“ಶಾರುಖ್ ಖಾನ್” ಸದ್ಯದಲ್ಲಿ ಸಿನಿಮಾಗಳಿಗಿಂತ ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಟ.ಒಂದು ಕಾಲದಲ್ಲಿ ಈ ನಟನ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಬಹಳ ದೊಡ್ಡ ಮಟ್ಟದ ಸದ್ದು ಮಾಡುತ್ತಾ ಎಲ್ಲರ ಉಬ್ಬೇರಿಸುವಂತೆ ಮಾಡುತ್ತಿದ್ದ ನಟ.ಈ ನಟನ ಸಿನಿಮಾ ತೆರೆ ಮೇಲೆ ಏರಿದರೇ ಬೇರಾವ ಸಿನಿಮಾಗಳಿಗೆ ಜಾಗವೇ ಇಲ್ಲದಂಥಹ ಪರಿಸ್ಥಿತಿ ಕೂಡ ಇತ್ತು. ಇನ್ನು ಇವರ ನಟನೆಗೆ ಇನ್ನಷ್ಟು ಮರಗು ತಂದ ನಟಿ ಎಂದರೆ ಅದು “ಕಾಜಲ್”.ಬಾಲಿವುಡ್ ನಲ್ಲಿ ಬೆಸ್ಟ್ ಜೋಡಿ ಎಂದೇ ಪ್ರಖ್ಯಾತಿ ಪಡೆದಿದೆ.ಇವರಿಬ್ಬರ ಒಟ್ಟಾಗಿ ನಟಿಸುವ ಸಿನಿಮಾಗಳಿಗೆ ತೊಂಬತ್ತರ ದಶಕದಲ್ಲಿ ಹೇಗೆ ಕಾಯುತ್ತಾ ಇದ್ದರೋ ಹಾಗೆಯೇ ಇಂದಿಗೂ ಇವ್ರಿಬ್ಬರ ಸಿನಿಮಾಗಾಗಿ ಕಾಯುತ್ತಾ ಇರುತ್ತಾರೆ. ಎದ್ರಲ್ಲಿಯೇ ತಿಳಿಯುತ್ತದೆ ಈ ಜೋಡಿ ಬಾಲಿವುಡ್ ಅಂಗಳದಲ್ಲಿ ಅಲ್ಲದೆ ಜನರ ಮನಸ್ಸಿನಲ್ಲಿ ಎಷ್ಟರ ಮಟ್ಟಿಗೆ ಬೇರೊರಿದೆ ಎಂದು.

ಇಷ್ಟೆಲ್ಲಾ ಸದ್ದು ಮಾಡುತ್ತಿರುವ ನಟ ಯಾಕೋ ತನ್ನ ಸಿನಿಮಾಗಳು ಚಿತ್ರ ಮಂದಿರಗಳಲ್ಲಿ ಗೆಲ್ಲುವ ಸಮಯವನ್ನು ಕಾಯುತ್ತಾ ಕುಳಿಯಬೇಕಿದೆ ಎನ್ನುವ ಪರಿಸ್ಥಿತಿ ಎದುರಾಗಿದೆ. ಕೆಜಿಎಫ್ ಒನ್ ನ ನಂತರ ಶಾರುಖ್ ಅವರ ಜೀರೋ ಸಿನಿಮಾ ಮಕಾಡೆ ಮಲಗಿತ್ತು.ಬಾಲಿವುಡ್ ನಲ್ಲಿ ಅತ್ಯತ್ತಮ ನಟ ಹಾಗೂ ನಿರ್ಮಾಪಕ ಎಂದು ಗುರುತಿಸಿಕೊಂದುರುವ ನಟ ಅಂದಿನಿಂದ ಯಾವ ಸಿನಿಮಾ ಮಾಡದೆ ಕೇವಲ ಜಾಹೀರಾತುಗಳಲ್ಲಿ ಬ್ಯುಸಿ ಇದ್ದಾರೆ.
ಬಹಳ ದಿನಗಳ ಬಳಿಕ ಶಾರುಖ್ ಮತ್ತೆ ದೊಡ್ಡ ಪರದೆಯಲ್ಲಿ ಅಪ್ಪಳಿಸಲು ತಯಾರಿ ಬಿರುಸಾಗಿಯೇ ನಡೆಸುತ್ತಿದ್ದಾರೆ.ಜವಾನ್, ಟೈಗರ್ 3ರಾಜ್ಕುಮಾರ್,ಹಿರಾನಿ ಜೊತೆ ಡಿಂಕು ಸೇರಿದಂತೆ ಸಾಕಷ್ಟು ಸಿನಿಮಾಗಳ ಶೂಟಿಂಗ್ ಆರಂಭಗೊಳಿಸಿ ಮತ್ತೆ ಬಾಕ್ಸ್ ಆಫೀಸ್ ಗುಲ್ಲೆಬ್ಬಿಸಲು ತಯಾರಿ ನಡೆಸುತ್ತಿದ್ದಾರೆ.ಇದೀಗ ಶಾರುಖ್ ಅವರ ಸಿನಿಮಾಗಳಿಂದ ಹೊರ ಬಂದಿರುವ ಸುದ್ದಿ ಕನ್ನಡಿಗರಿಗೆ ಬಹಳ ಖುಷಿ ಕೊಟ್ಟಿದೆ.ಆ ಸುದ್ದಿ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಶಾರುಖ್ ಅವರ ಮುಂಬರುವ ಚಿತ್ರಗಳಲ್ಲಿ ಕನ್ನಡಿಗರ ಶೆಟ್ಟಿ ಗ್ಯಾಂಗ್ ಸೇರಿಕೊಲ್ಲಿದ್ದಾರಂತೆ.ಹೌದು! ಶಾರುಖ್ ಅವರ ಮುಂಬರುವ ಚಿತ್ರದಲ್ಲಿ ‘ಕಾಂತರ’ ಖ್ಯಾತಿಯ “ರಿಷಬ್ ಶೆಟ್ಟಿ” ಹಾಗೂ ‘ಚಾರ್ಲಿ’ ಖ್ಯಾತಿಯ “ರಕ್ಷಿತ್ ಶೆಟ್ಟಿ” ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ಅದರೊಟ್ಟಿಗೆ ಆ ಚಿತ್ರವನ್ನು ಕನ್ನಡಿಗನಾಗಿ ಬಾಲಿವುಡ್ ನ ಸ್ಟಾರ್ ಡೈರೆಕ್ಟಾರ್ ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ “ರೋಹಿತ್ ಶೆಟ್ಟಿ” ನಿರ್ಮಾಣ ಮಾಡಲಿದ್ದಾರೆ ಎಂದು ಸುದ್ದಿಯಾಗಿದೆ.