ಬಿಗ್ ಬಾಸ್ ಕನ್ನಡ ಶೋ ಎಂದ ತಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಕಿಚ್ಚ ಸುದೀಪ್ ಅವರು. ಈ ಶೋನ ರಾಯಭಾರಿ ಕಿಚ್ಚ ಸುದೀಪ್ ಅವರೇ ಎಂದು ಹೇಳಿದರೆ ತಪ್ಪಲ್ಲ, ಶೋಗೆ ಶೋಭೆ ತಂದುಕೊಡುವವರೇ ಕಿಚ್ಚ ಸುದೀಪ್. ಅವರ ಹಾಗೆ ಯಾರು ಸಹ ಈ ಶೋ ನಿರೂಪಣೆ ಮಾಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ವೀಕ್ಷಕರದ್ದು. ಸುದೀಪ್ ಅವರು ನಿರೂಪಣೆ ಮಾಡುವ ವೀಕೆಂಡ್ ಎಪಿಸೋಡ್ ನೋಡುವ ಸಲುವಾಗಿಯೇ ಬಿಗ್ ಬಾಸ್ ನೋಡೋರು ತುಂಬಾ ಜನರಿದ್ದಾರೆ. ಸುದೀಪ್ ಅವರು ಅಷ್ಟು ಅಚ್ಚುಕಟ್ಟಾಗಿ ಶೋ ನಿರೂಪಣೆ ಮಾಡುತ್ತಾರೆ. ಆದರೆ ಇದು ಸುದೀಪ್ ಅವರು ನಿರೂಪಣೆ ಮಾಡುತ್ತಿರುವ ಕೊನೆಯ ಸೀಸನ್..

ಈ ವಿಷಯವನ್ನು ಖುದ್ದು ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡುವ ಮೂಲಕ ತಿಳಿಸಿದರು. ಬಿಗ್ ಬಾಸ್ ಲಾಂಚ್ ವಾರದ ಟಿಆರ್ಪಿ ಮತ್ತು ಮೊದಲ ವಾರದ ಟಿಆರ್ಪಿ ರೇಟಿಂಗ್ ಭರ್ಜರಿಯಾಗಿ ಬಂದು ಹೊಸ ರೆಕಾರ್ಡ್ ಸೃಷ್ಟಿಸಿದಾಗ, ಸಂಭ್ರಮಿಸಿದ ಸುದೀಪ್ ಅವರು ಈ ವಿಷಯವನ್ನು ಟ್ವೀಟ್ ಮಾಡಿದರು. ಇದರಿಂದ ಬಹಳಷ್ಟು ಅಭಿಮಾನಿಗಳ ಮನಸ್ಸಿಗೆ ತುಂಬಾ ನೋವಾಯಿತು, ಸುದೀಪ್ ಆವರಿಲ್ಲದೇ ಬಿಗ್ ಬಾಸ್ ನೋಡುವುದಿಲ್ಲ ಎಂದು ಸಹ ವೀಕ್ಷಕರು ಹೇಳುತ್ತಿದ್ದಾರೆ. ಆದರೆ ತಾವು ನಿಜಕ್ಕೂ ಶೋ ಇಂದ ಹೊರಗೆ ಬರುತ್ತಿರುವುದು ಯಾಕೆ ಎನ್ನುವ ವಿಷಯವನ್ನು ಖುದ್ದು ಸುದೀಪ್ ಅವರೇ ಬಹಿರಂಗಪಡಿಸಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸುದೀಪ್ ಅವರು ನಟಿಸಿರುವ ಮ್ಯಾಕ್ಸ್ ಸಿನಿಮಾ ಡಿಸೆಂಬರ್ ಕೊನೆಯ ವಾರದಲ್ಲಿ ತೆರೆಕಾಣುತ್ತಿದೆ, ಅಂದರೆ ಮುಂದಿನ ವಾರ ಸಿನಿಮಾ ತೆರೆಕಾಣಲಿದೆ. ಸಧ್ಯಕ್ಕೆ ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ಪ್ರೊಮೋಷನ್ ಗಳಲ್ಲಿ ಬ್ಯುಸಿ ಆಗಿದ್ದು, ಕಾರ್ಯಕ್ರಮ ಒಂದರಲ್ಲಿ ಬಿಗ್ ಬಾಸ್ ಯಾಕೆ ಬಿಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದಾಗ, ಸುದೀಪ್ ಅವರು ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರು ನೀಡಿದ ಕಾರಣ ಏನು ಎಂದು ನೋಡುವುದಾದರೆ.. “ಆ ದಿನ ನಾನು ಟ್ವೀಟ್ ಮಾಡಿದಾಗ ತುಂಬಾ ಟೈಯರ್ಡ್ ಆಗಿದ್ದೆ, ಅಕಸ್ಮಾತ್ ನಾನು ಆ ದಿವಸ ಟ್ವೀಟ್ ಮಾಡಿಲ್ಲ ಅಂದ್ರೆ ಮುಂದಿನ ದಿನ ನಾನು ಬೇರೆ ಥರ ಯೋಚನೆ ಮಾಡಿರುತ್ತಿದ್ದೆ, ಹಾಗಾಗಿ ಕ್ವಿಟ್ ಮಾಡಬೇಕು ಎಂದು ಅನ್ನಿಸಿದ ತಕ್ಷಣ..

