Yash Net Worth: ಕನ್ನಡದ ಸೂಪರ್ ಸ್ಟಾರ್ ಯಶ್ ಇಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಯಶ್ 2007 ರಲ್ಲಿ “ಜಂಭದ ಹುಡುಗಿ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಯಶ್ ಹಿಂತಿರುಗಿ ನೋಡಲೇ ಇಲ್ಲ. ಕೆಜಿಎಫ್:ಅಧ್ಯಾಯ 1, ಕೆಜಿಎಫ್:ಅಧ್ಯಾಯ 2, ಗೂಗ್ಲಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ಮಾಸ್ಟರ್ಪೀಸ್ನಂತಹ ಕೆಲವು ಹಿಟ್ ಚಿತ್ರಗಳನ್ನು ನೀಡಿದರು. ಬಹುತೇಕರಿಗೆ ಯಶ್ ನಿಜವಾದ ಹೆಸರು ಗೊತ್ತಿಲ್ಲ, ಮತ್ತೆ ಕೆಲವರಿಗೆ ಯಶ್ ಅವರ ಆಸ್ತಿ ಎಷ್ಟಿರಬಹುದು ಎಂದು ತಿಳಿಯುವ ಕುತುಹೂಲ. ಹಾಗಾಗಿ ನಿಮ್ಮೆಲ್ಲ ಪ್ರಶ್ನೆಗಳಿಗೆ, ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ…
ಯಶ್ ಅವರ ನಿಜವಾದ ಹೆಸರು ಏನು ಗೊತ್ತಾ?
ಯಶ್ ಅವರ ನಿಜವಾದ ಹೆಸರು ನವೀನ್ ಕುಮಾರ್ ಗೌಡ. ಅವರು ಕರ್ನಾಟಕದ ಹಾಸನದ ಬೂವನಹಳ್ಳಿಯಲ್ಲಿ 1986ರಲ್ಲಿ ಜನಿಸಿದರು. ನಂತರ ಮಹಾಜನ ಎಜುಕೇಶನ್ ಸೊಸೈಟಿಯಿಂದ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರ ಕಠಿಣ ಪರಿಶ್ರಮ ಮತ್ತು ಹೋರಾಟದಿಂದಾಗಿ ಇಂದು ಕನ್ನಡ ಚಿತ್ರರಂಗದ ಅಗ್ರ ನಟರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.
ಕೋಟಿಗಟ್ಟಲೆ ಇದೆ ಯಶ್ ಅವರ ಆಸ್ತಿ!
CAknowledge ವರದಿಯ ಪ್ರಕಾರ, ಯಶ್ ನಿವ್ವಳ ಮೌಲ್ಯ 53 ಕೋಟಿ ರೂ. ಇವರ ವಾರ್ಷಿಕ ವೇತನ 7 ರಿಂದ 8 ಕೋಟಿ ರೂ. ಚಲನಚಿತ್ರಗಳ ಹೊರತಾಗಿ ಯಶ್ ಅನೇಕ ಬ್ರಾಂಡ್ ಅನುಮೋದನೆಗಳನ್ನು ಸಹ ಮಾಡುತ್ತಾರೆ. ಯಶ್ ಅವರು ಬೆಂಗಳೂರಿನಲ್ಲಿ ಐಷಾರಾಮಿ ಡ್ಯೂಪ್ಲೆಕ್ಸ್ ಮನೆಯನ್ನು ಹೊಂದಿದ್ದಾರೆ. ಇದು ಸುಮಾರು 4 ಕೋಟಿ ರೂ. ಹಾಗೆಯೇ ಕಾರು ಸಂಗ್ರಹದ ಬಗ್ಗೆ ಮಾತನಾಡುವುದಾದರೆ ಯಶ್ ಮರ್ಸಿಡಿಸ್ ಬೆಂಜ್ GLS, Audi Q7, BMW 520d ಮತ್ತು ಪಜೆರೊ ಸ್ಪೋರ್ಟ್ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಯಶ್ ಒಂದು ವರ್ಷದಲ್ಲಿ ಗಳಿಸುವ ಆದಾಯವೆಷ್ಟು?
ವರದಿಯ ಪ್ರಕಾರ, ಯಶ್ ಅವರ ವಾರ್ಷಿಕ ಆದಾಯ 7-8 ಕೋಟಿ ರೂ.ಗಳಾಗಿದ್ದರೆ, ಅವರ ತಿಂಗಳ ಗಳಿಕೆ 55-60 ಲಕ್ಷ ರೂ. ಚಿತ್ರರಂಗದಲ್ಲಿ ಭಾರೀ ಬೇಡಿಕೆಯಲ್ಲಿರುವ, ಜನಪ್ರಿಯ ನಟರಾಗಿರುವ ಯಶ್, Instagram ಪೋಸ್ಟ್ ಮೂಲಕ 20 ರಿಂದ 25 ಕೋಟಿ ರೂ. ಪಡೆಯುತ್ತಾರೆ. ಟಾಕ್ಸಿಕ್ ಮಾತ್ರವಲ್ಲದೆ ಪ್ರಸ್ತುತ ಯಶ್ ನಿತೀಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಯಶ್ ನಿಜವಾದ ಹೆಸರು, ಒಂದು ವರ್ಷಕ್ಕೆ ಗಳಿಸುವ ಆದಾಯವೆಷ್ಟು ಗೊತ್ತಾ?

Leave a Comment
Leave a Comment