ಇಂದು ಗುರುವಾರ, 9 ಜನವರಿ 2025. ಈ ದಿನ 12 ರಾಶಿಯವರಿಗೆ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರ ದಿನ ಭವಿಷ್ಯ.
ಮೇಷ ರಾಶಿ
ವ್ಯವಹಾರದಲ್ಲಿ ನಿಮ್ಮ ಯೋಜನೆಗಳು ಅರ್ಧಕ್ಕೆ ನಿಲ್ಲಬಹುದು, ಅದು ನಿಮಗೆ ಬೇಸರ ಉಂಟು ಮಾಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಪ್ರಯತ್ನ ಮಾಡುವಿರಿ, ಇದರಿಂದಾಗಿ ನಿಮ್ಮ ಕೆಲಸದಲ್ಲಿಅವ್ಯವಸ್ಥೆ ಉಂಟಾಗಬಹುದು. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ತಾಯಿಯಿಂದ ಸಲಹೆ ಪಡೆಯಬಹುದು. ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಾದಿ ಸುಗಮವಾಗಲಿದೆ.
ವೃಷಭ ರಾಶಿ
ಮತ್ತೊಬ್ಬರ ಚಾಡಿ ಮಾತುಗಳನ್ನು ನಂಬಿದರೆ ನಿಮಗೇ ಸಮಸ್ಯೆ ಉಂಟಾಗುತ್ತದೆ ಜಾಗ್ರತೆ. ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ನಾಯಕರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ನಿಮ್ಮ ಕೆಲವು ತಪ್ಪುಗಳು ನಿಮ್ಮ ಕುಟುಂಬದ ಸದಸ್ಯರ ಮುಂದೆ ಬೆಳಕಿಗೆ ಬರಬಹುದು, ನಂತರ ನೀವು ನಿಮ್ಮ ತಂದೆಯಿಂದ ನಿಂದನೆಗೆ ಒಳಗಾಗಬೇಕಾಗಬಹುದು. ನಿಮ್ಮ ಮನೆಗೆ ಐಷಾರಾಮಿ ವಸ್ತುಗಳನ್ನು ಖರೀದಿಸಲು ನೀವು ಹಣ ಖರ್ಚು ಮಾಡುತ್ತೀರಿ.
ಮಿಥುನ ರಾಶಿ
ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳಿಸುವ ದಿನವಾಗಿದೆ. ಪ್ರವಾಸಕ್ಕೆ ಹೋದರೆ, ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ. ಒಡಹುಟ್ಟಿದವರಿಂದ ಕೆಲಸದ ಬಗ್ಗೆ ಕೆಲವು ಸಲಹೆಗಳನ್ನು ನೀವು ತೆಗೆದುಕೊಳ್ಳಬೇಕಾಗಬಹುದು. ಮಕ್ಕಳು ನಿಮ್ಮ ಬಳಿ ಏನನ್ನಾದರೂ ಕೇಳಬಹುದು.
ಕಟಕ ರಾಶಿ
ಬಹಳ ದಿನಗಳಿಂದ ನಿಮಗೆ ಇದ್ದ ಉದರ ಸಂಬಂಧಿ ಸಮಸ್ಯೆಗಳು ಗುಣವಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ಯಾರೇ ಹೇಳಿದ್ರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಅಪರಿಚಿತರನ್ನು ನಂಬಬೇಡಿ. ವ್ಯವಹಾರದಲ್ಲಿಯೂ ಎಚ್ಚರಿಕೆಯಿಂದ ಇರಿ. ನಿಮ್ಮ ಯೋಜನೆಗಳಿಂದ ಉತ್ತಮ ಲಾಭ ಪಡೆಯದ ಕಾರಣ ಬೇಸರ ಉಂಟಾಗಬಹುದು.
ಸಿಂಹ ರಾಶಿ
ಉದ್ಯೋಗ ಹುಡುಕುತ್ತಿರುವವರು ಒಳ್ಳೆಯ ಸುದ್ದಿಯನ್ನು ಕೇಳಬಹುದು. ಕೆಲಸಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆ ಇದ್ದಲ್ಲಿ ಅದೂ ಕೂಡಾ ಪರಿಹಾರವಾಗುತ್ತದೆ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳ ಬಗ್ಗೆ ನಿಮ್ಮ ಮೇಲಧಿಕಾರಿಯೊಂದಿಗೆ ವಾದ ಮಾಡುವ ಸಾಧ್ಯತೆಯಿದೆ. ನೀವು ಪೂರ್ವಜರ ಆಸ್ತಿಯನ್ನು ಪಡೆಯುವಿರಿ, ಇದರಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.
ಕನ್ಯಾ ರಾಶಿ
ಕೆಲಸದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಹೊಸ ವಾಹನ ಖರೀದಿಸಲಿದ್ದೀರಿ. ಆದರೆ ಯಾವುದೇ ಕೆಲಸವನ್ನು ವಿಧಿಗೆ ಬಿಡಬೇಡಿ, ಇಲ್ಲದಿದ್ದರೆ ಅದನ್ನು ಪೂರ್ಣಗೊಳಿಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಜೀವನ ಸಂಗಾತಿಗಾಗಿ ನೀವು ಏನಾದರೂ ಉಡುಗೊರೆ ನೀಡಬಹುದು.
