ಇಂದು ಮಂಗಳವಾರ, 24 ಡಿಸೆಂಬರ್ 2024. ಈ ದಿನ 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ವ್ಯಾಪಾರದ ದೃಷ್ಟಿಯಿಂದ ಉತ್ತಮ ದಿನವಾಗಲಿದೆ. ನೀವು ಬೇರೆಯವರ ವಿಷಯಗಳಲ್ಲಿ ಮಧ್ಯ ಪ್ರವೇಸಿಸುವ ಅಗತ್ಯವಿಲ್ಲ. ದಾನ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನಿಮ್ಮ ಸುತ್ತಲಿನ ಯಾವುದೇ ವಿವಾದದಲ್ಲಿ ಭಾಗಿಯಾಗುವುದನ್ನು ನೀವು ತಪ್ಪಿಸಬೇಕು, ಇಲ್ಲದಿದ್ದರೆ ಕಾನೂನು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ನೀವು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಿದರೆ, ಅವರ ಬಗ್ಗೆ ಕೂಲಂಕಶವಾಗಿ ತಿಳಿದುಕೊಳ್ಳುವುದು ಒಳ್ಳೆಯದು.
ವೃಷಭ ರಾಶಿ
ಹಣಕಾಸಿನ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ.ಅದು ನಿಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಮನೆಗೆ ಅತಿಥಿಗಳು ಬರಬಹುದು. ಬೇರೆಯವರ ಮಾತುಗಳಿಂದ ಪ್ರಭಾವಿತರಾಗಿ ಕುಟುಂಬದಲ್ಲಿ ಯಾವುದೇ ಜಗಳವನ್ನು ಪ್ರೋತ್ಸಾಹಿಸಬಾರದು. ನಿಮ್ಮ ಸಹೋದರ ಸಹೋದರಿಯರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಸಂಬಂಧಿಕರೊಬ್ಬರು ನಿಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಬರಬಹುದು.
ಮಿಥುನ ರಾಶಿ
ಪೋಷಕರು ನಿಮಗೆ ಕೆಲಸದ ಬಗ್ಗೆ ಕೆಲವು ಸಲಹೆಗಳನ್ನು ನೀಡಬಹುದು. ಕಾನೂನು ವಿಷಯಗಳಲ್ಲಿ ನೀವು ಹೆಚ್ಚು ಕೇಳಿಸಿಕೊಂಡು, ಕಡಿಮೆ ಮಾಡತನಾಡಬೇಕು. ನಿಮ್ಮ ಕೆಲಸದ ಪ್ರದೇಶದಲ್ಲಿ ಹಿರಿಯ ಅಧಿಕಾರಿಗಳಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ದೀರ್ಘಾವಧಿಯ ವ್ಯವಹಾರ ಯೋಜನೆಗಳು ವೇಗ ಪಡೆದುಕೊಳ್ಳುತ್ತವೆ, ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಉತ್ತಮ ಅವಕಾಶವನ್ನು ಪಡೆಯಬಹುದು.
ಕಟಕ ರಾಶಿ
ನಿಮ್ಮ ಯಾವುದೇ ಕೆಲಸ ಯಶಸ್ವಿಯಾಗುವುದು. ನೀವು ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ನಿಮ್ಮ ಕಳೆದುಹೋದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯೂ ಇದೆ. ನೀವು ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ನಿಮ್ಮ ಹೆತ್ತವರ ಆಶೀರ್ವಾದದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಆತ್ಮೀಯರೊಂದಿಗೆ ಪಿಕ್ನಿಕ್ ಪ್ಲ್ಯಾನ್ ಮಾಡಬಹುದು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸಿಂಹ ರಾಶಿ
ಬಹಳ ದಿನಗಳಿಂದ ಮತ್ತೊಬ್ಬರ ಬಳಿ ಸಿಲುಕಿರುವ ಹಣ ಇಂದು ನಿಮ್ಮ ಕೈ ಸೇರಲಿದೆ. ನಿಮ್ಮ ಸಂಗಾತಿಯಿಂದ ನೀವು ಸಾಕಷ್ಟು ಬೆಂಬಲವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ನೀವು ಯಾರನ್ನೂ ನಂಬದಿರಿ. ನಿಮ್ಮ ಮನಸ್ಸು ಏನನ್ನೋ ಚಿಂತಿಸುತ್ತಿರುತ್ತದೆ. ನೀವು ಮಾಡುವ ಕೆಲಸದಿಂದ ನೀವು ಹೊಸ ಗುರುತನ್ನು ಪಡೆಯುತ್ತೀರಿ.
