ಇಂದು ಸೋಮವಾರ, ಈ ದಿನ ಶಿವನನ್ನು ಆರಾಧಿಸಲಾಗುತ್ತದೆ. ಎಂದಿನಂತೆ ಈ ದಿನ ಕೂಡಾ ಕೆಲವು ರಾಶಿಯವರಿಗೆ ಶುಭಫಲವಿದ್ದರೆ ಕೆಲವರಿಗೆ ಮಿಶ್ರಫಲವಿರುತ್ತದೆ. ಇನ್ನೂ ಕೆಲವು ರಾಶಿಯವರು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದಿನ 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ 16 ಡಿಸೆಂಬರ್ 2024ರ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಬಹಳ ದಿನಗಳಿಂದ ನೀವು ಪಡೆಯಬೇಕೆಂದುಕೊಂಡಿದ್ದ ಲೋನ್ ದೊರೆಯಲಿದೆ. ಆದರೆ ನಿಮ್ಮ ಕುಟುಂಬದ ಸದಸ್ಯರ ಅನಾರೋಗ್ಯದಿಂದಾಗಿ ನಿಮಗೆ ಬೇಸರವಾಗುತ್ತದೆ. ಅನಾವಶ್ಯಕ ವಸ್ತುಗಳಿಗೆ ಹಣ ಖರ್ಚು ಮಾಡಬೇಡಿ. ನೀವು ಪ್ಲಾಟ್, ಮನೆ ಇತ್ಯಾದಿಗಳನ್ನು ಖರೀದಿಸಲು ಪ್ಲ್ಯಾನ್ ಮಾಡಬಹುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ನಿಮ್ಮ ಸುತ್ತಮುತ್ತಲಿನ ಪರಿಸರದಿಂದ ನಿಮಗೆ ಖುಷಿಯಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಕಚೇರಿಯಲ್ಲಿ ನೀವು ಮಾಡುವ ತಪ್ಪುಗಳಿಂದ ಹಿರಿಯ ಅಧಿಕಾರಿಗಳ ಕೋಪಕ್ಕೆ ಗುರಿಯಾಗುವಿರಿ. ನೀವು ಯಾವುದೇ ಪ್ರಮುಖ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಇಲ್ಲದಿದ್ದರೆ ಅವರು ಅದರ ಲಾಭವನ್ನು ಪಡೆಯಬಹುದು.
ಮಿಥುನ ರಾಶಿ
ನಿಮ್ಮ ಸ್ನೇಹಿತರೊಂದಿಗೆ ಪಿಕ್ನಿಕ್ , ದೂರದ ಊರಿಗೆ ಹೋಗಲು ನೀವು ಯೋಜಿಸಬಹುದು. ಮತ್ತೊಬ್ಬರ ಚಾಡಿ ಮಾತುಗಳನ್ನು ಕೇಳುವುದರಿಂದ ನೀವೇ ಚಿಂತೆಗೆ ಒಳಗಾಗುವಿರಿ. ನಿಮ್ಮ ಮಾತಿನಲ್ಲಿ ಮೃದುತ್ವ ಇದ್ದಷ್ಟೂ ಒಳ್ಳೆಯದು. ಎಷ್ಟೇ ಆತ್ಮೀಯರಾದರೂ ಸಾಲ ನೀಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಅದನ್ನು ಮರಳಿ ಪಡೆಯುವಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮನೆ, ಅಂಗಡಿ ಇತ್ಯಾದಿಗಳನ್ನು ಖರೀದಿಸುವ ನಿಮ್ಮ ಕನಸು ನನಸಾಗುತ್ತದೆ.
ಕಟಕ ರಾಶಿ
ಕೆಲಸ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳದ ಕಾರಣ ನಿರಾಸೆಗೆ ಒಳಗಾಗುವಿರಿ. ಪ್ರಮುಖ ವಿಚಾರವೊಂದಕ್ಕೆ ತಂದೆಯೊಂದಿಗೆ ಮನಸ್ತಾಪ ಉಂಟಾಗಲಿದೆ. ಒಡಹುಟ್ಟಿದವರಿಂದ ಸಹಾಯ ದೊರೆಯಲಿದೆ. ವ್ಯಾಪಾರದ ಉದ್ದೇಶದಿಂದ ನೀವು ದೂರದ ಊರಿಗೆ ಪ್ರಯಾಣಿಸಬೇಕಾಗಿಬರಬಹುದು. ನಿಮ್ಮ ಹಿಂದಿನ ಕೆಲವು ತಪ್ಪುಗಳು ಬಹಿರಂಗವಾಗುವುದರಿಂದ ನಿಮ್ಮ ಜೀವನ ಸಂಗಾತಿ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
.ಸಿಂಹ ರಾಶಿ
ಸಿಂಹ ರಾಶಿಯವರು ಇಂದು ದಾನ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಿಮ್ಮ ಮನಸ್ಸಿನಲ್ಲಿ ಪರಸ್ಪರ ಸಹಕಾರದ ಭಾವನೆ ಇರುತ್ತದೆ. ವ್ಯವಹಾರದಲ್ಲಿ ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯುತ್ತವೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಲು ನೀವು ಸಂತೋಷಪಡುತ್ತೀರಿ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೊಸ ಕೆಲಸಗಳನ್ನು ಆರಂಭಿಸಲಿದ್ದೀರಿ.
