ಇಂದು ಮಂಗಳವಾರ, 21 ಜನವರಿ 2025. ಈ ದಿನ 12 ರಾಶಿಯವರಿಗೆ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರ ದಿನ ಭವಿಷ್ಯ.
ಮೇಷ ರಾಶಿ
ಉದ್ಯಮಿಗಳು ತಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಮತ್ತು ಕುಟುಂಬದ ಯಾವುದೇ ಸದಸ್ಯರ ಮೇಲೆ ನಿಮ್ಮ ಅಭಿಪ್ರಾಯಗಳನ್ನು ಹೇರಲು ಪ್ರಯತ್ನಿಸಬೇಡಿ. ನೀವು ಅವರ ಮನಸ್ಸಿನ ಬಯಕೆಯನ್ನು ತಿಳಿದುಕೊಳ್ಳಬೇಕು. ಕೆಲಸದ ಕ್ಷೇತ್ರದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಸ್ನೇಹಿತರಿಂದ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ.
ವೃಷಭ ರಾಶಿ
ದೀರ್ಘಕಾಲದಿಂದ ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ದಿನವಾಗಿದೆ. ಕಾನೂನು ವಿಷಯಗಳಲ್ಲಿ ನೀವು ಬೇರೆಯವರ ಮೇಲೆ ಅವಲಂಬಿತರಾಗಬಾರದು, ಇಲ್ಲದಿದ್ದರೆ ಅವರು ನಿಮಗೆ ಮೋಸ ಮಾಡಬಹುದು. ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಸಂಬಂಧಿಕರಿಂದ ಸುಲಭವಾಗಿ ಸಹಾಯ ಪಡೆಯುತ್ತೀರಿ. ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ, ಸ್ನೇಹಿತರೊಂದಿಗೆ ಪಾರ್ಟಿ ಮಾಡಲಿದ್ದೀರಿ.
ಮಿಥುನ ರಾಶಿ
ನೀವು ಹೊಸ ಉದ್ಯೋಗವನ್ನು ಪಡೆಯಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಅನುಭವಿಸಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ಕುಟುಂಬದ ಸದಸ್ಯರಿಗೆ ನೀವು ನೀಡಿದ ಭರವಸೆಯನ್ನು ಪೂರೈಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಹೊಸ ವಾಹನ ಖರೀದಿಸಲು ಯೋಜಿಸಬಹುದು.
ಕಟಕ ರಾಶಿ
ಕಟಕ ರಾಶಿಯವರಿಗೆ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ದಿನವಾಗಿದೆ. ನೀವು, ಅಸೂಯೆ ಮತ್ತು ಜಗಳವಾಡುವ ಜನರಿಂದ ದೂರವಿರಬೇಕು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ಚಿಕ್ಕದಾಗಿ ಪರಿಗಣಿಸಬಾರದು, ಇಲ್ಲದಿದ್ದರೆ ಅದು ನಂತರ ಹೆಚ್ಚಾಗಬಹುದು. ಒಡಹುಟ್ಟಿದವರು ನಿಮ್ಮ ಕೆಲಸಕ್ಕೆ ಪ್ರೋತ್ಸಾಹಿಸುತ್ತಾರೆ. ನಿಮ್ಮ ಮಾತು ಮತ್ತು ನಡವಳಿಕೆಯ ಮೇಲೆ ನೀವು ನಿಯಂತ್ರಣ ಹೊಂದಿರಬೇಕು. ಪ್ರಮುಖ ಕೆಲಸಕ್ಕಾಗಿ ಹೊರಗೆ ಹೋಗುವವರ ವಾಹನ ದುರಸ್ತಿಗೆ ಬರಬಹುದು, ಎಚ್ಚರದಿಂದಿರಿ.
ಸಿಂಹ ರಾಶಿ
ಯಾರು ಏನು ಹೇಳಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ತಂದೆಯ ಸಲಹೆ ನಿಮಗೆ ಉಪಯುಕ್ತವಾಗುತ್ತವೆ. ನೀವು ಯಾವುದೇ ಕೌಟುಂಬಿಕ ವಿಷಯವನ್ನು ತಾಳ್ಮೆಯಿಂದ ಇತ್ಯರ್ಥಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಸಂಬಂಧ ಹದಗೆಡಬಹುದು. ದೂರದಲ್ಲಿರುವ ಕುಟುಂಬದ ಸದಸ್ಯರ ನೆನಪುಗಳು ನಿಮ್ಮನ್ನು ಕಾಡುತ್ತಿರಬಹುದು.
ಕನ್ಯಾ ರಾಶಿ
ಕೆಲಸದ ಜೊತೆಗೆ, ನೀವು ವಿಶ್ರಾಂತಿಗಾಗಿ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಪ್ರಗತಿಯ ಹಾದಿಯಲ್ಲಿ ಕೆಲವು ಅಡೆತಡೆಗಳು ಇರಬಹುದು. ನಿಮ್ಮ ಹವ್ಯಾಸ ಮತ್ತು ಖುಷಿಗಾಗಿ ನೀವು ಶಾಪಿಂಗ್ಗೆ ಹೆಚ್ಚು ಹಣ ಖರ್ಚು ಮಾಡುತ್ತೀರಿ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಯೋಜಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು.