ತುಲಾ ರಾಶಿ
ಆರ್ಥಿಕ ದೃಷ್ಟಿಯಿಂದ ಉತ್ತಮ ದಿನವಾಗಲಿದೆ. ಕಚೇರಿಯಲ್ಲಿ ಕೆಲಸ ಮಾಡುವವರು ಪ್ರಶಂಸೆಗೆ ಒಳಗಾಗುತ್ತಾರೆ. ಪ್ರೀತಿಯಲ್ಲಿರುವ ಜನರು ತಮ್ಮ ಸಂಗಾತಿಯೊಂದಿಗೆ ಲಾಂಗ್ ಡ್ರೈವ್ಗೆ ಹೋಗಲು ಯೋಜಿಸಬಹುದು, ಇದು ಇಬ್ಬರಿಗೂ ಪರಸ್ಪರ ಚೆನ್ನಾಗಿ ತಿಳಿದುಕೊಳ್ಳುವ ಅವಕಾಶವನ್ನು ನೀಡುತ್ತದೆ. ನಿಮ್ಮ ವ್ಯವಹಾರದಲ್ಲಿ ಸಣ್ಣ ಲಾಭದ ಯೋಜನೆಗಳು ಕಳೆದುಹೋಗಲು ಬಿಡಬೇಡಿ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ತಯಾರಿಯಲ್ಲಿ ನಿರತರಾಗಿರುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ವ್ಯಾಪಾರದ ದೃಷ್ಟಿಯಿಂದ ಉತ್ತಮ ದಿನವಾಗಲಿದೆ. ನಿಮ್ಮ ತಂದೆಯ ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ಕೆಲಸಕ್ಕಾಗಿ ನೀವು ದೂರ ಪ್ರಯಾಣ ಆಯೋಜಿಸಬಹುದು. ಅದು ನಿಮಗೆ ಪ್ರಯೋಜನಕಾರಿಯಾಗಿದೆ. ನಿಮ್ಮ ಮನೆಗೆ ಅತಿಥಿಯ ಆಗಮನದಿಂದಾಗಿ, ಕುಟುಂಬದ ಸದಸ್ಯರೆಲ್ಲರೂ ಕಾರ್ಯನಿರತರಾಗಿರುತ್ತಾರೆ.
ಧನು ರಾಶಿ
ಧನು ರಾಶಿಯವರು ಯಾವುದೇ ನಿರ್ಧಾರವನ್ನು ಆತುರದಿಂದ ಮತ್ತು ಭಾವನಾತ್ಮಕವಾಗಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ನೀವು ಯಾರಿಗಾದರೂ ಭರವಸೆ ನೀಡಿದ್ದರೆ, ಅದನ್ನು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ. ಕಳೆದುಹೋದ ನಿಮ್ಮ ಮೆಚ್ಚಿನ ವಸ್ತು ದೊರೆಯಲಿದೆ. ವ್ಯವಹಾರದಲ್ಲಿ ಯಾರೊಂದಿಗಾದರೂ ಪಾಲುದಾರರಾಗುವ ಮೊದಲು, ನೀವು ಅವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕು.
ಮಕರ ರಾಶಿ
ಕಾನೂನು ವಿಷಯಗಳಲ್ಲಿ ದಿನ ಉತ್ತಮವಾಗಿರುತ್ತದೆ. ನಿಮ್ಮ ಯಾವುದೇ ಪ್ರಕರಣಗಳು ಕಾನೂನಿನಲ್ಲಿ ವಿವಾದಕ್ಕೊಳಗಾಗಿದ್ದರೆ, ಅದರಲ್ಲಿ ಜಯ ಪಡೆಯುತ್ತೀರಿ ಜೀವನ ಸಂಗಾತಿಯು ನಿಮ್ಮ ಕೆಲಸದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ, ಇದರಿಂದಾಗಿ ಇಬ್ಬರ ನಡುವಿನ ಬಾಂಧವ್ಯ ಇನ್ನಷ್ಟು ಹೆಚ್ಚಾಗುತ್ತದೆ.
ಕುಂಭ ರಾಶಿ
ಆರೋಗ್ಯ ಸುಧಾರಿಸುತ್ತದೆ. ದೀರ್ಘಕಾಲದಿಂದ ಯಾವುದೇ ಆಸ್ತಿ ಸಂಬಂಧಿತ ವ್ಯವಹಾರದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಅದು ಸುಲಭವಾಗಿ ಪರಿಹಾರವಾಗುತ್ತದೆ. ಕುಟುಂಬದಲ್ಲಿ ಜಗಳ ಹೆಚ್ಚಾಗುತ್ತವೆ, ಅದನ್ನು ನೀವು ಮನೆಯಲ್ಲಿ ಇರುವಾಗಲೇ ಪರಿಹರಿಸಿದರೆ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹಾದಿ ಸುಗಮವಾಗಲಿದೆ.
ಮೀನ ರಾಶಿ
ನಿಮ್ಮ ಮಗುವಿನ ಬಗ್ಗೆ ವಿಶೇಷ ಗಮನ ಹರಿಸಬೇಕು. ಕುಟುಂಬದಲ್ಲಿ ಮಾತನಾಡುವಾಗ ನಿಮ್ಮ ಮಾತನ್ನು ನೀವು ನಿಯಂತ್ರಿಸಬೇಕು, ಇಲ್ಲದಿದ್ದರೆ ನೀವು ಯಾರಿಗಾದರೂ ನಿಮ್ಮ ಮಾತುಗಳಿಂದ ಬೇಸರ ಉಂಟು ಮಾಡಬಹುದು. ರಾಜಕೀಯದಲ್ಲಿ, ನೀವು ಎಚ್ಚರಿಕೆಯಿಂದ ಮುಂದುವರಿಯಬೇಕು, ನಿಮ್ಮ ವಿರೋಧಿಗಳು ನಿಮಗೆ ಕೆಡುಗೆ ಮಾಡಲು ಕಾಯುತ್ತಿರುತ್ತಾರೆ. ತಾಯಿಯನ್ನು ಹೊರಗೆ ಕರೆದೊಯ್ಯಲಿದ್ದೀರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.