ಇಂದು ಭಾನುವಾರ, ಈ ದಿನ ಸೂರ್ಯನಿಗೆ ಮೀಸಲಾಗಿದೆ. ಇಂದು ಗ್ರಹಗಳ ಚಲನೆಯನ್ನು ಪರಿಗಣಿಸಿದರೆ, ಕೆಲವು ರಾಶಿಚಕ್ರದವರ ಜೀವನದಲ್ಲಿ ಶುಭಫಲವಿದ್ದರೆ, ಕೆಲವರಿಗೆ ಸಮಸ್ಯೆ ಇರುತ್ತದೆ. ಈ ದಿನ 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ 15 ಡಿಸೆಂಬರ್ 2024ರ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಸಣ್ಣ ಪುಟ್ಟ ಸಮಸ್ಯೆಗಳ ದಿನವಾಗಿದೆ. ನಿಮ್ಮ ವ್ಯವಹಾರವು ಮೊದಲಿನಂತೆ ನಡೆಯುವುದಿಲ್ಲ ಆದರೆ ಖರ್ಚುಗಳು ಹೆಚ್ಚಾಗುತ್ತವೆ, ಇದರಿಂದ ನಿಮಗೆ ಬೇಸರ ಉಂಟಾಗಬಹುದು. ನಿಮ್ಮ ಹಿಂದಿನ ಕೆಲವು ತಪ್ಪುಗಳಿಂದ ಪಾಠ ಕಲಿಯುವ ಅವಶ್ಯಕತೆಯಿದೆ. ಇದು ಮುಂದೆ ನೀವು ಅದೇ ತಪ್ಪುಗಳನ್ನು ಮರುಕಳಿಸದಂತೆ ಮಾಡುತ್ತದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ದಿನದ ಆರಂಭ ಸ್ವಲ್ಪ ದುರ್ಬಲವಾಗಿರುತ್ತದೆ. ನಂತರ ಎಲ್ಲವೂ ಸರಿದಾರಿಗೆ ಬರಲಿದೆ. ನೀವು ಯಾರ ಬಳಿಯಾದರೂ ಸಾಲ ಪಡೆದಿದ್ದರೆ ಅವರು ಇಂದು ವಾಪಸ್ ಕೇಳುವ ಸಾಧ್ಯತೆ ಇದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಅದು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ.
ಮಿಥುನ ರಾಶಿ
ಇಂದು ಮಿಥುನ ರಾಶಿಯವರಿಗೆ ಹೊಸ ವಾಹನ ಖರೀದಿಸಲು ಉತ್ತಮ ದಿನವಾಗಿದೆ. ನಿಮ್ಮ ಸಂಬಂಧಿಕರಲ್ಲಿ ಒಬ್ಬರು ನಿಮಗಾಗಿ ಹೂಡಿಕೆ ಯೋಜನೆಯೊಂದಿಗೆ ಬರಬಹುದು. ನಿಮ್ಮ ಮನೆಯ ಅಲಂಕಾರ ಮತ್ತು ನಿರ್ವಹಣೆಗೆ ನೀವು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಲು ನೀವು ಸಂತೋಷಪಡುತ್ತೀರಿ. ಪ್ರೀತಿಯಲ್ಲಿರುವ ಜನರು ತಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ.
ಕಟಕ ರಾಶಿ
ಕಟಕ ರಾಶಿಯವರಿಗೆ ಇಂದು ಮಾತು ಮತ್ತು ನಡವಳಿಕೆಯ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳುವ ದಿನವಾಗಿರುತ್ತದೆ. ರಾಜಕೀಯದಲ್ಲಿ ಮುಂದುವರೆಯಲು ಬಯಸುವ ಜನರು ತಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ಮಗುವಿನ ಆರೋಗ್ಯದ ವಿಷಯದಲ್ಲಿ ನೀವು ರಾಜಿ ಮಾಡಿಕೊಳ್ಳಬೇಕಾಗಿಲ್ಲ. ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ನಲ್ಲಿ ಆಸಕ್ತಿ ಉಂಟಾಗಬಹುದು. ನಿಮ್ಮ ಕುಟುಂಬದ ವಿಷಯಗಳ ಬಗ್ಗೆಯೂ ನೀವು ಸಂಪೂರ್ಣ ಗಮನ ಹರಿಸಬೇಕಾಗುತ್ತದೆ. ಯಾರಿಂದಲೂ ಹಣವನ್ನು ಸಾಲ ಪಡೆಯುವುದನ್ನು ತಪ್ಪಿಸಿ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
.ಸಿಂಹ ರಾಶಿ
ವ್ಯಾಪಾರದಲ್ಲಿ ಕೆಲಸ ಮಾಡುವ ಸಿಂಹ ರಾಶಿಯ ಜನರ ದೀರ್ಘಾವಧಿ ಯೋಜನೆಗಳು ವೇಗ ಪಡೆಯುತ್ತವೆ. ನೀವು ಕೆಲಸದಲ್ಲಿ ಆತುರ ತೋರಿದರೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ ನೀವು ಯಾವುದೇ ನಿರ್ಧಾರವನ್ನು ಚಿಂತನಶೀಲವಾಗಿ ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ಹೊಸ ವಿರೋಧಿಗಳು ಹುಟ್ಟಿಕೊಳ್ಳಬಹುದು. ನಿಮ್ಮ ಕೆಲಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನೀವು ಪ್ರಯತ್ನಿಸುವುರಿ. ಕುಟುಂಬದ ಸದಸ್ಯರ ವಿವಾಹಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ.
ಕನ್ಯಾ ರಾಶಿ
ಇಂದು ಕನ್ಯಾ ರಾಶಿಯವರಿಗೆ ಇದ್ದಕ್ಕಿದ್ದಂತೆ ಲಾಭ ದೊರೆಯುತ್ತದೆ. ನಿಮ್ಮ ಕೆಲಸದಲ್ಲಿ ಲಾಭ ದೊರೆಯುವುದರಿಂದ ಇಡೀ ದಿನ ನೀವು ಖುಷಿಯಾಗಿರುವಿರಿ. ಮೂರನೇ ವ್ಯಕ್ತಿ ಹೇಳುವ ಮಾತುಗಳನ್ನು ಕೇಳಿ ನಿಮ್ಮ ಮನಸ್ಸು ಸ್ವಲ್ಪ ಗೊಂದಲಕ್ಕೆ ಒಳಗಾಗುತ್ತದೆ. ಆದಾಯ ಮತ್ತು ವೆಚ್ಚ ಎರಡನ್ನೂ ಬ್ಯಾಲೆನ್ಸ್ ಮಾಡಿದರೆ ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಉಳಿಸಲು ಸಾಧ್ಯವಾಗಬಹುದು. ನಿಮ್ಮ ಯಾವುದೇ ಕೆಲಸದಲ್ಲಿ ಯಾವುದೇ ಸಂದೇಹವಿದ್ದರೆ, ಅದನ್ನು ವಿಳಂಬ ಮಾಡದೆ ತಜ್ಞರ ಸಲಹೆ ಪಡೆದು ಮುಂದುವರೆಯಿರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಸಮಸ್ಯೆಗಳಿಂದ ಕೂಡಿದ ದಿನವಾಗಲಿದೆ. ನೀವು ಒಟ್ಟಿಗೆ ಕುಳಿತು ನಿಮ್ಮ ಕುಟುಂಬದ ವಿಷಯಗಳನ್ನು ಪರಿಹರಿಸಿಕೊಳ್ಳಬೇಕು. ಹೊರಗಿನವರು ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಲು ಬಿಡಬೇಡಿ. ಆದ್ದರಿಂದ ಯಾವುದೇ ಪ್ರಮುಖ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅವಶ್ಯಕತೆ ಇದ್ದರೆ ಹೊಸ ವಿಚಾರಗಳನ್ನು ಕಲಿಯಲು ಹಿಂಜರಿಯಬೇಡಿ. ಇಂದು ನಿಮಗೆ ಮುಂದಿನ ದಿನಗಳಲ್ಲಿ ಸಹಾಯಕ್ಕೆ ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇಂದು ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಕೆಲಸದ ರೀತಿ ನೋರಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಬಹುದು. ನೀವು ಯಾವುದೇ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಸಾಲ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸಿದ್ದರೆ ಇಂದು ಸಾಲವನ್ನು ಪಡೆಯುವ ಸಾಧ್ಯತೆ ಇದೆ. ಉದ್ಯೋಗ ಬದಲಿಸಲು ಪ್ಲ್ಯಾನ್ ಮಾಡಿದ್ದರೆ ಇಂದು ಉತ್ತಮ ದಿನವಾಗಿದೆ. ಯಾವುದಾದರೂ ಹೊಸ ಕೆಲಸ ಆರಂಭಿಸಲು ಕೂಡಾ ಇಂದು ಒಳ್ಳೆ ದಿನವಾಗಿದೆ. .