ಕನ್ಯಾ ರಾಶಿ
ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮಗೆ ಉನ್ನತ ಸ್ಥಾನ ದೊರೆಯಬಹುದು. ಮಕ್ಕಳು ಕೆಲಸಕ್ಕಾಗಿ ಹೊರಗೆ ಹೋಗಬೇಕಾಗಬಹುದು. ವಾಹನಗಳನ್ನು ಬಳಸುವಾಗ ನೀವು ಜಾಗರೂಕರಾಗಿರಬೇಕು. ನಿಮ್ಮ ಕುಟುಂಬದ ವಿಷಯಗಳಲ್ಲಿ ಯಾವುದೇ ಹೊರಗಿನವರಿಂದ ಸಲಹೆಯನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ, ಇಲ್ಲದಿದ್ದರೆ ಅವರು ತಪ್ಪು ಸಲಹೆಗಳನ್ನು ನೀಡಿ, ಅದರಿಂದ ನೀವು ತೊಂದರೆಗೆ ಒಳಗಾಗಬಹುದು.
ತುಲಾ ರಾಶಿ
ಕಚೇರಿಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಗಳ ಹೊರೆ ಇರುತ್ತದೆ. ಆರ್ಥಿಕ ಸಮಸ್ಯೆ ಎದುರಾಗಬಹುದು. ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮ್ಮನ್ನು ಭೇಟಿ ಮಾಡಲು ಬರಬಹುದು. ಪ್ರೀತಿಯಲ್ಲಿರುವವರು ಸಂಗಾತಿಯ ಮಾತುಗಳಿಂದ ಪ್ರಭಾವಿತರಾಗಿ ದೊಡ್ಡ ಹೂಡಿಕೆ ಮಾಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಪ್ರಗತಿಯ ದಿನವಾಗಿದೆ. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಗಳಿಂದ ನೀವು ಸಹಾಯ ಪಡೆಯಬೇಕಾಗಬಹುದು. ಕೆಲಸದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವೃತ್ತಿ ಬದಲಾವಣೆಯ ಬಗ್ಗೆ ಯೋಚಿಸಬಹುದು. ತಾಯಿ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ. ಕೆಲವು ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದ ಕಾರಣ ನೀವು ಒತ್ತಡಕ್ಕೆ ಒಳಗಾಗುತ್ತೀರಿ.
ಧನು ರಾಶಿ
ಇಂದು ಧನು ರಾಶಿಯವರಿಗೆ ಏರಿಳಿತಗಳ ದಿನವಾಗಲಿದೆ. ನಿಮ್ಮ ಸಂಬಂಧಿಕರಲ್ಲಿ ಒಬ್ಬರು ಬಹಳ ಸಮಯದ ನಂತರ ನಿಮ್ಮನ್ನು ಭೇಟಿಯಾಗಲು ಬರಬಹುದು. ನಿಮ್ಮ ಹವ್ಯಾಸಗಳು ಮತ್ತು ಸಂತೋಷಗಳಿಗಾಗಿ ನೀವು ಹಣವನ್ನು ಖರ್ಚು ಮಾಡುತ್ತೀರಿ. ಯಾರಿಗಾದರೂ ಏನಾದರೂ ಭರವಸೆ ನೀಡುವ ಮೊದಲು ಯೋಚಿಸಬೇಕು. ಕುಟುಂಬದಲ್ಲಿ ದೀರ್ಘಕಾಲದಿಂದ ಯಾವುದೇ ವಿವಾದಗಳು ನಡೆಯುತ್ತಿದ್ದರೆ, ಅದನ್ನು ಪರಿಹರಿಸಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ರಾಜಕೀಯದಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದ ಮೂಲಕ ಹೊಸ ಗುರುತನ್ನು ಪಡೆಯುತ್ತಾರೆ.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಪ್ರಗತಿಯ ದಿನವಾಗಿದೆ. ಮಕ್ಕಳಿಗೆ ವಿದ್ಯಾರ್ಥಿವೇತನ ಸಂಬಂಧಿತ ಪರೀಕ್ಷೆಗೆ ಹಾಜರಾಗಲು ಅವಕಾಶ ಸಿಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಆತ್ಮೀಯರೊಬ್ಬರಿಂದ ಸಾಲ ಪಡೆಯಲಿದ್ದೀರಿ. ಕೆಲವೊಂದು ವಿಚಾರಗಳಲ್ಲಿ ಹಳೆಯ ತಪ್ಪಿನಿಂದ ಪಾಠ ಕಲಿಯಬೇಕಿದೆ.
ಕುಂಭ ರಾಶಿ
ಕಚೇರಿಯಲ್ಲಿ ನೀವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗುತ್ತದೆ. ಬೇರೆಯವರ ಬಗ್ಗೆ ಅನಾವಶ್ಯಕವಾಗಿ ಮಾತನಾಡಬೇಡಿ, ಇಲ್ಲದಿದ್ದರೆ ಜಗಳವಾಗಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ನೀವು ಸ್ವಲ್ಪ ಯೋಚಿಸಬೇಕು. ನೀವು ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ನಿಮಗೆ ಗೌರವಾದರ ದೊರೆಯಲಿದೆ. ಆದ್ದರಿಂದ ನೀವು ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು.
ಮೀನ ರಾಶಿ
ಆರೋಗ್ಯ ಸಮಸ್ಯೆ ಉಂಟಾಗಲಿದೆ, ಈಗಾಗಲೇ ನೀವು ಯಾವುದಾದರೂ ಪ್ರಮುಖ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಎಚ್ಚರವಿರಬೇಕು. ಇದರಿಂದಾಗಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಸುತ್ತಲೂ ವಾಸಿಸುವ ಅಸೂಯೆ ಮತ್ತು ಜಗಳ ಮಾಡುವ ಜನರ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ಮನೆಯಲ್ಲಿ ವಿಶೇಷ ಪೂಜೆ ಏರ್ಪಡಿಸಲಿದ್ದೀರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.