ಕನ್ಯಾ ರಾಶಿ
ನೀವು ಇಷ್ಟಪಟ್ಟ ಉದ್ಯೋಗ ದೊರೆಯುವುದರಿಂದ ಖುಷಿಯಾಗಿರುವಿರಿ. ಅದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ನಿಮ್ಮ ಕೆಲಸದಿಂದ ನೀವು ಹೊಸ ಗುರುತನ್ನು ಪಡೆಯುತ್ತೀರಿ. ನೀವು ಯಾವ ವಿಚಾರದ ಬಗ್ಗೆಯೂ ಅನಗತ್ಯವಾಗಿ ಮಾತನಾಡಬಾರದು, ಇಲ್ಲದಿದ್ದರೆ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಆತುರ ತೋರಿಸಬೇಡಿ. ಹಣದ ವಿಷಯದಲ್ಲಿ ಯಾರಿಗೂ ಯಾವುದೇ ಭರವಸೆ ನೀಡಬೇಡಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ದಿನವಾಗಿದೆ. ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವನ್ನು ಪಡೆಯುತ್ತೀರಿ, ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ನಿಮಗೆ ಕೆಲಸದ ಕ್ಷೇತ್ರದಲ್ಲಿ ಕೆಲವು ದೊಡ್ಡ ಜವಾಬ್ದಾರಿಯನ್ನು ನೀಡಬಹುದು, ಅದರ ಮೇಲೆ ನೀವು ಗಮನ ಹರಿಸಬೇಕು. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಕುಟುಂಬದ ವಿಷಯಗಳ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಯಾವುದೇ ಕೆಲಸವನ್ನು ಆತ್ಮೀಯರೊಂದಿಗೆ ಚರ್ಚಿಸಿ ಪ್ಲ್ಯಾನ್ ಮಾಡಬೇಕು.
ವೃಶ್ಚಿಕ ರಾಶಿ
ಮಾತು ಮತ್ತು ನಡವಳಿಕೆಯ ಮೇಲೆ ನಿಯಂತ್ರಣ ಇಟ್ಟುಕೊಂಡರೆ ನಿಮಗೆ ಒಳ್ಳೆಯದು. ರಾಜಕೀಯದಲ್ಲಿ ಕೆಲಸ ಮಾಡುವವರು ಯಾರೊಂದಿಗೂ ಏನನ್ನೂ ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸಬೇಕು. ಉದ್ಯೋಗ ಬದಲಿಸಲು ಯೋಚಿಸುತ್ತಿರುವವರಿಗೆ ಇದು ಸೂಕ್ತ ಸಮಯ. ಮಕ್ಕಳಿಗೂ ಹೊಸ ಉದ್ಯೋಗ ದೊರೆಯುವುದರಿಂದ ಮನೆಯ ವಾತಾವರಣ ಖುಷಿಯಾಗಿರುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು.
ಧನು ರಾಶಿ
ಬಹಳ ದಿನಗಳಿಂದ ಇದ್ದ ಕೋರ್ಟ್ ವಿವಾದದಲ್ಲಿ ನಿಮ್ಮ ಕಡೆ ತೀರ್ಪು ಬರಲಿದೆ, ವ್ಯಾಪಾರದಲ್ಲಿ ಕೆಲವು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಸ್ವಲ್ಪ ಒತ್ತಡವಿರುತ್ತದೆ. ಯಾವುದೇ ವ್ಯವಹಾರವಿದ್ದರೆ ಅದನ್ನು ಯೋಚಿಸಿ ತೀರ್ಮಾನ ಕೈಗೊಳ್ಳಿ. ಮತ್ತೊಬ್ಬರಿಂದ ಕೇಳಿ ಪಡೆಯುವುದನ್ನು ನಿಲ್ಲಿಸಿ. ಕುಟುಂಬದಲ್ಲಿದ್ದ ಅಡ್ಡಿ ಆತಂಕಗಳು ದೂರವಾಗುತ್ತದೆ.
ಮಕರ ರಾಶಿ
ಮಕರ ರಾಶಿಯ ಜನರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ, ಆಗ ಮಾತ್ರ ಅವರು ಯಶಸ್ವಿಯಾಗುತ್ತಾರೆ. ಉದ್ಯೋಗ ಹುಡುಕುತ್ತಿರುವ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಕುಟುಂಬ ಜೀವನದಲ್ಲಿ ಪ್ರೀತಿ ಮತ್ತು ಸಹಕಾರದ ಭಾವನೆ ಇರುತ್ತದೆ. ನೀವು ಯಾವುದೇ ಕೆಲಸದಲ್ಲಿ ಆತುರಪಡಬಾರದು, ಇಲ್ಲದಿದ್ದರೆ ಏನಾದರೂ ಸಮಸ್ಯೆ ಆಗುವ ಸಂಭವವಿದೆ. ಕೆಲವು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಕುಂಭ ರಾಶಿ
ಕೆಲಸದ ಬಗ್ಗೆ ಯೋಚನೆ ಮಾಡುವಿರಿ. ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಅದನ್ನು ಮುಂದೂಡುವುದು ಉತ್ತಮ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸುತ್ತವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ಮನೆಯ ಅಲಂಕಾರದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸುತ್ತೀರಿ, ಅದಕ್ಕಾಗಿ ನೀವು ಕೆಲವು ಹೊಸ ವಸ್ತುಗಳನ್ನು ಸಹ ಖರೀದಿಸುತ್ತೀರಿ.
ಮೀನ ರಾಶಿ
ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ, ಆದರೆ ಅನಗತ್ಯವಾಗಿ ಯಾವುದೇ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ, ಇಲ್ಲದಿದ್ದರೆ ಅದು ನಿಮಗೆ ದೊಡ್ಡ ನಷ್ಟವನ್ನು ಉಂಟುಮಾಡಬಹುದು.ಜೀವನ ಸಂಗಾತಿಯ ಪ್ರಗತಿಯನ್ನು ನೋಡಿ ನೀವು ಸಂತೋಷಪಡುತ್ತೀರಿ. ನಿಮ್ಮ ಮಗುವಿನ ವರ್ತನೆ ನಿಮಗೆ ಬೇಸರ ಉಂಟು ಮಾಡಬಹುದು.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.