ಲಾಸ್ ಏಂಜಲಿಸ್ನ ಹಾಲಿವುಡ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಇಂದು 97ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಜರುಗಿದೆ. ಪ್ರಪಂಚದಲ್ಲಿಯೇ ಸಿನಿಮಾ ಲೋಕದ ಅತ್ಯುತ್ತಮ ಗೌರವ ಎಂದು ಕರೆಸಿಕೊಳ್ಳುವ ಆಸ್ಕರ್ ಪ್ರಶಸ್ತಿಗೆ ಈ ಬಾರಿ ಯಾರೆಲ್ಲಾ ಭಾಜನರಾಗಿದ್ದಾರೆ ಎನ್ನುವ ಕಿರು ಮಾಹಿತಿ ಇಲ್ಲಿದೆ….
ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಈ ಬಾರಿ ಕಾನನ್ ಒ’ಬ್ರೇನ್ ಆಯೋಜಿಸಿದ್ದರು. ವಿವಿಧ ದೇಶಗಳ ಸಿನಿ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ಅಮೆರಿಕಾದಲ್ಲಿ ಉಂಟಾದ ಕಾಡ್ಗಿಚ್ಚಿನ ಕಾರಣಕ್ಕೆ ಈ ಬಾರಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಪ್ರತಿವರ್ಷದಂತೆ ಈ ವರ್ಷವು ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಕಾಡ್ಗಿಚ್ಚನ್ನು ಹತೋಟಿಗೆ ತರಲು ಶ್ರಮಿಸಿದ ಅಗ್ನಿಶಾಮಕ ದಳದವರಿಗೆ ಗೌರವ ಸೂಚಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಆಸ್ಕರ್ ಪ್ರಶಸ್ತಿ ಪುರಸ್ಕೃತರು:
ಅತ್ಯುತ್ತಮ ಚಿತ್ರ – ಅನೋರಾ
ಅತ್ಯುತ್ತಮ ನಟಿ – ಮೈಕಿ ಮ್ಯಾಡಿಸನ್, ಅನೋರಾ
ಅತ್ಯುತ್ತಮ ನಿರ್ದೇಶಕ – ಸೀನ್ ಬೇಕರ್, ಅನೋರಾ
ಅತ್ಯುತ್ತಮ ನಟ – ಆಡ್ರಿಯನ್ ಬ್ರಾಡಿ, ದಿ ಬ್ರೂಟಲಿಸ್ಟ್
ಅತ್ಯುತ್ತಮ ಮೂಲ ಸಂಗೀತ – ದಿ ಬ್ರೂಟಲಿಸ್ಟ್
ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ – ಐ’ಮ್ ಸ್ಟಿಲ್ ಹಿಯರ್
ಅತ್ಯುತ್ತಮ ಸಿನಿಮಾಟೋಗ್ರಾಫಿ – ದಿ ಬ್ರೂಟಲಿಸ್ಟ್
ಅತ್ಯುತ್ತಮ ಕಿರುಚಿತ್ರ(ಲೈವ್ ಆಕ್ಷನ್) – ಐ ಅಮ್ ನಾಟ್ ಎ ರೋಬೋಟ್
ಅತ್ಯುತ್ತಮ ಛಾಯಾಗ್ರಹಣ – ದಿ ಬ್ರೂಟಲಿಸ್ಟ್
ಅತ್ಯುತ್ತಮ ಧ್ವನಿ – ಡ್ಯೂನ್: ಭಾಗ ಎರಡು
ಅತ್ಯುತ್ತಮ ಸಾಕ್ಷ್ಯ ಚಿತ್ರ ವೈಶಿಷ್ಟ್ಯ – ನೋ ಅದರ್ ಲ್ಯಾಂಡ್
