ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ವಿಚ್ಛೇ*ದನ ಸುದ್ದಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಗಿಂದಾಗೆ ವಿಚ್ಛೇ*ದನ ಸುದ್ದಿಗಳು ಬರುತ್ತಿರುವಾಗ ಯುವ ಜನತೆಗೆ ದಾಂಪತ್ಯ ಜೀವನದ ಬಗ್ಗೆ ನಂಬಿಕೆ ಸಹ ಕಡಿಮೆ ಆಗುತ್ತಿದೆ. ಮದುವೆ ಎಂದರೆ ಏಳೇಳು ಜನ್ಮದ ಅನುಬಂಧ ಎನ್ನುತ್ತಿದ್ದರು ಹಿರಿಯರು. ಆದರೆ ಈಗ ಒಂದು ಜನ್ಮವಿರಲಿ, ಕೆಲವು ವರ್ಷಗಳು ಕೂಡ ದಾಂಪತ್ಯ ಜೀವನ ನಿಲ್ಲುತ್ತಿಲ್ಲ. ಸೆಲೆಬ್ರಿಟಿಗಳ ಜೀವನವೇ ಹೀಗಿರೋವಾಗ ನಾವು ಯಾವ ಲೆಕ್ಕ ಎಂದು ಸಾಮಾನ್ಯ ಜನರು ಅಂದುಕೊಳ್ಳುತ್ತಿರೋದು ನಿಜ. ಇದೆಲ್ಲಾ ನಡೆಯುತ್ತಿರುವಾಗ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರು ಪತ್ನಿಗೆ ವಿಚ್ಚೇ*ದನ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸೆಲೆಬ್ರಿಟಿ ವಿಚ್ಛೇ*ದನ ಜಾಸ್ತಿಯಾಗುತ್ತಲೇ. ಇದೀಗ ಈ ಸಾಲಿಗೆ ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಸೇರಿದ್ದಾರೆ. ಪತ್ನಿ ಸೈರಾ ಅವರಿಗೆ ರೆಹಮಾನ್ ಅವರು ವಿಚ್ಛೇ*ದನ ನೀಡಿದ್ದು, ಈ ಸುದ್ದಿಯನ್ನು ಇಂದು ಬಹಿರಂಗಪಡಿಸಿದ್ದಾರೆ. ಸೈರಾ ಅವರ ಕಡೆಯಿಂದ ಅವರ ಲಾಯರ್ ಆಗಿರುವ ವಂದನಾ ಶಾ ಅವರು ‘ವಿಚ್ಛೇದನ’ ಪಡೆಯುತ್ತಿರುವ ಸುದ್ದಿಯನ್ನು ತಿಳಿಸಿದ್ದಾರೆ. ಇಂದು ಬೆಳಗ್ಗೆ ಇಂದ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಹಾಗೂ ಎ. ಆರ್ ರೆಹಮಾನ್ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏಕೆಂದರೆ ಈ ಜೋಡಿಯದ್ದು ಕೆಲ ವರ್ಷಗಳ ದಾಂಪತ್ಯ ಅಲ್ಲ.
1995ರಲ್ಲಿ ಎ. ಆರ್ ರೆಹಮಾನ್ ಅವರು ಸೈರಾ ಅವರೊಡನೆ ಮದುವೆಯಾದರು. ಇವರಿಬ್ಬರ ಮದುವೆಯಾಗಿ ಈಗ 29 ವರ್ಶವಾಗಿದೆ. ಇವರಿಗೆ ವಯಸ್ಸಿಗೆ ಬಂದ ಮಕ್ಕಳು ಇದ್ದಾರೆ. ಬಹಳ ಅನ್ಯೋನ್ಯವಾಗಿ ಇದ್ದಾರೆ ಎನ್ನಲಾಗುತ್ತಿದ್ದ, ಈ ದಂಪತಿ ‘ವಿಚ್ಛೇದನ’ ಪಡೆಯುತ್ತಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಸೈರಾ ಅವರ ಲಾಯರ್ ಹೇಳಿರುವ ಪ್ರಕಾರ, ಹಲವು ಭಿನ್ನಾಭಿಪ್ರಾಯಗಳು ಇಬ್ಬರ ನಡುವೆ ಇದ್ದು, ಅವುಗಳನ್ನು ಸರಿಪಡಿಸಿಕೊಳ್ಳಲು ಆಗದ ಸ್ಥಿತಿ ಇರುವುದರಿಂದ, ಇಬ್ಬರೂ ವಿಚ್ಛೇ*ದನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಒಳ್ಳೆ ಜೋಡಿಗಳೆಲ್ಲಾ ದೂರವಾಗುತ್ತಿದ್ದಾರೆ.

ಅಪ್ಪ ಅಮ್ಮನ ವಿಚ್ಛೇದನಕ್ಕೆ ಮಗ ನೀಡಿದ ಪ್ರತಿಕ್ರಿಯೆ ಇದು!
ಎ. ಆರ್ ರೆಹಮಾನ್ ಅವರಿಗೆ ಸಂಬಂಧಿಸಿದ ಹಾಗೆ ಈ ಒಂದು ಸುದ್ದಿ ಹೊರಬರುತ್ತಿದ್ದ ಹಾಗೆಯೇ ಅವರ ಮಗ ಸಹ ತಂದೆ ತಾಯಿಯ #ವಿಚ್ಛೇದನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇಂಥ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಪ್ರೈವೇಸಿ ತುಂಬಾ ಮುಖ್ಯ, ದಯವಿಟ್ಟು ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಮಾಧ್ಯಮದವರಿಗೆ ಮತ್ತು ನೆಟ್ಟಿಗರಿಗೆ ಮನವಿ ಮಾಡಿಕೊಂಡಿದ್ದಾರೆ. ಹೀಗೆ ಒಂದೊಂದೇ ಜೋಡಿಗಳು ವಿಚ್ಛೇ*ದನ ಪಡೆಯುತ್ತಿರುವುದಕ್ಕೆ ನೆಟ್ಟಿಗರು ಸಹ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಒಬ್ಬರ ನಂತರ ಇಬ್ಬತ್ ಸೆಲೆಬ್ರಿಟಿ ಜೋಡಿಗಳು ಈ ರೀತಿ ದೂರ ಆಗುತ್ತಿದ್ದಾರೆ.
ಮೊದಲಿಗೆ ತೆಲುಗಿನ ಖ್ಯಾತ ಜೋಡಿ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇ*ದನ ಪಡೆದರು. ಬಳಿಕ ನಟ ಧನುಶ್ ಹಾಗೂ ಐಶ್ವರ್ಯ ಧನುಷ್ ದಂಪತಿ, ಕನ್ನಡದ ಚಂದನ್ ಶೆಟ್ಟಿ ನಿವೇದಿತಾ ಗೌಡ, ತಮಿಳಿನ ಮತ್ತೊಬ್ಬ ಖ್ಯಾತ ನಟ ಜಯಂ ರವಿ ಮತ್ತು ಆರತಿ ದಂಪತಿ ಹೀಗೆ ಸಾಕಷ್ಟು ಸೆಲೆಬ್ರಿಟಿಗಳು ಇತ್ತೀಚಿನ ವರ್ಷದಲ್ಲಿ ವಿಚ್ಛೇ*ದನ ಪಡೆಯುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇದೀಗ ಆಸ್ಕರ್ ಗೆದ್ದಿರುವ ಎ. ಆರ್ ರೆಹಮಾನ್ ಅವರ ಸಂಸಾರದ ಗತಿ ಕೂಡ ಇದೇ ರೀತಿ ಆಗಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ.