ಮೂರನೇ ಟಿ 20 ಯಲ್ಲಿ ಭಾರತದ ಗೆಲುವಿನ ನಂತರ ಅತ್ಯಂತ ರೋಚಕವಾಯಿತು, ಐದು ಟಿ 20ಗಳ ಸರಣಿ, ಆದರೆ ಇದೀಗ ನಾಲ್ಕನೆ ಟಿ20 ಪಂದ್ಯ ಬಹಳ ತಡವಾಗಿ ಆರಂಭವಾಗಲಿದೆ, ಇದಕ್ಕಾಗಿ ಎಲ್ಲಾ ಭಾರತೀಯ ಅಭಿಮಾನಿಗಳು ಬಹಳ ಸಮಯದವರೇಗೆ ಕಾಯಬೇಕು, ಹಾಗಾದರೆ ಈ ನಾಲ್ಕನೇ ಟಿ20 ಪಂದ್ಯ ಯಾವಾಗ ಮತ್ತು ಯಾವ ಸಮಯಕ್ಕೆ ಪ್ರಾರಂಭವಾಗಲಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ.

ಭಾರತ ಮತ್ತು ವೆಸ್ಟ್ ಇಂಡೀಸ್ ಪ್ರವಾಸವು ಅಂತಿಮ ಹಂತಕ್ಕೆ ಬಂದಿದೆ ಹಾಗೂ ಇಬ್ಬರ ನಡುವೆ ಇನ್ನು ಕೇವಲ ಎರಡು ಟಿ20 ಪಂದ್ಯಗಳಷ್ಟೇ ಉಳಿದಿದೆ ಹಾಗೂ ಇದಕ್ಕೂ ಮೊದಲು ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಒಂದು ಮತ್ತು ಶೂನ್ಯದಿಂದ ಗೆದ್ದುಕೊಂಡಿತ್ತು ಮತ್ತು ಓ ಡಿ ಐ ಸರಣಿಯಲ್ಲಿಯೂ ಸಹ ವೆಸ್ಟ್ ಇಂಡೀಸ್ ತಂಡವನ್ನು ಎರಡು ಮತ್ತು ಒಂದರ ಅಂತರದಿಂದ ಸೋಲಿಸಿತ್ತು .
ಆದರೆ ಇದೀಗ ನಡೆಯುತ್ತಿರುವ ಟಿ 20 ಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ ಕಮ್ ಬ್ಯಾಕ್ ಮಾಡುವ ಮೂಲಕ ಮೊದಲ ಎರಡು ಪಂದ್ಯವನ್ನು ಗೆದ್ದು ಮುನ್ನಡೆಯನ್ನು ಸಾದಿಸಿತ್ತು, ಹಾಗೂ ಭಾರತ ತಂಡ ಕೂಡ ಕಮ್ ಬ್ಯಾಕ್ ಮಾಡುವ ಮೂಲಕ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಂಡಿತ್ತು, ಆದರೆ ಟಿ20 ಸರಣಿಯನ್ನು ಗೆಲ್ಲಬೇಕಾದರೆ ಭಾರತ ತಂಡ ಇನ್ನುಳಿದ ಎರಡು ಪಂದ್ಯವನ್ನು ಸಹ ಗೆಲ್ಲಲೇ ಬೇಕು ಹಾಗೂ ಇನ್ನುಳಿದ ಎರಡು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡ ಒಂದು ಪಂದ್ಯವನ್ನು ಗೆದ್ದರೂ ಭಾರತ ತಂಡ ಟಿ20 ಸರಣಿಯನ್ನು ಕಳೆದುಕೊಳ್ಳುತ್ತದೆ.
ಆದರೆ ಇನ್ನುಳಿದ ಎರಡು ಟಿ20 ಪಂದ್ಯಗಳಲ್ಲಿ ನಾಲ್ಕನೆಯ ಟಿ20 ಪಂದ್ಯ ಬಹಳ ಸಮಯದ ನಂತರ ಪ್ರಾರಂಭವಾಗುತ್ತದೆ, ಹಾಗೂ ಈ ಪಂದ್ಯಕ್ಕಾಗಿ ಬಹಳ ಸಮಯದವರೇಗೂ ಕಾಯಬೇಕಾಗಿದೆ, ನಾಲ್ಕನೇ ಟಿ 20 ಪಂದ್ಯ ಆಗಸ್ಟ್ 12 ರಂದು ಪ್ರಾರಂಭವಾಗಲಿದೆ, ಈ ಪಂದ್ಯದ ಟಾಸ್ ಭಾರತೀಯ ಸಮಯದ ಪ್ರಕಾರ ಸಂಜೆ 7.30 ಕ್ಕೆ ಹಾಕಲಾಗುವುದು, ಮತ್ತು ಪಂದ್ಯ 8 ಗಂಟೆಗೆ ಪ್ರಾರಂಭವಾಗುವುದು. ಈ ಪಂದ್ಯ ಅಮೆರಿಕಾದ ಫ್ಲೋರಿಡಾ ದಲ್ಲಿ ನಡೆಯಲಿದೆ .