ಅತ್ಯುತ್ತಮ ಸಾಕ್ಷ್ಯ ಚಿತ್ರ ಕಿರು ವಿಷಯ – ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
ಅತ್ಯುತ್ತಮ ಪೋಷಕ ನಟಿ – ಜೊಯಿ ಸಲ್ಡಾನಾ, ಎಮಿಲಿಯಾ ಪೆರೆಜ್
ಅತ್ಯುತ್ತಮ ಪೋಷಕ ನಟ – ಕೀರನ್ ಕಲ್ಕಿನ್, ಎ ರಿಯಲ್ ಪೇನ್
ಅತ್ಯುತ್ತಮ ಮೂಲ ಗೀತೆ – ಎಮಿಲಿಯಾ ಪೆರೆಜ್, ಎಲ್ ಮಾಲ್
ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್ – ಫ್ಲೋ
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ – ಇನ್ ದಿ ಶ್ಯಾಡೋ ಆಫ್ ದಿ ಸಿಪ್ರೆಸ್
ಅತ್ಯುತ್ತಮ ವಸ್ತ್ರ ವಿನ್ಯಾಸ – ವಿಕ್ಡ್
ಅತ್ಯುತ್ತಮ ಮೂಲ ಚಿತ್ರಕಥೆ – ಅನೋರಾ
ಅತ್ಯುತ್ತಮ ರೂಪಾಂತರಿತ ಚಿತ್ರಕಥೆ – ಕಾನ್ಕ್ಲೇವ್
ಅತ್ಯುತ್ತಮ ಮೇಕಪ್ ಹಾಗೂ ಕೇಶವಿನ್ಯಾಸ – ವಸ್ತು
ಅತ್ಯುತ್ತಮ ಚಲನಚಿತ್ರ ಸಂಕಲನ – ಅನೋರಾ
ಅತ್ಯುತ್ತಮ ನಿರ್ಮಾಣ ವಿನ್ಯಾಸ – ದಿ ಬ್ರೂಟಲಿಸ್ಟ್
ಬಹುನಿರೀಕ್ಷಿತ ಅನುಜಾ ಚಿತ್ರಕ್ಕೆ ಕೈ ತಪ್ಪಿದ ಅವಾರ್ಡ್:
ನಟಿ ಪ್ರಿಯಾಂಕಾ ಚೋಪ್ರಾ ನಟಿಸಿರುವ ಹಾಗೂ ‘ದಿ ಎಲಿಫೆಂಟ್ ವಿಸ್ಪರ್ಸ್’ನ ನಿರ್ಮಾಪಕಿ ಗುನೀತ್ ಮೊಂಗಾ ಮತ್ತು ಇನ್ನಿತರರು ಸೇರಿ ನಿರ್ಮಿಸಿದ್ದ ಅನುಜಾ ಸಿನಿಮಾ, ಲೈವ್ ಆಕ್ಷನ್ ಸಿನಿಮಾ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಆಸ್ಕರ್ಗೆ ನಾಮಿನೇಟ್ಗೊಂಡಿದ್ದ ಏಕೈಕ ಭಾರತೀಯ ಚಿತ್ರ ಅನುಜಾಗೆ ಪ್ರಶಸ್ತಿ ಬರುವ ನಿರೀಕ್ಷೆ ಇದ್ದಿತ್ತು. ಆದರೀಗ ಆ ನಿರೀಕ್ಷೆ ಹುಸಿಯಾಗಿದೆ.
ಆಸ್ಕರ್ನ ವಿಶೇಷ:
ಅನೋರಾ ಎನ್ನುವ ಚಿತ್ರ ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಹಾಗೆಯೇ, ಒಂದೇ ವರ್ಷದಲ್ಲಿ ಒಂದೇ ಚಿತ್ರಕ್ಕಾಗಿ 5 ಆಸ್ಕರ್ ಪ್ರಶಸ್ತಿ ಗೆದ್ದ ಶ್ರೇಯಾ ಇದೇ ಅನೋರಾ ಚಿತ್ರದ ನಿರ್ದೇಶಕ ಸೀನ್ ಬೇಕರ್ ಅವರಿಗೆ ಸಲ್ಲುತ್ತದೆ. ಇನ್ನು ಎಮಿಲಿಯ ಪೆರೆಜ್ ಚಿತ್ರ 13 ವಿಭಾಗಗಳಿಗೆ ನಾಮಿನೇಟ್ ಆಗುವ ಮೂಲಕ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.