ನನಗೆ ನಾನೇ ಬದ್ಧತೆ ಹಾಕಿಕೊಳ್ಳುವುದು ಒಳ್ಳೆಯದು ಎನ್ನುವ ನಿಟ್ಟಿನಲ್ಲಿ ಟ್ವೀಟ್ ಮಾಡಿದೆ.. ಹಾಗೆ ಮಾಡಬೇಕು ಅಂತ ನನಗೆ ಅನ್ನಿಸಿತು. ಬಿಗ್ ಬಾಸ್ ಶೋ ಇಂದ ನನಗೆ ಪ್ರೀತಿ ಗೌರವ ಸಿಕ್ಕಿದೆ, ಬೇರೊಂದು ಕಡೆ ಚಿತ್ರೀಕರಣ ಮಾಡ್ತಾ ಇದ್ದಾಗ, ಪ್ರತಿ ಶುಕ್ರವಾರ ಇಲ್ಲಿಗೆ ಬಂದು, ಎಪಿಸೋಡ್ ಗಳನ್ನ ನೋಡಿ, ವೀಕೆಂಡ್ ಶೋ ನಡೆಸಿಕೊಡಬೇಕಾಗುತ್ತೆ. ಶುಕ್ರವಾರ ಇಲ್ಲಿಗೆ ಬರೋಕೆ ಕೆಲವು ಸಾರಿ ತುಂಬಾ ಪ್ರಯಾಣ ಸಹ ಮಾಡಬೇಕು. ಪ್ರತಿ ಎಪಿಸೋಡ್ ನೋಡಿ ಕಾರ್ಯಕ್ರಮ ನಡೆಸಿಕೊಡೋದು, ಬಹಳ ಶ್ರಮ ವಹಿಸುವ ಕೆಲಸ, ಎಪಿಸೋಡ್ ನೋಡದೆಯೇ ನಾನು ಆಂಕರಿಂಗ್ ಮಾಡಲ್ಲ, ಅದು ನನಗೆ ಇಷ್ಟ ಆಗಲ್ಲ. ನಾನು ತುಂಬಾ ಶ್ರಮ ಹಾಕ್ತಿದ್ದೀನಿ, ಆದರೆ ನಾವು ಹಾಕುವ ಶ್ರಮಕ್ಕೆ ಸರಿಯಾಗಿ ಬೆಲೆ ಕೊಡೋರು ಇರಬೇಕು.
ಆ ರೀತಿ ಆಗದೇ ಇದ್ದಾಗ, ಅದೇ ಶ್ರಮವನ್ನು ಸಿನಿಮಾಗೆ ಹಾಕೋದು ಒಳ್ಳೆಯದು ಅಂತ ಅನ್ನಿಸಿತು. ಹೊಸದಾಗಿ ಬರುವವರು ನನಗಿಂತ ಚೆನ್ನಾಗಿ ನಿರೂಪಣೆ ಮಾಡಬಾಹುದು, ಈ ಶೋ ಅನ್ನು ನನ್ನಶ್ಟು ಚೆನ್ನಾಗಿ ಇನ್ನೊಬ್ಬರು ನಿರೂಪಣೆ ಮಾಡಲ್ಲ ಅಂತ ಅಂದುಕೊಂಡಿರೋನು ನಾನಲ್ಲ. ಏನೇ ಹೇಳೋದಿದ್ರು ನಾನು ನೇರವಾಗಿ ಹೇಳೋನು, ಬೇರೆ ರೀಸನ್ ಹೇಳಿ ನಾನು ಕಾರ್ಡ್ಸ್ ಪ್ಲೇ ಮಾಡೋದಿಲ್ಲ. ಜನರ ಕಷ್ಟಕ್ಕೆ ನಾನು ಗೌರವ ಕೊಡೋನು. ಬೇರೆ ಭಾಷೆಯ ಬಿಗ್ ಬಾಸ್ ಗೆ ಸಿಗೋ ಗೌರವ, ಪ್ರೀತಿ ಕನ್ನಡ ಬಿಗ್ ಬಾಸ್ ಗು ಸಿಗಬೇಕು. ಆ ಅರ್ಹತೆ ಕನ್ನಡ ಬಿಗ್ ಬಾಸ್ ಗೆ ಇದೆ. ನಿರೂಪಣೆ ಇಂದ ಹೊರಬರಲು ಕೆಲವಿ ಇನ್ಸೈಡ್ ಅಜೆಂಡಾ ಸಹ ಇದೆ, ಇಲ್ಲ ಅಂತ ಹೇಳೋದಿಲ್ಲ..” ಎಂದು ಅಸಲಿ ಕಾರಣ ತಿಳಿಸಿದ್ದಾರೆ ಕಿಚ್ಚ ಸುದೀಪ್.