆದಿದ್ದರು. ಇಲ್ಲಿಗೆ ಬಂದ ಮೇಲೆ ಕೂಡ ಮಾಧ್ಯಮದವರ ಜೊತೆಗೆ ಅಭಿಮಾನಿಗಳ ಜೊತೆಗೆ ಕೂಡ ಮಾತನಾಡಿದರು. ತಾವು ಈಗ ಫಿಟ್ ಆಗಿದ್ದು, ಮೊದಲಿದ್ದ ಎನರ್ಜಿ ಈಗ ಡಬಲ್ ಆಗಿದೆ ಎಂದು ಹೇಳಿದ್ದರು.

ಶಿವಣ್ಣ ಅವರ ಈ ಮಾತುಗಳನ್ನು ಕೇಳಿ ಅಭಿಮಾನಿಗಳಿಗೆ ಸಂತೋಷ ಆಗಿತ್ತು. ಇನ್ನು ಈ ಕಷ್ಟದ ಸಮಯದಲ್ಲಿ ಶಿವಣ್ಣ ಅವರ ಜೊತೆಗೆ ಇದ್ದದ್ದು, ಶಿವಣ್ಣ ಅವರನ್ನು ನೋಡಿಕೊಂಡು ಪ್ರತಿಯೊಂದು ಹಂತದಲ್ಲಿ ಶಿವಣ್ಣ ಅವರ ಜೊತೆಗೆ ನಿಂತಿದ್ದು ಗೀತಕ್ಕಾ. ಗೀತಕ್ಕ ಹಾಗೂ ಶಿವಣ್ಣ ಅವರ ಮಗಳು ನಿವೇದಿತಾ ಶಿವ ರಾಜ್ ಕುಮಾರ್ ಇಬ್ಬರು ಸಹ ಜೊತೆಗೆ ಇದ್ದರು. ಹಾಗೆಯೇ ಅಭಿಮಾನಿಗಳ ಸಪೋರ್ಟ್ ಶಿವಣ್ಣ ಅವರ ಜೊತೆಗೆ ಅದೇ ರೀತಿ ಇತ್ತು. ರಾಜ್ಯದ ಎಲ್ಲೆಡೆ ಅಭಿಮಾನಿಗಳು ಶಿವಣ್ಣ ಅವರಿಗಾಗಿ ವಿಶೇಷ ಪೂಜೆ, ಪುನಸ್ಕಾರಗಳನ್ನ ಮಾಡಿಸಿದರು. ಎಲ್ಲರ ಶುಭ ಹಾರೈಕೆ ಇಂದ ಇಂದು ಶಿವಣ್ಣ ಅವರು ಆರೋಗ್ಯವಾಗಿ ಬಂದಿದ್ದಾರೆ. ಸಿನಿಮಾ ಶೂಟಿಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಕಾಣಿಸಿಕೊಳ್ಳಲಿದ್ದು, ಶಿವಣ್ಣ ಅವರ ಅಭಿಮಾನಿಗಳಿಗೆ ಇದು ಸಂತೋಷದ ಸುದ್ದಿ ಆಗಿದೆ.