ಕನ್ನಡದ ಒಂದು ಕಾಲದ ನಾಯಕಿ ನಟಿ ತಾರಾ ಅನುರಾಧಾ ಸಿನಿ ಜರ್ನಿಯಲ್ಲಿ ಅದ್ಭುತ ಪಾತ್ರಗಳನ್ನೆ ಮಾಡಿದ್ದಾರೆ. ತಾರಾ ಚಿತ್ರ ಜೀವನದಲ್ಲಿ ಸಾಕಷ್ಟು ಸಿನಿಮಾಗಳಿವೆ. ತಾರಾ ಅವರು ಈಗಲೂ ಸಿನಿಮಾಗಳನ್ನ ಮಾಡ್ತಾರೆ. ರಿಯಾಲಿಟಿ ಶೋದ ಜಡ್ಜ್ ಕೂಡ ಆಗಿದ್ದಾರೆ. ಹಾಗೆ ಸಿನಿಮಾ-ರಿಯಾಲಿಟಿ ಶೋ ಹಾಗೂ ರಾಜಕೀಯ ಹೀಗೆ ಮೂರನ್ನ ನಿಭಾಯಿಸಿಕೊಂಡೇ ಬರ್ತಿದ್ದಾರೆ. ತಾರಾ ಅನುರಾಧಾ ಅವ್ರು ತಮ್ಮ ಚಿತ್ರ ಜೀವನದಲ್ಲಿ ಕನ್ನಡದ ತುಳಸಿದಳ ತುಂಬಾ ವಿಶೇಷವಾದ ಚಿತ್ರವೇ ಆಗಿದೆ. 1986 ರಲ್ಲಿ ಈ ಚಿತ್ರದ ಮೂಲಕವೇ ತಾರಾ ಕನ್ನಡ ಇಂಡಸ್ಟ್ರೀಗೆ ಪರಿಚಯ ಆದರು. ಆದರೆ ಅದಕ್ಕೂ ಮೊದಲೇ, ತಾರಾ ಅವ್ರು 1984 ರಲ್ಲಿ ತಮಿಳು ಚಿತ್ರ Ingeyum Oru Gangai ಮೂಲಕವೇ ಬಣ್ಣದಲೋಕ್ಕೆ ಕಾಳಿಟ್ಟಿದ್ದರು.

ತಾರಾ ಅವರಿಗೆ ಅಭಿನಯ ಹೇಳಿಕೊಟ್ಟ ಥಿಯೇಟರ್ ಯಾವುದು? ಇದನ್ನ ಸ್ವತಃ ತಾರಾ ಅವರು ಖಾಸಗಿ ವಾಹಿನಿಯ ಕಾಮಿಡಿ ಶೋಗೆ ಗೆಸ್ಟ್ ಆಗಿ ಬಂದಾಗಲೇ ಹೇಳಿಕೊಂಡಿದ್ದರು. ಬೆಂಗಳೂರಿನ ಶಾರದಾ ಥಿಯೇಟರ್ನಲ್ಲಿ ಅತಿ ಹೆಚ್ಚಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ಪ್ರೀತಿ ಅದೆಷ್ಟು ಇತ್ತು ಅಂದ್ರೆ, ರಜಾ ಸಿಕ್ಕರೇ ಸಾಕು, ಮನೆ ಮಂದಿಯಲ್ಲ ಶಾರದಾ ಥಿಯೇಟರ್ಗೆ ಬರುತ್ತಿದ್ದರು.
ಅಲ್ಲಿ ಬರ್ತಿದ್ದ ಒಳ್ಳೆ ಸಿನಿಮಾಗಳನ್ನ ನೋಡಿಯೇ ಹೋಗುತ್ತಿದ್ದರು. ಸಿನಿಮಾ ನೋಡಿ ಬಂದ್ಮೇಲೆ ಮನೆಯಲ್ಲಿ ತಾವು ನೋಡಿದ ಪಾತ್ರಗಳನ್ನ ಆಯಕ್ಟ್ ಮಾಡಿಯೇ ತೋರಿಸುತ್ತಿದ್ದರು. ಮನೆ ಮಂದಿಗೆಲ್ಲ ತಮ್ಮ ಅಭಿನಯದ ಮೂಲಕವೇ ಸಿನಿಮಾವನ್ನೆ ಮತ್ತೆ ರಿಕ್ರಿಯೇಟ್ ಮಾಡುತ್ತಿದ್ದರು.