ತುಲಾ ರಾಶಿ
ಹೊಸದನ್ನು ಮಾಡುವ ನಿಮ್ಮ ಪ್ರಯತ್ನಗಳು ಉತ್ತಮವಾಗಿರುತ್ತವೆ. ಕೆಲಸದ ಪ್ರದೇಶದಲ್ಲಿ ನೀವು ಸ್ನೇಹಿತರೊಂದಿಗೆ ಜಾಗರೂಕರಾಗಿರಬೇಕು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಹೊಗಳುತ್ತಾರೆ, ಅದು ನಿಮಗೆ ಸಂತೋಷ ನೀಡುತ್ತದೆ. ನೀವು ಪೂರ್ವಜರ ಆಸ್ತಿಯನ್ನು ಸಹ ಪಡೆಯುತ್ತೀರಿ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ನಿಮ್ಮ ಮನಸ್ಸು ಸಂತೋಷವಾಗುತ್ತದೆ. ವಾಹನಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು.
ವೃಶ್ಚಿಕ ರಾಶಿ
ಕೆಲಸಕ್ಕೆ ಸಂಬಂಧಿಸಿದಂತೆ ನೀವು ಸಾಕಷ್ಟು ಶ್ರಮ ವಹಿಸುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ಹಠಾತ್ ಲಾಭ ದೊರೆಯಲಿದೆ, ಇದರಿಂದ ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಕೆಲವು ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರವಾಸಕ್ಕೆ ಹೋಗಬಹುದು, ಎಚ್ಚರಿಕೆಯಿಂದ ವಾಹನ ಬಳಸಬೇಕಾಗುತ್ತದೆ. ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯಬಹುದು.
ಧನು ರಾಶಿ
ಕೆಲಸದ ಕ್ಷೇತ್ರದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನಿಮ್ಮ ಕೆಲವು ಹೊಸ ಪ್ರಯತ್ನಗಳು ಉತ್ತಮವಾಗಿರುತ್ತವೆ. ನಿಮ್ಮ ಮನೆಯಲ್ಲಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಬಹುದು. ಕುಟುಂಬದ ಸದಸ್ಯರು ಕೆಲಸಕ್ಕಾಗಿ ಹೊರಗೆ ಹೋಗಬಹುದು. ನೀವು ಮತ್ತೊಬ್ಬರ ಜೊತೆ ಬಹಳ ಚಿಂತನಶೀಲವಾಗಿ ಮಾತನಾಡುವುದು ಮತ್ತು ಪೂರ್ವಜರ ಆಸ್ತಿ ಹಂಚಿಕೆಯ ಬಗ್ಗೆ ಮೌನವಾಗಿರುವುದು ಉತ್ತಮ.
ಮಕರ ರಾಶಿ
ನಿಮ್ಮ ಕುಟುಂಬದ ವಿಷಯಗಳ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ಜೀವನ ಸಂಗಾತಿ ನಿಮ್ಮ ಕೆಲಸದಲ್ಲಿ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಅನಗತ್ಯ ಒತ್ತಡದಿಂದ ದೂರವಿರಲು ನಿಮಗೆ ಧ್ಯಾನದ ಅಗತ್ಯವಿದೆ. ನಿಮ್ಮ ನೆರೆಹೊರೆಯಲ್ಲಿ ವಾದಗಲಿಂದ ದೂರ ಉಳಿಯಿರಿ. ರಾಜಕೀಯದಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
ಕುಂಭ ರಾಶಿ
ಮತ್ತೊಬ್ಬರಿಂದ ಸಾಲ ಪಡೆಯುವುದನ್ನು ತಪ್ಪಿಸಿ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತರದಿರಿ, ನಿಮಗೆ ಯಾವುದೇ ವಿಷಯದ ಬಗ್ಗೆ ಟೆನ್ಷನ್ ಇದ್ದರೆ, ಅದರಿಂದ ದೂರವಿರಬೇಕು. ಉದ್ಯೋಗ ಅರಸಿ ಅಲ್ಲಿ ಇಲ್ಲಿ ಅಲೆದಾಡುವ ಜನರಿಗೆ ಗುಡ್ ನ್ಯೂಸ್ ಸಿಗಬಹುದು. ಪಾಲುದಾರಿಕೆಯಲ್ಲಿ ಕೆಲವು ವ್ಯವಹಾರಗಳನ್ನು ಮಾಡಲು ನೀವು ಯೋಚಿಸಬಹುದು.
ಮೀನ ರಾಶಿ
ನೀವು ಏಕಕಾಲದಲ್ಲಿ ಹೆಚ್ಚಿನ ಮೂಲಗಳಿಂದ ಆದಾಯ ಪಡೆಯುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ, ಅದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ನಿಮ್ಮ ಸಮಸ್ಯೆಗಳು ಹೆಚ್ಚಾಗದಂತೆ ಅಪರಿಚಿತ ವ್ಯಕ್ತಿಗಳಿಂದ ದೂರವಿರುವುದು ಉತ್ತಮ. ಸಮತೋಲಿತ ಆಹಾರವನ್ನು ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.