ಯಾವುದೇ ದ್ವಿಚಕ್ರ ವಾಹನವಾದರೂ ಎರಡಕ್ಕಿಂತ ಹೆಚ್ಚು ಜನ ಅದರಲ್ಲಿ ಕುಳಿತು ಸಂಚಾರ ಮಾಡುವುದಕ್ಕೆ ಅವಕಾಶವಿಲ್ಲ. ಎರಡಕ್ಕಿಂತ ಹೆಚ್ಚು ಜನ ಬೈಕ್ ನಲ್ಲಿ ಕುಳಿತುಕೊಳ್ಳುವುದು ಕೂಡ ಕಷ್ಟ. ಅಂತಹದ್ದರಲ್ಲಿ 7 ಜನ ಯುವಕರು ಒಂದೇ ಬೈಕ್ ನಲ್ಲಿ ಕುಳಿತು ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಸದ್ಯ, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಹಾಫುರ್ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ 7 ಜನ ಯುವಕರು ಸಂಚಾರಿ ನಿಯಮ ಉಲ್ಲಂಘಿಸಿ ಒಂದೆ ಬೈಕಿನಲ್ಲಿ ನಡು ರಸ್ತೆಯ ಮೇಲೆ ಸವಾರಿ ಮಾಡಿದ್ದಾರೆ. 6 ಜನ ಯುವಕರು ಇಕ್ಕಟ್ಟಿನಿಂದ ಕುಳಿತಿದ್ದರೆ, 7ನೇ ಯುವಕ ಹಿಂಬದಿ ಕುಳಿತಿದ್ದವನ ಭುಜದ ಮೇಲೆ ಕುಳಿತಿದ್ದಾನೆ. ಯುವಕರ ಈ ಹುಚ್ಚಾಟವನ್ನು ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕನೊಬ್ಬ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.
ಸಂಚಾರಿ ಕಾನೂನಿಡಿಯಲ್ಲಿ ಇಂತಹಾ ಹುಚ್ಚಾಟಗಳನ್ನು ತಡೆಯಲು ಕಟ್ಟುನಿಟ್ಟಿನ ಕಾನೂನುಗಳಿವೆ. ಆದರೆ ಕೆಲವೊಬ್ಬ ಯುವಕರು ಇವುಗಳನ್ನು ಗಾಳಿಗೆ ತೂರಿ ಮನಬಂದಂತೆ ವಾಹನಚಲಾಯಿಸುತ್ತಾರೆ. ಜೊತೆಗೆ ಇಂತಹವುಗಳಿಂದಲೇ ಹೆಚ್ಚು ಪ್ರಾಣ ಹಾನಿ ಸಂಭವಿಸುತ್ತಿದೆ. ಸಂಚಾರಿ ನಿಯಮದ ಬಗ್ಗೆ ಯುವಕರಿಗೆ ಅರಿವು ಮೂಡಿಸಿದರೂ ಇಂತಹಾ ಘಟನೆಗಳು ದೇಶದೆಲ್ಲೆಡೆ ನಡೆಯುತ್ತಿರುವುದು ವಿಪರ್ಯಾಸವೇ ಸರಿ.