ಧನು ರಾಶಿ
ಇಂದು ಧನು ರಾಶಿಯವರು ತಮ್ಮ ಖರ್ಚುವೆಚ್ಚಗಳ ಬಗ್ಗೆ ಸಂಪೂರ್ಣ ಗಮನ ಹರಿಸುವ ದಿನವಾಗಿರುತ್ತದೆ. ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ, ಆದರೆ ಅವುಗಳನ್ನು ನಿರ್ವಹಿಸಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ಕುಟುಂಬದ ಸದಸ್ಯರ ಅನಾರೋಗ್ಯ ನಿಮಗೆ ಬೇಸರ ಉಂಟುಮಾಡಬಹುದು. ನಿಮ್ಮ ತಾಯಿ ನಿಮಗೆ ಕೆಲವು ಜವಾಬ್ದಾರಿಯನ್ನು ವಹಿಸಬಹುದು. ನೀವು ಯಾವುದೇ ವ್ಯವಹಾರವಾದರೂ ಎಚ್ಚರಿಕೆಯಿಂದ ಮುನ್ನಡೆಯಬೇಕು.
ಮಕರ ರಾಶಿ
ಇಂದು ನಿಮಗೆ ವಿವಿಧ ಮೂಲಗಳಿಂದ ಆದಾಯ ದೊರೆಯುತ್ತದೆ. ನಿಮ್ಮ ಸಂಪತ್ತು ಹೆಚ್ಚಾದಂತೆ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಕುಟುಂಬ ಸದಸ್ಯರ ನಡುವೆ ಘರ್ಷಣೆಯ ಸಾಧ್ಯತೆಯಿದೆ, ಆದರೆ ಅದರ ಬಗ್ಗೆ ಭಯಪಡಬೇಡಿ. ನಿಮ್ಮ ಯಾವುದೇ ಕೆಲಸದಲ್ಲಿ ನೀವು ಬೇರೆಯವರ ಸಲಹೆಯನ್ನು ಪಡೆದರೆ, ಅವರು ನಿಮ್ಮ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ. ಅವರ ಬಗ್ಗೆ ಎಚ್ಚರವಿರಿ. ಅವಿವಾಹಿತರಿಗೆ ಉತ್ತಮ ಸಂಬಂಧ ಬರಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರು ತಮ್ಮ ಕೆಲಸದ ಮೇಲೆ ಗಮನ ಹರಿಸಬೇಕು, ಆಗ ಮಾತ್ರ ಅವರ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗಾತಿಗೆ ವ್ಯಾಪಾರವನ್ನು ಪ್ರಾರಂಭಿಸಲು ನೀವು ಸಹಾಯ ಮಾಡಬಹುದು, ಅದು ನಿಮಗೆ ಕೂಡಾ ಒಳ್ಳೆಯದು. ನೀವು ಬಹಳ ಸಮಯದ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ನಿಮ್ಮ ಮಗು ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸುತ್ತದೆ. ನಿಮ್ಮ ಕೆಲವು ಹಳೆಯ ತಪ್ಪುಗಳಿಂದ ಕುಟುಂಬ ಸದಸ್ಯರು ಕೋಪಗೊಳ್ಳಬಹುದು.
ಮೀನ ರಾಶಿ
ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ನಿಮಗೆ ಇದೆ. ಮಕ್ಕಳ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಹಣದ ಅವಶ್ಯಕತೆ ಇದ್ದಲ್ಲಿ ಸುಲಭವಾಗಿ ಲೋನ್ ದೊರೆಯುತ್ತದೆ. ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು ಮತ್ತು ಅವರು ಉತ್ತಮ ಸ್ಥಳದಲ್ಲಿ ಹೂಡಿಕೆ ಮಾಡಲು ಸಮಯ ಚೆನ್ನಾಗಿದೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.