ಮಹಾಗಣಪತಿಯನ್ನು ಮಂಗಳ ಮೂರ್ತಿ ಎಂದು ಕರೆಯುತ್ತೇವೆ. ಶುಭ ಸಮಯದಲ್ಲಿ ಮಂಗಳ ಕಾರ್ಯಗಳು ನಡೆಯಬೇಕು, ಎಂದಾಗ ದಾಂಪತ್ಯದ ಜೀವನದಲ್ಲಿ ಸುಖವಿರಬೇಕು, ಮಂಗಳ ಮೂರ್ತಿಯ ಅನುಗ್ರಹ ಬೇಕಾಗಿರುತ್ತದೆ. ಮಂಗಳ ಮಂತ್ರವನ್ನು ಜಪಿಸುವುದರಿಂದ ಒಳ್ಳೆಯದು. ಸ್ವಸ್ತಿಕ ಚಿಹ್ನೆಯ ಅಧಿದೇವತೆಯೇ ಮಹಾಗಣಪತಿ, ಮಹಾ ಗಣಪತಿಯ ಅನುಗ್ರಹದಿಂದ ಮಂಗಳ ಕಾರ್ಯಗಳು ಯಾವಾಗಲೂ ನಿರ್ವಿಘ್ನವಾಗಿ ನಡೆಯುತ್ತದೆ. ಮಂಗಳ ಕಾರ್ಯದಲ್ಲಿ ಯಾವುದೇ ವಿಘ್ನಗಳು ಆಗುವುದಿಲ್ಲ. ಇವುಗಳನ್ನು ಸದ್ಭಾವನೆಯಿಂದ, ಒಳ್ಳೆಯ ಭಾವನೆಯಿಂದ ಉತ್ತಮವಾದ ಭಕ್ತಿಯಿಂದ, ಮಂಗಳ ಕಾರ್ಯದ ಆರಂಭದಲ್ಲಿ ಮಂಗಳಕ್ಷತೆಯನ್ನು ಅಂದರೆ ಮಹಾಗಣಪತಿಯನ್ನು ಪೂಜೆ ಮಾಡಬೇಕಾಗುತ್ತದೆ.
ಮಹಾಗಣಪತಿಯನ್ನು ಪೂಜೆ ಮಾಡುವ ಸಂದರ್ಭದಲ್ಲಿ ಮಂಡಲಗಳನ್ನು ರಚಿಸಿ, ಗಣಪತಿಯನ್ನು ಆರಾಧಿಸಬೇಕು. ಈ ಮಹಾಗಣಪತಿ ಆರಾಧನೆಯಿಂದ ಎಲ್ಲಾ ಕಷ್ಟ , ದೋಷಗಳು ಪರಿಹಾರವಾಗುತ್ತದೆ. ಮಂಗಳ ಮೂರ್ತಿಯ ಆರಾಧನೆ ಮಾಡುವುದರಿಂದ ಮುಂದಾಗುವ ಮಂಗಳಕಾರ್ಯದಲ್ಲಿ ಯಾವುದೇ ವಿಘ್ನಗಳು ಬರುವುದಿಲ್ಲ, ತಾವು ಮಾಡುವ ಮಂಗಳ ಕಾರ್ಯದಲ್ಲಿ ಮಂಗಳ ಮೂರ್ತಿಯ ಆರಾಧನೆ, ಮೊದಲಾಗಿರಬೇಕು. ಗಣಪತಿಯ ಆರಾಧನೆ ಮಾಡಿ ಪಂಚಕಜ್ಜಾಯ, ನೈವೇದ್ಯ ಮಾಡಿ ಮಂಗಳಾರತಿ ಅರ್ಚನೆಯನ್ನು ಕೊಟ್ಟು, ಗಣಪತಿಯನ್ನು ಸಂತೃಪ್ತಿಗೊಳಿಸಿ, ಮಹಾಗಣಪತಿಯ ಪ್ರಸಾದವನ್ನು ಸ್ವೀಕಾರ ಮಾಡಬೇಕು.
ಮಹಾಗಣಪತಿಗೆ ಅತ್ಯಂತ ಪ್ರಿಯವಾದದ್ದು ಗರಿಕೆಯಾಗಿರುತ್ತದೆ. ಈ ಗರಿಕೆಯಿಂದ ಗಣಪತಿ ಅರ್ಚನೆ ಮಾಡಿದಾಗ, ಸಂತುಷ್ಟನಾಗಿ ನಮ್ಮೆಲ್ಲ ಕಷ್ಟಗಳಿಗೆ ಪರಿಹಾರವನ್ನು ಮಾಡುತ್ತಾನೆ.
ಮನುಷ್ಯನಿಗೆ ಮೂರು ಕಾಲದಲ್ಲೂ ಕಷ್ಟಬಂದೇ ಬರುತ್ತದೆ. ವರ್ತಮಾನ ಕಾಲದಲ್ಲೂ ನಾವು ಕಷ್ಟವನ್ನು ಅನುಭವಿಸುತ್ತೇವೆ. ಭವಿಷ್ಯದಲ್ಲಿ ಕಷ್ಟಗಳು ಬರುತ್ತದೆ. ಆದ್ದರಿಂದ ಆ ಸಮಯದಲ್ಲಿ ಮಂಗಳಮೂರ್ತಿಯನ್ನು ಪೂಜೆಯನ್ನು ಮಾಡಬೇಕಾದಂತದ್ದು ಒಳ್ಳೆಯದು.
ಹೀಗೆ ಮಾಡಿದಾಗ ನಮ್ಮ ಜೀವನದಲ್ಲಿನ ಸಂಕಷ್ಟಗಳು ಪರಿಹಾರವಾಗುತ್ತದೆ. ದಾಂಪತ್ಯ ಜೀವನಕ್ಕೆ ಬರುವಂತಹ ವಿಘ್ನಗಳನ್ನು ಪರಿಹರಿಸುತ್ತಾನೆ. ದಾಂಪತ್ಯ ಜೀವನದ ಸುಖ ನೆಮ್ಮದಿ ಮಹಾಗಣಪತಿಯ ಅನುಗ್ರಹವನ್ನು ಮಾಡಿಕೊಂಡರೆ ಒಳ್ಳೆಯದಾಗುತ್ತದೆ. ಶ್ರದ್ಧೆ-ಭಕ್ತಿಯಿಂದ ನೀವು ಗಣಪತಿ ಪೂಜೆ ಮಾಡುವುದರಿಂದ ನಿಮ್ಮ ಕುಟುಂಬದಲ್ಲಿ ಜರುಗುವ ಮಂಗಳ ಕಾರ್ಯದಲ್ಲಿ ವಿಘ್ನ ಬರುವುದಿಲ್ಲ. ಸುಖ ಶಾಂತಿ ನೆಮ್ಮದಿಗಳಿರುತ್ತದೆ. ಶುಭವಾಗುತ್ತದೆ.